Arecanut Price: ಅಡಿಕೆ ಬೆಲೆ ಭರ್ಜರಿ ಏರಿಕೆ; ರೈತರ ಮೊಗದಲ್ಲಿ ಸಂತಸ

ಸುದೀರ್ಘ ಕಾಯುವಿಕೆ ಬಳಿಕ ರಾಜ್ಯದಲ್ಲಿ ಅಡಿಕೆ ಬೆಲೆ ಹೆಚ್ಚಳದ ಹಾದಿಯಲ್ಲಿದೆ. ಕಳೆದ ಒಂದು ವಾರದಿಂದ ಅಡಿಕೆ ಬೆಲೆ ಭರ್ಜರಿ ಏರಿಕೆ ಕಂಡಿದೆ. ಹಲವು ತಿಂಗಳಿನಿಂದ ₹50,000 ಗಡಿ ದಾಟಲೂ ಒದ್ದಾಡುತ್ತಿದ್ದು ರಾಶಿ ಅಡಿಕೆ ಬೆಲೆ ಸದ್ಯ ಕ್ವಿಂಟಲ್‌ಗೆ ₹53,000 ದಾಟಿದೆ. ಅಡಿಕೆ ಬೆಲೆ ಹೆಚ್ಚುತ್ತಿರುವುದು ಅಡಿಕೆ ಬೆಳೆಗಾರರಲ್ಲಿ ಸಂತಸ ತಂದಿದೆ.

ಒಂದು ಕಡೆ ಬೇಸಿಗೆಯ ತಾಪಮಾನ ಮತ್ತೊಂದೆಡೆ ನೀರಿನ ಕೊರತೆ ರೈತರನ್ನು ಹೈರಾಣಾಗಿಸಿತ್ತು. ಜೊತೆಗೆ ಕೊಳೆ ರೋಗ ಕೂಡ ಅಡಿಕೆ ಬೆಳೆಗಾರರ ಜಂಘಾಬಲವನ್ನು ಉಡುಘಿಸಿತ್ತು, ಇಷ್ಟೆಲ್ಲಾ ಅಡೆತಡೆಗಳ ನಡುವೆಯೂ ಅಡಿಕೆ ಕೃಷಿ ಮಾಡುವ ರೈತರಿಗೆ ಬೆಲೆ ಕುಸಿತ ಮತ್ತೊಂದು ಸಮಸ್ಯೆಯಾಗಿತ್ತು, ಈಗ ಅಡಿಕೆ ಬೆಲೆ ಹೆಚ್ಚಾಗುತ್ತಿರುವುದು ಸಮಾಧಾನ ತರಿಸಿದೆ.

Arecanut Price Reaches 53 000 in Karnataka Latest Copra Kobbari Price Updates Available

ಶಿವಮೊಗ್ಗ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಕ್ವಿಂಟಲ್‌ಗೆ ಕನಿಷ್ಠ ₹30,006 ಇದ್ದರೆ ಗರಿಷ್ಠ ಧಾರಣೆ ₹53,869 ತಲುಪಿದೆ. ಸಾಗರ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಬೆಲೆ ಕನಿಷ್ಠ ₹42,399 ಇದ್ದರೆ ಗರಿಷ್ಠ ₹51,299 ಆಗಿತ್ತು. ಇನ್ನು ಯಲ್ಲಾಪುರ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಗರಿಷ್ಠ ಇದ್ದರೆ ₹44,899 ಗರಿಷ್ಠ ₹55,609 ಬೆಲೆಗೆ ಮಾರಾಟವಾಗಿದೆ.

ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆ ಧಾರಣೆ (ಕ್ವಿಂಟಲ್‌ಗೆ)

ಕ್ರಮ ಸಂಖ್ಯೆ ಮಾರುಕಟ್ಟೆ ವಿಧ ಕನಿಷ್ಠ ಬೆಲೆ ಗರಿಷ್ಠ ಬೆಲೆ ಸರಾಸರಿ ಬೆಲೆ
1 ಬಂಟ್ವಾಳ ಹೊಸ ವೆರೈಟಿ ₹28,500 ₹36,500 ₹33,000
2 ಚನ್ನಗಿರಿ ರಾಶಿ ₹48,599 ₹53,100 ₹51,901
3 ಚಿತ್ರದುರ್ಗ ಅಪಿ ₹52,129 ₹52,579 ₹52,349
4 ಚಿತ್ರದುರ್ಗ ಕೆಂಪು ಗೋಟು ₹30,609 ₹31,010 ₹30,800
5 ಚಿತ್ರದುರ್ಗ ರಾಶಿ ₹51,639 ₹52,069 ₹51,889
6 ಕಾರ್ಕಳ ಹೊಸ ವೆರೈಟಿ ₹25,000 ₹36,500 ₹30,000
7 ಪುತ್ತೂರು ಹೊಸ ವೆರೈಟಿ ₹26,500 ₹36,500 ₹31,500
8 ಸಾಗರ ಕೆಂಪು ಗೋಟು ₹27,899 ₹32,899 ₹31,899
9 ಸಾಗರ ಕೋಕಾ ₹11,099 ₹28,699 ₹26,699
10 ಸಾಗರ ರಾಶಿ ₹42,399 ₹51,299 ₹50,399
11 ಶಿವಮೊಗ್ಗ ಬೆಟ್ಟೆ ₹47,400 ₹56,333 ₹52,099
12 ಶಿವಮೊಗ್ಗ ಸರಕು ₹51,699 ₹84,696 ₹72,996
13 ಶಿವಮೊಗ್ಗ ರಾಶಿ ₹30,006 ₹53,869 ₹52,099
14 ಸಿದ್ದಾಪುರ ಬಿಳೆ ಗೊಟು ₹26,099 ₹29,299 ₹28,399
15 ಸಿದ್ದಾಪುರ ಕೆಂಪು ಗೋಟು ₹27,900 ₹31,699 ₹30,699
16 ಸಿದ್ದಾಪುರ ರಾಶಿ ₹43,899 ₹49,099 ₹48,899
17 ಶಿರಸಿ ಬೆಟ್ಟೆ ₹37,050 ₹46,609 ₹40,482
18 ಶಿರಸಿ ರಾಶಿ ₹44,618 ₹49,408 ₹47,441
19 ಯಲ್ಲಾಪುರ ಕೋಕಾ ₹16,899 ₹28,899 ₹22,899
20 ಯಲ್ಲಾಪುರ ರಾಶಿ ₹44,899 ₹55,609 ₹50,899

ಸ್ಥಿರತೆ ಕಾಯ್ದುಕೊಂಡ ಕೊಬ್ಬರಿ ಬೆಲೆ

ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಕೊಬ್ಬರಿ ಬೆಲೆ ಸ್ಥಿರತೆ ಕಾಯ್ದುಕೊಂಡಿದೆ. ಕೇಂದ್ರದ ಬೆಂಬಲ ಬೆಲೆ ಯೋಜನೆಯಡಿ ಕೊಬ್ಬರಿ ಖರೀದಿ ಮಾಡುತ್ತಿದ್ದರೂ ಬೆಲೆ ಹೆಚ್ಚಳವಾಗಿಲ್ಲ ಎನ್ನುವ ಆತಂಕ ತೆಂಗು ಬೆಳೆಗಾರರಲ್ಲಿ ಇದೆ.

ರಾಜ್ಯದ ಪ್ರಮುಖ ಕೊಬ್ಬರಿ ಮಾರುಕಟ್ಟೆಯಾದ ತಿಪಟೂರಿನಲ್ಲಿ ಕನಿಷ್ಠ ₹8,500 ಇದ್ದರೆ ಗರಿಷ್ಠ ₹9,200 ಆಗಿದೆ. ಅರಸೀಕೆರೆ ಮಾರುಕಟ್ಟೆಯಲ್ಲಿ ಕನಿಷ್ಠ ₹8,100 ಇದ್ದರೆ ಗರಿಷ್ಠ ₹9,020 ಆಗಿತ್ತು.

ವಿವಿಧ ಮಾರುಕಟ್ಟೆಗಳಲ್ಲಿ ಕೊಬ್ಬರಿ ಬೆಲೆ

ಕ್ರಮ ಸಂಖ್ಯೆ ಮಾರುಕಟ್ಟೆ ವಿಧ ಕನಿಷ್ಠ ಬೆಲೆ ಗರಿಷ್ಠ ಬೆಲೆ ಸರಾಸರಿ ಬೆಲೆ
1 ಅರಸೀಕೆರೆ ಕೊಬ್ಬರಿ ₹8,100 ₹9,020 ₹8,701
2 ಅರಸೀಕೆರೆ ಬೇರೆ ₹7,130 ₹7,130 ₹7,130
3 ಕೆ.ಆರ್.ಪೇಟೆ ಬೇರೆ ₹7,000 ₹7,000 ₹7,000
4 ನಾಗಮಂಗಲ ಮಧ್ಯಮ ₹7,800 ₹7,800 ₹7,800
5 ತಿಪಟೂರು ಕೊಬ್ಬರಿ ₹8,500 ₹9,200 ₹8,800
6 ಮಳವಳ್ಳಿ ಕೊಬ್ಬರಿ ₹8,900 ₹8,900 ₹8,900
7 ತುರುವೇಕೆರೆ ಕೊಬ್ಬರಿ ₹8,300 ₹8,800 ₹8,300
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+