ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜಕೀಯ ಪಕ್ಷಾಂತರದಲ್ಲಿ ದಾಖಲೆ ಬರೆದ ಗೋವಾ

|
Google Oneindia Kannada News

ಪಣಜಿ, ಜನವರಿ 22: ಗೋವಾದ 24 ಶಾಸಕರು ಅಂದರೆ ರಾಜ್ಯ ವಿಧಾನಸಭೆಯ 40 ಸದಸ್ಯಬಲದ ಶೇ.60ರಷ್ಟು ಸದಸ್ಯರು ಕಳೆದ ಐದು ವರ್ಷಗಳಲ್ಲಿ ಪಕ್ಷಾಂತರ ಮಾಡಿದ್ದಾರೆ ಎಂದು ಸಂಘಟನೆಯೊಂದು ನೀಡಿರುವ ವರದಿ ತಿಳಿಸಿದೆ.

ದಿ ಅಸೋಸಿಯೇಷನ್ ಆಫ್ ಡೆಮಾಕ್ರಟಿಕ್ ರಿಫಾಮ್ರ್ಸ್ (ಎಡಿಆರ್) ತನ್ನ ವರದಿಯಲ್ಲಿ ಈ ವಿಷಯ ತಿಳಿಸಿದ್ದು, ಇದರೊಂದಿಗೆ ಭಾರತೀಯ ಪ್ರಜಾಸತ್ತೆಯ ಇತಿಹಾಸದಲ್ಲಿ ಗೋವಾ ಒಂದು ವಿಶಿಷ್ಟ ದಾಖಲೆ ಸ್ಥಾಪಿಸಿದೆ ಎಂದು ಹೇಳಿದೆ. ಫೆ.14ರಂದು ಗೋವಾ ವಿಧಾನಸಭೆ ಚುನಾವಣೆಗಳು ನಡೆಯಲಿವೆ.

ಭಾರತದ ಪ್ರಜಾಪ್ರಭುತ್ವ ಇತಿಹಾಸದಲ್ಲಿ ಗೋವಾ ರಾಜಕೀಯವು ಪಕ್ಷಾಂತರ ವಿಚಾರದಲ್ಲಿ ಅಸಮಾನ್ಯ ದಾಖಲೆ ನಿರ್ಮಿಸಿದೆ ಎಂದು ಅಸೋಸಿಯೇಷನ್ ಆಫ್ ಡೆಮಾಕ್ರೆಟಿಕ್ ರಿಫಾರ್ಮ್ಸ್‌ ವರದಿ ಮಾಡಿದೆ. ಫೆಬ್ರವರಿ 14ರಂದು ಗೋವಾ ವಿಧಾನಸಭೆ ಚುನಾವಣೆ ನಡೆಯಲಿದೆ.

60 pc MLAs In Goa Switched Parties In Last Five Years, a Record In India: ADR Report

2017ರ ಚುನಾವಣೆಗೂ ಮುನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಕಾಂಗ್ರೆಸ್‌ನಿಂದ ಬಿಜೆಪಿ ಸೇರ್ಪಡೆಗೊಂಡ ವಿಶ್ವಜಿತ್ ರಾಣೆ, ಸುಭಾಶ್ ಶಿರೋಡ್ಕರ್ ಮತ್ತು ದಯಾನಂದ ಸೊಪ್ಟೆ ಅವರ ಹೆಸರನ್ನು 24 ಮಂದಿಯಿರುವ ಪಕ್ಷಾಂತರಿಗಳ ಪಟ್ಟಿಯಲ್ಲಿ ಸೇರಿಸಲಾಗಿಲ್ಲ.

ಪ್ರಸಕ್ತ ಅಸ್ಸೆಂಬ್ಲಿಯ 5 ವರ್ಷಗಳ ಅವಧಿಯಲ್ಲಿ ಸುಮಾರು 24 ಶಾಸಕರು ಪಕ್ಷವನ್ನು ಬದಲಿಸಿದ್ದಾರೆ, ಅಂದರೆ ಒಟ್ಟು ವಿಧಾನಸಭೆ ಸದಸ್ಯರ ಸಂಖ್ಯೆಯ ಶೇ.60ರಷ್ಟು ಶಾಸಕರು ಪಕ್ಷಾಂತರ ಮಾಡಿದ್ದಾರೆ. ಭಾರತ ಯಾವುದೇ ರಾಜ್ಯದಲ್ಲಿ ಇಷ್ಟು ದೊಡ್ಡ ಪ್ರಮಾಣದ ಪಕ್ಷಾಂತರ ಚಟುವಟಿಕೆ ನಡೆದಿಲ್ಲ. ಮತದಾರರ ತೀರ್ಪಿಗೆ ಜನಪ್ರತಿನಿಧಿಗಳು ತೋರಿದ ಅಗೌರವದ ಪ್ರಮುಖ ಉದಾಹರಣೆಯಿದು ಎಂದು ಎಡಿಆರ್ ವರದಿಯಲ್ಲಿ ಉಲ್ಲೇಖಿಸಿದೆ.

ಇತ್ತೀಚೆಗೆ ಗೋವಾ ಮಾಜಿ ಸಿಎಂ, ಕಾಂಗ್ರೆಸ್ ಶಾಸಕ ರವಿ ನಾಯ್ಕ್ ಅವರೂ ಬಿಜೆಪಿ ಪಾಳಯಕ್ಕೆ ಜಿಗಿದಿದ್ದಾರೆ. ಮತ್ತೊಬ್ಬ ಗೋವಾ ಮಾಜಿ ಸಿಎಂ ಮತ್ತು ಕಾಂಗ್ರೆಸ್ ಮುಖಂಡ ಲೂಯಿಜಿನ್ಹೋ ಫಲೆರಿಯೊ ಅವರು ತೃಣಮೂಲ ಕಾಂಗ್ರೆಸ್‌ಗೆ ಸೇರ್ಪಡೆಗೊಂಡಿದ್ದಾರೆ. ಇತ್ತೀಚೆಗೆ ಮತ್ತೊಬ್ಬ ಮಾಜಿ ಮುಖ್ಯಮಂತ್ರಿ ಎನ್‌ಸಿಪಿ ಮುಖಂಡ ಚರ್ಚಿಲ್ ಅಲೆಮಾವೊ ಅವರು ಟಿಎಂಸಿಗೆ ಹಾರಿದ್ದಾರೆ.

ಇಬ್ಬರು ಮಾಜಿ ಸಿಎಂಗಳನ್ನು ಸೆಳೆದುಕೊಂಡಿರುವ ಟಿಎಂಸಿ ಇದೇ ಮೊದಲ ಬಾರಿಗೆ ಗೋವಾದಲ್ಲಿ ಸತ್ವ ಪರೀಕ್ಷೆ ನಡೆಸಲಿದೆ. 2019ರಲ್ಲಿ ಪ್ರತಿಪಕ್ಷ ನಾಯಕರಾಗಿದ್ದ ಚಂದ್ರಕಾಂತ್ ಕಾವ್ಲೆಕರ್ ಸೇರಿದಂತೆ 10 ಕಾಂಗ್ರೆಸ್ ಶಾಸಕರು ಬಿಜೆಪಿ ಸೇರಿದ್ದಾರೆ, ಇದೇ ಅವಧಿಯಲ್ಲಿ ಮಹಾ ರಾಷ್ಟ್ರವಾದಿ ಗೋಮಂತಕ್ ಪಾರ್ಟಿಯ ಇಬ್ಬರು ಶಾಸಕರು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಗೋವಾ ಫಾರ್ವರ್ಡ್ ಪಾರ್ಟಿಯ ಓರ್ವ ಶಾಸಕ ಬಿಜೆಪಿಗೆ ಹೋಗಿದ್ದಾರೆ.

English summary
Panaji, As many as 24 legislators in Goa, which is 60 per cent of the total strength of the 40-member state Assembly, have switched parties in the last five years, a report by an organisation has said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X