Weather forecast: ಗೋವಾ, ಮಹಾರಾಷ್ಟ್ರ ತಮಿಳುನಾಡು ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಮಳೆ- ಮಾಹಿತಿ, ವಿವರ
ನವದೆಹಲಿ, ನವೆಂಬರ್ 28: ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ನೈಋತ್ಯ ಮಧ್ಯಪ್ರದೇಶದ ಮೇಲೆ ಮಿಂಚು, ಬಿರುಗಾಳಿ ಜೊತೆಗೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಐಎಂಡಿ ಹೇಳಿದೆ.
ಆಗ್ನೇಯ ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರದ ವಿದರ್ಭದಲ್ಲಿ ಆಲಿಕಲ್ಲು ಮಳೆಯಾಗುವ ಸಾಧ್ಯತೆ ಇದೆ. ಉತ್ತರಾಖಂಡ ಮತ್ತು ಮರಾಠವಾಡದಲ್ಲಿ ಮಿಂಚು ಮತ್ತು ಆಲಿಕಲ್ಲು ಸಹಿತ ಮಳೆಯಾಗಬಹುದು ಎಂದು ಹೇಳಲಾಗಿದೆ.

ಕೇರಳ, ಹಿಮಾಚಲ ಪ್ರದೇಶ, ಪಂಜಾಬ್, ಹರಿಯಾಣ, ಚಂಡೀಗಢ, ದೆಹಲಿ, ಉತ್ತರ ಪ್ರದೇಶ, ಪೂರ್ವ ರಾಜಸ್ಥಾನ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ವ್ಯಾಪಕ ಮಳೆಯಾಗಬಹುದು ಎಂಬ ಮಾಹಿತಿ ಲಭ್ಯವಾಗಿದೆ. ಕೊಂಕಣದ ಪ್ರತ್ಯೇಕ ಸ್ಥಳಗಳು, ಗೋವಾ, ಮಧ್ಯ ಮಹಾರಾಷ್ಟ್ರ, ತಮಿಳುನಾಡು, ಪುದುಚೇರಿ ಮತ್ತು ಕಾರೈಕಲ್‌ನಲ್ಲಿ ಮಳೆಯಾಗುವ ಸಾಧ್ಯತೆ ಇದೆ.
ಉತ್ತರಾಖಂಡ, ಪಂಜಾಬ್, ಹರಿಯಾಣ, ಚಂಡೀಗಢ, ದೆಹಲಿ, ಉತ್ತರ ಪ್ರದೇಶ ಮತ್ತು ಪೂರ್ವ ರಾಜಸ್ಥಾನದಲ್ಲಿ ಗುಡುಗು ಸಹಿತ ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ದೆಹಲಿಯಲ್ಲಿ ಮಳೆ
ಭಾರೀ ಮಳೆ ಮತ್ತು ಸಿಡಿಲಿನ ಕಾರಣ, ಕನಿಷ್ಠ 16 ವಿಮಾನಗಳನ್ನು ದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಜೈಪುರ, ಲಕ್ನೋ, ಅಮೃತಸರ ಮತ್ತು ಅಹಮದಾಬಾದ್ ಸೇರಿದಂತೆ ವಿವಿಧ ನಗರಗಳಿಗೆ ತಿರುಗಿಸಲಾಗಿದೆ.

ಮಾರ್ಗ ಬದಲಿಸಿದ 16 ವಿಮಾನಗಳ ಪೈಕಿ 10 ವಿಮಾನಗಳನ್ನು ಜೈಪುರಕ್ಕೆ, ಮೂರನ್ನು ಲಖನೌಗೆ, ಎರಡನ್ನು ಅಮೃತಸರಕ್ಕೆ ಮತ್ತು ಒಂದನ್ನು ಅಹಮದಾಬಾದ್‌ಗೆ ಮರುಹೊಂದಿಸಲಾಗಿದೆ. ಎನ್‌ಡಿಟಿವಿಯಲ್ಲಿನ ವರದಿಯ ಪ್ರಕಾರ ಪ್ರಯಾಣಿಕರಿಗೆ ತಿರುವುಗಳ ಬಗ್ಗೆ ತಿಳಿಸಲಾಗಿದೆ. ಪರ್ಯಾಯ ಪ್ರಯಾಣದ ವ್ಯವಸ್ಥೆ ಮಾಡಲು ಸಹಾಯವನ್ನು ಒದಗಿಸಲಾಗಿದೆ.
ದೆಹಲಿ ವಿಮಾನ ನಿಲ್ದಾಣದಲ್ಲಿ ಏರ್ ಟ್ರಾಫಿಕ್ ದಟ್ಟಣೆಯಿಂದಾಗಿ ಕೋಲ್ಕತ್ತಾದಿಂದ ದೆಹಲಿ (CCU-DEL) UK778 ವಿಮಾನವನ್ನು ಲಕ್ನೋಗೆ ತಿರುಗಿಸಲಾಗಿದೆ. ಇದು ಬೆಳಿಗ್ಗೆ ಲಕ್ನೋವನ್ನು ತಲುಪುವ ನಿರೀಕ್ಷೆಯಿದೆ ಎಂದು ವಿಸ್ತಾರಾ ತನ್ನ ಟ್ವೀಟ್‌ನಲ್ಲಿ ಪ್ರಕಟಿಸಿದೆ.
ದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರತಿಕೂಲ ಹವಾಮಾನ ಮತ್ತು ವಾಯು ಸಂಚಾರ ದಟ್ಟಣೆಯಿಂದಾಗಿ, ಗುವಾಹಟಿಯಿಂದ ದೆಹಲಿಗೆ ಹೊರಟಿದ್ದ ವಿಸ್ತಾರಾ ವಿಮಾನ UK742 ಅನ್ನು ಜೈಪುರಕ್ಕೆ ತಿರುಗಿಸಲಾಗಿದೆ. ವಿಮಾನವು 1930 ಗಂಟೆಗೆ ಜೈಪುರಕ್ಕೆ ಆಗಮಿಸುವ ನಿರೀಕ್ಷೆಯಿದೆ.

ದೆಹಲಿ ವಿಮಾನ ನಿಲ್ದಾಣದಲ್ಲಿ ಕೆಟ್ಟ ಹವಾಮಾನ ಮತ್ತು ವಾಯು ಸಂಚಾರ ದಟ್ಟಣೆಯಿಂದಾಗಿ ಗುವಾಹಟಿಯಿಂದ ದೆಹಲಿಗೆ (GAU-DEL) UK742 ವಿಮಾನವನ್ನು ಜೈಪುರಕ್ಕೆ (JAI) ತಿರುಗಿಸಲಾಗಿದೆ ಮತ್ತು 1930 ಗಂಟೆಗೆ ಜೈಪುರಕ್ಕೆ ಆಗಮಿಸುವ ನಿರೀಕ್ಷೆಯಿದೆ ಎಂದು ವಿಸ್ತಾರಾ ಹೇಳಿದೆ.
ಮುಂದಿನ ಎರಡು ಗಂಟೆಗಳಲ್ಲಿ ದೆಹಲಿ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಲಘುವಾಗಿ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.












Click it and Unblock the Notifications