SIR ಮೊದಲ ದಿನವೇ 60,000 ಗಣತಿ ನಮೂನೆ ವಿತರಣೆ: ಸೆಲೆಬ್ರೆಟಿಗಳಿಂದ ಪರಿಷ್ಕರಣೆ ಜಾಗೃತಿ ಮೂಡಿಸಿದ ಜಿಬಿಎ

ಬೆಂಗಳೂರು: ಕೇಂದ್ರ ಚುನಾವಣಾ ಆಯೋಗದ (ECI) ನಿರ್ದೇಶನದಂತೆ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ 2026 ಕರ್ನಾಟಕದಲ್ಲಿ ಆರಂಭವಾಗಿದೆ. ಬೆಂಗಳೂರಿನ 'ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA)' ವ್ಯಾಪ್ತಿಯಲ್ಲಿ ಇಂದಿನಿಂದ ಬೂತ್ ಮಟ್ಟದ ಅಧಿಕಾರಿಗಳು (BLO) ಮನೆ-ಮನೆಗೆ ಭೇಟಿ ನೀಡಿ ಮತದಾರರ ಮಾಹಿತಿ ಪರಿಶೀಲಿಸಿದ್ದಾರೆ. ಗಣತಿ ನಮೂನೆಗಳನ್ನು ವಿತರಿಸುವ ಕಾರ್ಯ ಆರಂಭಿಸಿದ್ದಾರೆ. ಸ್ಯಾಂಡಲ್‌ವುಡ್ ಕಲಾವಿದರೂ ಮನೆಗೂ ಭೇಟಿ ನೀಡಿದ ಅಧಿಕಾರಿಗಳು ಪರಿಷ್ಕರಣೆಯಲ್ಲಿ ಪಾಲ್ಗೊಳ್ಳುವಂತೆ ಸಿನಿ ಕಲಾವಿದರಿಂದಲೂ ಜಾಗೃತಿ ಮೂಡಿಸಿದ್ದು ವಿಶೇಷವಾಗಿತ್ತು.

ಜೂನ್ 30 ರಿಂದ ಜುಲೈ 29ರವರೆಗೆ ನಡೆಯಲಿರುವ ಈ ವಿಶೇಷ ಅಭಿಯಾನದಲ್ಲಿ ಮತದಾರರು ಬಿಎಲ್‌ಒಗಳಿಗೆ ಅಗತ್ಯ ದಾಖಲೆಗಳನ್ನು ಸಲ್ಲಿಸಿ ಸಹಕರಿಸುವಂತೆ ಜಿಬಿಎ ಮುಖ್ಯ ಆಯುಕ್ತರು ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಾದ ಮಹೇಶ್ವರ್ ರಾವ್ ರವರು ಮನವಿ ಮಾಡಿದರು. ಇನ್ನೂ ಮೊದಲ ದಿನವೇ ಅಧಿಕಾರಿಗಳು 60,368 ಗಣತಿ ನಮೂನೆ ವಿತರಣೆ ಮಾಡಿದ್ದಾರೆ ಎಂದು 'ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA)' ಪ್ರಾಧಿಕಾರ ಮಾಹಿತಿ ನೀಡಿದೆ.

GBA

ಮತದಾರರು ಭರ್ತಿ ಮಾಡಿದ ಗಣತಿ ನಮೂನೆಗಳೊಂದಿಗೆ ಅಗತ್ಯ ದಾಖಲೆಗಳನ್ನು ಬಿಎಲ್‌ಒಗಳಿಗೆ ಅಥವಾ ಸಂಬಂಧಿತ ಮತಗಟ್ಟೆ ಮಟ್ಟದಲ್ಲಿ ಸಲ್ಲಿಸಬಹುದು. ಈ ಪ್ರಕ್ರಿಯೆಯಿಂದ ಮತದಾರರ ಪಟ್ಟಿಯನ್ನು ಇನ್ನಷ್ಟು ನಿಖರ ಹಾಗೂ ದೋಷರಹಿತವಾಗಿಸಲು ಸಹಕಾರಿಯಾಗಲಿದೆ ಎಂದು ಮಹೇಶ್ವರ್ ರಾವ್ ತಿಳಿಸಿದರು. ಜೊತೆಗೆ ಐದು ನಗರ ಪಾಲಿಕೆ ವ್ಯಾಪ್ತಿಯಲ್ಲಿ ವಿತರಣೆ ಆದ ಅರ್ಜಿ ಗಣತಿ ನಮೂನ ವಿವರಿಸಿದರು.

ಗುಡ್‌ನ್ಯೂಸ್: ಬೆಂಗಳೂರಿನ ಎಲ್ಲ ಕ್ಷೇತ್ರಗಳಲ್ಲಿ ಫುಟ್‌ಪಾತ್ ಒತ್ತುವರಿ ತೆರವಿಗೆ ಜಿಬಿಎ ಪ್ಲ್ಯಾನ್
ಗುಡ್‌ನ್ಯೂಸ್: ಬೆಂಗಳೂರಿನ ಎಲ್ಲ ಕ್ಷೇತ್ರಗಳಲ್ಲಿ ಫುಟ್‌ಪಾತ್ ಒತ್ತುವರಿ ತೆರವಿಗೆ ಜಿಬಿಎ ಪ್ಲ್ಯಾನ್

ಒಂದೇ ದಿನದಲ್ಲಿ ದಾಖಲೆಯ ಪ್ರಗತಿ

* ಕೇಂದ್ರ - 12,122

* ಉತ್ತರ - 23,221

* ದಕ್ಷಿಣ - 10,620

* ಬೆಂಗಳೂರು ನಗರ -14,405

ಒಟ್ಟು - 60,368

ಮತಪಟ್ಟಿ ಪರಿಷ್ಕರಣೆಯಲ್ಲಿ ಪಾಲ್ಗೊಳ್ಳಿ: ನಟಿ ಮೇಘನಾ ರಾಜ್

ಜಿಬಿಎವ್ಯಾಪ್ತಿಯಲ್ಲಿ ವಿತರಿಸಿದ ಗಣತಿ ಅರ್ಜಿಗಳಲ್ಲಿ ಸೆಲೆಬ್ರೆಟಿ ಮನೆಗಳು ಇವೆ. ಈ ಪೈಕಿ ನಟ ಸುಂದರ್ ರಾಜ್ ಹಾಗೂ ಅವರ ಪುತ್ರಿ, ನಟಿ ಮೇಘನಾ ರಾಜ್ಯ ಅವರಿಗೂ ಅರ್ಜಿ ನಮೂನೆ ನೀಡಿದ್ದಾರೆ. ಈ ಮೂಲಕ ಅವರಿಂದಲೇ ಪರಿಷ್ಕರಣೆಯಲ್ಲಿ ಪಾಲ್ಗೊಳ್ಳುವಂತೆ ಜಿಬಿಎ ಅಧಿಕಾರಿಗಳು ಜಾಗೃತಿ ಮೂಡಿಸಿದ್ದು ವಿಶೇಷವಾಗಿತ್ತು.

ನಮೂನೆ ಸ್ವೀಕರಿಸಿದ ಸುಂದರ್ ರಾಜ್ ಮತ್ತು ಮೇಘನಾ ರಾಜ್ ಅವರು, ಬೊಮ್ಮನಹಳ್ಳಿ ವಿಭಾಗದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ನಡೆಯುತ್ತಿದೆ. ಈ ವಲಯದ ನಾಗರಿಕರು ಪಾಲ್ಗೊಂಡು ಕಾರ್ಯಕ್ರಮ ಯಶಸ್ಸಿಗೆ ಸಹಕರಿಸಬೇಕು. ಎಲ್ಲರು ಪಾಲ್ಗೊಳ್ಳುವಂತೆ ಅವರು ಸಾರ್ವಜನಿಕರಲ್ಲಿ ಕೋರಿದರು. ಇದೇ ವೇಳೆ ಅಧಿಕಾರಿಗಳು ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ಮತ್ತು ನಟ ಅನಿರುದ್ಧ್ ಅವರಿಗೆ ನಮೂನೆ ವಿತರಿಸಲಾಯಿತು.

Bengaluru: ಚಿಕ್ಕಪೇಟೆಯಲ್ಲಿ ಫೈರ್ ಆಡಿಟ್ ಕಡ್ಡಾಯ, ಅಪಾಯಕಾರಿ ಕಟ್ಟಡಗಳ ಮೇಲೆ ಜಿಬಿಎ ಕಣ್ಣು
Bengaluru: ಚಿಕ್ಕಪೇಟೆಯಲ್ಲಿ ಫೈರ್ ಆಡಿಟ್ ಕಡ್ಡಾಯ, ಅಪಾಯಕಾರಿ ಕಟ್ಟಡಗಳ ಮೇಲೆ ಜಿಬಿಎ ಕಣ್ಣು

ಜಿಬಿಎ ವ್ಯಾಪ್ತಿಯಲ್ಲಿರುವ ಎಲ್ಲಾ ಮತದಾರರು ಈ ವಿಶೇಷ ಸಮಗ್ರ ಪರಿಷ್ಕರಣೆ ಅಭಿಯಾನದಲ್ಲಿ ಸಕ್ರಿಯವಾಗಿ ಭಾಗವಹಿಸಿ, ಬಿಎಲ್‌ಒಗಳಿಗೆ ಅಗತ್ಯ ದಾಖಲೆಗಳನ್ನು ಒದಗಿಸುವ ಮೂಲಕ ಮತದಾರರ ಪಟ್ಟಿಯನ್ನು ಪರಿಷ್ಕರಿಸುವ ಕಾರ್ಯಕ್ಕೆ ಸಹಕರಿಸುವಂತೆ ಜಿಬಿಎ ಪ್ರಕಟಣೆ ಮೂಲಕ ಮನವಿ ಮಾಡಿಕೊಂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+