ಕರ್ನಾಟಕದ ಆರ್ಥಿಕತೆಗೆ ಜೀವ ತುಂಬಿದ ಹೆದ್ದಾರಿಗಳು
ಟ್ರಾಫಿಕ್.... ಬೆಂಗಳೂರಿಗೆ ಬರುವ ಅಥವಾ ಬೆಂಗಳೂರಿನಿಂದ ಹೊರ ಪ್ರಯಾಣ ಮಾಡುವವರಿಗೆ ಥಟ್ ಅಂತ ಕಣ್ಮುಂದೆ ಬರೋ ಏಕೈಕ ಸಮಸ್ಯೆ ಅಂದರೆ ಟ್ರಾಫಿಕ್. ಹೀಗಿರುವಾಗ ಕೆಲವೇ ಗಂಟೆಗಳಲ್ಲಿ ಮತ್ತೊಂದು ಜಿಲ್ಲೆಗೆ ಪ್ರಯಾಣ ಮಾಡಬಹುದು ಅಂದರೆ ಅದಕ್ಕಿಂತ ಖುಷಿ ವಿಚಾರ ಇನ್ನೊಂದಿರಲು ಸಾಧ್ಯವೇ ಇಲ್ಲ. ಹೀಗೆ ರಾಜ್ಯದಲ್ಲಿ ನಾನಾ ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಹೆದ್ದಾರಿಗಳು ನಿರ್ಮಾಣಗೊಂಡಿದ್ದು ಪ್ರಯಾಣಿಕರ ಸುಗಮ ಸಂಚಾರಕ್ಕೆ ನಾಂದಿ ಹಾಡಿವೆ.
ಕೇಂದ್ರ ಸರ್ಕಾರದಿಂದ ರಾಜ್ಯದಲ್ಲಿ ನಿರ್ಮಾಣಗೊಂಡ ಹೆದ್ದಾರಿಗಳು ಜನರಿಗೆ ಉತ್ತಮ ಭವಿಷ್ಯದ ಕನಸನ್ನು ಕಾಣಲು ಅವಕಾಶ ನೀಡಿವೆ. ರಸ್ತೆ ಬದಿ ಇರುವ ಸಣ್ಣಪುಟ್ಟ ವ್ಯಾಪಾರಿಗಳಿಂದ ಹಿಡಿದು ದೊಡ್ಡ ವ್ಯವಹಾರಕ್ಕೂ ಈ ಹೆದ್ದಾರಿ ಮಾರ್ಗಗಳು ಸಹಕಾರಿಯಾಗಿವೆ.

ಪ್ರಸ್ತುತ ಸಿಲಿಕಾನ್ ಸಿಟಿ ಬೆಂಗಳೂರಿನಿಂದ ಸಾಂಸ್ಕೃತಿಕ ನಗರಿ ಮೈಸೂರು ತಲುಪುವುದು ತುಂಬಾನೇ ಸುಲಭ. ಜೊತೆಗೆ ಆಯಾಸವಿಲ್ಲದೆ ಕಡಿಮೆ ಸಮಯದಲ್ಲಿ ಗಮ್ಯ ಸ್ಥಾನಕ್ಕೆ ತಲುಪಬಹುದು. ಹೀಗೆ ರಾಜ್ಯದಲ್ಲಿ ನಾನಾ ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಹೆದ್ದಾರಿಗಳಲ್ಲಿ ಸಾಗುವ ಮೂಲಕ ಪ್ರಯಾಣಿಕರು ಇದರ ಲಾಭ ಪಡೆಯುತ್ತಿದ್ದಾರೆ.
ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್‌ವೇ 8 ಲೈನ್ ಹೊಂದಿದ್ದು, 117 ಕಿಲೋ ಮೀಟರ್ ಉದ್ದವಿದೆ. ಇದು ಕಳೆದ ವರ್ಷವಷ್ಟೇ ಲೋಕಾರ್ಪಣೆಗೊಂಡಿದೆ. ಇದು ಉದ್ಯಾನ ನಗರಿ ಬೆಂಗಳೂರಿನಿಂದ ಅರಮನೆ ನಗರ ಮೈಸೂರು ನಡುವೆ ಸಂಪರ್ಕ ಕಲ್ಪಿಸುತ್ತದೆ. ಪ್ರವಾಸೋಧ್ಯಮ, ವ್ಯಾಪಾರ ಹಾಗೂ ರಿಯಲ್ ಎಸ್ಟೇಟ್ ಉದ್ಯಮದ ಅಭಿವೃದ್ಧಿಗೆ ಈ ಹೆದ್ದಾರಿ ಪೂರಕವಾಗಿದೆ. ಇದಲ್ಲದೆ ಮೈಸೂರು ಸೊಬಗನ್ನು ಕಣ್ತುಂಬಿಕೊಳ್ಳಲು ಹಾಗೂ ಪ್ರವಾಸಿಗರಿಗೆ ರೋಮಾಂಚಕ ಅನುಭವವನ್ನು ಪಡೆಯಲು ಇದು ಸಹಕಾರಿಯಾಗಿದೆ. ಬೆಂಗಳೂರಿನಲ್ಲಿ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಹೋಗಲು ಗಂಟೆಗಟ್ಟಲೆ ಕಾಯುವ ಪ್ರಯಾಣಿಕರಿಗೆ ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್‌ವೇ ಸಂತಸ ತಂದಿದೆ.
ಇದರಿಂದ ಸ್ಥಳೀಯ ವ್ಯಾಪಾರಿಗಳು ಸಂತೋಷಗೊಂಡಿದ್ದಾರೆ. ವಾಹನಗಳ ಸಂಚಾರವಿಲ್ಲದೆ, ಜನರ ಓಡಾಟವಿಲ್ಲದೆ ಪಾತಾಳಕ್ಕಚ್ಚಿದ್ದ ವ್ಯಾಪಾರ ಸದ್ಯ ಉತ್ತಮವಾಗಿದೆ ಎಂದು ಸಣ್ಣ ಪುಟ್ಟ ಅಂಗಡಿ ವ್ಯಾಪಾರಿಗಳು ಖುಷಿ ಹಂಚಿಕೊಂಡಿದ್ದಾರೆ. ಜೊತೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಾರೆ.

ಮಂಗಳೂರು- ಗೋವಾ 4 ಲೈನ್ ಹೆದ್ದಾರಿ ಕೂಡ ರಾಜ್ಯದಲ್ಲಿ ಜನರಿಗೆ ಆರ್ಥಿಕವಾಗಿ ಸಹಾಯ ಮಾಡಿದೆ. ಈ ಹೈವೇ ಎರಡು ಅತ್ಯದ್ಭುತ ಪ್ರವಾಸಿ ತಾಣಗಳ ನಡುವೆ ಸಂಪರ್ಕ ಕಲ್ಪಿಸುತ್ತದೆ. ಮಂಗಳೂರು ಹಾಗೂ ಗೋವಾ ಅನೇಕ ಪ್ರೇಕ್ಷಣೀಯ ಸ್ಥಳಗಳನ್ನು ಹೊಂದಿದ್ದು ಮೋಜು ಮಸ್ತಿಗೆ ಹೇಳಿ ಮಾಡಿಸಿದ ಸ್ಥಳಗಳು.
ಹೀಗಾಗಿ ಇಲ್ಲಿಗೆ ಭೇಟಿ ನೀಡುವ ಪ್ರಯಾಣಿಕರಿಗೆ ಈ ಹೆದ್ದಾರಿ ಸುರಕ್ಷಿತ ಹಾಗೂ ಅದ್ಬುತ ನೋಟವನ್ನು ಸುಗಮ ಪ್ರಯಾಣವನ್ನು ನೀಡುತ್ತದೆ. ಇದರಿಂದಾಗಿ ಪ್ರವಾಸೋದ್ಯಮಕ್ಕೆ ಉತ್ತೇಜನ ಸಿಗುತ್ತಿದೆ. ಕೇಂದ್ರ ಸರ್ಕಾರ ಅತ್ಯಂತ ವೇಗವಾಗಿ ಹಾಗೂ ಅತ್ಯಂತ ದಕ್ಷತೆಯಿಂದ ಹೈವೇಗಳ ನಿರ್ಮಾಣ ಮಾಡುತ್ತಿರುವುದೇ ಇದಕ್ಕೆ ಕಾರಣವಾಗಿದೆ ಎಂದು ಪ್ರವಾಸಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ನಮ್ಮ ಹೆದ್ದಾರಿಗಳು ವ್ಯಾಪಾರ ವಹಿವಾಟಿಗೆ ಉತ್ತೇಜನ ನೀಡಿವೆ. ಅತ್ಯಂತ ವೇಗದಿಂದ ದೂರದ ಸ್ಥಳಗಳಿಗೆ ಸಂಪರ್ಕ ಸಾಧಿಸಲು ಉಪಯುಕ್ತವಾಗಿವೆ. ಇದು ಸಮಾಜದ ಒಂದು ದೊಡ್ಡ ಮಟ್ಟದ ವರ್ಗಕ್ಕೆ ವರದಾನವಾಗಿದೆ. ಕರ್ನಾಟಕದಲ್ಲಂತೂ ಇದು ವ್ಯಾಪಾರ ಮತ್ತು ಕಡಿಮೆ ವೆಚ್ಚದಲ್ಲಿ ಸರಕು ಸಾಗಟಕ್ಕೆ ಸಹಾಯ ಮಾಡುತ್ತಿದೆ. ಅದರಲ್ಲೂ ಕರ್ನಾಟಕದ ರೈತರು ಬೆಳೆದ ಬೆಳೆಗಳ ಸಾಗಾಟ ಮತ್ತು ಅದರ ವ್ಯಾಪಾರಕ್ಕೆ ಹೊಸ ಜಗತ್ತೆ ಬಾಗಿಲು ತೆರೆದಂತಾಗಿದೆ.

ಅಷ್ಟೇ ಅಲ್ಲ, ಸ್ಥಳೀಯ ಆರ್ಥಿಕತೆಗೆ ಶಕ್ತಿ ನೀಡೋ ಜೊತೆ ಜೊತೆಗೆ, ಉದ್ಯೋಗ, ಉತ್ತಮ ಜೀವನ ಮಟ್ಟ ಹೆಚ್ಚಿಸೋ ಉತ್ತಮ ಭವಿಷ್ಯದ ಬುನಾದಿಯನ್ನ ಈ ಹೆದ್ದಾರಿಗಳು ಹಾಕುತ್ತಿವೆ. ಈ ಹೆದ್ದಾರಿ ಕ್ರಾಂತಿ ಕೇಂದ್ರ ಸರ್ಕಾರದ ಶ್ರಮದ ಫಲವಾಗಿದೆ. ಖಾಸಗಿ ಅವರ ಸಹಭಾಗಿತ್ವ, ಸ್ಥಳೀಯ ಜನರ ಆಸಕ್ತಿಯಿಂದ ಹೊಸ ಚಿಂತನೆಗಳೊಂದಿಗೆ ಇದು ಸಾಕಾರವಾಗಿದೆ.
ಉದಾಹರಣೆಗೆ ಸರ್ಕಾರಿ ಖಾಸಗಿ ಸಹಭಾಗಿತ್ವ ಇದಕ್ಕೆ ಸಾಕ್ಷಿಯಾಗಿದೆ. ಇದರ ಮೂಲಕ ದಕ್ಷ, ಉತ್ತಮ ಹೆದ್ದಾರಿಗಳ ನಿರ್ಮಾಣ ಸಾಧ್ಯವಾಗಿದೆ. ಅಲ್ಲದೆ ಕರ್ನಾಟಕದಲ್ಲಿ ನಿರ್ಮಾಣವಾಗಿರೋ ಬೆಂಗಳೂರು- ಮೈಸೂರು ದಶಪಥ ಹೆದ್ದಾರಿ ಅತ್ಯಾಧುನಿಕ ತಂತ್ರಜ್ಞಾನವನ್ನ ಅಳವಡಿಸಿಕೊಂಡಿದೆ. ಅದ್ರಲ್ಲೂ ಜಿಪಿಎಸ್ ಅಳವಡಿಸಿಕೊಂಡು ಟೋಲ್ ಸಂಗ್ರಹದ ವ್ಯವಸ್ಥೆಯನ್ನ ಬಳಸುತ್ತಿದೆ. ಈ ವ್ಯವಸ್ಥೆ ಹೆದ್ದಾರಿಯಲ್ಲಿ ವಾಹನ ದಟ್ಟನೆ ತಗ್ಗಿಸೋದರ ಜೊತೆಗೆ ವಾಹನಗಳು ಎಷ್ಟು ದೂರ ಹೈವೇ ಬಳಸಿವೆಯೋ ಅಷ್ಟಕ್ಕೆ ಮಾತ್ರ ಟೋಲ್ ಕಟ್ಟಬಹುದಾಗಿದೆ. ಇದು ಸಂಚಾರ ವ್ಯವಸ್ಥೆಯಲ್ಲಿ ಅಮೂಲಾಗ್ರ ಬದಲಾವಣೆ ಅಗಿದೆ.
ಈ ಹೆದ್ದಾರಿ ಕ್ರಾಂತಿಯ ಯಶಸ್ಸಿಗೆ ಮಾನ್ಯ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ಅವರ ದಕ್ಷ ನಾಯಕತ್ವವೇ ಕಾರಣ. ಸದ್ಯ 46 ಹೆದ್ದಾರಿಗಳು ಒಟ್ಟು 19 ಸಾವಿರದ 939 ಕೋಟಿ ರೂಪಾಯಿ ವೆಚ್ಚದಲ್ಲಿ ಈಗಾಗಲೇ ಲೋಕಾರ್ಪಣೆಗೊಂಡಿವೆ. ರಸ್ತೆಗಳಲ್ಲಿ ವಾಹನ ದಟ್ಟನೆ ತಗ್ಗಿಸೋ ಜೊತೆ ಉತ್ತಮ, ಸುರಕ್ಷಿತ ಸಂಚಾರವೇ ನಮ್ಮ ಗುರಿ ಎಂದು ಕೇಂದ್ರ ಸರ್ಕಾರ ಗುರಿಯನ್ನ ಇಟ್ಟುಕೊಂಡು ಕೆಲಸಮಾಡುತ್ತಿದೆ. ಅದ್ರಲ್ಲೂ ಕರ್ನಾಟಕದಲ್ಲಿ ಈ ಎಕ್ಸ್‌ಪ್ರೆಸ್‌ವೇ ಮುಂದಿನ ಭವಿಷ್ಯವಾಗಿದ್ದು, ಇವುಗಳಿಂದ ಪ್ರಗತಿ, ಅಭಿವೃದ್ಧಿ, ಹಾಗೂ ಉತ್ತಮ ಸಂಪರ್ಕ ವ್ಯವಸ್ಥೆ ನಿರ್ಮಾಣವಾಗಲು ಸಹಾಯಮಾಡಿದೆ. ಒಟ್ಟಾರೆಯಾಗಿ ಕರ್ನಾಟಕ ಉತ್ತಮ ಭವಿಷ್ಯ ಕಾಣುವುದು ಈ ಎಲ್ಲಾ ಕಾರ್ಯಗಳಿಂದ ಖಚಿತವಾಗಿದೆ.












Click it and Unblock the Notifications