Bengaluru-Goa Flight: ಗೋವಾದಿಂದ ಬೆಂಗಳೂರಿಗೆ ಬಸ್‌ಗಿಂತ ವಿಮಾನವೇ ಅಗ್ಗ!
ಪಣಜಿ, ಮಾರ್ಚ್ 22: ಭಾರತದ ವಾಯುಯಾನ ಉದ್ಯಮಕ್ಕೆ ಇತ್ತೀಚೆಗೆ ಪ್ರವೇಶ ಪಡೆದಿರುವ FLY91 ತನ್ನ ವಾಣಿಜ್ಯ ಕಾರ್ಯಾಚರಣೆಯನ್ನು ಆರಂಭಿಸಿದ್ದು, ಪಣಜಿಯಿಂದ ಬೆಂಗಳೂರಿಗೆ ವಿಮಾನಯಾನ ಆರಂಭಿಸಿದೆ. ಗೋವಾದ ಮನೋಹರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸೇವೆ ಆರಂಭಿಸಿದೆ.
ವಿಮಾನವು ಗೋವಾದ ಮನೋಹರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕಳೆದ ಸೋಮವಾರ (ಮಾರ್ಚ್ 18) ರಂದು ಬೆಳಗ್ಗೆ 07.55 ಕ್ಕೆ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದತ್ತ ಹೊರಟಿತು. ಬೆಂಗಳೂರಿನಿಂದ ಸಿಂಧುದುರ್ಗಕ್ಕೆ ತನ್ನ ಮೊದಲ ಹಾರಾಟವನ್ನು ನಡೆಸಿದೆ ಎಂದು ಕಂಪನಿಯ ವಕ್ತಾರರು ತಿಳಿಸಿದ್ದಾರೆ. ಆದರೆ, ಇಲ್ಲಿ ಗಮನಿಸಬೇಕಾದದ್ದು, ಈ ವಿಮಾನದ ದರ.

ಹೌದು.. ಫ್ಲೈ91 ವಿಮಾನ ಸಂಸ್ಥೆ ಗೋವಾದಿಂದ ಬೆಂಗಳೂರಿಗೆ ಟಿಕೆಟ್ ದರ 1,991 ರೂಪಾಯಿ ನಿಗದಿಪಡಿಸಿದೆ. ಇದು ಬಸ್ ದರದಷ್ಟೇ ಇದೆ. ಹಲವು ಬಸ್‌ಗಳಲ್ಲಿ, ಖಾಸಗಿ ಬಸ್‌ಗಳಲ್ಲಿ ಬೆಂಗಳೂರು ಮತ್ತು ಗೋವಾ ನಡುವಿನ ಪ್ರಯಾಣದ ದರ ಇದಕ್ಕಿಂತ ಹೆಚ್ಚಾಗಿದೆ. ಹೀಗಿರುವಾಗ ವಿಮಾನ ಪ್ರಯಾಣದ ದರ ಇಷ್ಟೊಂದು ಕಡಿಮೆ ಇರುವುದು ಪ್ರಯಾಣಿಕರಿಗೆ ಖುಷಿ ಮತ್ತು ಆಶ್ಚರ್ಯ ಎರಡು ಉಂಟು ಮಾಡಿದೆ.
ಗೋವಾದಿಂದ ಬೆಂಗಳೂರಿಗೆ ಬರಲು ಕರ್ನಾಟಕ ಸಾರಿಗೆ ನಿಗಮದ ಬಸ್ ಟಿಕೆಟ್ ದರ 1,257, 1,360 ರಿಮದ ಪ್ರಾರಂಭವಾಗುತ್ತವೆ. ಖಾಸಗಿ ಬಸ್‌ಗಳಿಗೆ 800, 999 ರಿಂದ 2,700 ರೂಪಾಯಿಯವರೆಗೂ ಇದೆ. ಸ್ಲಿಪರ್, ಸೀಟರ್ ಬಸ್‌ಗಳಿಗೆ ತಕ್ಕಂತೆ ದರ ಬದಲಾಗುತ್ತವೆ. ಬೆಂಗಳೂರಿನಿಂದ ಗೋವಾಗೆ ತೆರಳಲು ಕನಿಷ್ಠ ಹತ್ತು ಗಂಟೆ ಸಮಯ ಕೂಡ ಬೇಕಾಗುತ್ತದೆ.
ಆದರೆ, ಈ ವಿಮಾನಯಾನ ಬಸ್‌ಗಿಂತ ಅಗ್ಗ ಅಥವಾ 200- 300 ರೂಪಾಯಿ ಹೆಚ್ಚು ಇದೆ. ಇದರಲ್ಲಿ ಪ್ರಯಾಣಿಸುವ ಮೂಲಕ ಉತ್ತಮ ಪ್ರಯಾಣದ ಅನುಭವ ಮತ್ತು ಬೇಗನೇ ತಾವು ಇಷ್ಟಪಟ್ಟ ಸ್ಥಳವನ್ನು ಸೇರಿಕೊಳ್ಳಬಹುದು. ಈ ವಿಮಾನ ಸೇವೆ ಜನರಲ್ಲಿ ಚರ್ಚೆ ಹುಟ್ಟುಹಾಕಿದ್ದು, ಪ್ರಯಾಣಿಕರು ಯಾವ ರೀತಿ ಸ್ಪಂದಿಸುತ್ತಾರೋ ನೊಡಬೇಕಿದೆ.

ಗೋವಾದಿಂದ ಬೆಂಗಳೂರಿಗೆ ಬರುವ ವಿಮಾನಗಳು ಮನೋಹರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೆಳಗ್ಗೆ 7.55ಕ್ಕೆ ಹೊರಡುತ್ತವೆ. ಆದರೆ, ಬಸ್‌ಗಳು ಸಂಜೆ ಬೆಂಗಳೂರಿಗೆ ಹೊರಡುತ್ತವೆ. FLY91 ಆರಂಭದಲ್ಲಿ ಗೋವಾ, ಹೈದರಾಬಾದ್, ಬೆಂಗಳೂರು ಮತ್ತು ಸಿಂಧುದುರ್ಗ ನಡುವೆ ಹಾರಾಟ ನಡೆಸುತ್ತಿದೆ. ಏಪ್ರಿಲ್‌ನಲ್ಲಿ ಅಗತ್ತಿ, ಜಲಗಾಂವ್ ಮತ್ತು ಪುಣೆಗೂ ವಿಮಾನ ಸೇವೆಗಳನ್ನು ನೀಡಲಿದ್ದಾರೆ.
ಸೋಮವಾರ, ಶುಕ್ರವಾರ ಮತ್ತು ಶನಿವಾರದಂದು ಗೋವಾ ಮತ್ತು ಬೆಂಗಳೂರು ನಡುವೆ ವಿಮಾನ ಸೇವೆಗಳು ಇರಲಿವೆ. ಹೆಚ್ಚುವರಿಯಾಗಿ, ಗೋವಾ ಮತ್ತು ಹೈದರಾಬಾದ್, ಹಾಗೆಯೇ ಸಿಂಧುದುರ್ಗ ಮತ್ತು ಹೈದರಾಬಾದ್ ನಡುವೆ ವಾರಕ್ಕೆ ಎರಡು ಬಾರಿ ವಿಮಾನ ಸೇವೆ ನೀಡಲಿದೆ FLY91. ರ್ಕಾರದ ಪ್ರಾದೇಶಿಕ ಸಂಪರ್ಕ ಯೋಜನೆ (ಆರ್‌ಸಿಎಸ್) ಉಡಾನ್ ಅಡಿಯಲ್ಲಿ ಏರ್‌ಲೈನ್ ತನ್ನ ಮೊದಲ ಮಾರ್ಗಗಳನ್ನು ನಿಗದಿಪಡಿಸಲಾಗಿದೆ ಎಂದು ವಿಮಾಯಾನ ಸಂಸ್ಥೆ ವಕ್ತಾರರು ಹೇಳಿದ್ದಾರೆ.












Click it and Unblock the Notifications