ಬೆಂಗಳೂರು ನನಗೆ ಮೋಸ ಮಾಡ್ತು": ನಿಶ್ ಹೇರ್ ಸ್ಟೋರ್‌ನಲ್ಲಿ 8 ಲಕ್ಷ ರೂ. ವಂಚನೆಗೊಳಗಾದ ನಟಿ ಪಾರುಲ್ ಗುಲಾಟಿ

ಸ್ವಂತ ಉದ್ಯಮ ಕಟ್ಟಿ ಬೆಳೆಸಬೇಕು, ನಂಬಿಕಸ್ಥ ಸಿಬ್ಬಂದಿಯನ್ನು ಇಟ್ಟುಕೊಂಡು ವ್ಯಾಪಾರ ವಿಸ್ತರಿಸಬೇಕು ಎಂದು ಕನಸು ಕಾಣುವ ಉದ್ಯಮಿಗಳಿಗೆ ಕೆಲವೊಮ್ಮೆ ನಂಬಿಕಸ್ಥ ಸಿಬ್ಬಂದಿಗಳನ್ನ ಹುಡುಕೊದೇ ಕಷ್ಟ, ಇನ್ನು ಕೆಲವೊಮ್ಮೆ ತಾವೇ ನಂಬಿಕೆ ಇಟ್ಟು ನೇಮಿಸಿದ ಸಿಬ್ಬಂದಿಯಿಂದಲೇ ದೊಡ್ಡ ಪೆಟ್ಟು ಬೀಳುತ್ತದೆ. ಇದೀಗ ಖ್ಯಾತ ನಟಿ ಹಾಗೂ ಯಶಸ್ವಿ ಉದ್ಯಮಿ ಪಾರುಲ್ ಗುಲಾಟಿ ಅವರಿಗೂ ಇಂಥದ್ದೇ ಒಂದು ಕಹಿ ಅನುಭವ ಎದುರಾಗಿದೆ.

ಬೆಂಗಳೂರಿನಲ್ಲಿರುವ ತಮ್ಮ 'ನಿಶ್ ಹೇರ್' ಸ್ಟೋರ್‌ನ ಇಬ್ಬರು ಉದ್ಯೋಗಿಗಳು ಸೇರಿ ತಮಗೆ ಬರೋಬ್ಬರಿ 8 ಲಕ್ಷ ರೂಪಾಯಿಗೂ ಅಧಿಕ ವಂಚನೆ ಮಾಡಿದ್ದಾರೆ ಎಂದು ಪಾರುಲ್ ಗುಲಾಟಿ ಕಣ್ಣೀರು ಹಾಕಿದ್ದಾರೆ. ಈ ಕುರಿತು ವಿಡಿಯೋ ಹಂಚಿಕೊಂಡಿರುವ ಅವರು, "ಬೆಂಗಳೂರು, ನೀನು ನನಗೆ ದ್ರೋಹ ಮಾಡಿದೆ" ಎಂದು ಬರೆದುಕೊಂಡು ತಮ್ಮ ನೋವು ತೋಡಿಕೊಂಡಿದ್ದಾರೆ.

Bengaluru

ವಂಚನೆ ಬಯಲಾಗಿದ್ದು ಹೇಗೆ?

ಕಳೆದ ಕೆಲವು ದಿನಗಳಿಂದ ಬೆಂಗಳೂರು ಸ್ಟೋರ್‌ನ ಲೆಕ್ಕಾಚಾರದಲ್ಲಿ ವ್ಯತ್ಯಾಸವಾಗುತ್ತಿರುವುದನ್ನು ಪಾರುಲ್ ಗಮನಿಸಿದ್ದರು. ಎಲ್ಲೋ ಏನೋ ತಪ್ಪಾಗುತ್ತಿದೆ ಎಂಬ ಅನುಮಾನ ಅವರಲ್ಲಿ ಮೂಡಿತ್ತು. ಹೀಗಾಗಿ ಯಾವುದೇ ಮುನ್ಸೂಚನೆ ನೀಡದೆ ದಿಢೀರನೆ ಬೆಂಗಳೂರಿನ ಸ್ಟೋರ್‌ಗೆ ಭೇಟಿ ನೀಡಿದ್ದಾರೆ. ಸಿಸಿಟಿವಿ ಕ್ಯಾಮೆರಾದ ಆಕ್ಸೆಸ್ ಹೊಂದಿದ್ದ ಸೇಲ್ಸ್ ಎಕ್ಸಿಕ್ಯೂಟಿವ್ ಯುವತಿ, ಪಾರುಲ್ ಸ್ಟೋರ್‌ಗೆ ಬರುತ್ತಿದ್ದಂತೆಯೇ ಅನಾರೋಗ್ಯದ ನೆಪವೊಡ್ಡಿ ರಜೆ ಹಾಕಿದ್ದಳು.

5 ವರ್ಷ ಕೆಲಸ ಮಾಡಿದ ಕಂಪನಿಯಿಂದ ಏಕಾಏಕಿ ಉದ್ಯೋಗ ಕಳೆದುಕೊಂಡೆ; 'ಬಹುಶಃ ದೇವರ ಇಚ್ಛೆ' ಎಂದ ಉದ್ಯೋಗಿ, ವೈರಲ್ ವಿಡಿಯೋ
5 ವರ್ಷ ಕೆಲಸ ಮಾಡಿದ ಕಂಪನಿಯಿಂದ ಏಕಾಏಕಿ ಉದ್ಯೋಗ ಕಳೆದುಕೊಂಡೆ; 'ಬಹುಶಃ ದೇವರ ಇಚ್ಛೆ' ಎಂದ ಉದ್ಯೋಗಿ, ವೈರಲ್ ವಿಡಿಯೋ

ಆದರೆ ಸ್ಟೋರ್ ಮ್ಯಾನೇಜರ್ ಅಲ್ಲೇ ಇದ್ದ ಕಾರಣ ಸಿಕ್ಕಿಬಿದ್ದಿದ್ದಾನೆ. ಆತನನ್ನು ತೀವ್ರವಾಗಿ ವಿಚಾರಣೆ ನಡೆಸಿದಾಗ ಕಳೆದ ಆರು ತಿಂಗಳಿಂದ ನಡೆಯುತ್ತಿದ್ದ ಭಾರೀ ವಂಚನೆ ಬೆಳಕಿಗೆ ಬಂದಿದೆ.

ಈ ಇಬ್ಬರು ಸಿಬ್ಬಂದಿ ಸೇರಿಕೊಂಡು ನಿತ್ಯವೂ 15,000 ದಿಂದ 20,000 ರೂಪಾಯಿ ಮೌಲ್ಯದ ಹೇರ್ ಪ್ರಾಡಕ್ಟ್‌ಗಳನ್ನು ಮಾರಾಟ ಮಾಡುತ್ತಿದ್ದರು. ಆದರೆ, ಆ ಹಣವನ್ನು ಕಂಪನಿಯ ಅಧಿಕೃತ ಬ್ಯಾಂಕ್ ಖಾತೆಗೆ ಜಮೆ ಮಾಡುವ ಬದಲು, ಗ್ರಾಹಕರಿಂದ ನೇರವಾಗಿ ತಮ್ಮ ವೈಯಕ್ತಿಕ ಖಾತೆಗೆ ವರ್ಗಾವಣೆ ಮಾಡಿಸಿಕೊಳ್ಳುತ್ತಿದ್ದರು.

"ಅವರು ನನ್ನ ಉತ್ಪನ್ನಗಳನ್ನು, ನನ್ನ ಪ್ಯಾಕೇಜಿಂಗ್ ಬಳಸಿ, ನನ್ನ ಹೆಸರಿನಲ್ಲೇ ಮಾರಾಟ ಮಾಡಿ, ಹಣವನ್ನು ಮಾತ್ರ ತಾವೇ ನುಂಗಿದ್ದಾರೆ. ಅವರು ನನಗೆ ಮಾತ್ರವಲ್ಲ, ಗ್ರಾಹಕರಿಗೂ ಮೋಸ ಮಾಡಿದ್ದಾರೆ" ಎಂದು ಪಾರುಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಘಾತಕಾರಿ ವಿಚಾರವೆಂದರೆ, ಕೆಲಸಕ್ಕೆ ಸೇರಿದ ಮೊದಲ ಒಂದು ತಿಂಗಳು ವ್ಯವಹಾರ ಹೇಗೆ ನಡೆಯುತ್ತದೆ ಎಂಬುದನ್ನು ಮ್ಯಾನೇಜರ್ ಸಂಪೂರ್ಣವಾಗಿ ಅಧ್ಯಯನ ಮಾಡಿ, ಆ ನಂತರ ಈ ವಂಚನೆ ಶುರು ಮಾಡಿದ್ದನಂತೆ.

ಪೊಲೀಸ್ ಠಾಣೆ ಮೆಟ್ಟಿಲೇರಿದ ನಟಿ

ಈ ಘಟನೆ ಬೆಳಕಿಗೆ ಬರುತ್ತಿದ್ದಂತೆಯೇ ಪಾರುಲ್ ಅವರು ಬೆಂಗಳೂರು ಪೊಲೀಸರ ಮೊರೆ ಹೋಗಿದ್ದು, ಇಡೀ ದಿನವನ್ನು ಪೊಲೀಸ್ ಠಾಣೆಯಲ್ಲಿಯೇ ಕಳೆದಿದ್ದಾರೆ. ಮ್ಯಾನೇಜರ್ ತಾನು 8 ಲಕ್ಷ ರೂ. ವರೆಗೆ ಮಾತ್ರ ವಂಚನೆ ಮಾಡಿರುವುದಾಗಿ ಬಾಯ್ಬಿಟ್ಟಿದ್ದಾನೆ. ಆದರೆ, ಸೇಲ್ಸ್ ಎಕ್ಸಿಕ್ಯೂಟಿವ್ ಯುವತಿ ಸದ್ಯ ತಲೆಮರೆಸಿಕೊಂಡಿದ್ದಾಳೆ.

"ಕಳೆದುಕೊಂಡ ಹಣ ವಾಪಸ್ ಸಿಗುವ ಬಗ್ಗೆ ನನಗೆ ಯಾವುದೇ ಭರವಸೆ ಇಲ್ಲ. ಆದರೆ, ಇಂತಹ ನೀಚ ಬುದ್ಧಿಯ ಜನರಿಗೆ ಬೇರೆಲ್ಲೂ ಕೆಲಸ ಸಿಗಬಾರದು ಎಂಬುದಷ್ಟೇ ನನ್ನ ಉದ್ದೇಶ. ಇವರಿಗೆ ನಿಯತ್ತೇ ಇಲ್ಲ, ಎಲ್ಲಿಗೆ ಹೋದರೂ ಇವರು ಕಳ್ಳತನ ಮಾಡುತ್ತಾರೆ. ಇವರು ಅತಿ ಕೀಳು ಮಟ್ಟದ ಜನರು" ಎಂದು ಪಾರುಲ್ ಕಿಡಿಕಾರಿದ್ದಾರೆ.

ಟಾಕ್ಸಿಕ್ ಬೆಡಗಿ ರುಕ್ಮಿಣಿ ವಸಂತ್ ಹಿನ್ನೆಲೆ ಗೊತ್ತಾದ್ರೆ ನಿಮಗೂ ಹೆಮ್ಮೆಯಾಗುತ್ತೆ, ನಟಿಯ ತಂದೆ ಯಾರು, ಒಟ್ಟು ಆಸ್ತಿ ಎಷ್ಟಿದೆ?
ಟಾಕ್ಸಿಕ್ ಬೆಡಗಿ ರುಕ್ಮಿಣಿ ವಸಂತ್ ಹಿನ್ನೆಲೆ ಗೊತ್ತಾದ್ರೆ ನಿಮಗೂ ಹೆಮ್ಮೆಯಾಗುತ್ತೆ, ನಟಿಯ ತಂದೆ ಯಾರು, ಒಟ್ಟು ಆಸ್ತಿ ಎಷ್ಟಿದೆ?

ಗ್ರಾಹಕರಿಗೆ ಪಾರುಲ್ ಗುಲಾಟಿ ಎಚ್ಚರಿಕೆ

ಇದೇ ವೇಳೆ, ಬೆಂಗಳೂರಿನ ನಿಶ್ ಹೇರ್ ಸ್ಟೋರ್‌ಗೆ ಭೇಟಿ ನೀಡಿ ಶಾಪಿಂಗ್ ಮಾಡಿರುವ ಗ್ರಾಹಕರಿಗೆ ಪಾರುಲ್ ವಿಶೇಷ ಮನವಿ ಮಾಡಿದ್ದಾರೆ. ಒಂದು ವೇಳೆ ನೀವು ಕಂಪನಿಯ ಅಧಿಕೃತ ಕ್ಯೂಆರ್ ಕೋಡ್ ಅಥವಾ ಬ್ಯಾಂಕ್ ಖಾತೆ ಬದಲಾಗಿ, ನೇರವಾಗಿ ಸಿಬ್ಬಂದಿಯ ವೈಯಕ್ತಿಕ ಖಾತೆಗೆ ಹಣ ವರ್ಗಾವಣೆ ಮಾಡಿದ್ದರೆ, ನೀವೂ ವಂಚನೆಗೊಳಗಾಗಿರಬಹುದು. ಹೀಗಾಗಿ, ಯಾವುದೇ ಖರೀದಿ ಮಾಡುವಾಗ ಕಡ್ಡಾಯವಾಗಿ ಬಿಲ್ ಕೇಳಿ ಮತ್ತು ಹಣ ಯಾರ ಖಾತೆಗೆ ಹೋಗುತ್ತಿದೆ ಎಂಬುದನ್ನು ಪರಿಶೀಲಿಸಿ ಎಂದು ಅವರು ಗ್ರಾಹಕರಿಗೆ ಎಚ್ಚರಿಕೆ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+