Suchana Seth Case: ಮಗನನ್ನೇ ಕೊಂದ ಸುಚನಾ ಸೇಠ್ ಬಗ್ಗೆ ಟ್ಯಾಕ್ಸಿ ಚಾಲಕ ಹೇಳಿದ್ದೇನು ಗೊತ್ತಾ?-ಇಲ್ಲಿದೆ ಮಾಹಿತಿ
ಗೋವಾ, ಜನವರಿ, 12: 4 ವರ್ಷದ ಮಗುವನ್ನು ಕೊಂದ ತಾಯಿ ಸುಚನಾ ಸೇಠ್ ಕೇಸ್ ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ನಿನ್ನೆಯಷ್ಟೇ ಸುನಚಾ ಸೇಠ್ ತನ್ನ ತಪ್ಪನ್ನು ಒಪ್ಪಿಕೊಂಡಿದ್ದರು ಎಂದು ಗೋವಾ ಪೊಲೀಸ್ ಮೂಲಗಳು ತಿಳಿಸಿದ್ದವು. ಇದೀಗ ಅವರು ಪ್ರಯಾಣ ಮಾಡಿದ್ದ ಟ್ಯಾಕ್ಸಿ ಚಾಲಕ ಭಯಾನಕ ಮಾಹಿತಿಯೊಂದನ್ನು ಬಿಚ್ಚಿಟ್ಟಿದ್ದಾರೆ. ಇಲ್ಲಿದೆ ನೋಡಿ ಮಾಹಿತಿ.
ತನ್ನ ಮಗನನ್ನೇ ಕೊಂದ ಆರೋಪದಲ್ಲಿ ಬಂಧಿತರಾಗಿರುವ ಎಐ ಸ್ಟಾರ್ಟ್‌ಅಪ್ ಸಿಇಒ ಸುಚನಾ ಸೇಠ್ ಅವರು, ಮಗುವನ್ನು ಹತ್ಯೆ ಮಾಡಿ ಗೋವಾದಿಂದ ಕರ್ನಾಟಕಕ್ಕೆ ಟ್ಯಾಕ್ಸಿಯಲ್ಲಿ ಪ್ರಯಾಣಿಸುವಾಗ ಮೌನವಾಗಿದ್ದರು ಎಂದು ವಾಹನದ ಚಾಲಕ ಹೇಳಿದ್ದಾರೆ. ನಿನ್ನೆ ಉತ್ತರ ಗೋವಾದ ಕ್ಯಾಂಡೋಲಿಮ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸೇಠ್ ಅವರನ್ನು ಬಂಧಿಸಲು ಪೊಲೀಸರಿಗೆ ಸಹಾಯ ಮಾಡಿದ ಟ್ಯಾಕ್ಸಿ ಡ್ರೈವರ್, 10 ಗಂಟೆಗಳಿಗೂ ಹೆಚ್ಚು ಕಾಲ ನಡೆದ ಇಡೀ ಪ್ರವಾಸದಲ್ಲಿ ಸುಚನಾ ಸೇಠ್ ಶಾಂತವಾಗಿಯೇ ಕುಳಿತಿದ್ದರು. ಒಂದೇ ಒಂದು ಮಾತನ್ನೂ ಆಡಲಿಲ್ಲ ಎಂದರು.

ಗೋವಾದ ಕ್ಯಾಂಡೋಲಿಮ್ ಮೂಲದ ಸರ್ವಿಸ್ ಅಪಾರ್ಟ್‌ಮೆಂಟ್‌ನಲ್ಲಿ ಮಗುವನ್ನು ಕೊಂದ ಆರೋಪ ಆಕೆಯ ಮೇಲಿದೆ. ಸರ್ವಿಸ್ ಅಪಾರ್ಟ್ಮೆಂಟ್ ಸಿಬ್ಬಂದಿ ಸುಚನಾ ಸೇಠ್‌ಗೆ ಟ್ಯಾಕ್ಸಿಯನ್ನು ಬುಕ್ ಮಾಡಿ ಕೊಟ್ಟರು ಎಂದು ಜಾನ್ ಹೇಳಿದರು. ಇನ್ನು ನಾನು ಸರ್ವಿಸ್ ಅಪಾರ್ಟ್‌ಮೆಂಟ್ ತಲುಪಿದಾಗ, ಸುಚನಾ ಸೇಠ್ ತನ್ನ ಬ್ಯಾಗ್ ಅನ್ನು ರಿಸೆಪ್ಶನ್‌ನಿಂದ ಟ್ಯಾಕ್ಸಿಗೆ ಸಾಗಿಸಲು ನನ್ನನ್ನು ಕೇಳಿದಳು. ಅದು ಬಹಳ ಭಾರವಾಗಿತ್ತು. ಭಾರ ಕಂಡು ಬ್ಯಾಗ್‌ನಿಂದ ಸ್ವಲ್ಪ ವಸ್ತುಗಳನ್ನು ತೆಗೆಯಬಹುದೇ ಎಂದು ಕೇಳಿದೆ. ಅದಕ್ಕೆ ಅವರು ನಿರಾಕರಿಸಿದರು ಎಂದರು.
ಉತ್ತರ ಗೋವಾದ ಬಿಚೋಲಿಮ್ ಪಟ್ಟಣಕ್ಕೆ ಬಂದಾಗ ನೀರಿನ ಬಾಟಲಿ ಕೇಳಿದ್ದು ಬಿಟ್ಟರೆ ನನ್ನಲ್ಲಿ ಬೇರೇನೂ ಮಾತನಾಡಿರಲಿಲ್ಲ. ಸೋಮವಾರ ಬೆಂಗಳೂರಿಗೆ ತೆರಳುತ್ತಿದ್ದಾಗ ಕರ್ನಾಟಕ-ಗೋವಾ ಗಡಿಯಲ್ಲಿರುವ ಚೋರ್ಲಾ ಘಾಟ್ ವಿಭಾಗದಲ್ಲಿ ಭಾರಿ ಟ್ರಾಫಿಕ್ ಜಾಮ್ ಆಗಿತ್ತು.
ಟ್ರಾಫಿಕ್ ಕ್ಲಿಯರ್ ಆಗಲು ಕನಿಷ್ಠ 4 ಗಂಟೆ ಬೇಕಾಯಿತು. ಟ್ರಾಫಿಕ್ ಜಾಮ್ ಕಡಿಮೆಯಾಗಲು 6 ಗಂಟೆಗಳು ತೆಗೆದುಕೊಳ್ಳುತ್ತದೆ ಎಂದು ಮೇಡಮ್‌ಗೆ ಹೇಳಿದೆ, ಹಿಂತಿರುಗಿ ವಿಮಾನ ನಿಲ್ದಾಣಕ್ಕೆ ಹೋಗಬಹುದೇ ಎಂದು ಕೇಳಿದೆ. ಅದಕ್ಕೆ ಅವರು ಬೇಡ, ರಸ್ತೆಯ ಮೂಲಕವೇ ಹೋಗಿ ಎಂದರು. ಆಗ ಏನೋ ಅಸಹಜವಾಗಿದೆ ಎಂದು ನನಗನ್ನಿಸಿತು ಎಂದು ಟ್ಯಾಕ್ಸಿ ಚಾಲಕ ತಿಳಿದುಕೊಂಡೆ ಎಂದರು.
ನಂತರ ತನಗೆ ಗೋವಾ ಪೊಲೀಸರಿಂದ ಕರೆ ಬಂದಿದ್ದು, ತನ್ನ ಪ್ರಯಾಣಿಕನ ಬಗ್ಗೆ ಏನಾದರೂ ಅನುಮಾನವಿದೆ ಎಂದು ಕೇಳಿದರು. ಕಲಂಗುಟ್ ಪೋಲೀಸರು ಹತ್ತಿರದ ಪೊಲೀಸ್ ಠಾಣೆಯನ್ನು ಹುಡುಕಿ ಅಲ್ಲಿಗೆ ಕರೆದೊಯ್ಯಲು ಹೇಳಿದರು. ನಾನು ಗೂಗಲ್ ಮ್ಯಾಪ್‌ನಲ್ಲಿ ಜಿಪಿಎಸ್ ಮೂಲಕ ಹುಡುಕಲು ಪ್ರಯತ್ನಿಸಿದೆ. ನಂತರ ಟೋಲ್ ಪ್ಲಾಜಾಗಳಲ್ಲಿ ಪೊಲೀಸರನ್ನು ಹುಡುಕಿದೆ. ಆದರೆ ಯಾರೂ ಕಾಣಿಸಲಿಲ್ಲ ಎಂದರು.
ಪೊಲೀಸರ ಕರೆಯಿಂದ ಗಾಬರಿಯಾಗಿ ರಸ್ತೆ ಬದಿಯ ರೆಸ್ಟೋರೆಂಟ್‌ನಲ್ಲಿ ನಿಲ್ಲಿಸುವ ನೆಪದಲ್ಲಿ ಸ್ವಲ್ಪ ಸಮಯ ಕೇಳಿದೆ. ಅಲ್ಲಿ ಪೊಲೀಸ್ ಠಾಣೆಯೊಂದು ಕೇವಲ 500 ಮೀಟರ್ ದೂರದಲ್ಲಿದೆ ಎಂದು ತಿಳಿಯಿತು.
ನಾವು ಬೆಂಗಳೂರಿನಿಂದ ಒಂದೂವರೆ ಗಂಟೆಗಳ ದೂರದಲ್ಲಿದ್ದೆವು. ಐಯಮಂಗಲ ಪೊಲೀಸ್ ಠಾಣೆಗೆ ಟ್ಯಾಕ್ಸಿ ತಿರುಗಿಸಿದೆ. ಅಲ್ಲಿ ಕಲಗುಂಟ ಪೊಲೀಸ್ ಅಧಿಕಾರಿಯೊಬ್ಬರು ನನ್ನೊಂದಿಗೆ ಫೋನ್‌ನಲ್ಲಿ ಮಾತನಾಡುತ್ತಲೇ ಇದ್ದರು. ಸಂಬಂಧಪಟ್ಟ ಇನ್ಸ್‌ಪೆಕ್ಟರ್ 15 ನಿಮಿಷ ನಂತರ ಹೊರಬಂದರು. ಆಗಲೂ ಸುಚನಾ ಸೇಠ್ ಸುಮ್ಮನೆ ಕಾರಿನಲ್ಲಿ ಕುಳಿತಿದ್ದರು ಎಂದರು.
ಪೊಲೀಸರು ನಂತರ ಆಕೆಯ ಬ್ಯಾಗ್ ಅನ್ನು ಪರಿಶೀಲಿಸಿದಾಗ ಅದರಲ್ಲಿ ಮಗುವಿನ ದೇಹ ಪತ್ತೆ ಆಯಿತು. ಇದು ನಿಮ್ಮ ಮಗನೇ ಎಂದು ಪೊಲೀಸರು ಕೇಳಿದಾಗ ಆಕೆ, ಶಾಂತವಾಗಿ ಹೌದು ಎಂದು ಉತ್ತರಿಸಿದರು. ಇನ್ನು ಆಕೆಯ ಬ್ಯಾಗ್‌ನಲ್ಲಿ ಟಿಶ್ಯೂ ಪೇಪರ್‌ನಲ್ಲಿ ಐಲೈನರ್‌ನಿಂದ ಬರೆಯಲಾದ ಸುಕ್ಕುಗಟ್ಟಿದ ನೋಟು ಪತ್ತೆಯಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನಾವು ಟಿಪ್ಪಣಿಯ ವಿಷಯವನ್ನು ಬಹಿರಂಗಪಡಿಸಲು ಬಯಸುವುದಿಲ್ಲ. ಆದರೆ ಇದು ತನ್ನ ಮಗುವಿನ ಪಾಲನೆಯ ಬಗ್ಗೆ ಆಕೆ ಅಸಮಾಧಾನಗೊಂಡಿದ್ದು ಸೂಚಿಸುತ್ತದೆ ಎಂದು ಅವರು ಹೇಳಿದರು. ಆಕೆಯ ಪತಿ ವೆಂಕಟರಮಣಗೆ ನ್ಯಾಯಾಲಯವು ಭೇಟಿಯ ಹಕ್ಕನ್ನು ನೀಡಿದ್ದು, ಅದು ಆಕೆಗೆ ಸರಿಹೋಗುತ್ತಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.












Click it and Unblock the Notifications