Suchana Seth : ಟ್ರಾಫಿಕ್ ಜಾಮ್‌ನಿಂದಲೇ ಬೆಳಕಿಗೆ ಬಂತಾ ಕೊಲೆ ಪ್ರಕರಣ! ಇಲ್ಲಿದೆ ವಿವರ
4 ವರ್ಷದ ಸ್ವಂತ ಮಗುವನ್ನೇ ಕೊಂದ ಸುಚನಾ ಸೇಠ್ ಪ್ರಕರಣ ಸದ್ಯ ನಾಗರಿಕ ಸಮಾಜವನ್ನು ಬೆಚ್ಚಿ ಬೀಳಿಸಿದೆ. ಗೋವಾ, ಕರ್ನಾಟಕದಲ್ಲಿ ನಡೆದ ಈ ಪ್ರಕರಣ ಸದ್ಯ ಸಾಕಷ್ಟು ತಿರುವು ಪಡೆದುಕೊಳ್ಳುತ್ತಿದೆ. ಟ್ರಾಫಿಕ್ ಜಾಮ್ ಆಗಿದ್ದು ಕೂಡ ಈ ಕೊಲೆ ಪ್ರಕರಣ ಬೆಳಕಿಗೆ ಬರುವಲ್ಲಿ ಪ್ರಮುಖ ಕಾರಣ ಎಂದು ಹೇಳಲಾಗಿದೆ.
ಗೋವಾ ಗಡಿಯಲ್ಲಿ ಅಪಘಾತದಿಂದ ಭಾರೀ ಟ್ರಾಫಿಕ್ ಜಾಮ್ ಉಂಟಾದ ಕಾರಣ ಕ್ಯಾಂಡೋಲಿಮ್‌ನ ಸರ್ವಿಸ್ ಅಪಾರ್ಟ್‌ಮೆಂಟ್‌ನಲ್ಲಿ ತನ್ನ ನಾಲ್ಕು ವರ್ಷದ ಮಗನನ್ನು ಕೊಂದ ಬೆಂಗಳೂರು ಮಹಿಳೆ ಸಿಕ್ಕಿಹಾಕಿಕೊಳ್ಳು ಹಲವು ಅಂಶಗಳಲ್ಲಿ ಒಂದಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

"ಆಕೆ ಗೋವಾದಿಂದ ಪಲಾಯನ ಮಾಡುವಾಗ, ನಾಲ್ಕು ಗಂಟೆಗಳ ಕಾಲ ಅಪಘಾತದಿಂದಾಗಿ ಚೋರ್ಲಾ ಘಾಟ್‌ನಲ್ಲಿ ಸಿಲುಕಿಕೊಂಡಿದ್ದಳು. ಅದು ಕೂಡ ಮಾರುವೇಷದಲ್ಲಿ, ಅವಳು ಬೆಂಗಳೂರಿಗೆ ಬಂದಿದ್ದರೆ, ಮಗುವಿನ ದೇಹವನ್ನು ಪಡೆಯುವುದು ಕಷ್ಟಕರವಾಗಿತ್ತು" ಎಂದು ಪೊಲೀಸ್ ಮೂಲಗಳು ತಿಳಿಸಿರುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ.
ಪ್ರಕರಣದ ವಿವರ
ಚೋರ್ಲಾ ಘಾಟ್ ಗೋವಾ, ಕರ್ನಾಟಕ ಮತ್ತು ಮಹಾರಾಷ್ಟ್ರದ ಗಡಿಗೆ ಹೊಂದಿಕೊಂಡಿದೆ. ಇದು ಗೋವಾದ ಪಣಜಿಯ ಈಶಾನ್ಯಕ್ಕೆ ಮತ್ತು ಕರ್ನಾಟಕದ ಬೆಳಗಾವಿಯಿಂದ ಸುಮಾರು 55 ಕಿಲೋಮೀಟರ್ ದೂರದಲ್ಲಿದೆ.
ಮೂಲಗಳ ಪ್ರಕಾರ, ಸುಚನಾ ಸೇಠ್ ಸೋಮವಾರ ತನ್ನ ಪತಿಯೊಂದಿಗೆ ಜಗಳವಾದ ನಂತರ ತನ್ನ ಮಗನನ್ನು ಕೊಂದು ಶವವನ್ನು ಚೀಲದಲ್ಲಿ ತುಂಬಿದ್ದಳು ಎಂದು ವರದಿಯಾಗಿದೆ. ಸುಚನಾರನ್ನು ಅದೇ ದಿನ ಕರ್ನಾಟಕದ ಚಿತ್ರದುರ್ಗದಿಂದ ಬಂಧಿಸಿ ಮಂಗಳವಾರ ಗೋವಾಕ್ಕೆ ಕರೆದೊಯ್ಯಲಾಯಿತು.
ದಂಪತಿಯ ವಿಚ್ಛೇದನದ ದಾಖಲೆಗಳ ಪ್ರಕಾರ, ಸುಚನಾ ಸೇಠ್ ಅವರು ಆಗಸ್ಟ್ 2022 ರಲ್ಲಿ ತನ್ನ ಪತಿ ವೆಂಕಟ್ ರಾಮನ್ ವಿರುದ್ಧ ಕೌಟುಂಬಿಕ ದೌರ್ಜನ್ಯ ಪ್ರಕರಣವನ್ನು ದಾಖಲಿಸಿದ್ದರು. ತನಗೆ ಮತ್ತು ತನ್ನ ಮಗನಿಗೆ ದೈಹಿಕವಾಗಿ ಕಿರುಕುಳ ನೀಡಿದ್ದಾನೆ ಎಂದು ಆಕೆ ಆರೋಪಿಸಿದ್ದರು, ಆದರೆ ವೆಂಕಟ್ ರಾಮನ್ ನ್ಯಾಯಾಲಯದಲ್ಲಿ ಆರೋಪವನ್ನು ನಿರಾಕರಿಸಿದ್ದಾರೆ.
ಪತ್ನಿಯ ಮನೆಯಿಂದ ಅಥವಾ ಆಕೆಯ ಮಗುವಿನೊಂದಿಗೆ ಸಂವಹನ ನಡೆಸುವುದನ್ನು ನಿರ್ಬಂಧಿಸಿದ ರಾಮನ್ ವಿರುದ್ಧ ನ್ಯಾಯಾಲಯವು ತಡೆಯಾಜ್ಞೆ ನೀಡಿತ್ತು. ಮೂಲಗಳ ಪ್ರಕಾರ, ಸುಚನಾ ಶನಿವಾರ ರಾಮನ್ ಅವರಿಗೆ "ನೀವು ಮಗುವನ್ನು ಭೇಟಿ ಮಾಡಬಹುದು," ವಾಟ್ಸಾಪ್ ಸಂದೇಶವನ್ನು ಕಳುಹಿಸಿದ್ದಾರೆ. ಮಗುವನ್ನು ಕೊಲ್ಲುವ ಮುನ್ನ ಮಹಿಳೆ ಶನಿವಾರ ಗೋವಾದಲ್ಲಿದ್ದಳು.
ಆದರೆ, ಆ ಕುಟುಂಬ ಬೆಂಗಳೂರಿನಲ್ಲಿಲ್ಲ ಎಂಬುದು ವೆಂಕಟ್ ರಾಮನ್‌ಗೆ ತಿಳಿಯಿತು. ನಂತರ ಅವರು ಇಂಡೋನೇಷ್ಯಾಕ್ಕೆ ತೆರಳಿದ್ದಾರೆ ಎಂದು ಮೂಲಗಳು ತಿಳಿಸಿವೆ, ವೆಂಕಟ್ ರಾಮನ್ ಅವರನ್ನು ವಿಚಾರಣೆಗಾಗಿ ಕೆಲವೇ ದಿನಗಳಲ್ಲಿ ಕರೆಸಲು ಸಿದ್ಧತೆ ಮಾಡಲಾಗುತ್ತಿದೆ.
ವಿಚಾರಣೆಯ ಸಮಯದಲ್ಲಿ ತಾನು ಅಪರಾಧದಲ್ಲಿ ಭಾಗಿಯಾಗಿಲ್ಲ ಎಂದು ಸುಚನಾ ಸೇಠ್ ಹೇಳಿದ್ದು, ಆರೋಪವನ್ನು ನಿರಾಕರಿಸಿದ್ದಾರೆ ಮತ್ತು ನಿದ್ರೆಯಿಂದ ಎದ್ದಾಗ ಮಗು ಅದಾಗಲೇ ಸತ್ತಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಮೈಂಡ್‌ಫುಲ್ ಎಐ ಸಿಇಒ ಸುಚನಾ ಸೇಠ್ ಬಾಲಕನನ್ನು ಕೊಂದಿದ್ದಾನೆ ಎಂದು ಹೇಳಲಾದ ಕೋಣೆಯಲ್ಲಿ ಎರಡು ಖಾಲಿ ಬಾಟಲಿ ಕೆಮ್ಮು ಸಿರಪ್‌ಗಳನ್ನು ಗೋವಾ ಪೊಲೀಸರು ಪತ್ತೆ ಮಾಡಿದ್ದಾರೆ. ಆಕೆ ಆತನಿಗೆ ಭಾರೀ ಪ್ರಮಾಣದ ಔಷಧ ನೀಡಿರಬಹುದು ಮತ್ತು ಇದೊಂದು ಯೋಜಿತ ಕೊಲೆ ಎಂದು ಶಂಕಿಸಲಾಗಿದೆ.
ಮರಣೋತ್ತರ ಪರೀಕ್ಷೆಯಲ್ಲಿ ಮಗುವನ್ನು ಬಟ್ಟೆಯಿಂದ ಅಥವಾ ದಿಂಬಿನಿಂದ ಉಸಿರುಗಟ್ಟಿಸಿ ಸಾಯಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.












Click it and Unblock the Notifications