Suchana Seth Case: ತನ್ನ ಮಗು ಕೊಂದ ಬಗ್ಗೆ ತಾಯಿ ಸುಚನಾ ಸೇಠ್ ಹೇಳಿದ್ದಾದ್ರೂ ಏನು ಗೊತ್ತಾ?
ಬೆಂಗಳೂರು, ಜನವರಿ, 10: ತನ್ನ ಮಗುವನ್ನೇ ಕೊಲೆ ಮಾಡಿದ ತಾಯಿ ಸುಚನಾ ಸೇಠ್ ಪ್ರಕರಣ ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಲೇ ಇದೆ. ಇದೀಗ ಮತ್ತೊಂದು ಅಪ್ಡೇಟ್ ಮಾಹಿತಿ ಲಭ್ಯವಾಗಿದ್ದು, ತನ್ನ ತಪ್ಪನ್ನು ಸುಚನಾ ಅವರು ಪೊಲೀಸರ ಮುಂದೆ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಸ್ಟಾರ್ಟ್ ಅಪ್ ಕಂಪನಿಯ ಸಿಇಒ ಸುಚನಾ ಸೇಠ್ ಅವರು ತನ್ನ 4 ವರ್ಷದ ಮಗುವನ್ನು ಕೊಂದು ಶವವನ್ನು ಸೂಟ್‌ಕೇಸ್‌ನಲ್ಲಿ ತುಂಬಿಕೊಂಡು ಬಂದ ಘಟನೆ ಇಡೀ ರಾಜ್ಯವನ್ನೇ ಬೆಚ್ಚಿಬೀಳುವಂತೆ ಮಾಡಿದೆ. ಅಲ್ಲದೇ ಇದೀಗ ಆರೋಪಿ ಸುಚನಾ ಸೇಠ್ ಅವರು ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಗೋವಾ ಪೊಲೀಸರ ವಿಚಾರಣೆಯ ವೇಳೆ ಮಗುವನ್ನು ತಾನೇ ಕೊಂದಿರುವುದಾಗಿ ಸುಚನಾ ಅವರು ಹೇಳಿದ್ದಾರೆ ಎಂದು ಎಐಎನ್ ವರದಿ ಮಾಡಿದೆ.
"ವಿವಾಹ ವಿಚ್ಛೇದನ ಕೋರ್ಟ್‌ನಲ್ಲಿತ್ತು. ವಾರಕ್ಕೊಮ್ಮೆ ಪತಿ ವೆಂಕಟರಮಣನಿಗೆ ಮಗುವನ್ನು ವಿಡೀಯೋ ಕಾಲ್ ಮೂಲಕ ತೋರಿಸಬೇಕಿತ್ತು. ಆದರೆ ಗಂಡನಿಗೆ ಮಗುವನ್ನು ತೋರಿಸುವುದಕ್ಕೆ ಇಷ್ಟ ಇರಲಿಲ್ಲ. ನನ್ನ ಮಗು ಕಂಡರೆ ನನಗೂ ಕೂಡ ಬಹಳ ಪ್ರೀತಿ. ಹೀಗಾಗಿ ನಾನು ಮಗುವಿನ ಪ್ರಜ್ಞೆ ತಪ್ಪಿಸಲು ದಿಂಬಿನಿಂದ ಒತ್ತಿ ಹಿಡಿದೆ. ಮಗು ಪ್ರಜ್ಞೆ ತಪ್ಪಿದೆ ಎಂದುಕೊಂಡಿದ್ದೆ. ಆದರೆ ಮಗು ಸಾವನ್ನಪ್ಪಿತ್ತು," ಎಂದಿದ್ದಾಳೆ ಅಂತಾ ವರದಿ ಆಗಿದೆ.

ಇದೇ ನೋವಿನಲ್ಲಿ ಕೈ ಕೊಯ್ದ ಆತ್ಮಹತ್ಯೆಗೆ ಯತ್ನಿಸಿದೆ, ಆದರೆ ಅದು ಸಾಧ್ಯವಾಗಿಲ್ಲ. ಗಾಬರಿಯಲ್ಲಿ ಏನು ಮಾಡಬೇಕು ಎಂದು ದಿಕ್ಕು ತೋಚದೆ ಸೂಟ್ ಕೇಸ್‌ನಲ್ಲಿ ಮಗುವಿನ ಬಾಡಿ ಹಾಕಿ ಪರಾರಿ ಆಗಲು ಯತ್ನಿಸಿದೆ ಎಂದು ಗೋವಾ ಪೊಲೀಸರ ವಿಚಾರಣೆ ವೇಳೆ ವಿವರಿಸಿದ್ದಾರೆ
ಬೆಂಗಳೂರಿನಲ್ಲಿರು ಸ್ಟಾರ್ಟ್ ಅಪ್ ಕಂಪನಿಯ ಸಿಇಒ ಆಗಿರುವ ಸುಚನಾ ಸೇಠ್ ಗೋವಾದಲ್ಲಿ ಸರ್ವಿಸ್ ಅಪಾರ್ಟ್‌ಮೆಂಟ್‌ನಲ್ಲಿ ಬಾಡಿಗೆಗೆ ಇದ್ದಳು. ಜನವರಿ 8ರಂದು ಅಪಾರ್ಟ್‌ಮೆಂಟ್ ಸಿಬ್ಬಂದಿ ಜೊತೆ ನಾನು ಬೆಂಗಳೂರಿಗೆ ಹೋಗಬೇಕು ಟ್ಯಾಕ್ಸ್ ಬುಕ್ ಮಾಡಿ ಎಂದು ಹೇಳಿದ್ದಾರೆ. ಆಗ ಅವರು ಟ್ಯಾಕ್ಸ್ ಬದಲು ವಿಮಾನದಲ್ಲಿ ಪ್ರಯಾಣ ಮಾಡುತ್ತವೆ ಹೇಳಿದ್ದಾರೆ. ಇದಕ್ಕೆ ಒಪ್ಪದ ಸೇಠ್ ನಾನು ಟ್ಯಾಕ್ಸಿಯಲ್ಲೇ ಹೋಗಬೇಕು ಎಂದು ಹಠ ಹಿಡಿದಿದ್ದಾಳೆ. ನಂತರ ಕೊನೆಗೂ ಅಲ್ಲಿನ ಸಿಬ್ಬಂದಿ ಟ್ಯಾಕ್ಸಿ ಬುಕ್ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಬೆಂಗಳೂರಿನಲ್ಲಿ ಅಂತ್ಯಸಂಸ್ಕಾರ: ಇನ್ನು ಮಗುವಿನ ಮೃತದೇಹ ಬೆಂಗಳೂರಿನಲ್ಲಿ ಸುಚನಾ ವಾಸಿಸುತ್ತಿದ್ದ ಅಪಾರ್ಟ್‌ಮೆಂಟ್‌ಗೆ ಕರೆತರಲಾಗಿದ್ದು, ಬಳಿಕ ಮಧ್ಯಾಹ್ನ ಅಂತ್ಯಕ್ರಿಯೆ ನೆರವೇರಿದೆ. ಮಗುವಿನ ತಂದೆ ವೆಂಕಟರಾಮನ್ ಇಂಡೋನೇಷಿಯಾದಿಂದ ಚಿತ್ರದುರ್ಗಕ್ಕೆ ಬಂದು ಪೊಲೀಸರೊಂದಿಗೆ ವಿಚಾರಣೆಗೆ ಸಹಕರಿಸಿದ್ದು, ಬೆಂಗಳೂರಿನಲ್ಲಿ ಮಗುವಿನ ಅಂತ್ಯಸಂಸ್ಕಾರ ನಡೆಸಿದ್ದಾರೆ.
ಸುಚನಾ ಸೇಠ್ ಹಿನ್ನೆಲೆ: ಸುಚನಾ ಸೇಠ್ ಅವರು ದಿ ಮೈಂಡ್‌ಫುಲ್ ಎಐ ಲ್ಯಾಬ್ ಸ್ಟಾರ್ಟ್ ಅಪ್ ಕಂಪನಿಯ ಸಂಸ್ಥಾಪಕರಾಗಿದ್ದರು. ಅವರು ನಾಲ್ಕು ವರ್ಷಗಳಿಂದ ಸಂಸ್ಥೆಯನ್ನು ಮುನ್ನಡೆಸುತ್ತಿದ್ದು, ಇದು ಕೃತಕ ಬುದ್ಧಿಮತ್ತೆಯಲ್ಲಿ ಪ್ರಗತಿಯನ್ನು ಕೇಂದ್ರೀಕರಿಸುತ್ತದೆ. ಅವರು ಎರಡು ವರ್ಷಗಳ ಕಾಲ ಬರ್ಕ್‌ಮನ್ ಕ್ಲೈನ್ ಸೆಂಟರ್‌ನ ಅಂಗಸಂಸ್ಥೆಯಾಗಿ ಕೆಲಸ ಮಾಡಿದರು, ಮ್ಯಾಸಚೂಸೆಟ್ಸ್‌ನ ಬೋಸ್ಟನ್‌ನಲ್ಲಿ ಕೃತಕ ಬುದ್ಧಿಮತ್ತೆ ಮತ್ತು ಜವಾಬ್ದಾರಿಯುತ ಯಂತ್ರ ಕಲಿಕೆಯ ನೈತಿಕತೆ ಮತ್ತು ಆಡಳಿತಕ್ಕೆ ಕೊಡುಗೆ ನೀಡಿದ್ದಾರೆ.
ದಿ ಮೈಂಡ್‌ಫುಲ್ ಎಐ ಲ್ಯಾಬ್ ಕಂಪನಿ ಸ್ಥಾಪಿಸುವ ಮೊದಲು ಸುಚನಾ ಸೇಠ್ ಬೆಂಗಳೂರಿನ ಬೂಮರಾಂಗ್ ಕಾಮರ್ಸ್‌ನಲ್ಲಿ ಹಿರಿಯ ಡೇಟಾ ವಿಜ್ಞಾನಿ ಆಗಿದ್ದರು. ಅವರು ಪ್ರೈಸ್ ಆಪ್ಟಿಮೈಸೇಶನ್ ಮತ್ತು ಎಐಗಾಗಿ ಡೇಟಾ-ಚಾಲಿತ ಉತ್ಪನ್ನಗಳನ್ನು ವಿನ್ಯಾಸಗೊಳಿಸುತ್ತಿದ್ದರು.
ಈ ಅವಧಿಯಲ್ಲಿ ಅವರು ಎರಡು ಪೇಟೆಂಟ್‌ಗಳನ್ನು ಸಲ್ಲಿಸಿದರು. ಅವರು ಇನ್ನೋವೇಶನ್ ಲ್ಯಾಬ್ಸ್‌ನೊಂದಿಗೆ ಸಹ ಸಂಬಂಧ ಹೊಂದಿದ್ದರು. ಅಲ್ಲದೆ ಸೇಠ್ ಕಂಪನಿಯ ಡೇಟಾ ಸೈನ್ಸಸ್ ಗ್ರೂಪ್‌ನಲ್ಲಿ ಹಿರಿಯ ವಿಶ್ಲೇಷಕ ಸಲಹೆಗಾರರಾಗಿ ಕೆಲಸ ಮಾಡುತ್ತಿದ್ದರು.
ಸುಚನಾ ಸೇಠ್ ಅವರು ಕೊಲ್ಕತ್ತಾ ವಿಶ್ವವಿದ್ಯಾನಿಲಯದಿಂದ ಖಗೋಳ ಭೌತಶಾಸ್ತ್ರದೊಂದಿಗೆ ಪ್ಲಾಸ್ಮಾ ಭೌತಶಾಸ್ತ್ರದಲ್ಲಿ ಪರಿಣತಿ ಹೊಂದಿರುವ ಭೌತಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಹೊಂದಿದ್ದಾರೆ. ಅಲ್ಲಿ ಅವರು 2008ರಲ್ಲಿ ಪ್ರಥಮ ದರ್ಜೆ ಗೌರವಗಳನ್ನು ಗಳಿಸಿದರು.
ರಾಮಕೃಷ್ಣ ಮಿಷನ್ ಇನ್‌ಸ್ಟಿಟ್ಯೂಟ್ ಆಫ್ ಕಲ್ಚರ್‌ನಿಂದ ಪ್ರಥಮ ಶ್ರೇಣಿಯೊಂದಿಗೆ ಸಂಸ್ಕೃತದಲ್ಲಿ ಸ್ನಾತಕೋತ್ತರ ಡಿಪ್ಲೊಮಾವನ್ನು ಹೊಂದಿದ್ದಾರೆ. ಮತ್ತು ಕೋಲ್ಕತ್ತಾದ ಭವಾನಿಪುರ ಎಜುಕೇಶನ್ ಸೊಸೈಟಿ ಕಾಲೇಜಿನಿಂದ ಪ್ರಥಮ ದರ್ಜೆ ಗೌರವಗಳೊಂದಿಗೆ ಭೌತಶಾಸ್ತ್ರದಲ್ಲಿ ಡಾಕ್ಟರೇಟ್ ಪಡೆದಿದ್ದಾರೆ.
ಅವರ ಲಿಂಕ್ಡ್ ಇನ್ ಪ್ರೊಫೈಲ್‌ನ ಪ್ರಕಾರ, ಸುಚನಾ ಸೇಠ್ ಅವರು ದಿ ಮೈಂಡ್‌ಫುಲ್ ಎಐ ಲ್ಯಾಬ್ ಕಂಪನಿಯ ಸಿಇಒ ಆಗಿದ್ದಾರೆ. ಮತ್ತು ನೀತಿಶಾಸ್ತ್ರ ತಜ್ಞ ಮತ್ತು ಡೇಟಾ ವಿಜ್ಞಾನಿಯಾಗಿದ್ದು, ಡೇಟಾ ಸೈನ್ಸ್ ತಂಡಗಳಿಗೆ ಮಾರ್ಗದರ್ಶನ ನೀಡುವಲ್ಲಿ ಮತ್ತು ಸ್ಟಾರ್ಟ್ ಅಪ್‌ಗಳು, ಉದ್ಯಮ ಸಂಶೋಧನೆಗಳಲ್ಲಿ ಯಂತ್ರ ಕಲಿಕೆಯ ಪರಿಹಾರಗಳನ್ನು ಸ್ಕೇಲಿಂಗ್ ಮಾಡುವಲ್ಲಿ 12 ವರ್ಷಗಳ ಅನುಭವವನ್ನು ಹೊಂದಿದ್ದಾರೆ ಎನ್ನುವ ಮಾಹಿತಿಯೊಂದು ಲಭ್ಯವಾಗಿದೆ.
ಇನ್ನು 12 ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದ ಸುಚನಾ ಸೇಠ್ ಅವರು ಕೋರಮಂಗಲದ ಕಂಪನಿಯೊಂದರಲ್ಲಿ ಡೇಟಾ ಉದ್ಯೋಗಿಯಾಗಿ ಕೆಲಸ ನಿರ್ವಹಿಸುತ್ತಿದ್ದರು. 2020ರಲ್ಲಿ ರೆಸಿಡೆನ್ಸಿ ರಸ್ತೆಯ ಕಟ್ಟಡವೊಂದರಲ್ಲಿ ಮೈಂಡ್‌ಫುಲ್ ಎಐ ಲ್ಯಾಬ್ ಹೆಸರಿನ ಸ್ಟಾರ್ಟ್‌ಅಪ್ ಕಂಪನಿ ತೆರೆದಿದ್ದು, ಆ ಕಂಪನಿಯ ಸುಮಾರು 30 ಮಂದಿಗೆ ಉದ್ಯೋಗ ನೀಡಿದ್ದರು ಎಂದು ಮೂಲಗಳು ತಿಳಿಸಿವೆ ಅಂತಾ ತಿಳಿದುಬಂದಿದೆ.
ಘಟನೆ ಹಿನ್ನೆಲೆ:ಗೋವಾದ ಹೋಟೆಲ್‌ವೊಂದರಲ್ಲಿ ತನ್ನ ಮಗುವನ್ನು ಕೊಂದು ಸೂಟ್‌ಕೇಸ್‌ನಲ್ಲಿ ಶವ ಕೊಂಡೊಯ್ಯುತ್ತಿದ್ದ ಸ್ಟಾರ್ಟ್ ಅಪ್ ಫೌಂಡರ್ ಸಿಇಓ ಸೂಚನಾ ಸೇಠ್ ಅವರನ್ನು ಚಿತ್ರದುರ್ಗ ಜಿಲ್ಲೆಯ ಬಳಿಯ ಐಮಂಗಲ ಪೊಲೀಸರು ವಶಕ್ಕೆ ಪಡೆದು, ಬಳಿಕ ಗೋವಾ ಪೊಲೀಸರಿಗೆ ಒಪ್ಪಿಸಿದ್ದರು.
ಮೃತ ಮಗುವನ್ನು ಚಿನ್ಮಯ್ ರಾಮಣನ್ ಸೇಠ್ (4) ಎಂದು ಗುರುತಿಸಲಾಗಿದೆ. ಸುಚಾನಾ ಸೇಠ್ ಗೋವಾದ ಹೋಟೆಲ್‌ನಲ್ಲಿ ನಾಲ್ಕು ವರ್ಷದ ಗಂಡು ಮಗುವನ್ನು ಹತ್ಯೆ ಮಾಡಿ, ಸೂಟ್ ಕೇಸ್‌ನಲ್ಲಿ ಮಗುವಿನ ಶವದೊಂದಿಗೆ ಗೋವಾದಿಂದ ಬೆಂಗಳೂರು ಕಡೆಗೆ ತೆರಳುತ್ತಿದ್ದಾಗ ಚಿತ್ರದುರ್ಗ ಜಿಲ್ಲೆಯ ಐಮಂಗಲ ಪೊಲೀಸರು ಆಕೆಯನ್ನು ಬಂಧಿಸಿದ್ದರು.
ಆರೋಪಿಯು ಗೋವಾದಿಂದ ಟ್ಯಾಕ್ಸಿ ಮಾಡಿಕೊಂಡು ತೆರಳುತ್ತಿದ್ದಾಳು. ಈ ವೇಳೆ ಗೋವಾದಲ್ಲಿ ತಂಗಿದ್ದ ಹೋಟೆಲ್‌ನವರಿಗೆ ಅನುಮಾನ ಬಂದ ಹಿನ್ನಲೆಯಲ್ಲಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಹೋಟೆಲ್ ರೂಮಿನಲ್ಲಿ ರಕ್ತದ ಕಲೆಗಳು ಪತ್ತೆ ಹಿನ್ನೆಲೆ ಅನುಮಾನ ಬಂದಿತ್ತು. ರೂಮಿಗೆ ಕರೆದೊಯ್ದಿದ್ದ ಮಗು ವಾಪಸ್ ಹೋಗುವಾಗ ಇರಲಿಲ್ಲ. ಇದನ್ನು ಪ್ರಶ್ನಿಸಿದಾಗ ಸಂಬಂಧಿಕರ ಮನೆಗೆ ಕಳುಹಿಸಿದ್ದೇನೆ ಎಂದು ಸುಳ್ಳು ಹೇಳಿದ್ದರು ಸುಚನಾ ಸೇಠ್.
ಬಳಿಕ ಗೋವಾ ಪೊಲೀಸ್‌ಗೆ ಮಾಹಿತಿ ಟ್ಯಾಕ್ಸಿ ಡ್ರೈವರ್ ಸಂಪರ್ಕ ಮಾಡಿ ಹೈವೇ ಬಳಿ ಪೊಲೀಸ್ ಠಾಣೆ ಕಂಡಾಕ್ಷಣ ನಿಲ್ಲಿಸುವಂತೆ ಸೂಚನೆ ನೀಡಿದ್ದಾರೆ. ಡ್ರೈವರ್ ರಾಷ್ಟ್ರೀಯ ಹೆದ್ದಾರಿ 4ರ ಐಮಂಗಲ ಠಾಣೆ ಬಳಿ ಟ್ಯಾಕ್ಸಿ ನಿಲ್ಲಿಸಿದ್ದಾನೆ. ಇದಾದ ನಂತರ ಚಾಲಕ ಆರೋಪಿಯನ್ನು ಐಮಂಗಲ ಪೊಲೀಸರಿಗೆ ಒಪ್ಪಿಸಿದ್ದರು.
ಕಾರ್‌ನ ಡಿಕ್ಕಿಯಲ್ಲಿದ್ದ ಸೂಟ್‌ಕೇಸ್‌ನಲ್ಲಿ ಮಗುವಿನ ಶವ ಪತ್ತೆಯಾಗಿದೆ. ಮಗುವಿನ ಶವ ಮಾರ್ಚರಿಗೆ ಶಿಫ್ಟ್ ಮಾಡಿ ಆರೋಪಿ ಸುಚನಾ ಅವರನ್ನು ವಶಕ್ಕೆ ಪಡೆದುಕೊಂಡಿದ್ದರು. ಗೋವಾ ಪೊಲೀಸರಿಗೆ ಆರೋಪಿ ಒಪ್ಪಿಸಲು ಐಮಂಗಲ ಪೊಲೀಸರು ಕಾದಿದ್ದಾರೆ. ಇದೀಗ ಗೋವಾದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
-
IPL 2026 RCB: ಹ್ಯಾಜಲ್ವುಡ್, ಯಶ್ ದಯಾಳ್ ಅಲಭ್ಯರಾದ್ರೆ ಆರ್ಸಿಬಿ ಮುಂದಿರುವ 'ಪ್ಲಾನ್ ಬಿ' ಏನು? -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು












Click it and Unblock the Notifications