Weekly Horoscope: ಜುಲೈ ಮೂರನೇ ವಾರ ಯಾವ ರಾಶಿಗೆ ಅದೃಷ್ಟ ತರುವುದು ಯಾರಿಗೆ ಅಶುಭ? ಯಾರಿಗಿದೆ ಹಣವಂತರಾಗುವ ಯೋಗ ?

ಜ್ಯೋತಿಷ್ಯದ ಪ್ರಕಾರ, ಹೊಸ ತಿಂಗಳ ಮೊದಲ ವಾರ ನಿಮಗೆ ಹೇಗಿರುತ್ತದೆ? ನಿಮ್ಮ ವೃತ್ತಿ, ಆರೋಗ್ಯ, ಉದ್ಯೋಗ ಮತ್ತು ಪ್ರೇಮ ಜೀವನ ಹೇಗಿರುತ್ತದೆ ಎನ್ನುವುದನ್ನು ತಿಳಿದುಕೊಳ್ಳುವ ಕುತೂಹಲ ಪ್ರತಿಯೊಬ್ಬರಿಗೂ ಇರುತ್ತದೆ. ಜುಲೈ ಮೂರನೇ ವಾರದ ಸಾಪ್ತಾಹಿಕ ಜಾತಕ ಫಲ ಹೇಗಿದೆ ಎಂದು ನೋಡೋಣ.

ಮೇಷ ರಾಶಿ (Aries)

ಜ್ಯೋತಿಷ್ಯದ ಪ್ರಕಾರ, ಈ ವಾರ ಮೇಷ ರಾಶಿಯವರಿಗೆ ಕೆಲಸದಲ್ಲಿ ಹೊಸ ಜವಾಬ್ದಾರಿಗಳು ಸಿಗಬಹುದು. ಮೇಲಧಿಕಾರಿಗಳಿಂದ ಮೆಚ್ಚುಗೆ ಪಡೆಯುವ ಸಾಧ್ಯತೆ ಇದೆ. ಅನಗತ್ಯ ಹಣಕಾಸಿನ ಖರ್ಚುಗಳನ್ನು ತಪ್ಪಿಸಿ. ಮಾತನಾಡುವಾಗ ಎಚ್ಚರ ಇರಲಿ. ನಿಮ್ಮ ಮಾತಿನ ಕಾರಣದಿಂದ ಸಂಗಾತಿಯ ಜೊತೆ ಮನಸ್ತಾಪ ಮೂಡಬಹುದು. ಮಾತನಾಡುವಾಗ ಪದಗಳನ್ನು ಎಚ್ಚರಿಕೆಯಿಂದ ಬಳಸಿ. ಸಾಧ್ಯವಾದಷ್ಟು ತಾಳ್ಮೆಯಿಂದ ಇರಿ.

Weekly Horoscope

ವೃಷಭ ರಾಶಿ (Taurus)

ಈ ವಾರ ವೃಷಭ ರಾಶಿಯವರಿಗೆ ಉದ್ಯೋಗ ಮತ್ತು ವ್ಯವಹಾರದಲ್ಲಿ ಪ್ರಗತಿಯಾಗುವ ಸಾಧ್ಯತೆ ಇದೆ. ಬಾಕಿ ಇರುವ ಕೆಲಸಗಳು ಪೂರ್ಣಗೊಳ್ಳುತ್ತವೆ. ಹೊರಗೆ ಉಳಿದಿರುವ ಹಣ ಮತ್ತೆ ನಿಮ್ಮ ಕೈ ಸೇರಬಹುದು. ಸಾಲ ಕೊಟ್ಟ ಹಣವೂ ಮರಳಿ ಬರುವುದು. ಆದಾಯದ ಹೊಸ ಮಾರ್ಗಗಳು ತೆರೆದುಕೊಳ್ಳಬಹುದು. ಕುಟುಂಬದಲ್ಲಿ ಸಂತೋಷದ ವಾತಾವರಣವಿರುತ್ತದೆ.

ಮಿಥುನ ರಾಶಿ (Gemini)

ಈ ವಾರ ಮಿಥುನ ರಾಶಿಯವರಿಗೆ ಸಂಯಮದಿಂದ ಇರುವುದು ಬಹಳ ಮುಖ್ಯವಾಗಿರುತ್ತದೆ. ಹಣಕಾಸಿಗೆ ಸಂಬಂಧಿಸಿದಂತೆ ಯಾವ ನಿರ್ಧಾರವನ್ನೂ ತೆಗೆದುಕೊಳ್ಳಬೇಡಿ. ಹಣ ಖರ್ಚು ಮಾಡುವಾಗಲೂ ಎಚ್ಚರಿಕೆಯಿಂದ ಇರಿ. ಕಚೇರಿಯಲ್ಲಿ ಸಹೋದ್ಯೋಗಿಗಳಿಂದ ಬೆಂಬಲ ಸಿಗುತ್ತದೆ. ವಿದ್ಯಾರ್ಥಿಗಳಿಗೆ ಈ ವಾರ ಅನುಕೂಲಕರವಾಗಿರಲಿದೆ. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆ ಕಾಡಬಹುದು.

ಕರ್ಕಾಟಕ ರಾಶಿ (cancer)

ಈ ವಾರ ಕರ್ಕ ರಾಶಿಯವರಿಗೆ ಹೊಸ ಉದ್ಯೋಗಾವಕಾಶ ಒಲಿದು ಬರುವುದು. ವ್ಯವಹಾರದಲ್ಲಿ ಹೊಸ ಒಪ್ಪಂದಗಳು ಪ್ರಯೋಜನಕಾರಿಯಾಗಿರುವುದು. ಸಂಗಾತಿಯೊಂದಿಗೆ ಉತ್ತಮ ಸಮಯ ಕಳೆಯುವಿರಿ. ದೂರ ಪ್ರಯಾಣ ಬೆಳೆಸುವ ಸಾಧ್ಯತೆ ಇದೆ. ಹಣಕ್ಕೆ ಸಂಬಂಧಿಸಿದಂತೆ ತೆಗೆದುಕೊಳ್ಳುವ ನಿರ್ಧಾರ ಫಲ ನೀಡುವುದು. ಮಾನಸಿಕ ಒತ್ತಡವನ್ನು ಕಡಿಮೆ ಮಾಡಿಕೊಳ್ಳುವುದು ಒಳ್ಳೆಯದು.

ಸಿಂಹ ರಾಶಿ (Leo)

ಸಿಂಹ ರಾಶಿಯವರು ವಾರದ ಆರಂಭದಲ್ಲಿ ಕೆಲವು ತೊಂದರೆಗಳನ್ನು ಎದುರಿಸಬಹುದು. ಆದರೆ ಅಂತಿಮವಾಗಿ ಪರಿಸ್ಥಿತಿ ನಿಮ್ಮ ಪರವಾಗಿಯೇ ಇರುವುದು. ಹೂಡಿಕೆ ಮಾಡಲು ಸರಿಯಾದ ಸಮಯವಲ್ಲ. ಹಣಕಾಸಿನ ವ್ಯವಹಾರದಿಂದಲೂ ದೂರವಿದ್ದರೆ ಒಳ್ಳೆಯದು. ಕೆಲಸದಲ್ಲಿ ಹೊಸ ಅವಕಾಶ ಸಿಗುವ ಸಾಧ್ಯತೆಯಿದೆ. ಆರೋಗ್ಯ ಉತ್ತಮವಾಗಿರುವುದು.

ಕನ್ಯಾ ರಾಶಿ (Virgo)

ಈ ವಾರ ಕನ್ಯಾ ರಾಶಿಯವರಿಗೆ ತಮ್ಮ ಕಠಿಣ ಪರಿಶ್ರಮದ ಫಲ ಸಿಗುತ್ತದೆ. ಮೇಲಧಿಕಾರಿಗಳಿಂದ ನಿಮ್ಮ ಕೆಲಸಕ್ಕೆ ಗೌರವ ಸಿಗುವುದು. ಆರ್ಥಿಕ ಲಾಭವಾಗುವ ಸಾಧ್ಯತೆ ಇದೆ. ಸಾಲ ನೀಡಿದ ಹಣ ಮರಳಿ ಬರುವುದು. ದಾಂಪತ್ಯ ಜೀವನದಲ್ಲಿ ಸಂತೋಷ ಇರುತ್ತದೆ. ವಿದ್ಯಾರ್ಥಿಗಳಿಗೂ ಈ ವಾರ ಅನುಕೂಲಕರವಾಗಿರುವುದು.

ತುಲಾ ರಾಶಿ (Libra)

ಜ್ಯೋತಿಷ್ಯದ ಪ್ರಕಾರ, ಈ ವಾರ ತುಲಾ ರಾಶಿಯವರಿಗೆ ಹೊಸ ಕೆಲಸ ಪ್ರಾರಂಭಿಸಲು ಅನುಕೂಲಕರವಾಗಿದೆ. ವ್ಯವಹಾರದಲ್ಲಿ ಲಾಭ ಹೆಚ್ಚಾಗುತ್ತದೆ. ಪ್ರೇಮ ಸಂಬಂಧಗಳು ಬಲಗೊಳ್ಳುತ್ತವೆ. ಸ್ನೇಹಿತರ ಸಹಾಯದಿಂದ ಪ್ರಮುಖ ಕೆಲಸಗಳು ಪೂರ್ಣಗೊಳ್ಳುತ್ತವೆ. ಆರೋಗ್ಯವು ಉತ್ತಮವಾಗಿರುತ್ತದೆ.

ವೃಶ್ಚಿಕ ರಾಶಿ (Scorpio)

ಜ್ಯೋತಿಷ್ಯದ ಪ್ರಕಾರ, ಈ ವಾರ ವೃಶ್ಚಿಕ ರಾಶಿಯವರು ತಮ್ಮ ಭಾವನೆಗಳನ್ನು ನಿಯಂತ್ರಿಸುವುದು ಮುಖ್ಯ. ಉದ್ಯೋಗ ಬದಲಾಯಿಸುವ ಬಗ್ಗೆ ಯೋಚಿಸುತ್ತಿರುವವರಿಗೆ ಉತ್ತಮ ಅವಕಾಶಗಳು ಸಿಗಬಹುದು. ಆರ್ಥಿಕ ಲಾಭದ ಜೊತೆಗೆ, ಖರ್ಚು ವೆಚ್ಚಗಳು ಕೂಡಾ ಹೆಚ್ಚಾಗಬಹುದು. ಕುಟುಂಬದ ಹಿರಿಯರ ಸಲಹೆ ಪ್ರಯೋಜನಕಾರಿಯಾಗಲಿದೆ.

ಧನು ರಾಶಿ (Sagitarius)

ಈ ವಾರ ಅದೃಷ್ಟ ನಿಮ್ಮ ಜೊತೆ ಇರುವುದು. ಬಾಕಿ ಇರುವ ಕೆಲಸಗಳು ಪೂರ್ಣಗೊಳ್ಳುತ್ತವೆ. ವ್ಯವಹಾರ ವಿಸ್ತರಣೆಗೆ ಅವಕಾಶಗಳಿವೆ. ಪ್ರೀತಿ ಮತ್ತು ವೈವಾಹಿಕ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳು ಕಂಡುಬರುತ್ತವೆ. ಪ್ರಯಾಣವು ಪ್ರಯೋಜನಕಾರಿಯಾಗಿದೆ.

ಮಕರ ರಾಶಿ (Capricorn)

ಮಕರ ರಾಶಿಯವರಿಗೆ ಈ ವಾರ ಕೆಲಸದಲ್ಲಿ ಸ್ಪರ್ಧೆ ಹೆಚ್ಚಾಗುತ್ತದೆ. ಆರ್ಥಿಕವಾಗಿ, ವಾರ ಉತ್ತಮವಾಗಿರುತ್ತದೆ. ಆದರೆ ಮಾನಸಿಕ ಒತ್ತಡ ಹೆಚ್ಚಾಗಬಹುದು. ಮನೆಯಲ್ಲಿ ಶುಭ ಕಾರ್ಯಗಳು ನಡೆಯಬಹುದು. ನಿಮ್ಮ ಆರೋಗ್ಯದ ಕಡೆಗೆ ಗಮನ ವಹಿಸಿ.

ಕುಂಭ ರಾಶಿ (Aquarius)

ಈ ವಾರ ಹೊಸ ಯೋಜನೆಗಳು ಯಶಸ್ವಿಯಾಗುವ ಸಾಧ್ಯತೆಯಿದೆ. ಮೇಲಧಿಕಾರಿಗಳ ವಿಶ್ವಾಸವನ್ನು ಗಳಿಸುವಿರಿ. ಆರ್ಥಿಕ ಲಾಭವಾಗುವುದು. ಕುಟುಂಬದ ವಾತಾವರಣವು ಸಂತೋಷವಾಗಿರುತ್ತದೆ. ವಿದ್ಯಾರ್ಥಿಗಳು ತಮ್ಮ ಅಧ್ಯಯನದಲ್ಲಿ ಉತ್ತಮ ಯಶಸ್ಸನ್ನು ಸಾಧಿಸುವುದು ಸಾಧ್ಯವಾಗುವುದು.

ಮೀನ ರಾಶಿ (Pisces)

ಈ ವಾರ ನಿಮ್ಮ ಆತ್ಮವಿಶ್ವಾಸ ಹೆಚ್ಚುತ್ತದೆ. ವೃತ್ತಿಜೀವನದಲ್ಲಿ ನಿರೀಕ್ಷಿತ ಪ್ರಗತಿ ಕಂಡುಬರುತ್ತದೆ. ವ್ಯವಹಾರದಲ್ಲಿ ಹೊಸ ಗ್ರಾಹಕರು ಸಿಗಬಹುದು. ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿರುವುದು. ಸಂಗಾತಿಯೊಂದಿಗಿನ ಉತ್ತಮ ಸಮಯ ಕಳೆಯುವಿರಿ. ಆರೋಗ್ಯವು ಉತ್ತಮವಾಗಿರುವುದು.

(ಬರಹ: ರಂಜಿತಾ ಆರ್.ಕೆ.)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+