ಮಧ್ಯಪ್ರಾಚ್ಯ ಯುದ್ಧದ ಎಫೆಕ್ಟ್: ಭಾರತದಲ್ಲಿ ಅಗತ್ಯಕ್ಕಿಂತ ಹೆಚ್ಚು ಎಲ್‌ಪಿಜಿ ಗ್ಯಾಸ್‌ ಸಂಗ್ರಹ; ಬೇಡಿಕೆಯಲ್ಲಿ ಭಾರಿ ಕುಸಿತ

ಕಳೆದ ಒಂದೆರಡು ತಿಂಗಳ ಹಿಂದೆ ಮಧ್ಯಪ್ರಾಚ್ಯ ದೇಶಗಳಲ್ಲಿ ಉಂಟಾದ ಉದ್ವಿಗ್ನತೆಯಿಂದಾಗಿ ಭಾರತದಾದ್ಯಂತ ಎಲ್‌ಪಿಜಿ ಗ್ಯಾಸ್‌ ಕೊರತೆ ಉಂಟಾಗಿತ್ತು. ಇದರಿಂದಾಗಿ ಹೊಟೇಲ್‌, ಪಿಜಿ ಮಾಲೀಕರು ಪರದಾಡುವಂತಾಗಿದ್ದು, ಹೆಚ್ಚಿನವರು ಸೌದೆಗಳ ಮೊರೆ ಹೋಗಿದ್ದರು. ಇನ್ನೂ ಕೆಲವರು ಸ್ವಲ್ಪ ದಿನದ ಮಟ್ಟಿಗೆ ಹೊಟೇಲ್‌ಗಳನ್ನೇ ಮುಚ್ಚಿದ್ದರು. ಇದರ ಬೆನ್ನಲ್ಲೇ ವಾಣಿಜ್ಯ ಗ್ಯಾಸ್‌ ಸಿಲಿಂಡರ್‌ ಬೆಲೆ ಕೂಡ ಗಗನಕ್ಕೇರಿತ್ತು. ಆದರೆ ಸದ್ಯ ಈ ಚಿತ್ರಣ ಸಂಪೂರ್ಣವಾಗಿ ಬದಲಾಗಿದೆ.

ಅಂದರೆ ಭಾರತದ ಇಂಧನ ವಲಯದಲ್ಲಿ ಇದೀಗ ಅಚ್ಚರಿಯ ಬೆಳವಣಿಗೆಯೊಂದು ನಡೆದಿದೆ. ಕೆಲವು ತಿಂಗಳ ಹಿಂದೆಯಷ್ಟೇ ಮಧ್ಯಪ್ರಾಚ್ಯದಲ್ಲಿ ಉಂಟಾದ ಬಿಕ್ಕಟ್ಟಿನಿಂದಾಗಿ ಅಡುಗೆ ಅನಿಲ ಪೂರೈಕೆಯಲ್ಲಿ ವ್ಯತ್ಯಯವಾಗಬಹುದು ಎಂಬ ಆತಂಕವಿತ್ತು ಎಲ್ಲೆಡೆ ಮನೆ ಮಾಡಿತ್ತು. ಆದರೆ, ಈಗ ಪರಿಸ್ಥಿತಿ ಬದಲಾಗಿದ್ದು, ಭಾರತದಲ್ಲಿ ಅಗತ್ಯಕ್ಕಿಂತ ಹೆಚ್ಚು ಎಲ್‌ಪಿಜಿ ಸಂಗ್ರಹವಾಗಿದೆ.

India

ಅಂದು ತೈಲ ಕಂಪನಿಗಳು ತಗೆದುಕೊಂಡ ಮುಂಜಾಗ್ರತಾ ಕ್ರಮಗಳೇ ಈಗ ಅಗತ್ಯಕ್ಕಿಂತ ಹೆಚ್ಚು ಎಲ್‌ಪಿಜಿ ಸಂಗ್ರಹಕ್ಕೆ ಕಾರಣವಾಗಿದೆ. ವಿಪರ್ಯಾಸದ ಸಂಗತಿಯೆಂದರೆ ಹಡಗುಗಳಿಂದ ಗ್ಯಾಸ್ ಇಳಿಸಿಕೊಳ್ಳಲು ಶೇಖರಣಾ ಟ್ಯಾಂಕ್‌ಗಳಲ್ಲಿ ಜಾಗವಿಲ್ಲದೆ ತೈಲ ಕಂಪನಿಗಳು ಪರದಾಡುವಂತಾಗಿದೆ.

ಎಲ್‌ಪಿಜಿ ಆಮದು ಹೆಚ್ಚುವರಿ ಪೂರೈಕೆ

ಪರ್ಷಿಯನ್ ಕೊಲ್ಲಿಯಲ್ಲಿ ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನತೆಯಿಂದಾಗಿ ಹಡಗುಗಳ ಸಂಚಾರ ರದ್ದಾಗಬಹುದು ಎಂಬ ಕಾರಣಕ್ಕೆ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಸೇರಿದಂತೆ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಎಂದಿಗಿಂತ ಹೆಚ್ಚು ಎಲ್‌ಪಿಜಿಯನ್ನು ಆಮದು ಮಾಡಿಕೊಂಡವು. ಒಂದು ಹಂತದಲ್ಲಿ, ತೈಲ ಕಂಪನಿಗಳು ಪ್ರತಿದಿನ 40,000 ಟನ್ ಎಲ್‌ಪಿಜಿ ಆಮದಿಗೆ ಬುಕಿಂಗ್ ಮಾಡಿದ್ದವು. ಆದರೆ, ಪ್ರಸ್ತುತ ಭಾರತದ ದೈನಂದಿನ ಆಮದು ಅಗತ್ಯ ಕೇವಲ 30,000 ದಿಂದ 32,000 ಟನ್‌ಗಳಿಷ್ಟಿದೆ.

ಅಂದು ಯುದ್ಧದ ಭೀತಿಯಿಂದ ಬುಕ್ ಮಾಡಿದ್ದ ಕಾರ್ಗೋಗಳೆಲ್ಲವೂ ಈಗ ಮಧ್ಯಂತರ ಶಾಂತಿ ಒಪ್ಪಂದದ ಪರಿಣಾಮವಾಗಿ ಭಾರತದ ಸಮುದ್ರ ತೀರಕ್ಕೆ ಬಂದು ತಲುಪುತ್ತಿವೆ. ಶೇಖರಣಾ ಟ್ಯಾಂಕ್‌ಗಳು ಭರ್ತಿಯಾಗಿರುವ ಕಾರಣ, ಹಡಗಿನಿಂದ ಗ್ಯಾಸ್ ಇಳಿಸಲು ವಿಳಂಬವಾಗಿ ಸರ್ಕಾರಿ ಸ್ವಾಮ್ಯದ ರಿಫೈನರಿಯೊಂದು ದಂಡವನ್ನೂ ಕಟ್ಟಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ದೇಶೀಯ ಎಲ್‌ಪಿಜಿ ಉತ್ಪಾದನೆ ಹೆಚ್ಚಳ

ಈ ಹೆಚ್ಚುವರಿಗೆ ಕೇವಲ ಆಮದು ಮಾತ್ರ ಕಾರಣವಲ್ಲ, ಬದಲಾಗಿ ದೇಶೀಯ ಉತ್ಪಾದನೆಯೂ ಪ್ರಮುಖ ಪಾತ್ರ ವಹಿಸಿದೆ. ಹಾರ್ಮುಜ್ ಜಲಸಂಧಿಯಲ್ಲಿ ಉಂಟಾದ ಅಡೆತಡೆಗಳ ಸಮಯದಲ್ಲಿ, ಭಾರತದ ಸರ್ಕಾರಿ ಸ್ವಾಮ್ಯದ ರಿಫೈನರಿಗಳು ತಮ್ಮದೇ ಆದ ಎಲ್‌ಪಿಜಿ ಉತ್ಪಾದನೆಯನ್ನು ಹೆಚ್ಚಿಸಿದ್ದವು. ಪ್ರತಿದಿನ ಸುಮಾರು 40,000 ಟನ್‌ಗಳಷ್ಟಿದ್ದ ಉತ್ಪಾದನೆಯು ಬಿಕ್ಕಟ್ಟಿನ ಸಮಯದಲ್ಲಿ ಬರೋಬ್ಬರಿ 54,000 ಟನ್‌ಗಳಿಗೆ ಏರಿಕೆಯಾಗಿತ್ತು. ಪೂರೈಕೆ ಸುಧಾರಿಸಿದ ನಂತರ ಈಗ ಉತ್ಪಾದನೆಯನ್ನು ಮತ್ತೆ 40,000 ಟನ್‌ಗಳಿಗೆ ಇಳಿಸಲಾಗಿದ್ದರೂ, ಮಾರುಕಟ್ಟೆಯಲ್ಲಿ ಗ್ಯಾಸ್ ಲಭ್ಯತೆ ವಿಪರೀತವಾಗಿದೆ.

ಅಡುಗೆ ಅನಿಲ ಬೇಡಿಕೆಯಲ್ಲಿ ತೀವ್ರ ಕುಸಿತ

ಒಂದು ಕಡೆ ಪೂರೈಕೆ ಹೆಚ್ಚಾದರೆ, ಇನ್ನೊಂದು ಕಡೆ ಅಡುಗೆ ಅನಿಲದ ಬೇಡಿಕೆಯಲ್ಲಿ ತುಂಬ ಇಳಿಕೆಯಾಗಿದೆ. ಎಲ್‌ಪಿಜಿ ಪೂರೈಕೆಯಲ್ಲಿ ಅನಿಶ್ಚಿತತೆ ಎದುರಾದಾಗ, ದೊಡ್ಡ ಪ್ರಮಾಣದಲಲ್ಲಿ ಗ್ಯಾಸ್‌ ಬಳಸುತ್ತಿದ್ದ ಹೋಟೆಲ್, ರೆಸ್ಟೋರೆಂಟ್‌ಗಳು ಹಾಗೂ ಸೆರಾಮಿಕ್ ಕಾರ್ಖಾನೆಯವರು ಪೈಪ್ಡ್ ನ್ಯಾಚುರಲ್ ಗ್ಯಾಸ್ (PNG) ಮತ್ತು ಬಯೋಮಾಸ್‌ನಂತಹ ಪರ್ಯಾಯ ಇಂಧನಗಳ ಮೊರೆ ಹೋದರು.

ಇದೀಗ ಎಲ್‌ಪಿಜಿ ಪೂರೈಕೆ ಸಹಜ ಸ್ಥಿತಿಗೆ ಬಂದರು ಕೂಡ, ಈ ಗ್ರಾಹಕರು ಸಂಪೂರ್ಣವಾಗಿ ​ಎಲ್‌ಪಿಜಿಗೆ ಮರಳಿಲ್ಲ. ಇದರ ಪರಿಣಾಮವಾಗಿ, ಕಳೆದ ಆರ್ಥಿಕ ವರ್ಷದಲ್ಲಿ ದಿನಕ್ಕೆ ಸರಾಸರಿ 91,000 ಟನ್‌ಗಳಷ್ಟಿದ್ದ ಭಾರತದ ಎಲ್‌ಪಿಜಿ ಬಳಕೆಯು ಈ ಜೂನ್ ತಿಂಗಳಲ್ಲಿ ದಿನಕ್ಕೆ ಕೇವಲ 73,000 ಟನ್‌ಗಳಿಗೆ ಕುಸಿದಿದೆ.

ಭಾರತವು ತನ್ನ ಎಲ್‌ಪಿಜಿ ಅಗತ್ಯದ ಶೇ. 90ರಷ್ಟು ಭಾಗಕ್ಕೆ ಮಧ್ಯಪ್ರಾಚ್ಯವನ್ನೇ ಅವಲಂಬಿಸಿದೆ. ಬಿಕ್ಕಟ್ಟಿನ ಸಂದರ್ಭದಲ್ಲಿ ಪೈಪ್‌ಲೈನ್ ಗ್ಯಾಸ್ ನೆಟ್‌ವರ್ಕ್ ವಿಸ್ತರಣೆಗೆ ಸರ್ಕಾರ ಒತ್ತು ನೀಡಿದ್ದೂ ಕೂಡ ಈಗ ಎಲ್‌ಪಿಜಿ ಬೇಡಿಕೆ ತಗ್ಗಲು ಕಾರಣವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+