IMD Weather Forecast: ಮುಂದಿನ ಜುಲೈ 16ರ ತನಕ ದೇಶದ ಈ ಭಾಗಗಳಲ್ಲಿ ಭಾರೀ ಮಳೆ ಮುನ್ನೆಚ್ಚರಿಕೆ

India Rain Alert: ಮುಂಗಾರು ಮಳೆ ಆರ್ಭಟ ಉತ್ತರ ಭಾರತದ ರಾಜ್ಯಗಳಲ್ಲಿ ಮುಂದುವರಿದಿದೆ. ಗುಜರಾತ್ ಕರಾವಳಿ ಒಳಗೊಂಡಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಉಂಟಾಗಿರುವ ಹವಾಮಾನ ಬದಲಾವಣೆಗಳ ಕಾರಣದಿಂದ ಮುಂಗಾರು ಮಳೆ ಅಬ್ಬರಿಸುತ್ತಿದೆ. ಮುಂದಿನ 7ದಿನ ಇದೇ ರೀತಿ ಸಾಧಾರಣದಿಂದ ಭಾರೀ, ಅತ್ಯಧಿಕ ಭಾರಿ ಹಾಗೂ ಬಿರುಗಾಳಿ ಸಹಿತ ವಿವಿಧ ರಾಜ್ಯಗಳಲ್ಲಿ ಗುಡುಗು, ಮಿಂಚು ಸಹಿತ ಧಾರಾಕಾರ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಇಂದು ಜುಲೈ 10ರಿಂದ ಜುಲೈ 16ರವರೆಗೆ ಕೆಲವು ರಾಜ್ಯಗಳಲ್ಲಿ ಮಳೆ ಪ್ರಮಾಣದ ತೀವ್ರಗೊಳ್ಳಲಿದೆ. ಇದರಲ್ಲಿ ಹರಿಯಾಣ, ಚಂಢೀಗಡ, ದೆಹಲಿ, ಪಂಜಾಬ್, ಉತ್ತರ ಪ್ರದೇಶ, ಹಿಮಾಚಲ ಪ್ರದೇಶ, ಉತ್ತರಾಖಂಡ, ರಾಜಸ್ಥಾನ್ ಪಶ್ಚಿಮ ಪ್ರದೇಶಗಳಲ್ಲಿ ಬಿರುಗಾಳಿ ಸಹಿತ ಅತ್ಯಧಿಕ ಭಾರೀ ಮಳೆ ನಿರೀಕ್ಷೆ ಇದೆ.

IMD Weather Forecast

ಜುಲೈ 16ರವರೆಗೆ ಮಳೆ, ಕೆಲವೆಡೆ ಪ್ರವಾಹ ಭೀತಿ

ಮಧ್ಯ ಭಾರತದ ಭಾಗಗಳಾದ ಮಧ್ಯ ಪ್ರದೇಶದ ಪೂರ್ವ ಹಾಗೂ ಪಶ್ಚಿಮ ಪ್ರದೇಶಗಳು, ವಿದರ್ಬ, ಛತ್ತೀಸ್‌ಗಡ ರಾಜ್ಯದ ವಿವಿಧ ಪ್ರದೇಶಗಳಲ್ಲಿ ಜುಲೈ 13-16ರವರೆಗೆ ಸುಮಾರು ಮೂರು ದಿನ ಬಿಟ್ಟು ಬಿಡದೇ ಮಳೆ ಸುರಿಯಲಿದೆ. ಇದರಿಂದ ತಗ್ಗು ಪ್ರದೇಶಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ.

Karnataka Dam Water Level: ಭಾರೀ ಮಳೆ, ರಾಜ್ಯದ ಅಣೆಕಟ್ಟುಗಳ ಒಳಹರಿವು ಭಾರೀ ಹೆಚ್ಚಳ, ರೈತರಲ್ಲಿ ಹೊಸ ಭರವಸೆ
Karnataka Dam Water Level: ಭಾರೀ ಮಳೆ, ರಾಜ್ಯದ ಅಣೆಕಟ್ಟುಗಳ ಒಳಹರಿವು ಭಾರೀ ಹೆಚ್ಚಳ, ರೈತರಲ್ಲಿ ಹೊಸ ಭರವಸೆ

ಮುಂದಿನ ಐದು ದಿನಗಳಲ್ಲಿ ಅಂಡಮಾನ್, ನಿಕೋಬಾರ್, ಝಾರ್ಖಂಡ್, ಬಿಹಾರ ಒಡಿಶಾ, ಪಶ್ಚಿಮ ಬಂಗಾಳ, ಉಪ ಹಿಮಾಲಯ ಪ್ರದೇಶಗಳು ಸೇರಿದಂತೆ ಪೂರ್ವ ಭಾರತದ ವಿವಿಧ ಭಾಗಗಳಲ್ಲಿ ಸಾಧಾರಣ ಹಾಗೂ ಧಾರಾಕಾರ ಮಳೆ ಆಗಲಿದೆ. ಇಲ್ಲಿ ಗಾಳಿಯು ಪ್ರತಿ ಗಂಟೆಗೆ ಸುಮಾರು 40 ಕಿಲೋ ಮೀಟರ್ ವೇಗದಲ್ಲಿ ಬೀಸಲಿದೆ. ಸಿಕ್ಕಿಂ ಮತ್ತು ಪಶ್ಚಿಮ ಬಂಗಾರದ ಕೆಲವೆಡೆ ಸಾಮಾನ್ಯ ಮಳೆ ಆಗಲಿದ್ದು, ದಿನವಿಡೀ ಮಬ್ಬು ವಾತಾವರಣ ಕಂಡು ಬರಲಿದೆ.

ದಕ್ಷಿಣ ಭಾರತದಲ್ಲಿ ದುರ್ಬಲಗೊಂಡ ಮುಂಗಾರು

ದಕ್ಷಿಣ ಭಾರತದ ವಿವಿಧ ರಾಜ್ಯಗಳಲ್ಲಿ ಚುರುಕಾಗಿದ್ದ ಮುಂಗಾರು ಮಳೆ ಇದೀಗ ತಗ್ಗಿದೆ. ಮಳೆ ದುರ್ಬಲವಾಗಿದ್ದು, ಇಂದು ಜುಲೈ 10ರಿಂದಲೇ ಬಿಸಿಲಿನ ದರ್ಶನವಾಗಿದೆ. ಕರಾವಳಿ ರಾಜ್ಯಗಳಾದ ಕರ್ನಾಟಕ, ಆಂಧ್ರ ಪ್ರದೇಶ, ಕೇರಳ, ತಮಿಳುನಾಡಿನಲ್ಲಿ ಮಳೆ ಸಂಪೂರ್ಣವಾಗಿ ಕಡಿಮೆ ಆಗಿದೆ. ವಿವಿಧೆಡೆ ತಂಪು ಗಾಳಿಯ ವಾತಾವರಣ ಬಿಟ್ಟರೆ ಜೋರು ಮಳೆ ಎಚ್ಚರಿಕೆ ಸದ್ಯಕ್ಕಿಲ್ಲ. ಇದೇ ಮಳೆ ಉತ್ತರ ಭಾರತದ ಅನೇಕ ರಾಜ್ಯಗಳಲ್ಲಿ ಸಕ್ರಿಯವಾಗಿದೆ. ಇದೆಲ್ಲ ನೋಡಿದರೆ ಕರ್ನಾಟಕ ಒಳಗೊಂಡಂತೆ ದಕ್ಷಿಣ ಭಾರತದ ರಾಜ್ಯಗಳಲ್ಲಿ ಬರಗಾಲದ ಛಾಯೆ ಮತ್ತೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಊಹಿಸಿದೆ.

Karnataka Rains: ಆರ್ಭಟಿಸಿದ್ದ ಮುಂಗಾರು ದುರ್ಬಲ! ಬರೀ 7 ಜಿಲ್ಲೆಗಳಿಗೆ ಮಳೆ ಎಚ್ಚರಿಕೆ, ಮತ್ತೆ ಬರ ಭೀತಿ
Karnataka Rains: ಆರ್ಭಟಿಸಿದ್ದ ಮುಂಗಾರು ದುರ್ಬಲ! ಬರೀ 7 ಜಿಲ್ಲೆಗಳಿಗೆ ಮಳೆ ಎಚ್ಚರಿಕೆ, ಮತ್ತೆ ಬರ ಭೀತಿ

ಮುಂದಿನ 48 ಗಂಟೆ ಕರ್ನಾಟಕದ ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳು, ತಮಿಳುನಾಡು, ಪುದಚೇರಿ, ಆಂಧ್ರ ಪ್ರದೇಶದ ಕರಾವಳಿ ಹಾಗೂ ಕೇರಳ ಕರಾವಳಿ ಭಾಗಗಳಲ್ಲಿ ಸಾಧಾರಣ ಇಲ್ಲವೇ ಕೆಲವೊಮ್ಮೆ ಜೋರು ಮಳೆ ನಿರೀಕ್ಷೆ ಇದೆ. ಇದರ ಹೊರತು ಗಂಭೀರ ಸ್ವರೂಪದ ಬದಲಾವಣೆಗಳು ಸದ್ಯಕ್ಕಿಲ್ಲ ಎಂದು ಐಎಂಡಿ ಮುನ್ಸೂಚನಾ ವರದಿಯಲ್ಲಿ ತಿಳಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+