Adani Group: ಬೆಂಗಳೂರಿನಲ್ಲಿ ಅದಾನಿ ಗ್ರೂಪ್‌ನಿಂದ ಮಹತ್ವದ ಕಾರ್ಯಕ್ರಮ

Adani Group: ಭಾರತದ ಭವಿಷ್ಯದ ವೈಜ್ಞಾನಿಕ ತಜ್ಞರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಅದಾನಿ ಗ್ರೂಪ್ ಅಮೆರಿಕ ಮೂಲದ ಸೆಂಟರ್ ಫಾರ್ ಎಕ್ಸಲೆನ್ಸ್ ಇನ್ ಎಜುಕೇಷನ್ (ಸಿಇಇ) ಸಹಯೋಗದೊಂದಿಗೆ ಆರ್‌ಎಸ್‌ಐ ಇಂಡಿಯಾ 2026ರ ಸಮಾರೋಪ ಸಮಾರಂಭವನ್ನು ಯಶಸ್ವಿಯಾಗಿ ಆಯೋಜಿಸಿದೆ. ಈ ಕಾರ್ಯಕ್ರಮವು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಆವರಣದಲ್ಲಿ ನಡೆಯಿತು.

ಅಮೆರಿಕಾದ ಮ್ಯಾಸಚೂಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (MIT)ಯಲ್ಲಿ ಜಾಗತಿಕವಾಗಿ ಅತ್ಯಂತ ಯಶಸ್ವಿಯಾಗಿ ನಡೆಯುವ ಆರ್‌ಎಸ್‌ಐ ಮಾದರಿಯಲ್ಲೇ ಈ ಕಾರ್ಯಕ್ರಮವನ್ನು ಭಾರತದಲ್ಲೂ ಆಯೋಜಿಸಲಾಗಿದೆ. ಇದು ವಿಜ್ಞಾನ, ತಂತ್ರಜ್ಞಾನ, ಇಂಜಿನಿಯರಿಂಗ್ ಮತ್ತು ಗಣಿತ ಕ್ಷೇತ್ರಗಳಲ್ಲಿ ಆಸಕ್ತಿಯಿರುವ ಯುವ ಪ್ರತಿಭೆಗಳಿಗಾಗಿ ಹಮ್ಮಿಕೊಳ್ಳಲಾದ ಆರು ವಾರಗಳ ಕಾರ್ಯಕ್ರಮವಾಗಿದೆ.

Adani Group Hosts RSI India 2026 at IISc Bengaluru to Nurture Future STEM Scientists Know details

ಈ ವರ್ಷದ ಸಂಶೋಧನಾ ಕಾರ್ಯಕ್ರಮಕ್ಕಾಗಿ ದೇಶದ ವಿವಿಧ ಭಾಗಗಳಿಂದ ಅದ್ಭುತ ಪ್ರತಿಭೆಯುಳ್ಳ 32 ಪ್ರೌಢಶಾಲಾ ವಿದ್ಯಾರ್ಥಿಗಳನ್ನು ಕಠಿಣ ಪ್ರಕ್ರಿಯೆಯ ಮೂಲಕ ಆಯ್ಕೆ ಮಾಡಲಾಗಿತ್ತು. ಈ ವಿದ್ಯಾರ್ಥಿಗಳು ಬೆಂಗಳೂರಿನ ಐಐಎಸ್‌ಸಿ ಕ್ಯಾಂಪಸ್‌ನಲ್ಲಿ ಉಳಿದುಕೊಂಡು ಅಲ್ಲಿನ ಪ್ರೊಫೆಸರ್‌ಗಳು ಹಾಗೂ ತಜ್ಞರ ನೇರ ಮಾರ್ಗದರ್ಶನದಲ್ಲಿ ವಿವಿಧ ವೈಜ್ಞಾನಿಕ ವಿಷಯಗಳ ಕುರಿತು ಸಂಶೋಧನೆಗಳನ್ನು ನಡೆಸಿದ್ದಾರೆ. ಇದು ಅವರಿಗೆ ಜಾಗತಿಕ ಮಟ್ಟದ ಶೈಕ್ಷಣಿಕ ಅನುಭವವನ್ನು ನೀಡಿದೆ ಎನ್ನುವ ಎನ್ನಲಾಗಿದೆ.

ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಗಣ್ಯರು ಅದಾನಿ ಗ್ರೂಪ್ ಮತ್ತು ಸಿಇಇ ಸಂಸ್ಥೆಯ ಈ ಜಂಟಿ ಪ್ರಯತ್ನವನ್ನು ಮುಕ್ತಕಂಠದಿಂದ ಶ್ಲಾಘಿಸಿದರು. ಭಾರತದ ಶಾಲಾ ಹಂತದಲ್ಲೇ ಇಂತಹ ಸಂಶೋಧನಾ ಪ್ರವೃತ್ತಿಯನ್ನು ಬೆಳೆಸುವುದು ದೇಶದ ತಂತ್ರಜ್ಞಾನ ಮತ್ತು ವಿಜ್ಞಾನದ ಬೆಳವಣಿಗೆಗೆ ದೊಡ್ಡ ಕೊಡುಗೆ ನೀಡಲಿದೆ ಎಂದು ಅಭಿಪ್ರಾಯವ್ಯಕ್ತಪಡಿಸಿದರು.

ಆರು ವಾರಗಳ ಕಾಲ ತಾವು ನಡೆಸಿದ ಅತ್ಯಾಧುನಿಕ ಸಂಶೋಧನೆಗಳು ಮತ್ತು ಯೋಜನಾ ವರದಿಗಳನ್ನು ವಿದ್ಯಾರ್ಥಿಗಳು ಈ ಸಮಾರಂಭದಲ್ಲಿ ಪ್ರಸ್ತುತಪಡಿಸಿದರು. ಈ ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ಕೇವಲ ಸೈದ್ಧಾಂತಿಕ ಜ್ಞಾನವನ್ನಷ್ಟೇ ಅಲ್ಲದೆ, ಪ್ರಾಯೋಗಿಕವಾಗಿ ಯೋಚಿಸುವ ಮತ್ತು ಜಾಗತಿಕ ಸವಾಲುಗಳಿಗೆ ಪರಿಹಾರ ಕಂಡುಕೊಳ್ಳುವ ಸಾಮರ್ಥ್ಯವನ್ನು ಹೆಚ್ಚಿಸಿದೆ. ಭವಿಷ್ಯದಲ್ಲಿ ಭಾರತದ ವೈಜ್ಞಾನಿಕ ಕ್ಷೇತ್ರವನ್ನು ಮುನ್ನಡೆಸಬಲ್ಲ ತಜ್ಞರನ್ನ ಸಿದ್ಧಪಡಿಸುವಲ್ಲಿ ಈ ಆರ್‌ಎಸ್‌ಐ-ಇಂಡಿಯಾ ಪ್ರಮುಖ ಪಾತ್ರ ವಹಿಸಿದೆ ಎಂದು ಆಯೋಜಕರು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+