Lok Sabha Election: ಗೋವಾದಲ್ಲಿ ಕಾಂಗ್ರೆಸ್ ಭದ್ರಕೋಟೆ ಭೇದಿಸುತ್ತಾ ಬಿಜೆಪಿ?
ಭಾರತದ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಒಂದಾ ಗೋವಾ.. ಈ ಪ್ರದೇಶಕ್ಕೆ ಹಲವಾರು ಪ್ರವಾಸಿಗರು ಬರುತ್ತಲೇ ಇರುತ್ತಾರೆ. ದೇಶದಲ್ಲಿನ ಚುನಾವಣಾ ಬಿಸಿ, ರಾಜ್ಯದಲ್ಲೂ ಪಡೆಯುತ್ತಿದೆ. ಗೋವಾದಲ್ಲಿ ಲೋಕಸಭಾ ಚುನಾವಣೆಗೆ ರಾಷ್ಟ್ರೀಯ ಪಕ್ಷಗಳು ಪೈಪೋಟಿ ನಡೆಸಲಿವೆ.
ಗೋವಾದಲ್ಲಿ ಎರಡು ಲೋಕಸಭಾ ಕ್ಷೇತ್ರಗಳಿದ್ದು, ಈ ಸ್ಥಾನವನ್ನು ಕಬ್ಜಾ ಮಾಡಲು ರಾಷ್ಟ್ರೀಯ ಪಕ್ಷಗಳು ಪ್ಲ್ಯಾನ್ ಮಾಡಿಕೊಂಡಿವೆ. 2014 ರ ಚುನಾವಣೆಯಲ್ಲಿ, ಮೋದಿ ಅಲೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಕ್ಲೀನ್ ಸ್ವೀಪ್ ಮಾಡಿತ್ತು. ಆದರೆ 2019 ರಲ್ಲಿ ಉತ್ತರ ಗೋವಾ ಸ್ಥಾನವನ್ನು ಬಿಜೆಪಿ ಉಳಿಸಿಕೊಳ್ಳಲು ಸಾಧ್ಯವಾಗಿತ್ತು. ದಕ್ಷಿಣ ಗೋವಾದಲ್ಲಿ 2019ರಲ್ಲಿ ಕಾಂಗ್ರೆಸ್ ಕಾಸ್ಮೆ ಫ್ರಾನ್ಸಿಸ್ಕೊ ಕೈಟಾನೊ ಸಾರ್ಡಿನ್ ಜಯ ಸಾಧಿಸಿದ್ದರು.

ಕಾಂಗ್ರೆಸ್ ಭದ್ರ ಕೋಟೆ
ದಕ್ಷಿಣ ಗೋವಾ ಕ್ಷೇತ್ರವನ್ನು ವಶಪಡಿಸಿಕೊಳ್ಳಲು ಬಿಜೆಪಿ ಯೋಜನೆ ರೂಪಿಸಿಕೊಂಡಿದೆ. ದಕ್ಷಿಣ ಗೋವಾ ಕ್ಷೇತ್ರವನ್ನು ವಶಪಡಿಸಿಕೊಳ್ಳಲು ಬಿಜೆಪಿ ಪಲ್ಲವಿ ಡೆಂಪೊಗೆ ಟಿಕೆಟ್ ನೀಡಿದ್ದು, ಈ ಬಾರಿ ಮಹಿಳಾ ಅಭ್ಯರ್ಥಿಯ ಮೇಲೆ ಪಣತೊಟ್ಟಿದೆ. ಕಾಂಗ್ರೆಸ್ ಕಡೆಯಿಂದ ನೌಕಾಪಡೆಯ ಮಾಜಿ ಅಧಿಕಾರಿ ವಿರಿಯಾಟೊ ಫೆರ್ನಾಂಡಿಸ್ ಕಣದಲ್ಲಿದ್ದಾರೆ. ಕಾಂಗ್ರೆಸ್ ತನ್ನ ಹಾಲಿ ಸಂಸದ ಫ್ರಾನ್ಸಿಸ್ಕೊ ಅವರಿಗೆ ಟಿಕೆಟ್ ನೀಡಿಲ್ಲ.
ಕ್ರಿಶ್ಚಿಯನ್ ಮತಗಳ ಪ್ರಾಭಲ್ಯ
ದಕ್ಷಿಣ ಗೋವಾ ಸೀಟ್ ಕ್ರಿಶ್ಚಿಯನ್ ಸಮುದಾಯದ ಜನರು ಇದ್ದಾರೆ. ಇದನ್ನು ಕಾಂಗ್ರೆಸ್‌ನ ಭದ್ರಕೋಟೆ ಎಂದು ಪರಿಗಣಿಸಲಾಗಿದೆ. ಈ ಸ್ಥಾನವನ್ನು ಕಾಂಗ್ರೆಸ್ 10 ಬಾರಿ ಗೆದ್ದಿದೆ. ಆದರೆ ಬಿಜೆಪಿ ಈ ಸ್ಥಾನವನ್ನು 1999 ಮತ್ತು 2014 ರಲ್ಲಿ ಕಮಲ ಪಡೆ ಜಯ ಸಾಧಿಸಿತ್ತು. ದಕ್ಷಿಣ ಗೋವಾದ ಮಾಜಿ ಸಂಸದ ನರೇಂದ್ರ ಸವೈಕರ್ ಮತ್ತು ಮಾಜಿ ಉಪ ಮುಖ್ಯಮಂತ್ರಿ ಚಂದ್ರಕಾಂತ್ 'ಬಾಬು' ಕಾವ್ಲೇಕರ್‌ನ್ನು ದಕ್ಷಿಣ ಗೋವಾ ಸ್ಥಾನಕ್ಕೆ ಪರಿಗಣಿಸುವಂತೆ ರಾಜ್ಯ ಬಿಜೆಪಿ ಘಟಕವು ಕೇಂದ್ರ ನಾಯಕತ್ವಕ್ಕೆ ಸೂಚಿಸಿತ್ತು.

ಸಂಭಾವ್ಯ ಮಹಿಳಾ ಅಭ್ಯರ್ಥಿಗಳನ್ನು ಸೂಚಿಸುವಂತೆ ಹೈಕಮಾಂಡ್ ತಿಳಿಸಿತ್ತು. ಬಿಜೆಪಿ ಹೈಕಮಾಂಡ್ ಸೂಚಿಸಿದಂತೆ ಇಬ್ಬರೂ ನಾಯಕರು ಕಣದಿಂದ ಹಿಂದೆ ಸರಿದರು. ಅಲ್ಲದೆ ಈ ಕ್ಷೇತ್ರದಲ್ಲಿ ಬಿಜೆಪಿ ಪಲ್ಲವಿ ಡೆಂಪೋ ಅವರನ್ನು ಕಣಕ್ಕಿಳಿಸಿತ್ತು.
ದಕ್ಷಿಣ ಗೋವಾದಲ್ಲಿ ರಾಜಕೀಯ ಚಿತ್ರಣ
ಈ ಕ್ಷೇತ್ರದಲ್ಲಿ ಕುತೂಹಲಕಾರಿ ಸ್ಪರ್ಧೆ ಏರ್ಪಡುವ ನಿರೀಕ್ಷೆ ಇದೆ. ಈ ಕ್ಷೇತ್ರದಲ್ಲಿ ಮತಗಳು ವಿಭಜನೆಗೆ ಆಗಬಹುದು ಎಂಬ ಲೆಕ್ಕಾಚಾರ ಶುರುವಾಗಿದೆ. ಇನ್ನು ಬಿಜೆಪಿ ಯುವ ನಾಯಕಿ ಪಲ್ಲವಿ ಡೆಂಪೋ ಅವರನ್ನು ಕಣಕ್ಕೆ ಇಳಿಸಿದ್ದು, ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆ ಆಗಬಹುದು. ಗೋವಾದಲ್ಲಿ ರಾಜಕೀಯ ಕರ್ನಾಟಕದ ರಾಜಕೀಯದಿಂದ ಪ್ರೇರಿತವಾಗಿದೆ. ಗೋವಾದಲ್ಲಿ ಸದ್ಯ ಬಿಜೆಪಿ ಸರ್ಕಾರವಿದ್ದು ಈ ಸ್ಥಾನವನ್ನು ಉಳಿಸಿಕೊಳ್ಳಲು ಯೋಜನೆಯನ್ನು ರೂಪಿಸಿಕೊಳ್ಳುತ್ತಿದೆ. ರಾಜ್ಯದ
40 ವಿಧಾನಸಭಾ ಸ್ಥಾನಗಳಲ್ಲಿ ಅರ್ಧದಷ್ಟು ದಕ್ಷಿಣ ಗೋವಾದಲ್ಲಿವೆ. ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರಿಗೆ ಗೋವಾ ಲೋಕಸಭೆ ಚುನಾವಣೆ ಮಹತ್ವದ್ದಾಗಿದೆ.
ನೌಕಾಪಡೆಯ ಮಾಜಿ ಅಧಿಕಾರಿ ವಿರಿಯಾಟೊ ಫೆರ್ನಾಂಡಿಸ್ ಅವರು ಡಬೋಲಿಮ್‌ನಿಂದ ವಿಧಾನಸಭಾ ಚುನಾವಣೆಯಲ್ಲಿ ಸೋತಿದ್ದರು. ಮತ್ತೊಂದೆಡೆ ಕಾಂಗ್ರೆಸ್ ಯುವ ಅಧ್ಯಕ್ಷ ಅಮಿತ್ ಪಾಟ್ಕರ್ ಅವರಿಗೂ ಈ ಚುನಾವಣೆ ಮಹತ್ವದ್ದಾಗಿದೆ.
ದಕ್ಷಿಣ ಗೋವಾ ಲೋಕಸಭಾ ಕ್ಷೇತ್ರದಲ್ಲಿ 20 ವಿಧಾನಸಭಾ ಕ್ಷೇತ್ರಗಳಿದ್ದು, 12 ಕ್ಷೇತ್ರಗಳಲ್ಲಿ ಬಿಜೆಪಿ ಜಯ ಸಾಧಿಸಿದೆ. ಎಂಟು ಸ್ಥಾನಗಳನ್ನು ಕಾಂಗ್ರೆಸ್ ಹಾಗೂ ಎಎಪಿ ಪಕ್ಷಗಳು ಕಬ್ಜಾ ಮಾಡಿಕೊಂಡಿದ್ದವು. ಕರವಾಳಿ ರಾಜ್ಯದಲ್ಲಿ ಕಮಲ ಪಡೆ ಮೊದಲ ಬಾರಿಗೆ ಬಿಜೆಪಿ ಮಹಿಳಾ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿದೆ.
ಪಲ್ಲವಿ ಡೆಂಪೋ ಯಾರು?
ಡೆಂಪೋ ಇಂಡಸ್ಟ್ರೀಸ್ ಲಿಮಿಟೆಡ್‌ನ ಕಾರ್ಯನಿರ್ವಾಹಕ ನಿರ್ದೇಶಕರಾಗಿದ್ದಾರೆ. ಮತ್ತು ಡೆಂಪೋ ಚಾರಿಟೀಸ್ ಟ್ರಸ್ಟ್‌ನ ಟ್ರಸ್ಟಿ. ಪಲ್ಲವಿ ಅವರು ಡೆಂಪೋ ಗ್ರೂಪ್ ವ್ಯವಹಾರದ ಮಾಧ್ಯಮ ಮತ್ತು ರಿಯಲ್ ಎಸ್ಟೇಟ್ ವಿಭಾಗ ನೋಡಿಕೊಳ್ಳುತ್ತಿದ್ದಾರೆ. ಅವರು ಡೆಂಪೊ ಗ್ರೂಪ್ ಆಫ್ ಕಂಪನಿಗಳ ಅಧ್ಯಕ್ಷರಾದ ಶ್ರೀನಿವಾಸ್ ಡೆಂಪೊ ಅವರ ಪತ್ನಿ.
-
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video












Click it and Unblock the Notifications