ತನ್ನ 4 ವರ್ಷದ ಮಗನನ್ನೇ ಕೊಂದು ಸೂಟ್‌ಕೇಸ್‌ನಲ್ಲಿ ಶವ ಹೊತ್ತೋಯ್ದ ಸ್ಟಾರ್ಟ್‌ ಅಪ್ ಫೌಂಡರ್ & ಸಿಇಓ, ಮುಂದಾಗಿದ್ದೇನು?

ಚಿತ್ರದುರ್ಗ, ಜನವರಿ, 09: ಗೋವಾದ ಹೋಟೆಲ್‌ವೊಂದರಲ್ಲಿ ತನ್ನ ಮಗುವನ್ನು ಕೊಂದು ಸೂಟ್‌ಕೇಸ್‌ನಲ್ಲಿ ಶವ ಕೊಂಡೊಯ್ಯುತ್ತಿದ್ದ ಸ್ಟಾರ್ಟ್‌ ಅಪ್‌ ಫೌಂಡರ್ ಸಿಇಓ ಸೂಚನಾ ಸೇಠ್ ಅವರನ್ನು ಐಮಂಗಲ ಪೊಲೀಸರು ವಶಕ್ಕೆ ಪಡೆದು, ಬಳಿಕ ಗೋವಾ ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ತಿಳಿದುಬಂದಿದೆ.

ಮೃತ ಮಗುವನ್ನು ಚಿನ್ಮಯ್ ರಾಮಣನ್ ಸೇಠ್ (4) ಎಂದು ಗುರುತಿಸಲಾಗಿದೆ. ಸುಚಾನಾ ಸೇಠ್ ಗೋವಾದ ಹೋಟೆಲ್‌ನಲ್ಲಿ ನಾಲ್ಕು ವರ್ಷದ ಗಂಡು ಮಗುವನ್ನು ಹತ್ಯೆ ಮಾಡಿ, ಸೂಟ್ ಕೇಸ್‌ನಲ್ಲಿ ಮಗುವಿನ ಶವದೊಂದಿಗೆ ಗೋವಾದಿಂದ ಬೆಂಗಳೂರು ಕಡೆಗೆ ತೆರಳುತ್ತಿದ್ದಾಗ ಚಿತ್ರದುರ್ಗ ಜಿಲ್ಲೆಯ ಐಮಂಗಲ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ.

Startup Founder & CEO arrested for Who Killed son in Goa

ಆರೋಪಿಯು ಗೋವಾದಿಂದ ಟ್ಯಾಕ್ಸಿ ಮಾಡಿಕೊಂಡು ತೆರಳುತ್ತಿದ್ದಾಳು. ಈ ವೇಳೆ ಗೋವಾದಲ್ಲಿ ತಂಗಿದ್ದ ಹೋಟೆಲ್‌ನವರಿಗೆ ಅನುಮಾನ ಬಂದ ಹಿನ್ನಲೆಯಲ್ಲಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಹೋಟೆಲ್ ರೂಮಿನಲ್ಲಿ ರಕ್ತದ ಕಲೆಗಳು ಪತ್ತೆ ಹಿನ್ನೆಲೆ ಅನುಮಾನ ಬಂದಿತ್ತು. ರೂಮಿಗೆ ಕರೆದೊಯ್ದಿದ್ದ ಮಗು ವಾಪಸ್ ಹೋಗುವಾಗ ಇರಲಿಲ್ಲ. ಇದನ್ನು ಪ್ರಶ್ನಿಸಿದಾಗ ಸಂಬಂಧಿಕರ ಮನೆಗೆ ಕಳುಹಿಸಿದ್ದೇನೆ ಎಂದು ಸುಳ್ಳು ಹೇಳಿದ್ದರು ಸುಚನಾ ಸೇಠ್.

ಬಳಿಕ ಗೋವಾ ಪೊಲೀಸ್‌ಗೆ ಮಾಹಿತಿ ಟ್ಯಾಕ್ಸಿ ಡ್ರೈವರ್ ಸಂಪರ್ಕ ಮಾಡಿ ಹೈವೇ ಬಳಿ ಪೊಲೀಸ್ ಠಾಣೆ ಕಂಡಾಕ್ಷಣ ನಿಲ್ಲಿಸುವಂತೆ ಸೂಚನೆ ನೀಡಿದ್ದಾರೆ. ಡ್ರೈವರ್ ರಾಷ್ಟ್ರೀಯ ಹೆದ್ದಾರಿ 4ರ ಐಮಂಗಲ ಠಾಣೆ ಬಳಿ ಟ್ಯಾಕ್ಸಿ ನಿಲ್ಲಿಸಿದ್ದಾನೆ. ಇದಾದ ನಂತರ ಚಾಲಕ ಆರೋಪಿಯನ್ನು ಐಮಂಗಲ ಪೊಲೀಸರಿಗೆ ಒಪ್ಪಿಸಿದ್ದಾರೆ.

ಕಾರ್‌ನ ಡಿಕ್ಕಿಯಲ್ಲಿದ್ದ ಸೂಟ್‌ಕೇಸ್‌ನಲ್ಲಿ ಮಗುವಿನ ಶವ ಪತ್ತೆಯಾಗಿದೆ. ಮಗುವಿನ ಶವ ಮಾರ್ಚರಿಗೆ ಶಿಫ್ಟ್ ಮಾಡಿ ಆರೋಪಿ ಸುಚನಾ ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಗೋವಾ ಪೊಲೀಸರಿಗೆ ಆರೋಪಿ ಒಪ್ಪಿಸಲು ಐಮಂಗಲ ಪೊಲೀಸರು ಕಾದಿದ್ದಾರೆ. ಇದೀಗ ಗೋವಾದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ.

ಆರೋಪಿ ಸೂಚನಾ ಹಿನ್ನೆಲೆ: ಆರೋಪಿಯು ಕೊಲ್ಕತ್ತಾ ಮೂಲದವರಾಗಿದ್ದು, ಬೆಂಗಳೂರಿನಲ್ಲಿ ಪಿಎಚ್‌ಡಿ ವಿದ್ಯಾಬ್ಯಾಸ ಮಾಡುತಿದ್ದಾಳೆ. ಈಕೆ ಗಂಡನೊಂದಿಗೆ ವಿವಾಹ ವಿಚ್ಛೇದನ ಪಡೆದುಕೊಂಡು ಬೆಂಗಳೂರಿನಲ್ಲಿ ನೆಲೆಸಿದ್ದಳು. ಈಕೆಯ ಪತಿ ಇಂಡೋನೇಷ್ಯಾದಲ್ಲಿ ಇದ್ದಾರಂತೆ ಎಂಬ ಮಾಹಿತಿ ಲಭ್ಯವಾಗಿದೆ. ಆರೋಪಿಯು ಗೋವಾ ಪ್ರವಾಸ ಕೈಗೊಂಡಾಗ ಈ ಘಟನೆ ನಡೆದಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+