ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking; ನವನೀತ್ ಕೌರ್ ವಿರುದ್ಧ ಮಹಾರಾಷ್ಟ್ರ ಸರ್ಕಾರ ಕೋರ್ಟಿಗೆ

|
Google Oneindia Kannada News

ಮುಂಬೈ, ಮೇ 08; ಅಮರಾವತಿ ಸಂಸದೆ ನವನೀತ್ ಕೌರ್ ರಾಣಾ, ಆಕೆಯ ಪತಿ ರವಿ ರಾಣಾ ವಿರುದ್ಧ ಮಹಾರಾಷ್ಟ್ರ ಸರ್ಕಾರ ಕೋರ್ಟ್‌ ಮೆಟ್ಟಿಲೇರಲಿದೆ. ದಂಪತಿಗಳ ಜಾಮೀನು ಅರ್ಜಿ ವಜಾಗೊಳಿಸುವಂತೆ ಸರ್ಕಾರ ಮನವಿ ಮಾಡಲಿದೆ.

ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನಿವಾಸವ ಮುಂದೆ ಹನುಮಾನ್ ಚಾಲೀಸಾ ಪಠಿಸುವುದಾಗಿ ಹೇಳಿದ್ದ ಸಂಸದೆ ನವನೀತ್ ಕೌರ್ ಮತ್ತು ಆಕೆಯ ಪತಿ ರವಿ ರಾಣಾರನ್ನು ಪೊಲೀಸರು ಬಂಧಿಸಿದ್ದರು. ಮುಂಬೈ ಸೆಷನ್ಸ್‌ ಕೋರ್ಟ್‌ ಇಬ್ಬರಿಗೂ ಜಾಮೀನು ನೀಡಿತ್ತು.

 Breaking: ಹನುಮಾನ್ ಚಾಲೀಸಾ ವಿವಾದ: ಸಂಸದೆ ನವನೀತ್, ಪತಿ ರವಿ ರಾಣಾಗೆ ಜಾಮೀನು Breaking: ಹನುಮಾನ್ ಚಾಲೀಸಾ ವಿವಾದ: ಸಂಸದೆ ನವನೀತ್, ಪತಿ ರವಿ ರಾಣಾಗೆ ಜಾಮೀನು

ವಿಶೇಷ ಸರ್ಕಾರಿ ಅಭಿಯೋಜಕ ಪ್ರದೀಪ್ ಗರ್ಹತ್ ಈ ಕುರಿತು ಮಾಹಿತಿ ನೀಡಿದರು, "ಮಹಾರಾಷ್ಟ್ರ ಸರ್ಕಾರ ನವನೀತ್ ಕೌರ್ ಮತ್ತು ರವಿ ರಾಣಾ ಜಾಮೀನು ವಜಾಗೊಳಿಸುವಂತೆ ಕೋರ್ಟ್‌ಗೆ ಅರ್ಜಿ ಸಲ್ಲಿಸಲಿದೆ" ಎಂದರು.

Breaking;ಹನುಮಾನ್ ಚಾಲೀಸಾ ವಿವಾದ; ಮೌನ ಮುರಿದ ಸಿಎಂ! Breaking;ಹನುಮಾನ್ ಚಾಲೀಸಾ ವಿವಾದ; ಮೌನ ಮುರಿದ ಸಿಎಂ!

Maharashtra Govt To Move Court Request Cancel Of Navneet Rana Bail

"ನ್ಯಾಯಾಲಯ ಜಾಮೀನು ನೀಡುವಾಗ ಹಾಕಿದ್ದ ಷರತ್ತುಗಳನ್ನು ನವನೀತ್ ಕೌರ್ ಮತ್ತು ರವಿ ರಾಣಾ ಉಲ್ಲಂಘಿಸಿದ್ದಾರೆ. ಈ ಕುರಿತು ಸೋಮವಾರ ಕೋರ್ಟ್‌ಗೆ ಮಾಹಿತಿ ನೀಡಲಾಗುತ್ತದೆ" ಎಂದು ಪ್ರದೀಪ್ ಗರ್ಹತ್ ಹೇಳಿದರು.

Breaking; ಹನುಮಾನ್ ಚಾಲೀಸಾ ವಿವಾದ ಬಿಜೆಪಿ ವಿರುದ್ಧ 'ಸಾಮ್ನಾ' ಕಿಡಿ Breaking; ಹನುಮಾನ್ ಚಾಲೀಸಾ ವಿವಾದ ಬಿಜೆಪಿ ವಿರುದ್ಧ 'ಸಾಮ್ನಾ' ಕಿಡಿ

ಜಾಮೀನು ನೀಡುವಾಗ ಕೋರ್ಟ್‌ ಪ್ರಕರಣದ ಬಗ್ಗೆ ಮಾಧ್ಯಮಗಳ ಮುಂದೆ ಮಾತನಾಡಬಾರದು ಎಂದು ಷರತ್ತು ಹಾಕಿತ್ತು. ಆದರೆ ದಂಪತಿಗಳು ಈ ಷರತ್ತು ಉಲ್ಲಂಘನೆ ಮಾಡಿದ್ದಾರೆ.

ಗುರುವಾರ ರವಿ ರಾಣಾ ಮಾಧ್ಯಮಗಳ ಜೊತೆ ಮಾತನಾಡಿದ್ದರು. ಜೈಲಿನ ಅಧಿಕಾರಿಗಳು ತಮ್ಮ ಪತ್ನಿ ನವನೀತ್ ಕೌರ್ ಆರೋಗ್ಯದ ಬಗ್ಗೆ ಕಾಳಜಿ ತೆಗೆದುಕೊಂಡಿಲ್ಲ ಎಂದು ಆರೋಪ ಮಾಡಿದ್ದರು.

English summary
Maharashtra government will move to court and request cancel the bail granted to MP Navneet Rana and her husband MLA Ravi Rana.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X