Rashmika mandanna: ವಿಮಾನ ತುರ್ತು ಭೂಸ್ಪರ್ಶ, ಪ್ರಾಣಾಪಾಯದಿಂದ ಪಾರಾದ ನಟಿ ರಶ್ಮಿಕಾ ಮಂದಣ್ಣ ಹೇಳಿದ್ದೇನು?
ಶೂಟಿಂಗ್‌ಲ್ಲಿ ಕಾರ್ಯನಿರತರಾಗಿರುವ ನ್ಯಾಷನಲ್ ಕ್ರಷ್ ನಟಿ ರಶ್ಮಿಕಾ ಮಂದಣ್ಣ ಅವರಿ ಇತ್ತೀಚೆಗಷ್ಟೇ ಮುಂಬೈಗೆ ತೆರಳಿದ್ದರು. ಬಳಿಕ ತಮ್ಮ ಚಿತ್ರೀಕರಣ ಪೂರ್ಣಗೊಳಿಸಿ ಹೈದರಾಬಾದ್‌ಗೆ ವಾಪಸ್ಸಾಗಲು ವಿಮಾನ ಹತ್ತಿದ್ದು, ಈ ವಿಮಾನ ತಾಂತ್ರಿಕ ಸಮಸ್ಯೆ ಹಿನ್ನೆಲೆ ಮುಂಬೈ ವಿಮಾನ ನಿಲ್ದಾಣದಲ್ಲೇ ತುರ್ತು ಭೂಸ್ಪರ್ಶ ಮಾಡಿದೆ. ಸದ್ಯ ಪ್ರಾಣಾಪಾಯದಿಂದ ಪಾರಾದ ರಶ್ಮಿಕಾ ಮಂದಣ್ಣ ಅವರು ಏನು ಹೇಳಿದ್ದಾರೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಇನ್ನು ಈ ವಿಚಾರವನ್ನು ರಶ್ಮಿಕಾ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇದೇ ವಿಮಾನದಲ್ಲಿ ಶ್ರದ್ಧಾ ದಾಸ್ ಕೂಡ ಪ್ರಯಾಣ ಮಾಡುತ್ತಿದ್ದರು. ಶ್ರದ್ಧಾ ದಾಸ್ ಜೊತೆಗಿರುವ ಫೋಟೋವನ್ನು ರಶ್ಮಿಕಾ ಹಂಚಿಕೊಂಡು, "ಇಂದು ಪ್ರಾಣಾಪಾಯದಿಂದ ಪಾರಾಗಿದ್ದೇವೆ" ಎಂದು ಬರೆದುಕೊಂಡಿದ್ದಾರೆ. ಇನ್ನು ಇದನ್ನು ನೋಡಿದ ಅಭಿಮಾನಿಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ರಶ್ಮಿಕಾ ಮಂದಣ್ಣ ಕನ್ನಡದ ಕಿರಿಕ್ ಪಾರ್ಟಿ ಸಿನಿಮಾದಿಂದ ತಮ್ಮ ವೃತ್ತಿಜೀವನ ಆರಂಭಿಸಿದ್ದು, ಸದ್ಯ ಇದೀಗ ಬಹುಭಾಷೆಗಳಲ್ಲೂ ಸದ್ದು ಮಾಡುತ್ತಿದ್ದಾರೆ. ಇತ್ತೀಚೆಗಷ್ಟೇ ತೆರೆಕಂಡ 'ಅನಿಮಲ್' ಬ್ಲಾಕ್ ಬಸ್ಟರ್ ಹಿಟ್ ಆಗಿದ್ದು, ಇದು ಜನಪ್ರಿಯತೆ ಹೆಚ್ಚಿಸಿದೆ. ಇನ್ನು ಬಹುನಿರೀಕ್ಷಿತ ಸಿನಿಮಾ ಪುಷ್ಪಾ 2ನಲ್ಲಿ ಕಾರ್ಯನಿರತರಾಗಿದ್ದಾರೆ.
'ಪುಷ್ಪ 2: ದಿ ರೂಲ್' ಅಲ್ಲದೇ ದಿ ಗರ್ಲ್‌ಫ್ರೆಂಡ್, ರೈನ್ಬೋ ಸಿನಿಮಾಗಳು ಸಹ ಸಾಲಿನಲ್ಲಿವೆ. ಕೊನೆಯದಾಗಿ ಕಾಣಿಸಿಕೊಂಡ ಅನಿಮಲ್ ಸಿನಿಮಾ ಯಶಸ್ವಿಯಾಗಿದೆ. ಚಿತ್ರ ಮಿಶ್ರ ಪ್ರತಿಕ್ರಿಯೆ ಸ್ವೀಕರಿಸಿದರೂ, ಗಲ್ಲಾಪೆಟ್ಟಿಗೆಯಲ್ಲಿ ಭಾರೀ ಕಲೆಕ್ಷನ್ ಆಗಿದ ಎಂದು ತಿಳಿದುಬಂದಿದೆ. ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಈ ಚಿತ್ರದಲ್ಲಿ ಬಾಲಿವುಡ್ ಸೂಪರ್ ಸ್ಟಾರ್ ರಣ್ಬಿರ್ ಜೊತೆ ತೆರೆ ಹಂಚಿಕೊಂಡಿದ್ದರು.
ಇನ್ನು ನೇಹಾ ಧೂಪಿಯಾ ಅವರ ಚಾಟ್ ಶೋ 'ನೋ ಫಿಲ್ಟರ್ ನೇಹಾ'ದ ಶೂಟಿಂಗ್ನನಲ್ಲಿ ಭಾಗಿಯಾಗಲು ರಶ್ಮಿಕಾ ಮಂದಣ್ಣ ಇತ್ತೀಚೆಗೆ ಮುಂಬೈಗೆ ಹಾರಿದ್ದರು. ಪಾಪರಾಜಿಗಳು ನಟಿ ವಿಡಿಯೋ ಹಂಚಿಕೊಂಡಿದ್ದರು. ಪಾಪರಾಜಿಗಳ ಕ್ಯಾಮರಾಗಳಿಗೆ ಪೋಸ್ ಕೊಡುವ ವೇಳೆ, ಅಭಿಮಾನಿಯೊಬ್ಬರು ಆಗಮಿಸಿ ನಟಿಗೆ ಕೆಂಗುಲಾಬಿ ಕೊಟ್ಟು ತಮ್ಮ ಅಭಿಮಾನ ವ್ಯಕ್ತಪಡಿಸಿದ್ದು, ಇದಕ್ಕೆ ವಿನಮ್ರತೆಯಿಂದ ಪ್ರತಿಕ್ರಿಯಿಸಿದ ಹಿನ್ನೆಲೆ ನಟಿಗೆ ನೆಟ್ಟಿಗರಿಂದ ಮೆಚ್ಚುಗೆಗಳ ಸುರಿಮಳೆಯೇ ಹರಿದುಬಂರುತ್ತಿದೆ.












Click it and Unblock the Notifications