Get Updates
Get notified of breaking news, exclusive insights, and must-see stories!

KSRTC Award: ಪ್ರತಿಷ್ಠಿತ 6 ಪ್ರಶಸ್ತಿಗೆ 'ಕರ್ನಾಟಕ ಸಾರಿಗೆ ನಿಗಮ' ಭಾಜನ: ಎಂಟೇ ತಿಂಗಳಲ್ಲಿ 51 ಪ್ರಶಸ್ತಿ

ಬೆಂಗಳೂರು, ಫೆಬ್ರವರಿ 17: ದೇಶದಲ್ಲಿಯೇ ಸಾರ್ವಜನಿಕ ಸಾರಿಗೆಗೆ ಹೆಸರುವಾಸಿಯಾಗಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು (KSRTC) ಜನಮನ್ನಣೆ ಗಳಿಸಿದೆ. ಹಲವು ಪ್ರಶಸ್ತಿ ಪಡೆದ KSRTC ನಿಗಮವು ತನ್ನ ಸೇವೆಯಿಂದಲೇ ಇದೀಗ ಆರು ಪ್ರಮುಖ ಪ್ರಶಸ್ತಿಗೆ ಪಾತ್ರವಾಗಿದೆ.

ಶನಿವಾರ ಮುಂಬೈನಲ್ಲಿ ನಡೆದ ಬೃಹತ್ ಕಾರ್ಯಕ್ರಮದಲ್ಲಿ ಕರ್ನಾಟಕದ KSRTC ನಿಗಮಕ್ಕೆ 01 'ವರ್ಲ್ಡ್‌ ಮ್ಯಾನುಫ್ಯಾಕ್ಚರಿಂಗ್ ಕಾಂಗ್ರೆಸ್' ಹಾಗೂ 05 'ವರ್ಲ್ಡ್‌ ಮಾರ್ಕೆಟಿಂಗ್ ಕಾಂಗ್ರೆಸ್‌' ಎಂಬ ಐದು ಪ್ರಶಸ್ತಿಗಳನ್ನು ನೀಡಿ ನಿಮಗದ ಮುಖ್ಯಸ್ಥರನ್ನು ಗೌರವಿಸಲಾಯಿತು.

KSRTC Has Received Another 6 Awards at Mumbai, Total 51 Award Got in Last 8 Month

KSRTC ಗೆ ಹಿಂದಿನಿಂದಲೇ ಅನೇಕ ಪ್ರಶಸ್ತಿಗಳು, ಗೌರವಗಳು ಧಕ್ಕಿವೆ. ಇದೀಗ ಈ 6 ಪ್ರಶಸ್ತಿಗಳ ಗರಿಮೆ ಸಿಕ್ಕಿದೆ. ಇದರಿಂದ ಕಳೆದ ಎಂಟು ತಿಂಗಳುಗಳಲ್ಲಿ 51 ಪ್ರಶಸ್ತಿಗಳಿಗೆ ನಿಗಮವು ಪಾತ್ರವಾಗಿದೆ. ನಿಗಮದ ಮಂಡಳಿ ಕಾರ್ಯದರ್ಶಿ ಮತ್ತು ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿಯವರಿಗೆ ಜಾಗತಿಕ ಮಹಿಳಾ ನಾಯಕಿ ಪ್ರಶಸ್ತಿ ಲಭಿಸಿದೆ ಎಂದು ಪ್ರಕಟಣೆ ಮಾಹಿತಿ ನೀಡಿದೆ.

ಯಾವ ವರ್ಗಗಳಲ್ಲಿ ಪ್ರಶಸ್ತಿ ನೀಡಲಾಗಿದೆ?

* ವಿದ್ಯುತ್ ವಾಹನಗಳ ಕೈಗಾರಿಕಾ ನಾಯಕತ್ವ ಪ್ರಶಸ್ತಿ. 'ಇ.ವಿ.ಪವರ್ ಪ್ಲಸ್'

* ಜಾಗತಿಕ ಬ್ರಾಂಡ್ ಉತ್ಕೃಷ್ಟತೆ ಪ್ರಶಸ್ತಿ- ಅತ್ಯುತ್ತಮ ಬ್ರಾಂಡಿಂಗ್ ಮತ್ತು ಮಾರ್ಕೆಟಿಂಗ್ ಉಪಕ್ರಮ

* ವರ್ಷದ ವ್ಯಾವಹಾರಿಕ ನಾಯಕತ್ವ ಪ್ರಶಸ್ತಿ- ಅತ್ಯುತ್ತಮ ವಿನೂತನ ಉಪಕ್ರಮ ಸಂಸ್ಥೆ

* ಜಾಗತಿಕ ಮಾನವ ಸಂಪನ್ಮೂಲ ಉತ್ಕೃಷ್ಟತೆ ಪ್ರಶಸ್ತಿ- ಕಾರ್ಮಿಕರೊಂದಿಗೆ ಉತ್ತಮ ಭಾಂದವ್ಯ ಹೊಂದಿರುವ ಸಂಸ್ಥೆ

* ಜಾಗತಿಕ ಅತ್ಯುತ್ತಮ ಉದ್ಯೋಗದಾತ ಬ್ರಾಂಡ್ ಪ್ರಶಸ್ತಿ. ಜಾಗತಿಕ ಮಾನವ

* ಸಂಪನ್ಮೂಲ ಉಪಕ್ರಮದಲ್ಲಿ ನಿಗಮದ ಮಂಡಳಿ ಕಾರ್ಯದರ್ಶಿ ಮತ್ತು ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿಯವರಾದ ಡಾ. ಲತಾ ಟಿ.ಎಸ್ ರವರಿಗೆ ವಿಶ್ವ ಮಾರ್ಕೇಟಿಂಗ್ ಉತ್ಕೃಷ್ಟತೆಗಾಗಿ ಜಾಗತಿಕ ಮಹಿಳಾ ನಾಯಕಿ ಪ್ರಶಸ್ತಿ ಸ್ವೀಕರಿಸಿದರು.

ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ, ನಿನಾ ಇ ಉಡರ್ಡ ಅಸೋಸಿಯೇಟ್ಸ್ ಅಧ್ಯಕ್ಷರು ಹಾಗೂ ಮುಖ್ಯಸ್ಥರಾದ ಮಿಸ್. ನಿನಾ ಇ ಉಡರ್ಡ, ದುಬೈನ ಓಝೋನ್ ಗ್ರೂಪ್ ಮಾಲೀಕರು ಮತ್ತು ಸಂಸ್ಥಾಪಕರಾದ ಡಾ. ಓವಿಲಿಯಾ ಫೆರ್ನಾಂಡಿಸ್ ಅವರು ನಿಗಮಕ್ಕೆ ಪ್ರಶಸ್ತಿ ಪ್ರದಾನ ಮಾಡಿದರು.

KSRTC Has Received Another 6 Awards at Mumbai, Total 51 Award Got in Last 8 Month

ಈ ವೇಳೆ ನಿಗಮದ ಮಂಡಳಿ ಕಾರ್ಯದರ್ಶಿ ಹಾಗೂ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ.ಲತಾ ಟಿ.ಎಸ್, ವಿಭಾಗೀಯ ತಾಂತ್ರಿಕ ಅಭಿಯಂತರ ಎಚ್ ಎಸ್. ಸತೀಶ್, ವಿಭಾಗೀಯ ತಾಂತ್ರಿಕ ತಜ್ಞರಾದ ಸೌಮ್ಯ.ಸಿ ಮತ್ತು ಸಹಾಯಕ ಆಡಳಿತಾಧಿಕಾರಿ ಶಿಬಾ.ಎಸ್ ಅವರು ನಿಗಮದ ಪರವಾಗಿ ಪ್ರಶಸ್ತಿ ಸ್ವೀಕರಿಸಿದರು.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್‌ಟಿಸಿ)ದ ಸೇವೆಗೆ ಅನೇಕ ಸಂಸ್ಥೆಗಳು ಮೆಚ್ಚುಗೆ ವ್ಯಕ್ತಪಡಿಸಿವೆ. ಗೌರವ ಸಲ್ಲಿಸುತ್ತಲೇ ಬಂದಿದೆ. ಇದೀಗ ಕಳೆದ ಎಂಟೆ ತಿಂಗಳಲ್ಲಿ ಅತ್ಯಧಿಕ ಪುರಸ್ಕಾರಗಳು ಲಭಿಸಿವೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+