Akasa Air: 'ಆಕಾಶ' ಅಂತಾರಾಷ್ಟ್ರೀಯ ವಿಮಾನ ಹಾರಾಟಕ್ಕೆ ದಿನಾಂಕ ಫಿಕ್ಸ್: ಅಪ್ಡೇಟ್ ಮಾಹಿತಿ
ಬೆಂಗಳೂರು, ಫೆಬ್ರವರಿ 16: ಅಗ್ಗದ ವಿಮಾನಯಾನ ದರ ಹೊಂದಿರುವ ಆಕಾಶ ಏರ್ (Akasa Airlines) ತನ್ನ ಮೊದಲ ಅಂತಾರಾಷ್ಟ್ರೀಯ ವಿಮಾನಯಾನ ಸೇವೆ ಆರಂಭಿಸಲು ದಿನಾಂಕ ಫಿಕ್ಸ್ ಮಾಡಿದೆ. ಈವರೆಗೆ ದೇಶಿಯವಾಗಿ ಸೇವೆ ನೀಡಿದ್ದ ಆಕಾಶ ಏರ್ ಇದೀಗ ಮತ್ತೊಂದು ಹೆಜ್ಜೆ ಮುಂದಡಿ ಇಟ್ಟಿದೆ.
ಮುಂಬೈ ಮತ್ತು ಕತಾರ್‌ನ ರಾಜಧಾನಿ ದೋಹಾ ಮಧ್ಯೆ ಮುಂದಿನ ತಿಂಗಳ ಮಾರ್ಚ್ 28 ರಿಂದ ತನ್ನ ಮೊದಲ ಅಂತರರಾಷ್ಟ್ರೀಯ ವಿಮಾನಯಾನವನ್ನು ಹಾರಿಸಲು 'ಆಕಾಶ ಏರ್' ನಿರ್ಧರಿಸಿದ್ದಾರೆ. ಈ ಬಗ್ಗೆ ಶುಕ್ರವಾರ ವಿಮಾನಯಾನ ಸಂಸ್ಥೆ ಅಧಿಕೃತ ಮಾಹಿತಿ ನೀಡಿದೆ.

ಈ ಸಂಸ್ಥೆ ಕಾರ್ಯಾಚರಣೆಯನ್ನು ಆರಂಭಿಸಿ 19 ತಿಂಗಳೊಳಗೆ ಅಂತರಾಷ್ಟ್ರೀಯ ಸೇವೆ ನೀಡಲು ಗಗನಕ್ಕೆ ಜಿಗಿಯುವ ಮೊದಲ ಭಾರತೀಯ ವಿಮಾನಯಾನ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಆಕಾಶ ಏರ್ ತನ್ನ ಮೊದಲ ವಿಮಾನವನ್ನು ಮುಂಬೈ-ಅಹಮದಾಬಾದ್ ಮಾರ್ಗದಲ್ಲಿ ಆಗಸ್ಟ್ 7, 2022 ರಂದು ಕಾರ್ಯಚರಣೆ ನಡೆಸಿತ್ತು.
ಅಂತಾರಾಷ್ಟ್ರೀಯ ಸೇವೆಗೆ ಬೇಕಾದ ನಿಯಮಗಳೇನು?
ನಾಗರಿಕ ವಿಮಾನಯಾನ ಸಂಸ್ಥೆ ಹಾಗೂ ಸರ್ಕಾರಿ ನಿಯಮಗಳ ಪ್ರಕಾರ, ಒಂದು ವಿಮಾನಯಾನ ಸಂಸ್ಥೆ ಅಂತಾರಾಷ್ಟ್ರೀಯ ಕಾರ್ಯಾಚರಣೆ ಆರಂಭಿಸಲು ತನ್ನ ಫ್ಲೀಟ್‌ನಲ್ಲಿ 20 ವಿಮಾನಗಳನ್ನು ಹೊಂದಿರಬೇಕು. ಆಕಾಶ ಏರ್ ಪ್ರಸ್ತುತ ತನ್ನ ಫ್ಲೀಟ್‌ನಲ್ಲಿ 23 B737 ಮ್ಯಾಕ್ಸ್ ವಿಮಾನಗಳನ್ನು ಹೊಂದಿದೆ. ದೇಶದೊಳಗೆ (ಡೊಮೆಸ್ಟಿಕ್) 20 ನಗರಗಳಿಗೆ ಪ್ರಸ್ತುತದಲ್ಲಿ ಸೇವೆ ನೀಡುತ್ತಿದೆ. ಇದು ಪ್ರಯಾಣಿಕ ಸೇವೆ ನೀಡುತ್ತಿದೆ ಎಂಬ ಮಾತುಗಳು ಕೇಳಿ ಬಂದಿವೆ.
ಅಂತಾರಾಷ್ಟ್ರೀಯ ವಿಮಾನ ಸೇವೆ ಹೆಚ್ಚು ಬೇಡಿಕೆ ಇರುವ ಕಾರಣ ಮುಂಬೈ ಮತ್ತು ದೋಹಾ ನಡುವೆ ಏರ್ ಇಂಡಿಯಾ, ಇಂಡಿಗೋ, ಕತಾರ್ ಏರ್‌ವೇಸ್ ಮತ್ತು ವಿಸ್ತಾರಾ ಎಂಬ ನಾಲ್ಕು ಸಂಸ್ಥೆಗಳಿಂದ ವಾರಕ್ಕೆ 68 ಸೇವೆಗಳ ಹಾಲಿ ಲಭ್ಯವಿದೆ.

ವಾರಕ್ಕೆ 8 ವಿಮಾನ ಕಾರ್ಯಾಚರಣೆಗೆ ನಿರ್ಧಾರ
ಏವಿಯೇಷನ್ ಅನಾಲಿಟಿಕ್ಸ್ ಸಂಸ್ಥೆಯ ಪ್ರಕಾರ, ಇಂಡಿಗೋ ವಾರಕ್ಕೆ 14 ವಿಮಾನಗಳೊಂದಿಗೆ ಈ ಮಾರ್ಗದಲ್ಲಿ ಹಾರಾಟ ನಡೆಸುವ ಏಕೈಕ್ ಸಂಸ್ಥೆಯಾಗಿದೆ. ಮುಂದಿನ ಮಾರ್ಚ್ 28 ರಿಂದ ಆಕಾಶ ಏರ್ ಇದೇ ಮಾರ್ಗದಲ್ಲಿ ವಾರಕ್ಕೆ 8 ವಿಮಾನಗಳನ್ನು ಕಾರ್ಯಾಚರಣೆ ನಡೆಸಲು ತೀರ್ಮಾನಿಸಿದೆ.
ದೋಹಾ ಭಾರತದ ಪ್ರಮುಖ ವಾಣಿಜ್ಯ ಕೇಂದ್ರವಾದ ಮುಂಬೈ ಜತೆ ಸಂಪರ್ಕಿಸಲು ಈ ಸೇವೆ ನೀಡಲಾಗುತ್ತಿದೆ. ಈ ವಿಮಾನಗಳ ಪರಿಚಯವು "ಎರಡು ದೇಶಗಳ ಪ್ರಯಾಣಿಕರಿಗೆ ಪ್ರವಾಸೋದ್ಯಮಕ್ಕೆ ಅನುಕೂಲವಾಗಲಿದೆ. ವಾಣಿಜ್ಯ ಮತ್ತು ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸಲು ಸಹಕಾರಿಯಾಗಲಿದೆ ಎಂದು ಅಕಾಸಾ ಏರ್‌ನ ಸಂಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ವಿನಯ್ ದುಬೆ ಅಭಿಪ್ರಾಯಪಟ್ಟರು.
226 ಮ್ಯಾಕ್ಸ್ ವಿಮಾನ ಖರೀದಿಗೆ ಆರ್ಡರ್
ಪ್ರವಾಸೋದ್ಯಮ ತಾಣ ಮಾಡುವ ಗುರಿ ಹೊಂದಿರುವ ಕತಾರ ನ ಪ್ರವಾಸೋದ್ಯಮ ಕಾರ್ಯತಂತ್ರ 2030ಗೆ ಅನುಗುಣವಾಗಿ ಭಾರತದಿಂದ ಕತಾರ್‌ಗೆ ಹಾರಾಟದ ಪ್ರಾರಂಭಿಸಲಾಗುವುದ ಎಂದು ಆಕಾಶ ಏರ್ ಹೇಳಿಕೊಂಡಿದೆ. ವಿಂಗ್ಸ್ ಇಂಡಿಯಾ ಶೃಂಗಸಭೆ 2024 ನಲ್ಲಿ ಆಕಾಶ ಏರ್ ಬೋಯಿಂಗ್‌ನೊಂದಿಗೆ 150 B737 ಮ್ಯಾಕ್ಸ್ ವಿಮಾನಗಳಿಗೆ ಆರ್ಡರ್ ಮಾಡಿದೆ. ಮೂಲಗಳ ಪ್ರಕಾರ ಆಕಾಶ ಏರ್ ಬೋಯಿಂಗ್‌ನಿಂದ ಇಲ್ಲಿಯವರೆಗೆ ಒಟ್ಟು 226 ಮ್ಯಾಕ್ಸ್ ವಿಮಾನ ಖರೀದಿಸಲು ಮುಂದಾಗಿದೆ ಎಂಬ ಮಾಹಿತಿ ಇದೆ.












Click it and Unblock the Notifications