Pooja Hegde: ಮುಂಬೈನಲ್ಲಿ ಹೊಸ ಐಷಾರಾಮಿ ಮನೆ ಖರೀದಿಸಿದ ಪೂಜಾ ಹೆಗ್ಡೆ: ಬೆಲೆ ತಿಳಿದರೆ ಶಾಕ್ ಆಗ್ತೀರಾ..!

ಸೌತ್ ಸಿನಿಮಾದಿಂದ ಬಾಲಿವುಡ್ ಇಂಡಸ್ಟ್ರಿಯಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಪೂಜಾ ಹೆಗ್ಡೆಗೆ ಯಾವುದೇ ಐಡೆಂಟಿಟಿ ಬೇಕಾಗಿಲ್ಲ. ಸಿನಿ ರಂಗಕ್ಕೆ ಕಾಲಿಟ್ಟಾಗಿನಿಂದಲೂ ಪೂಜಾ ತನ್ನದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ನಟಿಯ ಅಭಿಮಾನಿಗಳ ಸಂಖ್ಯೆ ವೇಗವಾಗಿ ಹೆಚ್ಚುತ್ತಲೇ ಇದೆ.

ಕರ್ನಾಟಕದ ಮಂಗಳೂರು ಮೂಲದ ನಟಿ ಪೂಜಾ ಹೆಗ್ಡೆ. ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯೂಸಿ ಆಗಿರುವ ಬುಟ್ಟ ಬೊಮ್ಮ ಈ ನಡುವೆ ಹೊಸ ಮನೆಗೆ ಶಿಫ್ಟ್ ಆಗಿದ್ದಾಳೆ.

Pooja Hegde bought a new luxury house in Mumbai

ಮಾಹಿತಿ ಪ್ರಕಾರ, ಪೂಜಾ ಹೆಗ್ಡೆ ಈಗ ಮುಂಬೈನಲ್ಲಿ ಹೊಸ ಮನೆಯನ್ನು ಖರೀದಿಸಿದ್ದಾರೆ. ಹೊಸ ಮನೆಗೆ ಅವರು ಸ್ಥಾಳಾಂತರಗೊಂಡಿದ್ದಾರೆನ್ನುವ ಮಾಹಿತಿ ಲಭ್ಯವಾಗಿದೆ. 33 ನೇ ವಯಸ್ಸಿನಲ್ಲಿ ಅದ್ಬುತ ನಟಿಯಾಗಿ ಗುರುತಿಸಿಕೊಂಡಿರುವ ಪೂಜಾ ಮನೆ ಖರೀದಿಸುವುದು ಅವರ ವೃತ್ತಿಜೀವನದಲ್ಲಿ ಪ್ರಮುಖ ಯಶಸ್ಸು. ಅಷ್ಟಕ್ಕೂ ಅವರ ಹೊಸ ಐಷಾರಾಮಿ ಮನೆಯ ಬೆಲೆ ಎಷ್ಟು ಅನ್ನೋದನ್ನು ತಿಳಿದರೆ ನೀವೆಲ್ಲಾ ಶಾಕ್ ಆಗುತ್ತೀರಾ.

ಮುಂಬೈನ ಬಾಂದ್ರಾ ಮತ್ತು ಆಸುಪಾಸಿನಲ್ಲಿ ಬಾಲಿವುಡ್‌ನ ಹಲವು ಸೆಲೆಬ್ರಿಟಿಗಳು ತಮ್ಮ ಮನೆ ಹೊಂದಿದ್ದಾರೆ. ಕಿಸಿ ಕಾ ಭಾಯಿ ಕಿಸಿ ಕಿ ಜಾನ್ ನಟಿ ಪೂಜಾ ಹೆಗ್ಡೆ ಮುಂಬೈನ ಸಮುದ್ರ ತೀರದಲ್ಲಿ ತಮ್ಮ ಹೊಸ ಮನೆಯನ್ನು ಖರೀದಿಸುವ ಮೂಲಕ ತಮ್ಮ ಕನಸನ್ನು ನನಸಾಗಿಸಿಕೊಂಡಿದ್ದಾರೆ. ಪ್ಯಾನ್-ಇಂಡಿಯಾ ನಟಿ ಪೂಜಾಳ ಹೊಸ ಆಸ್ತಿ ಮುಂಬೈನ ಬಾಂದ್ರಾ ಪ್ರದೇಶದಲ್ಲಿದೆ. ವರದಿಗಳ ಪ್ರಕಾರ ಪೂಜಾ ಹೆಗ್ಡೆ ಸಮುದ್ರಕ್ಕೆ ಎದುರಾಗಿರುವ 4,000 ಚದರ ಅಡಿ ಆಸ್ತಿಯನ್ನು 45 ಕೋಟಿ ರೂ.ಗೆ ಖರೀದಿಸಿದ್ದಾರೆ. ನಟಿಯ ಹೊಸ ಮನೆಯ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ.

Pooja Hegde bought a new luxury house in Mumbai

ಮುಂಬೈನಲ್ಲಿ ಪೂಜಾ ಹೆಗ್ಡೆ ಹೊಸ ಮನೆಯನ್ನು ಖರೀದಿಸಿದ್ದಾರೆ ಎಂಬ ಸುದ್ದಿ ಹೊರಬಿದ್ದ ತಕ್ಷಣ, ಎಲ್ಲರೂ ಅವರನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಭಿನಂದಿಸಲು ಪ್ರಾರಂಭಿಸಿದರು. ಈ ಮೊದಲು ಪೂಜಾ ಗೋವಾಕ್ಕೆ ರಜೆಯ ಮೇಲೆ ಹೋಗಿದ್ದರು. ಗೋವಾದ ಬಿಸಿಲಿನಲ್ಲಿ ಮೇಕಪ್ ಇಲ್ಲದೇ ಇರುವ ಫೋಟೋಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದರು. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದವು.

ಪೂಜಾ ಹೆಗ್ಡೆ ಅವರ ಕೆಲಸದ ಕುರಿತು ಮಾತನಾಡುವುದದಾರೆ, ಅವರು 'ರಾಧೆ ಶ್ಯಾಮ್', 'ಆಚಾರ್ಯ', 'ಸರ್ಕಸ್' ಮತ್ತು 'ಕಿಸಿ ಕಾ ಭಾಯಿಜಾನ್' ಚಿತ್ರಗಳ ಮೂಲಕ ಹಿಂದಿ ಚಿತ್ರರಂಗದಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ. ಆದರೆ ಈ ಚಿತ್ರಗಳಿಗೆ ಹೆಚ್ಚಿನ ಪ್ರತಿಕ್ರಿಯೆ ಸಿಕ್ಕಿಲ್ಲ. ಈ ದಿನಗಳಲ್ಲಿ ನಟಿ 'ದೇವ' ಚಿತ್ರಕ್ಕಾಗಿ ಸುದ್ದಿಯಲ್ಲಿದ್ದಾರೆ. ಈ ಚಿತ್ರದಲ್ಲಿ ಶಾಹಿದ್ ಕಪೂರ್ ಅವರೊಂದಿಗೆ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಪೂಜಾ ಮತ್ತು ಶಾಹಿದ್ ಒಟ್ಟಿಗೆ ತೆರೆ ಹಂಚಿಕೊಳ್ಳುತ್ತಿರುವುದು ಇದೇ ಮೊದಲು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+