Ranji Trophy: 42ನೇ ಬಾರಿ ರಣಜಿ ಟ್ರೋಫಿ ಗೆದ್ದ ಮುಂಬೈ

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ರಣಜಿ ಟ್ರೋಫಿ ಫೈನಲ್ ಪಂದ್ಯದಲ್ಲಿ ಮುಂಬೈ ತಂಡ ವಿದರ್ಭ ವಿರುದ್ಧ 169 ರನ್‌ಗಳ ಭರ್ಜರಿ ಗೆಲುವು ಸಾಧಿಸಿ ರಣಜಿ ಟ್ರೋಫಿ ಗೆದ್ದು ಇತಿಹಾಸ ನಿರ್ಮಿಸಿದೆ. 42ನೇ ಬಾರಿ ರಣಜಿ ಟ್ರೋಫಿ ಗೆಲ್ಲುವ ಮೂಲಕ ಮುಂಬೈ ದಾಖಲೆಯನ್ನು ಉತ್ತಮ ಪಡಿಸಿದೆ.

ಟಾಸ್ ಗೆದ್ದ ವಿದರ್ಭ ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಮೊದಲ ಇನ್ನಿಂಗ್ಸ್‌ನಲ್ಲಿ 224 ರನ್‌ಗಳಿಗೆ ಆಲೌಟ್ ಆಯಿತು. ಪೃಥ್ವಿ ಶಾ 46 ರನ್ ಗಳಿಸಿದರೆ, ಶಾರ್ದೂಲ್ ಠಾಕೂರ್ 69 ಎಸೆತಗಳಲ್ಲಿ 75 ರನ್ ಗಳಿಸುವ ಮೂಲಕ ಮುಂಬೈ ತಂಡಕ್ಕೆ ಆಸರೆಯಾದರು. ಹರ್ಷ್ ದುಬೆ ಮತ್ತು ಯಶ್ ಠಾಕೂರ್ ತಲಾ ಮೂರು ವಿಕೆಟ್ ಪಡೆದರು.

Mumbai Wins Ranji Trophy for the 42nd Time Defeats Vidarbha in Final

ಮುಂಬೈ ತಂಡವನ್ನು ಕಡಿಮೆ ರನ್‌ಗಳಿಗೆ ಆಲೌಟ್ ಮಾಡಿ ಮೊದಲ ಇನ್ನಿಂಗ್ಸ್ ಬ್ಯಾಟಿಂಗ್ ಮಾಡಿದ ವಿದರ್ಭ ಕೇವಲ 105 ರನ್‌ಗಳಿಗೆ ಆಲೌಟ್ ಆಯಿತು. ಅಥರ್ವ್ ಥೈಡೆ 23 ರನ್ ಗಳಿಸಿದರೆ, ಯಶ್ ರಾಥೋಡ್ 27 ರನ್ ಗಳಿಸಿದರು. ದವಲ್ ಕುಲಕರ್ಣಿ, ಶಂಸ್‌ ಮುಲಾನಿ, ತನುಶ್ ಕೊಟ್ಯಾನ್ ತಲಾ ಮೂರು ವಿಕೆಟ್ ಪಡೆದರು.

ಬೃಹತ್ ಮುನ್ನಡೆ ಸಾಧಿಸಿದ ಮುಂಬೈ

119 ರನ್‌ಗಳ ಮುನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಬ್ಯಾಟಿಂಗ್ ಮಾಡಿದ ಮುಂಬೈ 418 ರನ್ ಗಳಿಸಿತು. ಈ ಮೂಲಕ 537 ರನ್‌ಗಳ ಬೃಹತ್ ಗುರಿಯನ್ನು ವಿದರ್ಭ ತಂಡಕ್ಕೆ ನೀಡಿತು. ಮುಂಬೈ ಪರವಾಗಿ ಎರಡನೇ ಇನ್ನಿಂಗ್ಸ್‌ನಲ್ಲಿ ಮುಷೀರ್ ಖಾನ್ 136 ರನ್ ಗಳಿಸುವ ಮೂಲಕ ಮಿಂಚಿದರು. ನಾಯಕ ಅಜಿಂಕ್ಯ ರಹಾನೆ 73 ರನ್, ಶ್ರೇಯಸ್ ಅಯ್ಯರ್ 95 ರನ್ ಗಳಿಸಿದರೆ, ಶಂಸ್ ಮುಲಾನಿ 50 ರನ್‌ಗಳ ಉಪಯುಕ್ತ ಕಾಣಿಕೆ ನೀಡಿದರು.

ಹೋರಾಡಿ ಸೋತ ವಿದರ್ಭ

ಬೃಹತ್ ಮೊತ್ತದ ಗುರಿಯನ್ನು ಬೆನ್ನತ್ತಿದ ವಿದರ್ಭ ಗೆಲುವಿಗಾಗಿ ಹೋರಾಟ ನೀಡಿತು. ಕರುಣ್ ನಾಯರ್ 74 ರನ್ ಗಳಿಸಿದರೆ, ನಾಯಕ ಅಕ್ಷಯ್ ವಾಡ್ಕರ್ 102 ರನ್ ಗಳಿಸಿದರು, ಹರ್ಷ್ ದುಬೆ 65 ರನ್ ಗಳಿಸುವ ಮೂಲಕ ಮುಂಬೈ ಬೌಲರ್ ಗಳನ್ನು ಎದುರಿಸಿದರು. ಆದರೆ, ಅಂತಿಮವಾಗಿ ವಿದರ್ಭ ಎರಡನೇ ಇನ್ನಿಂಗ್ಸ್‌ನಲ್ಲಿ 368 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಸೋಲೊಪ್ಪಿಕೊಂಡಿತು.

ತನುಷ್ ಕೊಟ್ಯಾನ್ 4 ವಿಕೆಟ್ ಪಡೆದರೆ, ತುಷಾರ್ ದೇಶಪಾಂಡೆ ಮತ್ತು ಮುಶೀರ್ ಖಾನ್ ತಲಾ ಎರಡು ವಿಕೆಟ್ ಪಡೆದರು. ಧವಲ್ ಕುಲಕರ್ಣಿ ಮತ್ತು ಶಂಸ್ ಮುಲಾನಿ ತಲಾ ಒಂದು ವಿಕೆಟ್ ಪಡೆದುಕೊಂಡರು. ಶತಕ ಗಳಿಸಿ, 2 ವಿಕೆಟ್ ಪಡೆದ ಮುಶೀರ್ ಖಾನ್ ಪಂದ್ಯ ಶ್ರೇಷ್ಠ ಆಟಗಾರ ಪ್ರಶಸ್ತಿ ಪಡೆದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+