Get Updates
Get notified of breaking news, exclusive insights, and must-see stories!

Air India: ಹಾರಾಟ ನಿಲ್ಲಿಸಿದ ಆಕಾಶದ ರಾಣಿ: ಐಶಾರಾಮಿ ವಿಮಾನದ ಬಗ್ಗೆ ಇಲ್ಲಿದೆ ಇಂಟ್ರಸ್ಟಿಂಗ್ ಮಾಹಿತಿ

ಆಕಾಶದಲ್ಲಿ ಬಹು ವರ್ಷಗಳ ಕಾಲ ಮಹಾರಾಣಿಯಂತೆ ಮೆರೆದ ವಿಮಾನೊಂದು ತನ್ನ ಹಾರಾಟವನ್ನು ನಿಲ್ಲಿಸಿದೆ. ಏರ್‌ ಇಂಡಿಯಾದ ಐಕಾನಿಕ್‌ ಜಂಬೋ ಜೆಟ್‌ ಬೋಯಿಂಗ್‌ 747 ಕೊನೆಯ ಹಾರಟವನ್ನು ನಡೆಸಿತು. ಈ ವಿಮಾನ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೆಳಗ್ಗೆ 10.47ಕ್ಕೆ ತನ್ನ ಕೊನೆಯ ಹಾರಾಟವನ್ನು ನಡೆಸಿತು.

ಹಲವು ವರ್ಷಗಳ ಕಾಲಾ ಈ ದೇಶದಿಂದ ಬೇರೆ ದೇಶಕ್ಕೆ ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ಏರ್‌ ಇಂಡಿಯಾದ ಐಕಾನಿಕ್‌ ಜಂಬೋ ಜೆಟ್‌ ನಿವೃತ್ತಿ ಪಡೆದಿದೆ. ದೇಶದ ಒಳಗೆ ಮತ್ತು ಹೊರಗೆ ಬಹುತೇಕ ಎಲ್ಲಾ ಸೇವೆಗಳಲ್ಲಿ ಇದನ್ನು ಬಳಸಲಾಗುತ್ತಿತ್ತು. ಹೆಚ್ಚಿನ ಸ್ಥಳಾವಕಾಶದ ಕಾರಣ, ಇದು ದೂರದ ಪ್ರಯಾಣಕ್ಕೆ ಹೆಚ್ಚು ಸೂಕ್ತವಾಗಿತ್ತು. ವಿಮಾನದಲ್ಲಿದ್ದ ಪೈಲಟ್ ವಿಂಗ್ ವೇವ್ ಅನ್ನು ಪ್ರದರ್ಶಿಸಿದರು, ವಿಮಾನವು ನಿವೃತ್ತಿ ವಯಸ್ಸನ್ನು ತಲುಪಿದಾಗ ಆಕಾಶದಲ್ಲಿ ಈ ರೀತಿ ಮಾಡುವುದು ವಿಶಿಷ್ಟವಾದ ಸೂಚಕವಾಗಿದೆ.

Air India s Last Boeing 747 Bids Farewell to Mumbai Airport with Wing Wave Maneuver

ಆಕಾಶದ ರಾಣಿ ಬೋಯಿಂಗ್ 747 ವಿಮಾನವನ್ನು ರಾಷ್ಟ್ರಪತಿ, ಪ್ರಧಾನ ಮಂತ್ರಿ ಮತ್ತು ಉಪಾಧ್ಯಕ್ಷರಂತಹ ಉನ್ನತ ಗಣ್ಯರು ಸಹ ಬಳಸುತ್ತಿದ್ದರು. ಏರ್‌ ಇಂಡಿಯಾ ತನ್ನ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಪೋಸ್ಟ್ ಮಾಡಿದೆ. ಇಂದು ನಾವು ಮುಂಬೈನಿಂದ ಹೊರಡುವ ನಮ್ಮ ಕೊನೆಯ 'ಕ್ವೀನ್ ಆಫ್ ದಿ ಸ್ಕೈ' B747 ಗೆ ವಿದಾಯ ಹೇಳುತ್ತಿದ್ದೇವೆ ಎಂದು ಏರ್ ಇಂಡಿಯಾ ಪೋಸ್ಟ್‌ನಲ್ಲಿ ಬರೆದಿದೆ. ಐಷಾರಾಮಿ ವಿಮಾನಗಳ ಯುಗವು ಕೊನೆಗೊಳ್ಳಲಿದೆ ಎಂದು ಪೋಸ್ಟ್‌ನಲ್ಲಿ ಬರೆಯಲಾಗಿದೆ.

ಇನ್ನು ಎರಡು ವಿಮಾನಗಳು ಹಾರುವ ಸ್ಥಿತಿಯಲ್ಲಿಲ್ಲ. 2022 ರಲ್ಲಿ ಈ ವಿಮಾನಗಳ ನೋಂದಣಿ ರದ್ದುಗೊಂಡ ಜೆಟ್‌ಗಳನ್ನು ವಿಲೇವಾರಿ ಮಾಡಲು ಏರ್ ಇಂಡಿಯಾ ಯುಕೆ ಮೂಲದ ರೀಮಾರ್ಕೆಟಿಂಗ್ ಸಂಸ್ಥೆ ಸ್ಕೈಟೆಕ್ ಎಐಸಿಯನ್ನು ನೇಮಿಸಿತ್ತು.

ಮೊದಲ ಹಾರಾಟ ಯಾವಗ?

ಬೋಯಿಂಗ್‌ನ ಮೊದಲ 747 ವಿಮಾನವು 1968 ರಲ್ಲಿ ಸಿದ್ಧವಾಗಿತ್ತು. ಈ ವಿಮಾನದ ಪರೀಕ್ಷೆಯ ನಂತರ 9 ಫೆಬ್ರವರಿ 1969 ರಂದು ತನ್ನ ಮೊದಲ ಹಾರಾಟವನ್ನು ನಡೆಸಿತು. DGCA ಪ್ರಕಾರ, ಮೊದಲ ಬೋಯಿಂಗ್ 747 ವಿಮಾನವನ್ನು ಮಾರ್ಚ್ 22, 1971 ರಂದು ಏರ್ ಇಂಡಿಯಾಕ್ಕೆ ವಿತರಿಸಲಾಗಿತ್ತು.

ಏನು ವಿಶೇಷತೆ?

ಇದರಲ್ಲಿ 16 ಪ್ರಥಮ ದರ್ಜೆ ಸೀಟುಗಳು ಮತ್ತು 40 ಬಿಸಿನೆಸ್ ಕ್ಲಾಸ್ ಸೀಟುಗಳಿದ್ದವು. ಈ ವಿಮಾನವನ್ನು ಮೂರು ಜನರು ಒಟ್ಟಿಗೆ ಹಾರಿಸುತ್ತಾರೆ. ಮೊದಲನೆಯದು ಕ್ಯಾಪ್ಟನ್, ಎರಡನೆಯದು ಫ್ಲೈಟ್ ಆಫೀಸರ್ ಮತ್ತು ಮೂರನೆಯದು ಫ್ಲೈಟ್ ಇಂಜಿನಿಯರ್.

ಈ ವಿಮಾನವನ್ನು ಏನು ಮಾಡಲಾಗುತ್ತದೆ

ಬೋಯಿಂಗ್ 747 ವಿಮಾನಗಳಲ್ಲಿ ಒಂದು ಸೋಮವಾರ ಮುಂಬೈ ವಿಮಾನ ನಿಲ್ದಾಣದಿಂದ ಟೇಕಾಫ್ ಆಗಿತ್ತು. ಇನ್ನೊಂದು ಶೀಘ್ರದಲ್ಲೇ ಭಾರತದಿಂದ ತನ್ನ ಅಂತಿಮ ಹಾರಾಟವನ್ನು ನಡೆಸುವ ಸಾಧ್ಯತೆ ಇದೆ. ಒಂದು ವಿಮಾನವನ್ನು ಏರ್‌ ಇಂಡಿಯಾ ವಿದೇಶ ಕಂಪನಿಗೆ ಮಾರಟ ಮಾಡಿದೆ. ಈ ಕಂಪನಿಗಳು ಈ ವಿಮಾನವನ್ನು ಕಾರ್ಗೊ ಸರ್ವಿಸ್‌ಗಾಗಿ ಬಳಸುವ ಸಂಭವವಿದೆ.

ಉಳಿದ ಎರಡು ಏರ್‌ ಇಂಡಿಯಾ ಬೋಯಿಂಗ್ 747 ವಿಮಾನಗಳನ್ನು ಮುಂಬೈನಲ್ಲಿ ಬಿಡಿಭಾಗಗಳನ್ನಾಗಿ (disassembled) ಮಾಡಲಾಗುವುದು. ಈ ವಿಮಾನದಲ್ಲಿನ ಬಿಡಿಭಾಗಗಳಲ್ಲಿ ಮರು ಬಳಕೆ ಮಾಡುವ ಪ್ರಕ್ರಿಯೆ ನಡೆಸಲಾಗುವುದು. ವಿಮಾನಗಳಲ್ಲಿ ಸುಮಾರು 800 ರಿಂದ ಸಾವಿರ ಮರುಬಳಕೆ ಮಾಡಬಹುದಾದಾ ಭಾಗಗಳು ಇರುತ್ತವೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+