RCB Vs SRH: ಐಪಿಎಲ್‌ನಲ್ಲಿ ಮತ್ತೊಂದು ದಾಖಲೆ ಬರೆದ ಆರ್‌ಸಿಬಿ
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಹಲವು ದಾಖಲೆ ಬರೆದಿರುವ ಆರ್‌ಸಿಬಿ ಈಗ ಮತ್ತೊಂದು ಹೊಸ ದಾಖಲೆ ಬರೆದಿದೆ. ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ ಈ ದಾಖಲೆ ಮಾಡಿದೆ. ಇದು ಆರ್‌ಸಿಬಿಯ 250ನೇ ಐಪಿಎಲ್ ಪಂದ್ಯವಾಗಿದೆ.
ಐಪಿಎಲ್‌ನಲ್ಲಿ 250 ಪಂದ್ಯಗಳನ್ನಾಡಿರುವ ಎರಡನೇ ತಂಡ ಎನ್ನುವ ಹೆಗ್ಗಳಿಕೆ ಆರ್‌ಸಿಬಿಯದ್ದಾಗಿದೆ. ಮುಂಬೈ ಇಂಡಿಯನ್ಸ್ ಮಾತ್ರ ಈ ಸಾಧನೆ ಮಾಡಿರುವ ಮೊದಲ ತಂಡವಾಗಿದೆ. ಮುಂಬೈ ಇಂಡಿಯನ್ಸ್ 255 ಪಂದ್ಯಗಳನ್ನಾಡಿದ್ದು, ಐಪಿಎಲ್‌ನಲ್ಲಿ ಹೆಚ್ಚು ಪಂದ್ಯಗಳನ್ನಾಡಿರುವ ತಂಡ ಎನಿಸಿಕೊಂಡಿದೆ.

17 ವರ್ಷಗಳಿಂದ ಐಪಿಎಲ್‌ನಲ್ಲಿ ಹಲವು ದಾಖಲೆಗಳನ್ನು ಬರೆದಿರುವ ಆರ್‌ಸಿಬಿ, ಅಪಾರ ಅಭಿಮಾನಿ ಬಳಗವನ್ನು ಹೊಂದಿದೆ. ಅನಿಲ್ ಕುಂಬ್ಳೆ, ರಾಹುಲ್ ದ್ರಾವಿಡ್, ರಾಸ್ ಟೇಲರ್, ಕ್ರಿಸ್ ಗೇಲ್, ಎಬಿ ಡಿವಿಲಿಯರ್ಸ್, ವಿರಾಟ್ ಕೊಹ್ಲಿ ಅವರಂತಹ ದಿಗ್ಗಜ ಆಟಗಾರರು ಆರ್‌ಸಿಬಿ ತಂಡವನ್ನು ಪ್ರತಿನಿಧಿಸಿದ್ದಾರೆ. ಐಪಿಎಲ್ ಆರಂಭದಿಂದ ಇದುವರೆಗೂ ವಿರಾಟ್ ಕೊಹ್ಲಿ ಆರ್‌ಸಿಬಿ ತಂಡಕ್ಕಾಗಿ ಆಡಿದ್ದಾರೆ.
ಹಲವು ದಾಖಲೆಗಳು
ಮೂರು ಬಾರಿ ಫೈನಲ್ ಪ್ರವೇಶಿಸಿದರೂ ಕಪ್ ಗೆಲ್ಲುವಲ್ಲಿ ವಿಫಲವಾಗಿರುವ ಆರ್‌ಸಿಬಿ ಐಪಿಎಲ್ ಇತಿಹಾಸದಲ್ಲಿ ಹಲವು ದಾಖಲೆಗಳನ್ನು ಬರೆದಿದೆ. 263 ಈ ಆವೃತ್ತಿಗಿಂತ ಮೊದಲು ಐಪಿಎಲ್‌ನ ಅತಿ ಹೆಚ್ಚು ಸ್ಕೋರ್ ಆರ್‌ಸಿಬಿ ಹೆಸರಿನಲ್ಲಿತ್ತು, 49 ರನ್‌ಗಳಿಗೆ ಆಲೌಟ್ ಆಗಿದ್ದು, ಅತಿ ಕಡಿಮೆ ರನ್ ಗಳಿಸಿರುವ ತಂಡ ಕೂಡ ಎನ್ನುವ ದಾಖಲೆ ಆರ್‌ಸಿಬಿ ಹೆಸರಿನಲ್ಲಿದೆ.
ಐಪಿಎಲ್‌ನಲ್ಲಿ 175 ರನ್ ಗಳಿಸಿರುವ ಕ್ರಿಸ್ ಗೇಲ್ ಅವರ ದಾಖಲೆ ಇನ್ನೂ ಯಾರು ಮುರಿಯಲು ಆಗಿಲ್ಲ. ಅತಿ ವೇಗವಾಗಿ 200 ರರನ್ ಗಳಿಸಿದ ದಾಖಲೆ ಕೂಡ ಆರ್‌ಸಿಬಿ ಹೆಸರಿನಲ್ಲಿದೆ. ಐಪಿಎಲ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ವಿರಾಟ್ ಕೊಹ್ಲಿ ಹೆಸರಿನಲ್ಲಿದೆ.
ಹಲವು ದಾಖಲೆ, ಅಪಾರ ಅಭಿಮಾನಿಗಳ ಬೆಂಬಲ ಹೊಂದಿದ್ದರೂ ಕಪ್ ಗೆಲ್ಲದೇ ಇರುವುದು ತಂಡದ ದೊಡ್ಡ ಕೊರತೆಯಾಗಿದೆ. ಮುಂದಿನ ವರ್ಷವಾದರೂ ಉತ್ತಮ ತಂಡದೊಂದಿಗೆ ಆಡಿ ಕಪ್ ಗೆಲ್ಲಲಿ ಎನ್ನುವ ಆಸೆ ಅಭಿಮಾನಿಗಳದ್ದಾಗಿದೆ.
2024ರಲ್ಲಿ ಕಳಪೆ ಪ್ರದರ್ಶನ
2024ರ ಆವೃತ್ತಿಯಲ್ಲಿ ಆರ್‌ಸಿಬಿ ನಿರೀಕ್ಷೆ ಮಾಡಿದ ಪ್ರದರ್ಶನ ನೀಡಿಲ್ಲ. ಇದುವರೆಗೂ ಆಡಿರುವ 8 ಪಂದ್ಯಗಳಲ್ಲಿ 7 ರಲ್ಲಿ ಸೋತು ಒಂದು ಪಂದ್ಯವನ್ನು ಮಾತ್ರ ಗೆದ್ದಿದೆ. ಉಳಿದ 6 ಪಂದ್ಯಗಳಲ್ಲಿ ಗೆಲುವು ಸಾಧಿಸಿದರೂ ಪ್ಲೇ ಆಫ್ ಪ್ರವೇಶಿಸುವುದು ಕಷ್ಟವಾಗಿದೆ.
ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ 35 ರನ್‌ಗಳ ಗೆಲುವು ಸಾಧಿಸುವ ಮೂಲಕ 250ನೇ ಪಂದ್ಯವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸ್ಮರಣೀಯವಾಗಿಸಿದೆ. ರಜತ್ ಪಟಿದಾರ್, ಕೊಹ್ಲಿ ಶತಕ ಮತ್ತು ಕ್ಯಾಮೆರಾನ್ ಗ್ರೀನ್ ಅವರ ಆಲ್‌ರೌಂಡರ್ ಪ್ರದರ್ಶನದಿಂದ ಈ ಐಪಿಎಲ್‌ನ ಎರಡನೇ ಗೆಲುವು ಸಾಧಿಸುವಲ್ಲಿ ಆರ್ ಸಿಬಿ ಯಶಸ್ವಿಯಾಯಿತು.












Click it and Unblock the Notifications