Karnataka Lok Sabha Election 2024: ಮತಗಟ್ಟೆಗಳಲ್ಲಿ ಮೊಬೈಲ್ ಫೋನ್ ನಿಷೇಧ!
ಬೆಂಗಳೂರು ಏಪ್ರಿಲ್ 25: ಕರ್ನಾಟಕದ 14 ಕ್ಷೇತ್ರಗಳಿಗೆ ಏಪ್ರಿಲ್ 26ರಂದು ಮತದಾನ ನಡೆಯಲಿದ್ದು ಈ ನಡುವೆ ಚುನಾವಣಾ ಆಯೋಗ ಆದೇಶವೊಂದನ್ನು ಹೊರಡಿಸಿದೆ. ಮತಗಟ್ಟೆಗಳಿಗೆ ಮತದಾರರು ಮೊಬೈಲ್ ಫೋನ್‌ಗಳನ್ನು ತೆಗೆದುಕೊಂಡು ಹೋಗದಂತೆ ಮತದಾರರಿಗೆ ಚುನಾವಣಾ ಆಯೋಗ ಆದೇಶಿಸಿದೆ.
ಹೌದು... ಕಳೆದ ಬಾರಿ ಕರ್ನಾಟಕ ವಿಧಾನಸಭಾ ಚುನಾವಣೆ ವೇಳೆ ಮತಗಟ್ಟೆಗಳಲ್ಲಿ ಕೆಲ ಕಿಡಿಗೇಡಿಗಳು ಮತಚಲಾವಣೆ ವೇಳೆ ಫೋಟೋ ಕ್ಲಿಕ್ಕಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ಜೊತೆಗೆ ತಮ್ಮಂತೆ ಇದೇ ಪಕ್ಷಕ್ಕೆ ಮತ ನೀಡಿ ಎಂದು ಪ್ರಚಾರ ಮಾಡಿದ್ದರು. ಇದು ಭಾರೀ ಆಕ್ರೋಶಕ್ಕೆ ಗುರಿಯಾಗಿತ್ತು.

ಈ ಬಾರಿ ಇಂತಹ ಘಟನೆಗಳನ್ನು ತಪ್ಪಿಸಲು ಮತಗಟ್ಟೆಗಳಲ್ಲಿ ಮೊಬೈಲ್ ಫೋನ್ ನಿಷೇಧಿಸಲಾಗಿದೆ. ಯಾವುದೇ ಮೊಬೈಲ್ ಫೋನ್‌ಗಳನ್ನು ಹಾಗೂ ಎಲೆಕ್ಟ್ರಾನಿಕ್ ವಸ್ತುಗಳನ್ನು ಮತಗಟ್ಟೆಯ ಒಳಗೆ ಮತದಾರರು ತೆಗೆದುಕೊಂಡು ಹೋಗುವಂತಿಲ್ಲ. ವೈರ್‌ಲೆಸ್ ಉಪಕರಣಗಳನ್ನು ಕೊಂಡೊಯ್ಯುವಂತಿಲ್ಲ. ಮತಗಟ್ಟೆಗಳಲ್ಲಿ ಕರ್ತವ್ಯದಲ್ಲಿರುವ ಸಿಬ್ಬಂದಿಗಳಿಗೆ ಮಾತ್ರ ಮೊಬೈಲ್ ಫೋನ್ ತೆಗೆದುಕೊಂಡು ಹೋಗಲು ಅವಕಾಶ ಇರುತ್ತದೆ.

ಮತದಾರರು ಕೆಲ ದಾಖಲೆಗಳನ್ನು ತಮ್ಮ ಬಳಿ ಇಟ್ಟುಕೊಳ್ಳುವುದು ಸೂಕ್ತ. ಮತದಾನ ಚೀಟಿ ಅಲ್ಲದೆ, ಪ್ಯಾನ್ ಕಾರ್ಡ್, ಆಧಾರ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್ ಇವೆಲ್ಲವೂ ಇದ್ದರೆ ಉತ್ತಮ. ನಿಮ್ಮ ಮತದಾನ ಚೀಟಿಯಲ್ಲಿ ವ್ಯತ್ಯಾಸ ಅಥವಾ ಸಮಸ್ಯೆಗಳು ಕಂಡು ಬಂದರೆ ಈ ದಾಖಲೆಗಳು ನಿಮಗೆ ಬೇಕಾಗಾಬಹುದು. ಆದರೆ ಇದರ ಯಾವುದೇ ದಾಖಲೆಗಳ ಫೋಟೋ ಅಥವಾ ಸ್ಕ್ರೀನ್ ಶಾಟ್ ಇಟ್ಟುಕೊಮಡು ಮತಗಟ್ಟೆಯ ಒಳಗೆ ಹೋಗುವಂತಿಲ್ಲ.












Click it and Unblock the Notifications