Aishwarya Rai: ವಿಚ್ಛೇದನ ವದಂತಿಗೆ ಬ್ರೇಕ್; ಒಟ್ಟಾಗಿ ಹೋಳಿ ಹಬ್ಬ ಆಚರಿಸಿದ ಐಶ್ವರ್ಯಾ ರೈ-ಅಭಿಷೇಕ್ ಬಚ್ಚನ್
ಮುಂಬೈ, ಮಾರ್ಚ್ 25: ಬಾಲಿವುಡ್ ಸೆಲಬ್ರಿಟಿಗಳಲ್ಲಿ ಪ್ರಮುಖ ಜೋಡಿಯಾಗಿರುವ ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ಜೋಡಿಯ ಬಗ್ಗೆ ವಿಧ ವಿಧದ ಸುದ್ದಿಗಳು ಬರುತ್ತಲೇ ಇವೆ. ಇಬ್ಬರು ಬೇರೆಯಾಗಿದ್ದಾರೆ. ಈ ಜೋಡಿ ಡೈವೋರ್ಸ್ ಪಡೆಯಲಿದ್ದಾರೆ. ಈಗಾಗಲೇ ಬೇರೆ ಬೇರೆ ಮನೆಯಲ್ಲಿ ವಾಸಿಸುತ್ತಿದ್ದಾರೆ ಎಂಬ ವರದಿಗಳು ಬರುತ್ತಲೇ ಇವೆ. ಆದರೆ, ಅದೆಲ್ಲದಕ್ಕೂ ಬ್ರೇಕ್ ಬಿದ್ದಿದೆ.
ಹೌದು... ಬಚ್ಚನ್ ಕುಟುಂಬ ಬಾಲಿವುಡ್‌ನ ಹೆಸರಾಂತ ಕುಟುಂಬ. ಇದೇ ಕಾರಣಕ್ಕೆ ಒಂದು ಚಿಕ್ಕ ಘಟನೆಗಳು ಕೂಡ ಹೆಚ್ಚು ಸುದ್ದಿಯಾಗುತ್ತದೆ. ಇತ್ತೀಚೆಗೆ ಐಶ್ವರ್ಯ ರೈ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್ ದಾಂಪತ್ಯದಲ್ಲಿ ಬಿರುಕು ಉಂಟಾಗುತ್ತಿದೆ ಎಂಬ ವದಂತಿ ಹಲವು ತಿಂಗಳುಗಳಿಂದಲೂ ವರದಿಯಾಗುತ್ತಲೆ ಇದೆ. ಇದರ ಬೆನ್ನಲ್ಲೇ ಬಚ್ಚನ್ ಕುಟುಂಬ ಈ ವರ್ಷ ಹೋಲಿಕಾ ದಹನ್ ಕಾರ್ಯಕ್ರಮವನ್ನು ಅದ್ಧೂರಿಯಾಗಿ ನಡೆದಿದೆ.

ಹೋಳಿಗಾಗಿ ಒಂದಾದ ಬಚ್ಚನ್ ಕುಟುಂಬ
ಬಚ್ಚನ್ ಕುಟುಂಬದ ಮುಂಬೈನ ಮನೆ ಪ್ರತೀಕ್ಷಾದಲ್ಲಿ ಹೋಳಿ ಹಬ್ಬ ಸಂಭ್ರಮದಿಂದ ನಡೆದಿದೆ. ಹಬ್ಬದ ಫೋಟೋಗಳನ್ನು ಅಭಿಷೇಕ್ ಬಚ್ಚನ್ ಮತ್ತು ನವ್ಯಾ ನವೇಲಿ ನಂದಾ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಅಮಿತಾಬ್ ಬಚ್ಚನ್ ಕೂಡ ತಮ್ಮ ಬ್ಲಾಗ್‌ನಲ್ಲಿ ತಮ್ಮ ಕುಟುಂಬದೊಂದಿಗೆ ಹಬ್ಬವನ್ನು ಆಚರಿಸಿದ ಹಳೆಯ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಸದ್ಯದಲ್ಲಿ ಹೆಚ್ಚು ವದಂತಿಗಳು ಮಾಧ್ಯಮ ವರದಿಗಳ ಹೊರತಾಗಿಯೂ, ಅಮಿತಾಬ್ ಬಚ್ಚನ್ ಮತ್ತು ಜಯಾ ಬಚ್ಚನ್ ತಮ್ಮ ಕುಟುಂಬದ ಜಗಳಗಖು, ಮನಸ್ತಾಪಗಳನ್ನು ಉತ್ತಮವಾಗಿ ನಿರ್ವಹಿಸುತ್ತಾರೆ. ಯಾವುದೇ ವಿಷಯ ಹೊರಹೋಗದಂತೆ ಎಚ್ಚರ ವಹಿಸುತ್ತಾರೆ. ಎಷ್ಟು ಸಾಧ್ಯವೋ ಅಷ್ಟು ಎಲ್ಲರನ್ನು ಒಟ್ಟಾಗಿ ಗುಂಪುಗೂಡಿಸುವಲ್ಲಿ ಕಷ್ಟಪಡುತ್ತಾರೆ.
ಹೀಗಾಗಿಯೇ ಕುಟುಂಬದೊಳಗೆ ನಡೆಯುತ್ತಿರುವ ವಿವಾದಗಳ ವದಂತಿಗಳ ಹೊರತಾಗಿಯೂ, ಐಶ್ವರ್ಯ ರೈ ಬಚ್ಚನ್, ಅಭಿಷೇಕ್ ಬಚ್ಚನ್ ಮತ್ತು ಕುಟುಂಬದ ಉಳಿದವರು 'ಹೋಲಿಕಾ ದಹನ' ಆಚರಣೆ ಮಾಡಿದ್ದಾರೆ. ಇದರಲ್ಲಿ ಮುಖ್ಯವಾದದ್ದು ಜಯಾ ಬಚ್ಚನ್ ಮತ್ತು ಐಶ್ವರ್ಯಾ ರೈ ಹಲವು ವರ್ಷಗಳ ಬಳಿಕ ಮೊದಲ ಬಾರಿಗೆ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.

ನವ್ಯಾ ನಂದಾ ಪೋಟೋಗಳಲ್ಲಿ ಐಶ್ವರ್ಯಾ ರೈ
ನವ್ಯಾ ನಂದಾ ಅವರು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅವರ ಫೋಟೋಗಳಲ್ಲಿ ಅಭಿಷೇಕ್ ಬಚ್ಚನ್ ಕಾಣಿಸಿಕೊಂಡಿದ್ದಾರೆ. ಇದರ ಇನ್ನೊಂದು ಫೋಟೋದಲ್ಲಿ ನವ್ಯಾ ಮತ್ತು ಅಭಿಷೇಕ್ ಪರಸ್ಪರರ ಹಣೆಗೆ ಕುಂಕುಮ ಇಡುತ್ತಿದ್ದಾರೆ. ಈ ಫೋಟೋದಲ್ಲಿ ನಟಿ ಐಶ್ವರ್ಯಾ ರೈ ಕೂಡ ಹಣೆಯ ಮೇಲೆ ಕುಂಕುಮ ಇಟ್ಟುಕೊಂಡು ನಿಂತಿರುವುದು ಕಾಣಿಸುತ್ತಿದೆ. ಫೋಟೋದಲ್ಲಿ ಐಶ್ವರ್ಯಾ ರೈ ಬಿಳಿ ಮತ್ತು ಕಪ್ಪು ಬಣ್ಣದ ಡ್ರೆಸ್ ಧರಿಸಿದ್ದಾರೆ.
ಹಲವರು ಈ ಫೋಟೋದಲ್ಲಿ ನಟಿ ಐಶ್ವರ್ಯಾ ಕಾಣಿಸಿಕೊಂಡಿರುವುದನ್ನು ಗಮನಿಸಿದ್ದಾರೆ. "ಗೆಳೆಯರೇ 4 ನೇ ಚಿತ್ರವನ್ನು ನೋಡಿ, ನೀವು ಹಿಂಭಾಗದಲ್ಲಿ ಐಶ್ವರ್ಯಾ ಮತ್ತು ಆರಾಧ್ಯ ಅವರನ್ನು ನೋಡಬಹುದು.. ಸುಮ್ಮನ್ನೆ ಪ್ರಾಬ್ಲಂಗಳನ್ನು ಹುಡುಕುವುದನ್ನು ನಿಲ್ಲಿಸಿ" ಎಂದು ಕಾಮೆಂಟ್ ಮಾಡಿದ್ದಾರೆ.
ಹೋಳಿ ಹಬ್ಬದ ಪೋಸ್ಟ್ ಹಂಚಿಕೊಂಡ ನಟ ಅಭಿಷೇಕ್ ಬಚ್ಚನ್
ಇನ್ನು, ನಟ ಅಭಿಷೇಕ್ ಬಚ್ಚನ್ ಕೂಡ ಹೋಳಿ ಹಬ್ಬದ ಹಲವು ಫೋಟೋಗಳನ್ನು ಮತ್ತು ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಈ ಪೋಸ್ಟ್‌ಗೆ "ಹೋಲಿಕಾ ಎಲ್ಲಾ ಕೆಟ್ಟದ್ದನ್ನು ಸುಟ್ಟು ಹಾಕಲಿ. ಹೋಳಿ ಶುಭಾಶಯಗಳು!" ಎಂದಿದ್ದಾರೆ. ಆದರೆ, ಐಶ್ವರ್ಯಾ ರೈ ಜೊತೆಗೆ ಇರುವ ಫೋಟೋವನ್ನು ಹಂಚಿಕೊಂಡಿಲ್ಲ.












Click it and Unblock the Notifications