Bullet Train Update: ಬುಲೆಟ್ ರೈಲು ಕಾರಿಡಾರ್ ಬಿಗ್ ಅಪ್ಡೇಟ್: 10 ಅಂಶಗಳು ಹೀಗಿವೆ
ಬೆಂಗಳೂರು, ಫೆಬ್ರವರಿ 15: ಭಾರತದಲ್ಲಿ ಬುಲೆಟ್ ಟ್ರೈನ್ ಓಡಿಸಲು ಕೇಂದ್ರ ಬಿಜೆಪಿ ಸರ್ಕಾರ ಸಜ್ಜಾಗಿದೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮತ್ತೊಂದು ಭಾರಿ ಪ್ರಧಾನಿ ನರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದಲ್ಲಿ, ಭಾರತೀಯ ರೈಲ್ವೆಯ ಮತ್ತೊಂದು ಸಮೀಕ್ಷೆಯ ಭರವಸೆ ಈಡೇರುತ್ತದೆ.
ಈ ಕುರಿತು ಟ್ವೀಟ್ ಮಾಡಿರುವ ಭಾರತೀಯ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು "ಮೋದಿ 3.0' ನಲ್ಲಿ #BulletTrain ಹಾಕಿ ಟ್ವೀಟ್ ಮಾಡಿದ್ದಾರೆ. ಮತ್ತೊಂದು ಭಾರಿ ಅಧಿಕಾರಕ್ಕೆ ಬಂದಲ್ಲಿ ಬುಲೆಟ್ ಟ್ರೈನ್ ಕನಸು ನನಸಾಗಲಿದೆ ಎಂದು ಅವರು ತಿಳಿಸಿದ್ದಾರೆ.

2021ರ ನವೆಂಬರ್ ನಲ್ಲಿ ಬುಲೆಟ್ ಟ್ರೈನ್ ಕೆಲಸ ಪ್ರಾರಂಭವಾದಾಗಿನಿಂದ ''ಮುಂಬೈ-ಅಹಮದಾಬಾದ್'' (Mumbai-Ahmedabad Bullet Train) ಕಾರಿಡಾರ್ ನಿರ್ಮಾಣ ಕೆಲಸ ತಡೆಯಿಲ್ಲದಂತೆ ಪ್ರಗತಿಯತ್ತ ಸಾಗುತ್ತಿದೆ. 2023ರಲ್ಲೂ ರೈಲ್ವೇ ಸಚಿವರು ಭಾರತದ ಮೊದಲ ಬುಲೆಟ್ ರೈಲು ವಿಭಾಗ-ಗುಜರಾತ್‌ನ ಬಿಲಿಮೋರಾ ಮತ್ತು ಸೂರತ್ ನಡುವಿನ 50 ಕಿಮೀ ವಿಸ್ತರಣೆ 2026 ರ ಆಗಸ್ಟ್ ತಿಂಗಳಲ್ಲಿ ಪೂರ್ಣಗೊಳಿಸಲಿದ್ದೇವೆ ಎಂದು ಮಾಹಿತಿ ನೀಡಿದರು.
ಬುಲೆಟ್ ರೈಲು ಸಂಖ್ಯೆ ಏರಿಕೆ
ಎಲ್ಲವು ಅಂದುಕೊಂಡಂತೆ ನೆರವೇರಿದರೆ ಭಾರತೀಯ ರೈಲ್ವೇಯು ಪ್ರತಿನಿತ್ಯ ಅಂದಾಜು 70 ಟ್ರಿಪ್‌ಗಳೊಂದಿಗೆ 35 ಬುಲೆಟ್ ರೈಲುಗಳನ್ನು ಓಡಿಸಲಿದೆ. ಇದು 2050ರ ಹೊತ್ತಿಗೆ 105 ರೈಲುಗಳ ಸಂಖ್ಯೆಗೆ ಏರಿಕೆ ಮಾಡುವ ಯೋಚನೆ ಇದೆ. ಇನ್ನೂ ವಾರ್ಷಿಕವಾಗಿ ಸುಮಾರು 1.6 ಕೋಟಿ ಜನರು ಪ್ರಯಾಣಿಸುವ ಸಾಧ್ಯತೆ ಇದೆ ಎಂದು ಸಚಿವರ ಭವಿಷ್ಯದ ಲೆಕ್ಕ ನೀಡಿದ್ದಾರೆ.
सपने नहीं हकीकत बुनते हैं!
— Ashwini Vaishnaw (@AshwiniVaishnaw) February 12, 2024
Stay tuned for #BulletTrain in Modi 3.0!#ModiKiGuarantee pic.twitter.com/0wEL5UvaY8
'ಬುಲೆಟ್ ಟ್ರೈನ್' ಕಾರಿಡಾರ್: ವೈಶಿಷ್ಟ್ಯಗಳ 10 ಅಂಶಗಳು
* ಉದ್ದೇಶಿತ ಮುಂಬೈ ಮತ್ತು ಅಹಮದಾಬಾದ್ ಮಧ್ಯೆ 508 ಕಿಮೀ ದೂರವನ್ನು 'ಬುಲೆಟ್ ರೈಲು' ಗಂಟೆಗೆ ಗರಿಷ್ಠ 320 ಕಿಮೀ ವೇಗದಲ್ಲಿ ಕ್ರಮಿಸುವ ಸಾಧ್ಯತೆ ಇದೆ.

* ಬುಲೆಟ್ ರೈಲು ಪ್ರಯಾಣದ ಸಮಯವನ್ನು ಕೇವಲ 2 ಗಂಟೆಗಳಿಗೆ ಇಳಿಸುವ ನಿರೀಕ್ಷೆಗಳು ಇವೆ.
* ಬುಲೆಟ್ ರೈಲು ಮಾರ್ಗಕ್ಕಾಗಿ 24 ನದಿ ಸೇತುವೆಗಳು, 28 ಉಕ್ಕಿನ ಸೇತುವೆಗಳು ಮತ್ತು 7 ಪರ್ವತ ಸುರಂಗಗಳ ಮೇಲೆ ಸಂಚರಿಸಲಿದೆ.
* ಕೇಂದ್ರ ರೈಲ್ವೆ ಸಚಿವರು ಹಂಚಿಕೊಂಡ ವೀಡಿಯೋದಲ್ಲಿ 'ಈ ಕಾರಿಡಾರ್ ಸ್ಲ್ಯಾಬ್ ಟ್ರ್ಯಾಕ್ ಸಿಸ್ಟಮ್' ಒಳಗೊಂಡಿರಲಿದೆ ಎಂಬುದು ಗೊತ್ತಾಗುತ್ತದೆ. ಭಾರತದಲ್ಲಿ ಇದೇ ಮೊದಲ ಬಾರಿಗೆ ಇಂತದ್ದೊಂದು ತಂತ್ರಜ್ಞಾನ ಬಳಕೆ ಆಗಿದೆ ಎಂದು ತಿಳಿದು ಬಂದಿದೆ.
* ಬುಲೆಟ್ ಟ್ರೈನ್ ಕಾರಿಡಾರ್ ಕೂಡ ಭೂಕಂಪ ಸಂಭವಿಸುವುದಿದ್ದರೆ, ಅದನ್ನು ಆರಂಭಿಕ ಪತ್ತೆ ಮಾಡುವ ವ್ಯವಸ್ಥೆಯನ್ನು ಒಳಗೊಂಡಿರಲಿದೆ.
* ಇನ್ನೂ ಈ ಯೋಜನೆಯ ವೆಚ್ಚವು ಅಂದಾಜು ₹1.08 ಲಕ್ಷ ಕೋಟಿಯಾಗಿದೆ. ಇದರಲ್ಲಿ ಕೇಂದ್ರವು ₹10,000 ಕೋಟಿಗಳನ್ನು ನೀಡಲು ಬದ್ಧವಾಗಿದೆ. ಆದರೆ ಗುಜರಾತ್ ಮತ್ತು ಮಹಾರಾಷ್ಟ್ರ ತಲಾ ₹ 5,000 ಕೋಟಿಗಳನ್ನು ನೀಡುತ್ತವೆ.
* ಬುಲೆಟ್ ಟ್ರೈನ್ ಕಾರಿಡಾರ್ 7 ಕಿಲೋ ಮೀಟರ್ ಉದ್ದದ ಸಮುದ್ರದೊಳಗಿನ ಸುರಂಗವನ್ನು ಹೊಂದಿರುತ್ತದೆ
* ಕಾರಿಡಾರ್ 12 ಅತ್ಯಾಧುನಿಕ ರೈಲು ನಿಲ್ದಾಣಗಳನ್ನು ಸಹ ಒಳಗೊಂಡಿದೆ.
* ವಿಶ್ವ ದರ್ಜೆಯ 'ಇಂಜಿನಿಯರಿಂಗ್‌ನ ಅದ್ಭುತ" ಮತ್ತು "ಭಾರತದ ಭವಿಷ್ಯ" ಎಂದು ಈ ಯೋಜನೆಯನ್ನು ವೀಡಿಯೊ ವಿವರಿಸುತ್ತದೆ.
* ಉಳಿದ ಹಣವನ್ನು ಜಪಾನ್‌ನಿಂದ ಸಾಲದ ಮೂಲಕ ಕನಿಷ್ಠ 0.1 ಪ್ರತಿಶತ ಬಡ್ಡಿ ಸಹಿತ ಪಡೆಯಲು ನಿರ್ಧರಿಸಲಾಗಿದೆ.
ಪ್ರಧಾನಿ ಮೋದಿಯವರು ಮತ್ತೆ ಅಧಿಕಾರಕ್ಕೆ ಬಂದ ಬಳಿಕ ಈ ಬುಲೆಟ್ ಟ್ರೈನ್ ಯೋಜನೆಗೆ ಇನ್ನಷ್ಟು ವೇಗ ಸಿಗಬಹುದು ಎಂದು ನಿರೀಕ್ಷೆ ಮಾಡಲಾಗಿದೆ.












Click it and Unblock the Notifications