ದಸರೆಯ ಕವಿಗೋಷ್ಠಿಯಲ್ಲಿ ಕಿವುಡರಿಗೂ, ಮಾತು ಬಾರದವರಿಗೂ ಅವಕಾಶ

Posted By:
Subscribe to Oneindia Kannada

ಮೈಸೂರು, ಸೆಪ್ಟೆಂಬರ್ 4: ದಸರಾ ಕವಿಗೋಷ್ಠಿಯನ್ನು ಅರ್ಥಪೂರ್ಣವಾಗಿ ಆಚರಿಸಲು ಮತ್ತು ಸಾಹಿತ್ಯಾಸಕ್ತರನ್ನು ಹೆಚ್ಚು ಆಕರ್ಷಿಸಲು ವಿಶೇಷ ಕಾರ್ಯಕ್ರಮ ರೂಪಿಸಲು ಮೈಸೂರಿನಲ್ಲಿ ಭರದ ತಯಾರಿ ನಡೆದಿದೆ.

ಸೆ.21 ರಿಂದ ಮೈಸೂರು ದಸರಾ ಕುಸ್ತಿ ಪಂದ್ಯ ಆರಂಭ

ಈ ಬಾರಿಯ ದಸರೆ ಕವಿಗೋಷ್ಠಿಯಲ್ಲಿ ವಿಶೇಷವಾಗಿ ಸಮಾಜದ ಶೋಷಿತರು, ಅಸಹಾಯಕರು ಮಂಗಳಮುಖಿಯರು ಸೇರಿ ಇನ್ನಿತರ ವಲಯದವರಿಗಾಗಿ ವೇದಿಕೆ ಕಲ್ಪಿಸಲು ವಿಶೇಷ ಕವಿಗೋಷ್ಠಿ ನಡೆಸಲು ಮುಂದಾಗಿರುವುದು ವಿಶೇಷ. ಯುವ ಸಂಭ್ರಮ, ಯುವ ದಸರಾ ಇನ್ನಿತರ ಕಡೆಗೆ ಹೆಚ್ಚು ಒಲವು ತೋರುತ್ತಿರುವ ಕಾರಣ ಕವಿಗೋಷ್ಠಿಗಳಿಗೆ ಪ್ರೇಕ್ಷಕರ ಕೊರತೆ ಎದ್ದು ಕಾಣುವುದು ಮಾಮೂಲಿ.

Kavigoshti for deaf and dumb in Mysuru Dasara

ಅದರಲ್ಲೂ ಪ್ರಧಾನ ಕವಿಗೋಷ್ಠಿ ದಿನದಂದು ವೇದಿಕೆ ತುಂಬಲು ವಿದ್ಯಾರ್ಥಿಗಳು, ಸಾರವಜನಿಕರನ್ನು ಕರೆತಂದು ಕೂಡಿಸುವ ಪರಿಸ್ಥಿತಿ ಎದುರಾಗಿದೆ. ಇದನ್ನು ಮನಗಂಡಿರುವ ದಸರಾ ಕವಿಗೋಷ್ಠಿ ಉಪಸಮಿತಿ ಜನರನ್ನು ಆಕರ್ಷಿಸುವ ನಿಟ್ಟಿನಲ್ಲಿ ಈ ಬಾರಿ ವಿಶೇಷ ಮತ್ತು ಪ್ರಧಾನ ಕವಿಗೋಷ್ಠಿ ಸೇರಿ 4 ರೀತಿಯ ಕವಿಗೋಷ್ಠಿಗಳನ್ನು ಆಯೋಜಿಸಲು ರೂಪು -ರೇಷೆ ಸಿದ್ಧಪಡಿಸುವಲ್ಲಿ ನಿರತವಾಗಿದೆ.

ಸೆ. 24 ರಂದು ಮೂರು ಅಥವಾ ನಾಲ್ಕು ದಿನಗಳ ಕಾಲ ಕವಿಗೋಷ್ಠಿ ನಡೆಯಲಿದ್ದು, ಅದಕ್ಕಾಗಿ ಉಪ ಸಮಿತಿಯ ಕಾರ್ಯಾಧ್ಯಕ್ಷೆ ಡಾ. ಎನ್. ಕೆ. ಲೋಲಾಕ್ಷಿ ನೇತೃತ್ವದ ಸಮಿತಿಯು ಎಲ್ಲಾ ರೀತಿಯ ಸಿದ್ಧತೆ ಶುರು ಮಾಡಿದೆ. ಮೊದಲನೆಯದಾಗಿ ಪ್ರಾದೇಶಿಕ ಕವಿಗೋಷ್ಠಿ ನಡೆಯಲಿದ್ದು, ಮೈಸೂರು, ಚಾಮರಾಜನಗರ, ಮಂಡ್ಯ, ಹಾಸನ, ಕೊಡಗು ಜಿಲ್ಲೆಯ ಕವಿಗಳು ಭಾಗವಹಿಸಲಿದ್ದಾರೆ. ಎರಡನೆಯದಾಗಿ ವಿನೋದ ಮತ್ತು ವಿಡಂಬನಾತ್ಮಕ ಕವಿಗೋಷ್ಠಿ ನಡೆಯಲಿದ್ದು, ಹಿರಿಯ ಕವಿಗಳು, ಹಾಸ್ಯ ಕವಿಗಳು ತಮ್ಮ ಕವಿತೆ ವಾಚನ ಮಾಡಲಿದ್ದಾರೆ.

ವಿಶೇಷ ಕವಿಗೋಷ್ಠಿ
ಇದುವರೆಗೂ ವೇದಿಕಡ ಸಿಗದ ಹಾಗೂ ಕವಿಗೋಷ್ಠೀಯಲ್ಲಿ ತನ್ನ ಪ್ರತಿಭೆ ಹೊರ ಹಾಕದವರಿಗಾಗಿ ಕವನ ವಾಚಿಸಲು ಅನುವು ಮಾಡಿಕೊಡಲು ವಿಶೇಷ ಕವಿಗೋಷ್ಠಿ ನಡೆಯಲಿದೆ. ಸಮಾಜದ ಮುಖ್ಯವಾಃಇನಿಯಲ್ಲಿ ಕಾಣಿಸಿಕೊಳ್ಳದ ಶೋಷಿತರು, ಅಸಹಾಯಕರು, ದಿವ್ಯಾಂಗರು, ಮಂಗಳಮುಖಿಯರು, ಬುಡಕಟ್ಟು, ಕಲೆ, ಹಾಡುಗಾರಿಕೆಯಲ್ಲಿ ಪರಿಣಿತಿ ಹೊಂದಿದವರಿಗೆ ಇಲ್ಲಿ ಆದ್ಯತೆ. ಇದಲ್ಲದೆ ಅಂಧ, ಶ್ರವಣ ಸೇರಿ ಇನ್ನಿತರ ವಿಶೇಷತೆ ಇರುವವರಿಗೂ ಸ್ಥಾನ ಕಲ್ಪಿಸಲಾಗುತ್ತದೆ.

ಪ್ರಧಾನ ಕವಿಗೋಷ್ಠಿ
ಪ್ರಧಾನ ಕವಿಗೋಷ್ಠಿ ಉದ್ಘಾಟನೆಗೆ ಹಂಸಲೇಖ, ಕವಿ ಸಿದ್ಧಲಿಂಗಯ್ಯ, ಪ್ರೊ.ಎಸ್.ಜಿ ಸಿದ್ದರಾಮಯ್ಯರಲ್ಲಿ ಒಬ್ಬರನ್ನು ಆಹ್ವಾನಿಸಲು ಚಿಂತನೆ ನಡೆಸಲಾಗುತ್ತಿದೆ. ಪ್ರಧಾನ ಕವಿಗೋಷ್ಠಿಯಲ್ಲಿ ತಲಾ ಒಂದು ಜಿಲ್ಲೆಯಿಂದ ಒಬ್ಬರಂತೆ 30 ಕವಿಗಳು, ಕೊಂಕಣಿ, ತುಳು, ಬ್ಯಾರಿ, ಕೊಡವ ಭಾಷೆಯ ಕವಿಗಳು ಭಾಗವಹಿಸಬಹುದಾಗಿದೆ.

ಮಾತು ಬಾರದವರಿಗೂ ಈ ಬಾರಿಯ ಕವಿಗೋಷ್ಠಿಯಲ್ಲಿ ಅವಕಾಶ
ಈ ಬಾರಿಯ ಕವಿಗೋಷ್ಠಿಯಲ್ಲಿ ಮೂಕರು ಸಂಜ್ಞೆಯ ಮೂಲಕ ಕವಿತೆ ಮಂಡಿಸಿದೆರೆ, ಸಹಾಯಕರೊಬ್ಬರು ಅವರ ಕವಿತೆ ವಾಚಿಸಲಿದ್ದಾರೆ. ಅಲ್ಲದೇ ಮೈಸೂರಿನ ಕೇಂದ್ರ ಕಾರಾಗೃಹದಲ್ಲಿ ಕವೆತೆ ಬರೆಯುವವರನ್ನು ಗುರುತಿಸಿ ಈ ಸಮಿತಿ ಅವರನ್ನು ಆಹ್ವಾನಿಸಿದೆ.

ಭಾವನೆಗಳನ್ನು ಅದುಮಿಟ್ಟುಕೊಂಡು, ಅನುಭವಗಳ ಅಭಿವ್ಯಕ್ತಿಗೆ ವೇದಿಕೆಗಳಿಲ್ಲದೆ ಚಡಪಡಿಸುವ ಮನಸ್ಸುಗಳಿಗೆ ವೇದಿಕೆ ಕಲ್ಪಿಸುವುದು ವಿಶೇಷ ಕವಿಗೋಷ್ಠಿಯ ಉದ್ದೇಶವಾಗಿ ಎನ್ನುತ್ತಾರೆ ಕವಿಗೋಷ್ಠೀಯ ಉಪಸಮಿತಿ ಕಾರ್ಯಾಧ್ಯಕ್ಷೆ ಲೋಲಾಕ್ಷಿ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Mysuru Dasara in this year will be bit special, because, a Kavigoshti(poetic session) for deaf and dumb will be there to encourahe such disable people.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ