Mysore dasara 2023: ಮೈಸೂರು ದಸರಾಗೆ ತಗುಲಿದ ವೆಚ್ಚ ಎಷ್ಟು ಕೋಟಿ ಗೊತ್ತಾ?- ಯಾವ್ಯಾವುದಕ್ಕೆ ಎಷ್ಟು? ಅಂಕಿಅಂಶ ತಿಳಿಯಿರಿ

ಮೈಸೂರು, ಡಿಸೆಂಬರ್‌, 03: ನಾಡಹಬ್ಬ ಮೈಸೂರು ದಸರಾ ಕಳೆದ ಬಾರಿಗಿಂತ ಈ ಬಾರಿಯೇ ಬರಗಾಲದ ನಡುವೆಯೂ ಅದ್ಧೂರಿಯಾಗಿ ನಡೆದಿದ್ದು, ಹಾಗೆಯೇ 2023ರ ದಸರಾಗೆ ಹೆಚ್ಚು ವೆಚ್ಚವಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಮಾಹಿತಿ ನೀಡಿದ್ದು, ಯಾವುದಕ್ಕೆ ಎಷ್ಟು ಖರ್ಚಾಗಿದೆ ಎಂದು ಇಲ್ಲಿ ತಿಳಿಯಿರಿ.

ಈ ಬಾರಿ 2023ನೇ ಸಾಲಿನ ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ತೀವ್ರ ಬರಗಾಲದ ನಡುವೆಯೂ 29.5 ಕೋಟಿ ವೆಚ್ಚ ಮಾಡಲಾಗಿದೆ. ಹೋದ ವರ್ಷ 28.74 ಕೋಟಿ ವೆಚ್ಚ ಆಗಿದೆ ಎಂದು ತಿಳಿಸಿದ್ದಾರೆ.

Mysore dasara 2023: How much cost of Mysore Dasara 2023?, know Statistics detials

ಬರಗಾಲ ಹಿನ್ನೆಲೆ ಸರಳವೂ ಹಾಗೂ ಅದ್ಧೂರಿಯೂ ಅಲ್ಲದ ರೀತಿಯಲ್ಲಿ ದಸರೆಯನ್ನು ಸಾಂಪ್ರದಾಯಿಕವಾಗಿ ಆಚರಿಸಲಾಗುವುದೆಂದು ಸರ್ಕಾರ ಮಾಹಿತಿ ನೀಡಿತ್ತು. ಆದರೆ ಮಾಡಲಾದ ವೆಚ್ಚವನ್ನು ಗಮನಿಸಿದರೆ ಅದ್ಧೂರಿಯಾಗಿಯೇ ಉತ್ಸವ ನಡೆದಿದೆ. ಕ್ರೀಡಾ ದಸರಾ, ದೀಪಾಲಂಕಾರ, ಆಹಾರ ಮೇಳ, ಸ್ವಚ್ಛತೆ ಹಾಗೂ ವ್ಯವಸ್ಥೆಗೆ ಮಾಡಿರುವ ವೆಚ್ಛದ ಬಗ್ಗೆ ಜಿಲ್ಲಾಡಳಿತ ಮಾಹಿತಿ ನೀಡಿಲ್ಲ. ಇದೆಲ್ಲವನ್ನೂ ಸೇರಿಸಿದರೆ ಉತ್ಸವಕ್ಕೆ ಆಗಿರುವ 40 ಕೋಟಿ ರೂಪಾಯಿಗೂ ಹೆಚ್ಚಾಗಲಿದೆ ಎಂದು ಅಂದಾಜಿಸಲಾಗಿದೆ.

ರಾಜವಂಶಸ್ಥರಿಗೆ ಗೌರವ ಸಂಭಾವನೆ ಎಷ್ಟು?

ಈ ಬಾರಿ ಕೇವಲ 4 ದಿನಗಳಷ್ಟೇ ನಡೆದ ಯುವ ದಸರೆಗೆ 5.88 ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ, ಯುವ ಸಂಭ್ರಮಕ್ಕೆ 2 ಕೋಟಿ ವ್ಯಯಿಸಲಾಗಿದೆ. ಮೈಸೂರು ರಾಜವಂಶಸ್ಥರಿಗೆ ಗೌರವ ಸಂಭಾವನೆ ರೂಪದಲ್ಲಿ ಕಳೆದ ವರ್ಷ 47.20 ಲಕ್ಷ ನೀಡಲಾಗಿತ್ತು. ಈ ವರ್ಷ ಜಿಎಸ್‌ಟಿ ಸೇರಿ 50 ಲಕ್ಷ ನೀಡಲಾಗಿದೆ. ಬಹುತೇಕ ಉಪ ಸಮಿತಿಗಳು ಹೋದ ವರ್ಷಕ್ಕಿಂತ ಹೋಲಿಸಿದರೆ ಈ ಬಾರಿ ಹೆಚ್ಚಾಗಿಯೇ ವೆಚ್ಚ ಮಾಡಿದೆ ಎಂದು ತಿಳಿದುಬಂದಿದೆ.

ಯುವದಸರೆಗೆ ನಾಲ್ಕೇ ದಿನ ನಡೆದರೂ ಕಲಾವಿದರನ್ನು ಜೆಚ್ಚಿನ ಸಂಖ್ಯೆಯಲ್ಲಿ ಕರೆಸಲಾಗಿತ್ತು. ಆದ್ದರಿಂದ ಕಳೆದ ಬಾರಿಗಿಂತ ಈ ಬಾರಿ ಹೆಚ್ಚಿನ ವೆಚ್ಚ ಆಗಿದೆ ಎಂದು ಡಿಸಿ ಡಾ.ಕೆ.ವಿ.ರಾಜೇಂದ್ರ ಮಾಹಿತಿ ನೀಡಿದ್ದಾರೆ.

ಸುದ್ದಿಗೋಷ್ಠಿಲ್ಲಿ ಖರ್ಚು-ವೆಚ್ಚದ ಮಾಹಿತಿಯನ್ನು ಶನಿವಾರ ಬಿಡುಗಡೆ ಮಾಡಿದ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ "ಖರ್ಚು-ವೆಚ್ಚದ ಮಾಹಿತಿ ಕೊಡುವುದು ತಾಂತ್ರಿಕ ಕಾರಣದಿಂದಾಗಿ ತಡ ಆಗಿದೆ. ಸಾಂಪ್ರದಾಯಿಕವಾಗಿ ಈ ಉತ್ಸವವನ್ನು ಯಾವುದಕ್ಕೂ ಕಡಿಮೆ ಇಲ್ಲದಂತೆ ಆಯೋಜನೆ ಮಾಡಲಾಗಿತ್ತು. ಅದ್ಧೂರಿಯಾಗಿಯೇ ನಡೆದಿದೆ ಎಂದೇ ಒಪ್ಪಬೇಕಾಗುತ್ತದೆ. ಆದರೆ ಸರ್ಕಾರದಿಂದ ಹೆಚ್ಚುವರಿಯಾಗಿ ಅನುದಾನ ಕೇಳುತ್ತಿಲ್ಲ," ಎಂದು ಮಾಹಿತಿ ನೀಡಿದರು.

ಇನ್ನು ಕ್ರೀಡಾ ದಸರಾ, ದೀಪಾಲಂಕಾರ, ಆಹಾರ ಮೇಳ, ಸ್ವಚ್ಛತೆ ಹಾಗೂ ವ್ಯವಸ್ಥೆಗೆ ಮಾಡಿರುವ ವೆಚ್ಚವನ್ನು ಆಯಾ ಇಲಾಖೆ ಹಾಗೂ ಸೆಸ್ಕ್‌ ಮಾಡಿವೆ. ಈ ಉತ್ಸವವನ್ನು ಅಭಿವೃದ್ಧಿಯ ದೃಷ್ಟಿಯಲ್ಲಿ ನೋಡಬೇಕಾಗುತ್ತಾದೆ ಎಂದು ತಿಳಿಸಿದರು.

ಯಾವುದಕ್ಕೆ ಎಷ್ಟು ಖರ್ಚು?

ಸರ್ಕಾರದಿಂದ 15 ಕೋಟಿ, ಮೂಡಾದಿಂದ 10 ಕೋಟಿ ಅನುದಾನ ಬಿಡುಗಡೆಯಾಗಿತ್ತು. ಅರಮನೆ ಆವರಣದಲ್ಲಿ ನಡೆದ ಕಾರ್ಯಕ್ರಮಗಳಿಗೆ ಅರಮನೆ ಮಂಡಳಿಯಿಂದಲೇ 5 ಕೋಟಿ ಭರಿಸಲಾಗಿದೆ. ಪ್ರಯೋಜಕತ್ವದಿಂದ 2.25 ಕೋಟಿ ಬಂದಿತ್ತು. ಇನ್ನು ಕಳೆದ ವರ್ಷ 32.50 ಲಕ್ಷವಷ್ಟೇ ಸಂಗ್ರಹ ಆಗಿತ್ತು. ಟಿಕೆಟ್‌ ಹಾಗೂ ಗೋಲ್ಡ್‌ಕಾರ್ಡ್‌ ಮಾರಾಟದಿಂದ 1.19 ಕೋಟಿ ಅನುದಾನ ಬಂದಿತ್ತು. ಆಹಾರ ಮೇಳಕ್ಕೆ ನಾವು ಅನುದಾನ ನೀಡಿರಲಿಲ್ಲ. ಅದರಿಂದ ಪ್ರಾಯೋಜಕತ್ವ ಮೊದಲಾದವುಗಳಿಂದ 81 ಲಕ್ಷ ಸ್ವೀಕೃತಿಯಾಗಿದೆ. ಒಟ್ಟಾರೆ 29.26 ಕೋಟಿ ದೊರೆತಿತ್ತು ಎಂದು ತಿಳಿಸಿದರು.

ಸಾರಿಗೆ ಮತ್ತು ಆಮಂತ್ರಣ, ಸ್ಥಳಾವಕಾಶ, ಸಾರಿಗೆ ಹಾಗೂ ಶಿಷ್ಟಾಚಾರಕ್ಕೆಂದೇ 3.22 ಕೋಟಿ, ಮೆರವಣಿಗೆಗೆ 2.45 ಕೋಟಿ, ಪಂಜಿನ ಕವಾಯತಿಗೆ 1.24 ಕೋಟಿ, ಸಾಂಸ್ಕೃತಿಕ ದಸರಗೆ 2 ಕೋಟಿ, ಗಜಪಡೆಗೆ 1.60 ಕೋಟಿ ರೂಪಾಯಿ ವೆಚ್ಚವಾಗಿ. ಸಿವಿಲ್‌ ಕಾಮಗಾರಿಗೆಂದೇ 6 ಕೋಟಿ ರೂಪಾಯಿ ಬಳಕೆ ಮಾಡಲಾಗಿದೆ. ಮಂಡ್ಯ, ಚಾಮರಾಜನಗರ ಹಾಗೂ ಹಾಸನ ಜಿಲ್ಲೆಗಳಿಗೆ ದಸರಾ ಅನುದಾನ 2.20 ಕೋಟಿ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+