Dasara Elephant Death: ಅರ್ಜುನ, ದ್ರೋಣ, ಬಲರಾಮ ದಸರಾ ಆನೆಗಳ ದುರಂತ ಅಂತ್ಯ
ಬೆಂಗಳೂರು, ಡಿಸೆಂಬರ್ 08: ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ಸಂಚಲನ ಮೂಡಿಸಿದ ಘಟನೆಯೆಂದರೆ ದಸರಾ ಆನೆ ಅರ್ಜುನನ ಸಾವು. ನಾಡಹಬ್ಬ ದಸರಾದಲ್ಲಿ ಎಂಟು ಬಾರಿ ಅಂಬಾರಿ ಹೊತ್ತಿದ್ದ ಬಲಿಷ್ಠ ಆನೆ ಅರ್ಜುನ ಕಾಡಾನೆ ಒಂಟಿ ಸಲಗನ ದಾಳಿಯಿಂದ ಅರಣ್ಯ ಅಧಿಕಾರಿಗಳು, ಮಾವುತರು ಹಾಗೂ ಕಾವಾಡಿಗರ ಕಣ್ಣೇದುರೇ ಸಾವನ್ನಪ್ಪಿತ್ತು.
ಅರ್ಜುನನ ಸಾವು ಅನ್ಯಾಯದ ಸಾವು ಈ ಬಗ್ಗೆ ತನಿಖೆಯಾಗಬೇಕು ಎನ್ನುವ ಒತ್ತಾಯಗಳು ಕೇಳಿಬರುತ್ತಲೇ ಇದೆ. ಬಲಿಷ್ಠನಾಗಿದ್ದ ಅರ್ಜುನ ಕಾಡಾನೆ ದಾಳಿಗೆ ಸಾವನ್ನಪ್ಪಿದ್ದಾನೆ ಎನ್ನುವುದು ನಂಬಲಾಗದ ಸತ್ಯವೆಂದು ಕೆಲವರು ವಾದಿಸಿದರೆ, ಇದರಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯವಿದ್ದು, ಅರ್ಜುನನ ಕಾಲಿಗೆ ಗುಂಡೇಟು ಬಿದ್ದ ಕಾರಣವೇ ಆನೆ ಸಾವಿಗೆ ಕಾರಣ ಎಂದು ಕೆಲವರು ನೇರವಾಗಿ ಆರೋಪಿಸುತ್ತಿದ್ದಾರೆ. ಯಾವುದು ಸತ್ಯ ಯಾವುದು ಸುಳ್ಳು ತನಿಖೆಯಿಂದ ಹೊರ ಬರಬೇಕಿದೆ.

ನಮ್ಮ ಕರ್ನಾಟಕದಲ್ಲಿ ನಾಡಹಬ್ಬ ದಸರಾಕ್ಕೆ ಇರುವ ಗೌರವವೇ ದಸರಾ ಅಂಬಾರಿ ಹೊರುವ ಆನೆಗಳ ಮೇಲೂ ಇದೆ. ಅವುಗಳನ್ನು ಪೂಜ್ಯನೀಯವಾಗಿಯೂ ನೋಡಲಾಗುತ್ತದೆ. ಆದರೆ ನಾಡದೇವತೆ ಚಾಮುಂಡೇಶ್ವರಿಯನ್ನು ಹೊತ್ತು ಸಾಗಿದ್ದ ಆನೆಗಳು ಯಾರದೋ ನಿರ್ಲಕ್ಷ್ಯಕ್ಕೆ ಬಲಿಯಾಗುತ್ತಿವೆ. ಅರ್ಜುನನ ಸಾವು ಮೊದಲಲ್ಲ ಈ ಹಿಂದೆಯೂ ದ್ರೋಣ ಹಾಗೂ ಬಲರಾಮ ಆನೆಗಳು ದುರಂತ ಸಾವನ್ನಪ್ಪಿವೆ. ಅಲ್ಲದೇ ದಸರಾದಲ್ಲಿ ಭಾಗಿಯಾದ ಅನೇಕ ಆನೆಗಳು ಅಕಾಲಿಕವಾಗಿ ಸಾವನ್ನಪ್ಪಿದೆ.
ದ್ರೋಣನ ದುರಂತ ಅಂತ್ಯ
ನೋಡಲು ಕಟ್ಟುಮಸ್ತಿನ ದೃಢಕಾಯ ದೇಹ ಹೊಂದಿದ್ದ ದ್ರೋಣ, ನಾಡಹಬ್ಬ ದಸರಾದಲ್ಲಿ ಒಂದು ಇತಿಹಾಸ. ಯಾಕೆಂದರೆ ದ್ರೋಣ ಒಂದಲ್ಲ ಎರಡಲ್ಲ ಬರೋಬ್ಬರಿ ಹದಿನೆಂಟು ಬಾರಿ ದಸರಾ ಅಂಬಾರಿಯನ್ನು ಹೊತ್ತಿದ್ದ. ದಸರಾ ಎಂದರೆ ದ್ರೋಣ ಎನ್ನುವಷ್ಟರ ಮಟ್ಟಿಗೆ ಹೆಸರು ಪಡೆದಿದ್ದ. ತನ್ನ ಸಾಧು ನಡತೆ ಬಲಿಷ್ಠ ದೇಹದಿಂದ ಎಲ್ಲರ ಮೆಚ್ಚುಗೆ ಪಡೆದಿದ್ದ. ಸುಮಾರು 10 ಅಡಿ ಎತ್ತರದ ದ್ರೋಣನ ಸಾವೇ ದುರಂತ. ಮೈಸೂರಿನ ಎಚ್.ಡಿ ಕೋಟೆ ಬಳ್ಳೆ ಆನೆ ಶಿಬಿರದಲ್ಲಿ ಮೇಯಲು ಹೋಗಿದ್ದ ದ್ರೋಣ ವಿದ್ಯುತ್ ತಂತಿ ತಗುಲಿ ಅಕಾಲಿಕ ಸಾವನ್ನಪ್ಪಿದ್ದ. ಇನ್ನು ಬಳ್ಳೆ ಆನೆ ಶಿಬಿರದಲ್ಲಿ ದ್ರೋಣನ ಸ್ಮಾರಕ ಮಾಡಲಾಗಿದ್ದು, ಈಗಲೂ ದಸರಾಕ್ಕೆ ಹೊರಡುವ ಆನೆಗಳು ದ್ರೋಣನಿಗೆ ನಮಸ್ಕರಿಸಿಯೇ ಮುಂದೆ ಸಾಗುತ್ತವೆ.

ಗುಂಡೇಟಿಗೆ ಬಲಿಯಾದ ಬಲರಾಮ
ಮೈಸೂರು ದಸರಾದಲ್ಲಿ ಸುಮಾರು 14 ಬಾರಿ ಚಿನ್ನದ ಅಂಬಾರಿ ಹೊತ್ತಿದ್ದ ಬಲರಾಮನ ರಾಜಗಾಂಭೀರ್ಯವೇ ಬೇರೆ. 2.70ಮೀಟರ್ ಎತ್ತರ, 3.77ಮೀ. ಉದ್ದವಿದ್ದ ಬಲರಾಮ ಅತ್ಯಂತ ಬಲಶಾಲಿಯಾಗಿದ್ದ. ಪುಂಡಾನೆಗಳನ್ನು ಸೆರೆಹಿಡಿಯಲು ಮತ್ತು ಪಳಗಿಸುವ ಕಾರ್ಯಾಚರಣೆಯಲ್ಲಿ ಈತನೇ ಮುಂದಿದ್ದ. 67 ವರ್ಷ ಪ್ರಾಯವಾಗಿದ್ದ ಬಲರಾಮ ಸದಾ ಸಾಧು ಸ್ವಭಾವದದಿಂದ ಎಲ್ಲರಿಗೂ ಪ್ರಿಯನಾಗಿದ್ದನು. ವಯಸ್ಸಾದ ಕಾರಣ ಹುಣಸೂರು ತಾಲೂಕಿಗೆ ಒಳಪಡುವ ಭೀಮನಕಟ್ಟೆ ಆನೆ ಶಿಬಿರದಲ್ಲಿ ಪಾಲನೆಯಲ್ಲಿದ್ದ ಬಲರಾಮನದು ದುರಂತ ಅಂತ್ಯವಾಯಿತು. 2022ರ ಡಿಸೆಂಬರ್ 14ರಂದು ಬಲರಾಮನನ್ನು ಮೇಯಲು ಬಿಡಲಾಗಿತ್ತು. ಆನೆ ಶಿಬಿರ ಬಳಿಯ ಹೊಲದಲ್ಲಿ ಮೇಯುತ್ತಿದ್ದ ಅರ್ಜುನನ್ನು ಕಂಡ ಹೊಲದ ಮಾಲೀಕ ಕಾಡಾನೆಯೆಂದು ಭಾವಿಸಿ ಅದರ ಮೇಲೆ ಗುಂಡು ಹಾರಿಸಿದ್ದನು. ಅಸ್ವಸ್ಥಗೊಂಡಿದ್ದ ಬಲರಾಮ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದ.
ಕಾಡಾನೆಗಳ ಕಾದಾಟದಲ್ಲಿ ಜೀವತೆತ್ತ ದಸರಾ ಗಜಗಳು
ದಸರಾ ಆನೆಗಳನ್ನು ಕೇವಲ ದಸರಾದಲ್ಲಿ ಮಾತ್ರವಲ್ಲ. ಕಾಡಾನೆಗಳ, ಹುಲಿ, ಚಿರತೆಗಳ ಸೆರೆಗಳ ಕಾರ್ಯಾಚರಣೆಯಲ್ಲೂ ಬಳಸಲಾಗುತ್ತಿತ್ತು. ಬಲಿಷ್ಠವಾಗಿದ್ದ ದಸರಾ ಆನೆಗಳು ಈ ಕಾರ್ಯಾಚರಣೆಯನ್ನು ಯಶಸ್ವಿಗೊಳಿಸುತ್ತಿದ್ದವು. ಆದರೆ ದುರಂತವೆಂದರೆ ದಸರಾ ಆನೆಗಳಾದಾ ಅರ್ಜುನ ಹಾಗೂ ಗೋಪಾಲಸ್ವಾಮಿ ಆನೆಗಳು ಕಾಡಾನೆಗಳ ದಾಳಿಯಿಂದಲೇ ಅಸುನೀಗಿದವು.

ಗೋಪಾಲಸ್ವಾಮಿ 2022ರ ನವೆಂಬರ್‌ನಲ್ಲಿ ಹುಣಸೂರು ಬಳಿಯ ಹನಗೋಡು ಭಾಗದಲ್ಲಿ ಕಾಡಾನೆ ಜೊತೆಗಿನ ಕಾದಾಟದಲ್ಲಿ ಮೃತಪಟ್ಟಿತ್ತು. ಇನ್ನು ಎಂಟು ಬಾರಿ ಅಂಬಾರಿ ಹೊತ್ತಿದ್ದ ಅರ್ಜುನ, ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಯಸಳೂರು ಬಳಿ ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ಅರ್ಜುನನ ಮೇಲೆ ಒಂಟಿಸಲಗ ದಾಳಿಯಿಂದ ಸಾವನ್ನಪ್ಪಿದ. ದಸರಾ ಸಮಯದಲ್ಲಿ ಮೆರೆಸುವ ವಿಶೇಷ ಗೌರವ ನೀಡುವ ದಸರಾ ಆನೆಗಳಿಗೆ ಸೂಕ್ತವಾದ ರಕ್ಷಣೆ ಬೇಕಿದೆ. ಅರಣ್ಯ ಇಲಾಖೆ ಹಾಗೂ ರಾಜ್ಯ ಸರ್ಕಾರ ಈ ಸಾವುಗಳನ್ನು ಪರಿಗಣಿಸಿ ಸಾಕಾನೆಗಳ ರಕ್ಷಣೆಗೆ ಸೂಕ್ತ ಕ್ರಮಕೈಗೊಳ್ಳಬೇಕಿದೆ.
-
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Summer Drinks: ಬಿಸಿಲಿನಲ್ಲಿ ದೇಹಕ್ಕೆ ಬೆಸ್ಟ್ ಡ್ರಿಂಕ್ ಯಾವುದು? ಎಳನೀರು ಅಥವಾ ಮಜ್ಜಿಗೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ












Click it and Unblock the Notifications