ಚಾಲೆಂಜಿಂಗ್ ಸ್ಟಾರ್ ದರ್ಶನ್‌ರ ‘ಕಾಟೇರ’ ಸಿನಿಮಾದಲ್ಲಿ ಅರ್ಜುನ ಆನೆಗೆ ನಮನ!
ನಟ ದರ್ಶನ್ ಅವರಿಗೆ ವನ್ಯ ಮೃಗಗಳ ಮೇಲೆ ಅಪಾರ ಪ್ರೀತಿ ಇದ್ದು, ಆಗಾಗ ಟ್ರೆಕ್ಕಿಂಗ್ ಹೋಗಿ ದರ್ಶನ್ ಅವರು ಗಮನ ಸೆಳೆಯುತ್ತಾರೆ. ಹಾಗೇ ವೈಲ್ಡ್‌ಲೈಫ್ ಫೋಟೋಗ್ರಫಿ ಮೂಲಕವೂ ಚಾಲೆಂಜಿಂಗ್ ಸ್ಟಾರ್ ಪ್ರಕೃತಿಗೆ ತುಂಬಾ ಹತ್ತಿರವಾಗುತ್ತಾರೆ. ಇದರ ಜತೆ ಮೃಗಾಲಯ ಅಥವಾ ಪ್ರಾಣಿ ರಕ್ಷಣೆ ವಿಚಾರ ಬಂದಾಗ ನಟ ದರ್ಶನ್ ಅವರು ಮುಂದೆ ನಿಂತು ಹೋರಾಡುತ್ತಿದ್ದಾರೆ. ಹೀಗಾಗಿಯೇ ತಮ್ಮ 'ಕಾಟೇರ' ಸಿನಿಮಾದಲ್ಲೂ ಅರ್ಜುನ ಆನೆಗೆ ವಿಶೇಷವಾಗಿ ನಮಿಸಿದ್ದಾರೆ.
ಹೌದು, ಹಾಸನ ಅರಣ್ಯದಲ್ಲಿ ಕಾಡಾನೆ ಸೆರೆ ಹಿಡಿದು ರೇಡಿಯೋ ಕಾಲರ್ ಅಳವಡಿಸುವಾಗಲೇ ದಸರಾ ಆನೆ ಅರ್ಜುನ ಮೃತಪಟ್ಟಿದ್ದ. ಈ ಘಟನೆ ಜನರನ್ನ ತೀವ್ರ ನೋವಿಗೆ ತಳ್ಳಿದೆ. ಅರ್ಜುನ ಆನೆಯ ಸಾವು ಕನ್ನಡಿಗರನ್ನು ದುಃಖದ ಕಡಲಲ್ಲಿ ಮುಳುಗುವಂತೆ ಮಾಡಿದೆ. 8 ಬಾರಿ ಜಂಬೂ ಸವಾರಿಯಲ್ಲಿ ಅಂಬಾರಿ ಹೊತ್ತಿದ್ದ, ಅರ್ಜುನ ಆನೆ ಬಗ್ಗೆ ಕನ್ನಡಿಗರು ಪ್ರೀತಿಯ ಹೊಂದಿದ್ದರು. ಕಾಡಾನೆ ಜೊತೆ ಸೆಣೆಸಾಟ ನಡೆಸಿದ್ದ ಅರ್ಜುನ ಜೀವ ಬಿಟ್ಟಿದ್ದ. ಕಾಡಾನೆ ಒಂದು ಅರ್ಜುನನ ಮೇಲೆ ದಾಳಿ ಮಾಡಿ ಹತ್ಯೆ ಮಾಡಿತ್ತು. ಹೀಗಾಗಿ ದರ್ಶನ್ ಅವರ ಕಾಟೇರ ಸಿನಿಮಾದಲ್ಲೂ ಅರ್ಜುನ ಆನೆಗೆ ಶ್ರದ್ಧಾಂಜಲಿ ಸಲ್ಲಿಸಲಾಗಿದೆ. ಹಾಗೇ ಈ ಸಿನಿಮಾವನ್ನ ಅರ್ಜುನ ಆನೆಗಾಗಿ ಅರ್ಪಿಸಲಾಗಿದೆ.

ಅರ್ಜುನ ಆನೆಗೆ 'ಕಾಟೇರ' ನಮನ
ಚಾಲೆಂಜಿಂಗ್ ಸ್ಟಾರ್ ದರ್ಶನ್‌ರ 'ಕಾಟೇರ' ಸಿನಿಮಾ ಪ್ರದರ್ಶನದ ವೇಳೆ, ಅರ್ಜುನ ಆನೆಗೂ ನಮನ ಸಲ್ಲಿಸಲಾಗಿದೆ. 'ನಾಡ ದೇವಿ ಚಾಮುಂಡಿಯ ಅಂಬಾರಿಯನ್ನು ಹೊತ್ತು ದಸರೆಯ ವೈಭವವನ್ನು ಜಗತ್ತಿನಾದ್ಯಂತ ಕಣ್ತುಂಬಿಸಿ ಕಣ್ಮರೆಯಾದ ದೈತ್ಯ ಮತ್ತು ದೈವ ಜೀವ 'ಅರ್ಜುನ' ಇದಕ್ಕೆ ನಮ್ಮ ಕಾಟೇರ ಚಿತ್ರ ಅರ್ಪಣೆ' ಎಂದು ವಿಶೇಷ ಸಂದೇಶವನ್ನು ಈಗ ರವಾನಿಸಲಾಗಿದೆ. ಈ ಮೂಲಕ ದರ್ಶನ್ ಅವರ ಸಿನಿಮಾ ತಂಡದಿಂದ ಅಂಬಾರಿ ಹೊತ್ತು ಕನ್ನಡಿಗರ ಮನಸ್ಸು ಗೆದ್ದಿದ್ದ 'ಅರ್ಜುನ' ಆನೆಗೆ ನಮನ ಸಲ್ಲಿಸಲಾಗಿದೆ.
ಕಾಟೇರ ಟಿಕೆಟ್‌ಗೆ ಭಾರಿ ಡಿಮ್ಯಾಂಡ್
ರಾಕ್‌ಲೈನ್ ಸಿನಿಮಾಸ್‌ನಲ್ಲಿ ನಿನ್ನೆ ಮಧ್ಯರಾತ್ರಿಯಿಂದ ಕಾಟೇರ ಶೋ ಶುರುವಾದವು. ಕಳೆದ 1 ವಾರದಿಂದಲೇ ಕಾಟೇರ ಟಿಕೆಟ್ ಭರ್ಜರಿಯಾಗಿ ಸೇಲ್ ಆಗಿವೆ. ಹೀಗಾಗಿ, ಸಿನಿಮಾ ಬಿಡುಗಡೆ ಆದ ಮೊದಲ 3 ದಿನ ಕಾಲ ಟಿಕೆಟ್ ಬಹುತೇಕ ಬುಕ್ ಆಗಿಬಿಟ್ಟಿವೆ ಅಭಿಮಾನಿಗಳು 'ಕಾಟೇರ' ಕಾಣ್ತುಂಬಿಕೊಳ್ಳುತ್ತಿದ್ದಾರೆ. ಸಿಂಗಲ್ ಸ್ಕ್ರೀನ್ ಸೇರಿ ಮಾಲ್‌ಗಳಲ್ಲಿ ಕೂಡ ಅಬ್ಬರಿಸಲು ಕಾಟೇರ ಸಜ್ಜಾಗಿದೆ. ರಾಜ್ಯದ ಮೂಲೆ ಮೂಲೆಯಲ್ಲೂ ಈ ಸಿನಿಮಾ ಬಿಡುಗಡೆ ಆಗಿ, ನೆರೆ ರಾಜ್ಯದಲ್ಲೂ ಕನ್ನಡ ಸಿನಿಮಾ ಅಬ್ಬರಿಸಲು ಸಜ್ಜಾಗಿದೆ.

2023 ದರ್ಶನ್ ಅವರ ಫ್ಯಾನ್ಸ್‌ಗೆ ಸಿಕ್ಕಾಪಟ್ಟೆ ಸರ್ಪ್ರೈಸ್ ಕೊಟ್ಟಿದ್ದು ಇದೇ ವರ್ಷವೇ ಎರಡೆರಡು ಸಿನಿಮಾಗಳು ರಿಲೀಸ್ ಆಗಿವೆ. ಕೆಲ ತಿಂಗಳ ಹಿಂದಷ್ಟೇ ಕ್ರಾಂತಿ ಸಿನಿಮಾ ರಿಲೀಸ್ ಆಗಿ, ದಾಖಲೆ ಧೂಳ್ ಮಾಡಿತ್ತು. ಇದೀಗ ಫ್ಯಾನ್ಸ್ ಪಾಲಿನ ಡಿ-ಬಾಸ್ ದರ್ಶನ್ ಅವರು ಕಾಟೇರ ಮೂಲಕ ರೀ ಎಂಟ್ರಿ ಕೊಟ್ಟಿದ್ದಾರೆ. ಹೀಗಾಗಿ ಸಹಜವಾಗಿಯೇ ಅಭಿಮಾನಿಗಳಿಗೆ ಕುತೂಹಲ ಇದೆ. ಸಿನಿಮಾ ಬಿಡುಗಡೆ ಹಿನ್ನೆಲೆ ಅಭಿಮಾನಿಗಳು ಎಲ್ಲೆಲ್ಲೂ ಸಂಭ್ರಮಿಸಿದ್ದಾರೆ.












Click it and Unblock the Notifications