Get Updates
Get notified of breaking news, exclusive insights, and must-see stories!

Elephant Arjuna Death: ದಸರಾ ಆನೆ ಸಾವಿನ ಸುದ್ದಿ ಕೇಳಿ ಸಾಮಾಜಿಕ ಜಾಲತಾಣದಲ್ಲಿ ಜನರ ಕಣ್ಣೀರು

ಕನ್ನಡಿಗರು ಮತ್ತು ದಸರಾ ಪ್ರೇಮಿಗಳು ಇಂದು ಕಣ್ಣೀರು ಹಾಕುತ್ತಿದ್ದಾರೆ. ದಸರಾ ವೈಭವ ಮತ್ತಷ್ಟು ಮೇಳೈಸುವಂತೆ ಮಾಡುವ ವಿಶ್ವವಿಖ್ಯಾತ ಜಂಬೂ ಸವಾರಿಯಲ್ಲಿ ನಾಡ ದೇವತೆ ಚಾಮುಂಡಿ ದೇವಿಯ ಅಂಬಾರಿ ಹೊತ್ತಿದ್ದ, ಅರ್ಜುನ ಆನೆ ಇಂದು ಮೃತಪಟ್ಟಿದೆ. ಇದು ಕೋಟ್ಯಂತರ ಜನರ ಕಣ್ಣೀರಿಗೆ ಕಾರಣವಾಗಿರುವ ಸಮಯದಲ್ಲೇ, ಜಗತ್ತಿನಾದ್ಯಂತ ಕನ್ನಡ ನಾಡಿನ ಈ ಆಘಾತಕಾರಿ ಸುದ್ದಿ ವೈರಲ್ ಆಗುತ್ತಿದೆ.

ಶತಮಾನಗಳ ಹಿಂದೆ ಮೈಸೂರು ಮಹಾರಾಜರು ಆರಂಭ ಮಾಡಿದ್ದ, ಪ್ರಪಂಚದ ಮೂಲೆ ಮೂಲೆಯಲ್ಲಿ ಸದ್ದು & ಖ್ಯಾತಿ ಗಳಿಸಿರುವ 'ಮೈಸೂರು ದಸರಾ' ವರ್ಲ್ಡ್ ಫೇಮಸ್. ಹೀಗೆ ದಸರಾ ಹಬ್ಬದಲ್ಲಿ ಚಿನ್ನದ ಅಂಬಾರಿ ಮೇಲೆ ಚಾಮುಂಡೇಶ್ವರಿ ದೇವಿ ವಿಗ್ರಹ, ಮೆರವಣಿಗೆ ಮಾಡಲಾಗುತ್ತದೆ.

Discover What Karnataka People Said About Dasara Elephant Death

ಜಂಬೂ ಸವಾರಿ ಎಂದು ಕರೆಯುವ ಉತ್ಸವಕ್ಕೆ, ಈಗ ಮೃತಪಟ್ಟಿರುವ ಅರ್ಜುನ ಸತತ 8 ವರ್ಷ ಸಾರಥಿಯಾಗಿದ್ದ. ಆದರೆ ಇಂದು ಕಾಡಾನೆಯ ಜೊತೆಗೆ, ಕನ್ನಡ ನಾಡಿನ ಜನರ ಜೀವ ಉಳಿಸಲು ಸೆಣೆಸಾಟ ನಡೆಸಿ ಜೀವ ಬಿಟ್ಟಿದೆ ಅರ್ಜುನ ಆನೆ. ಹೀಗಾಗಿ ಕನ್ನಡಿಗರ ಪ್ರೀತಿಯ ಅರ್ಜುನನ ನೆನಪಿನಲ್ಲಿ ಕೋಟ್ಯಂತರ ಜನ ಕಣ್ಣೀರು ಹಾಕುತ್ತಿದ್ದಾರೆ.

ಕಾಡಾನೆ ಹಿಡಿಯುವ ವೇಳೆ ಸಾವು

ಅಷ್ಟಕ್ಕೂ ಹಾಸನ ಜಿಲ್ಲೆ, ಸಕಲೇಶಪುರ ತಾಲೂಕಿನ, ಯಸಳೂರು, ಬಾಳೆಕೆರೆ ಅರಣ್ಯಗಳಲ್ಲಿ ಕಾಡಾನೆ ಸೆರೆ ಹಿಡಿದು ರೇಡಿಯೋ ಕಾಲರ್ ಅಳವಡಿಸುವ ಕಾರ್ಯಾಚರಣೆ ಆರಂಭವಾಗಿತ್ತು. ಅರಣ್ಯ ಇಲಾಖೆ ಸಿಬ್ಬಂದಿ ಅರ್ಜುನ ಸೇರಿ 4 ಪಳಗಿದ ಆನೆಗಳ ಜೊತೆಗೆ ಇಂದು ಕಾರ್ಯಾಚರಣೆ ಆರಂಭಿಸಿದ್ದರು. ಆನೆ ಒಂದಕ್ಕೆ ಅರವಳಿಕೆ ಚುಚ್ಚು ಮದ್ದು ನೀಡುತ್ತಿದ್ದ ವೇಲೆ ಅರ್ಜುನ ಮೇಲೆ ಒಂಟಿ ಸಲಗ ಒಂದು ದಿಢೀರ್ ದಾಳಿ ಮಾಡಿದೆ.

ಒಂಟಿ ಸಲಗ ದಾಳಿ ಮಾಡುತ್ತಿದ್ದಂತೆ ಉಳಿದ 3 ಸಾಕಾನೆ ಹಿಂದೆ ಹೋಗಿವೆ. ಆಗಲೇ ಕಾಡಾನೆ & ಅರ್ಜುನ ಆನೆ ಕಾದಾಟ ಶುರುವಾಗಿದೆ. ಕೂಡಲೇ ಮಾವುತ ಇಳಿದು ದೂರ ಓಡಿದ್ದಾರೆ ಅಂತಾ ಹೇಳಲಾಗಿದೆ. ಆದರೆ ಹೀಗೆ ಮಾವುತ ಕೂಡ ದೂರ ಹೋದಾಗ ಕಾಡಾನೆ ಮತ್ತು ಅರ್ಜುನ ಆನೆ ನಡುವೆ ಘೋರ ಗಲಾಟೆ ನಡೆದಿದೆ.

ಆಗಲೇ, ಘೋರ ದುರಂತ ಕೂಡ ನಡೆದು ಹೋಗಿದೆ ಅಂತಾ ಹೇಳಲಾಗುತ್ತಿದೆ. ಈ ಗಲಾಟೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಅಂಬಾರಿಯ ಆನೆ ಅರ್ಜುನ ಜೀವ ಬಿಟ್ಟಿರುವ ವಿಚಾರ ತಿಳಿಯುತ್ತಿದ್ದಂತೆ ಇಡೀ ಜಗತ್ತು ಕಣ್ಣೀರು ಹಾಕುತ್ತಿದೆ.

Discover What Karnataka People Said About Dasara Elephant Death

ಅರ್ಜುನ ಅಂಬಾರಿ ಹೊತ್ತಿದ್ದು ಯಾವಾಗ?

2012 ರಿಂದ 2019ರ ತನಕ ಅರ್ಜುನ ಆನೆಯು ಮೈಸೂರು ದಸರಾ ಮಹೊತ್ಸವದಲ್ಲಿ ಅಂಬಾರಿ ಹೊತ್ತು ಜಂಬೂ ಸವಾರಿಯಲ್ಲಿ ಹೆಜ್ಜೆ ಹಾಕಿತ್ತು. ಇಷ್ಟೆ ಅಲ್ಲದೆ ಕಾಡಾನೆಗಳು ನಾಡಿಗೆ ಬಂದ ಸಮಯದಲ್ಲಿ ಇದೇ ಅರ್ಜುನ ಆನೆ ಮುಂದೆ ನುಗ್ಗಿ, ನಾಡಿನ ಜನರನ್ನ ರಕ್ಷಣೆ ಮಾಡಿತ್ತು.

ಆದರೆ ಈಗ ಅರ್ಜುನ ಆನೆಯೇ ಜೀವ ಬಿಟ್ಟಿದೆ. ಅದೂ ಕಾಡಾನೆಗಳ ಜೊತೆಗಿನ ಸೆಣೆಸಾಟ ಸಮಯದಲ್ಲಿ. ಹೀಗಾಗಿ ಕನ್ನಡಿಗರು ಸೇರಿ, ಇಡೀ ಭಾರತೀಯರು ದಸರಾ ಆನೆ ಅರ್ಜುನನ ಸಾವಿಗೆ ಕಣ್ಣೀರು ಹಾಕುತ್ತಿದ್ದಾರೆ.

ಒಟ್ನಲ್ಲಿ ನಮ್ಮ ಅರ್ಜುನನ ಸಾವು ಇಡೀ ಜಗತ್ತಿಗೆ ಆಘಾತ ನೀಡಿದೆ. ಹಾಗೇ ಈ ಘಟನೆಯ ಬಗ್ಗೆ ಚರ್ಚೆ ಕೂಡ ಶುರುವಾಗಿದೆ. ಮನುಷ್ಯ ಹೀಗೆ ಕಾಡು ಒತ್ತುವರಿ ಮಾಡಿಕೊಳ್ಳುತ್ತಿರುವ ಕಾರಣಕ್ಕೆ ಇಂತಹ ಘಟನೆಗಳು ನಡೆಯುತ್ತಿರುವುದು, ಕಾಡಾನೆಗಳು ನಾಡಿಗೆ ಬರುತ್ತಿವೆ.

ಈ ಹಿನ್ನೆಲೆ ಸಾಕಾನೆಗಳನ್ನ ಬಳಸಿ ಕಾಡಾನೆ ಓಡಿಸಲು ಯತ್ನಿಸಲಾಗುತ್ತಿದೆ. ಆದ್ರೆ ಇದರಿಂದಾಗಿ ಅಮಾಯಕ ಜೀವಿಗಳು ಜೀವವನ್ನೇ ಕಳೆದುಕೊಳ್ಳುತ್ತಿವೆ, ಅಂತಾ ಸಾಮಾಜಿಕ ಜಾಲತಾಣದ ಬಳಕೆದಾರರು ಆಕ್ರೋಶ ಹೊರಹಾಕುತ್ತಿದ್ದಾರೆ. ಹೀಗೆ ಕಾಡು ನಾಶದ ವಿರುದ್ಧ ಕಠಿಣವಾದ ಕ್ರಮ ಅಗತ್ಯ ಎಂಬ ಒತ್ತಾಯ ಕೂಡ ಕೇಳಿಬಂದಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+