ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೀಪಾವಳಿಗೆ ಯಶವಂತಪುರ-ಶಿವಮೊಗ್ಗ ವಿಶೇಷ ರೈಲು; ಸಮಯ ಮತ್ತು ವಿಶೇಷತೆ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 19: ಬೆಳಕಿನ ಹಬ್ಬ ದೀಪಾವಳಿಗಾಗಿ ಊರು ಕಡೆಗೆ ಮುಖ ಮಾಡುವ ಪ್ರಯಾಣಿಕರಿಗೆ ಭಾರತೀಯ ರೈಲ್ವೆ ಸಿಹಿ ಸುದ್ದಿಯೊಂದನ್ನು ಕೊಟ್ಟಿದೆ. ಕರ್ನಾಟಕದ ರಾಜಧಾನಿ ಬೆಂಗಳೂರಿನಿಂದ ಮಲೆನಾಡಿನ ಶಿವಮೊಗ್ಗಕ್ಕೆ ವಿಶೇಷ ರೈಲು ಸಂಚರಿಸಲಿದೆ. ಬೆಂಗಳೂರಿನ ಯಶವಂತಪುರ ರೈಲ್ವೆ ನಿಲ್ದಾಣದಿಂದ ಶಿವಮೊಗ್ಗ ಟೌನ್ ರೈಲ್ವೆ ನಿಲ್ದಾಣಕ್ಕೆ ವಿಶೇಷ ರೈಲು ಆರಂಭಿಸಲಾಗಿದೆ. ದೀಪಾವಳಿ ಹಿನ್ನೆಲೆ ಈ ವಿಶೇಷ ರೈಲು ಸಂಚಾರಕ್ಕೆ ರೈಲ್ವೆ ಇಲಾಖೆಯು ತೀರ್ಮಾನಿಸಿದೆ.

ದೀಪಾವಳಿ ಹಬ್ಬಕ್ಕಾಗಿ ಊರಿಗೆ ಹೋಗಲು ಅಣಿಯಾಗಿರುವ ಲಕ್ಷಾಂತರ ಪ್ರಯಾಣಿಕರಿಗೆ ವಿಶೇಷ ರೈಲುಗಳ ಮೂಲಕವೇ ಉತ್ತಮ ಸೇವೆ ಒದಗಿಸುವುದಕ್ಕೆ ರೈಲ್ವೆ ಇಲಾಖೆ ನಿರ್ಧರಿಸಿದೆ. ಈ ನಿಟ್ಟಿನಲ್ಲಿ ಯಶವಂತಪುರ-ಶಿವಮೊಗ್ಗ ಟೌನ್ ವಿಶೇಷ ಎಕ್ಸ್‌ಪ್ರೆಸ್ ರೈಲು ಸಂಚರಿಸಲಿದೆ. ಈ ರೈಲಿನ ಸಮಯ ಮತ್ತು ಯಾವ ಮಾರ್ಗದಲ್ಲಿ ಪ್ರಯಾಣಿಸಲಿದೆ ಎಂಬುದನ್ನು ವರದಿಯಲ್ಲಿ ತಿಳಿದುಕೊಳ್ಳೋಣ.

ದೀಪಾವಳಿಗೆ ರೈಲಿನಲ್ಲಿ ಹೆಚ್ಚುವರಿ ಕೋಚ್‌ಗಳ ಅಳವಡಿಕೆ; ಮನೆಗೆ ಹೋಗಲು ಕನ್ಫರ್ಮ್ ಟಿಕೆಟ್ ಪಡೆಯುವುದು ಹೇಗೆ?ದೀಪಾವಳಿಗೆ ರೈಲಿನಲ್ಲಿ ಹೆಚ್ಚುವರಿ ಕೋಚ್‌ಗಳ ಅಳವಡಿಕೆ; ಮನೆಗೆ ಹೋಗಲು ಕನ್ಫರ್ಮ್ ಟಿಕೆಟ್ ಪಡೆಯುವುದು ಹೇಗೆ?

ಯಶವಂತರಪುರ-ಶಿವಮೊಗ್ಗ ರೈಲು ಯಾವಾಗ ಶುರು?

ಯಶವಂತರಪುರ-ಶಿವಮೊಗ್ಗ ರೈಲು ಯಾವಾಗ ಶುರು?

ಬೆಂಗಳೂರಿನ ಯಶವಂತಪುರ ರೈಲ್ವೆ ನಿಲ್ದಾಣದಿಂದ ಶಿವಮೊಗ್ಗ ಟೌನ್ ವರೆಗೂ ಸಂಚರಿಸಲಿರುವ ವಿಶೇಷ ರೈಲನ್ನು ದೀಪಾವಳಿಗಾಗಿ ಆರಂಭಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಅಕ್ಟೋಬರ್ 22ರಿಂದ ವಿಶೇಷ ರೈಲು ಸಂಚಾರವು ಪ್ರಾರಂಭವಾಗಲಿದೆ.

ಯಶವಂತರಪುರ-ಶಿವಮೊಗ್ಗ ರೈಲಿನ ಸಮಯ

ಯಶವಂತರಪುರ-ಶಿವಮೊಗ್ಗ ರೈಲಿನ ಸಮಯ

ಯಶವಂತರಪುರ-ಶಿವಮೊಗ್ಗ ಟೌನ್ ರೈಲು ಸಂಖ್ಯೆ 06507 ಸಮಯವನ್ನು ರೈಲ್ವೆ ಇಲಾಖೆಯು ಪ್ರಕಟಣೆಯಲ್ಲಿ ಉಲ್ಲೇಖಿಸಿದೆ. ಬೆಂಗಳೂರಿನ ಯಶವಂತಪುರ ರೈಲ್ವೆ ನಿಲ್ದಾಣದಿಂದ ಬೆಳಗ್ಗೆ 10.30ಕ್ಕೆ ರೈಲು ಪ್ರಾರಂಭವಾಗಲಿದ್ದು, ಅದೇ ದಿನ ಮಧ್ಯಾಹ್ನ 3.30ಕ್ಕೆ ಶಿವಮೊಗ್ಗ ಟೌನ್ ಅನ್ನು ತಲುಪಲಿದೆ.

ಯಶವಂತರಪುರ-ಶಿವಮೊಗ್ಗ ರೈಲಿನ ಮಾರ್ಗ

ಯಶವಂತರಪುರ-ಶಿವಮೊಗ್ಗ ರೈಲಿನ ಮಾರ್ಗ

ಬೆಂಗಳೂರಿನ ಯಶವಂತರಪುರ-ಶಿವಮೊಗ್ಗ ರೈಲು ಸಂಚರಿಸುವ ಮಾರ್ಗದಲ್ಲಿ ಹಲವು ಪ್ರಯಾಣಿಕರಿಗೆ ಸಹಕಾರಿ ಆಗಲಿದೆ. ಬೆಳಗ್ಗೆ 10.30ಕ್ಕೆ ಯಶವಂತಪುರದಿಂದ ಹೊರಡಲಿರುವ ರೈಲು, ಬೆಳಗ್ಗೆ 11.15ರ ಹೊತ್ತಿಗೆ ತುಮಕೂರು, ಮಧ್ಯಾಹ್ನ 12.33ಕ್ಕೆ ಅರಸೀಕೆರೆ, ಮಧ್ಯಾಹ್ನ 1.23ಕ್ಕೆ ಬೀರೂರು, ಮಧ್ಯಾಹ್ನ 2.18ಕ್ಕೆ ಭದ್ರಾವತಿಗೆ ತಲುಪಲಿದೆ. ಅಂತಿಮವಾಗಿ ಮಧ್ಯಾಹ್ನ 3.30ಕ್ಕೆ ಈ ರೈಲು ಶಿವಮೊಗ್ಗ ಟೌನ್ ರೈಲ್ವೆ ನಿಲ್ದಾಣಕ್ಕೆ ತಲುಪಲಿದೆ.

ಯಶವಂತರಪುರ-ಶಿವಮೊಗ್ಗ ರೈಲಿನ ಬೋಗಿ

ಯಶವಂತರಪುರ-ಶಿವಮೊಗ್ಗ ರೈಲಿನ ಬೋಗಿ

ಯಶವಂತರಪುರ-ಶಿವಮೊಗ್ಗ ಟೌನ್ ರೈಲಿನಲ್ಲಿ ಒಂದು 2ನೇ ದರ್ಜೆ ಹವಾ ನಿಯಂತ್ರಿತ ಬೋಗಿ, ಒಂದು 3ನೇ ದರ್ಜೆ ಹವಾ ನಿಯಂತ್ರಿತ ಬೋಗಿ, ಆರು ಸ್ಲೀಪಿಂಗ್ ಕೋಚ್, ನಾಲ್ಕು ಸಾಮಾನ್ಯ ದ್ವಿತೀಯ ದರ್ಜೆ ಮತ್ತು ಎರಡು ದ್ವಿತೀಯ ದರ್ಜೆ ಲಗೇಜ್ ಕಮ್ ಬ್ರೇಕ್ ವ್ಯಾನ್ ಅನ್ನು ರೈಲಿನಲ್ಲಿ ಜೋಡಿಸಲಾಗಿರುತ್ತದೆ.

English summary
Yeshwanthpur to Shimoga Town Special Express Train for Deepavali: Here Read Timing and more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X