ಪಟಾಕಿ ಎಫೆಕ್ಟ್: ಬೆಂಗಳೂರಿನಲ್ಲಿ ಅಪಾಯ ಮಟ್ಟ ಮೀರಿ ವಾಯುಮಾಲಿನ್ಯ ಹೆಚ್ಚಳ

ಬೆಂಗಳೂರು, ನವೆಂಬರ್‌ 13: ದೀಪಾವಳಿಯ ಸಂಭ್ರಮ ಎಲ್ಲೆಡೆ ಮನೆ ಮಾಡಿದೆ. ದೀಪಗಳನ್ನು ಹಚ್ಚಿ, ಪಟಾಕಿ ಸಿಡಿಸಿ ಜನ ಸಂಭ್ರಮಿಸಿದ್ದಾರೆ. ಆದರೆ ಪಟಾಕಿ ಸಿಡಿಸಿದ ಪರಿಣಾಮ ಬೆಂಗಳೂರಿನಲ್ಲಿ ವಾಯುಮಾಲಿನ್ಯ ಹೆಚ್ಚಾಗಿದೆ. ಒಂದೇ ದಿನದಲ್ಲಿ ಬೆಂಗಳೂರಿನಲ್ಲಿ ವಾಯುಮಾಲಿನ್ಯ ಪ್ರಮಾಣ ದಿಢೀರ್ ಹೆಚ್ಚಳವಾಗಿದೆ.

ವಾಯುಮಾಲಿನ್ಯ ನಿಯಂತ್ರಣಕ್ಕೆ ಹಸಿರು ಪಟಾಕಿ ಕಡ್ಡಾಯ ಇದ್ದರೂ ಮಾಲಿನ್ಯ ಏರಿಕೆಯಾಗಿದೆ. ನಿಯಮ ಮೀರಿ ಹಲವಡೆ ರಾಸಾಯನಿಕಯುಕ್ತ ಪಟಾಕಿಯನ್ನು ಹಲವರು ಬಳಸಿದ್ದು, ಬೆಂಗಳೂರಿನ ವಾಯುಮಾಲಿನ್ಯ ಅಪಾಯ ಮಟ್ಟಕ್ಕೆ ತಲುಪರುವುದು ಆತಂಕಕ್ಕೆ ಕಾರಣವಾಗಿದೆ. ದೆಹಲಿಯಲ್ಲಿ ಮಾಲಿನ್ಯ ಏರಿಕೆಯಿಂದ ಹಲವಾರು ಸಮಸ್ಯೆ ಆಗುತ್ತಿರುವ ಕಾರಣ ಬೆಂಗಳೂರಿನ ನಾನಾ ಭಾಗದಲ್ಲಿ ವಾಯುಮಾಲಿನ್ಯ, ಶಬ್ದ ಮಾಲಿನ್ಯ ಅಳೆಯಲು ಮಾಪನ ಆಳವಡಿಸಲಾಗಿತ್ತು.

air-pollution-has-increased

ಬೆಂಗಳೂರಿನ ಹಲವು ಭಾಗಗಳಲ್ಲಿ ವಾತಾವರಣ ಡೇಂಜರ್ ಝೋನ್‌ನಲ್ಲಿ ಇರುವುದು ಬೆಳಕಿಗೆ ಬಂದಿದೆ. ಪ್ರತಿನಿತ್ಯ ವಾಹನಗಳ ಹೊಗೆ, ಧೂಳಿನಿಂದ ವಾಯು ಮಾಲಿನ್ಯ ಆಗುತ್ತಿತ್ತು. ಈಗ ರಜೆಯಿದ್ದರೂ ವಾಹನ ಸಂಖ್ಯೆ ಕಡಿಮೆಯಿದ್ದರೂ ವಾಯು ಮಾಲಿನ್ಯ ಏರಿಕೆಯಾಗಿದೆ. ಪಟಾಕಿಯ ಮಾಲಿನ್ಯದಿಂದಲೂ ಬೆಂಗಳೂರಿನ ಗಾಳಿಯ ಗುಣಮಟ್ಟ ಹದಗೆಡುತ್ತಿರುವುದು ಬೆಳಕಿಗೆ ಬಂದಿದ್ದು, ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯ ಅಂಕಿ ಅಂಶಗಳಿಂದ ಈ ವಿಚಾರ‌ ಬಯಲಾಗಿದೆ.

ಗಾಳಿಯ ಗುಣಮಟ್ಟ ಕಳೆದುಕೊಂಡ ನಗರಗಳು

1. ಜಯನಗರ

ನವೆಂಬರ್ 13 - 282 AQI

ನವೆಂಬರ್ 11 - 105 AQI

2. ಹೆಬ್ಬಾಳ

ನವೆಂಬರ್ 13 -176 AQI

ನವೆಂಬರ್ 11 - 57 AQI

3. ಬಾಪೂಜಿ ನಗರ

ನವೆಂಬರ್ 13 - 185 AQI

ನವೆಂಬರ್ 11 - 90 AQI

4. ಸಿಲ್ಕ್ ಬೋರ್ಡ್

ನವೆಂಬರ್ 13 - 226 AQI

ನವೆಂಬರ್ 11 - 85 AQI

air-pollution-has-increased

5. ಹೊಂಬೇಗೌಡ ನಗರ

ನವೆಂಬರ್ 13 - 171 AQI

ನವೆಂಬರ್ 11 - 92 AQI

6. ಜಿಗಣಿ

ನವೆಂಬರ್ 13 - 161 AQI

ನವೆಂಬರ್ 11 - 80 AQI

7. ಸಿಟಿ ರೈಲ್ವೆ ಸ್ಟೇಷನ್

ನವೆಂಬರ್ 13 - 100AQI

ನವೆಂಬರ್ 11 - 67 AQI

8. ಮೈಲಸಂದ್ರ

ನವೆಂಬರ್ 13 - 186 AQI

ನವೆಂಬರ್ 11 - 67 AQI

9. ಪೀಣ್ಯ

ನವೆಂಬರ್ 13 - 104 AQI

ನವೆಂಬರ್ 11 - 80 AQI

10. ಬಸವೇಶ್ವರನಗರ

ನವೆಂಬರ್ 13 - 82 AQI

ನವೆಂಬರ್ 11- 39 AQI

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+