ಐಟಿ ಉದ್ಯೋಗಕ್ಕಿಂತ ಕ್ಯಾಬ್ ಚಾಲಕನಾಗಿಯೇ ಹೆಚ್ಚು ಹಣ ದುಡಿಯುತ್ತೇನೆ ಎಂದ ಮಾಜಿ ಟೆಕ್ಕಿ: ಪೋಸ್ಟ್‌ ವೈರಲ್‌

ಉತ್ತಮ ಸಂಬಳ, ದೃಡವಾದ ಉದ್ಯೋಗ ಇದ್ದರೂ ಅನೇಕರು ಕೆಲಸದ ಒತ್ತಡ ಮತ್ತು ವ್ಯಯಕ್ತಿಕ ಜೀವನದ ಸಮತೋಲನದ ಕೊರತೆಯಿಂದ ವೃತ್ತಿಯನ್ನು ಬದಲಿಸುವ ನಿರ್ಧಾರ ಕೈಗೊಳ್ಳುತ್ತಿದ್ದಾರೆ. ಇದೇ ರೀತಿಯ ಘಟನೆಯೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚಗೆ ಕಾರಣವಾಗಿದೆ.

ಝೈಪ್ ಎಲೆಕ್ಟ್ರಿಕ್ ಸಂಸ್ಥಾಪಕ ಆಕಾಶ ಗುಪ್ತಾ ಅವರು ಕ್ಯಾಬ್್ನಲ್ಲಿ ಪ್ರಯಾಣಿಸುವಾಗ ಚಾಲಕರೊಂದಿಗೆ ನಡೆಸಿದ ಮಾತುಕತೆಯ ವಿಡಿಯೊ ಈಗ ವೈರಲ್ ಆಗಿದೆ,

Cab Driver Reveals

ಕಳೆದ 19 ವರ್ಷ ಐಟಿ ಕ್ಷೇತ್ರದಲ್ಲಿ ಉದ್ಯೋಗ

ಆಕಾಶ ಗುಪ್ತಾ ಜೊತೆ ಚಾಲಕ ಮಾತುಕತೆ ಮಾಡುತ್ತಾ ತಾನು 19 ವರ್ಷ ಐಟಿ ಕ್ಷೇತ್ರದಲ್ಲಿ ಉದ್ಯೋಗ ಮಾಡಿದ್ದೇನೆ ಎಂದು ತಿಳಿಸಿದರು. ನಂತರ ಆ ಕೆಲಸವನ್ನು ತೊರೆದು ಕ್ಯಾಬ್ ಚಾಲಕನಾಗಿ ಕೆಲಸವನ್ನು ಮಾಡುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ.

ಆಕಾಶ್ ಗುಪ್ತಾ ಅವರು ಈ ಬದಲಾವಣೆಯ ಬಗ್ಗೆ ಪ್ರಶ್ನಿಸಿದಾಗ, ಸದ್ಯಕ್ಕೆ ಕ್ಯಾಬ್ ಓಡಿಸಿ ತಿಂಗಳಿಗೆ ₹80,000 ರಿಂದ ₹90,00ವರೆಗೆ ಸಂಪಾದಿಸುತ್ತಿದ್ದೆನೆ ಎಂದು ಚಾಲಕ ಹೇಳಿದರು. ಐಟಿ ಉದ್ಯೋಗದಲ್ಲಿ ಇದ್ದಾಗ ತನ್ನ ಮಾಸಿಕ ಸಂಬಳ ಸುಮಾರು ₹40,000 ಮಾತ್ರ ಬರುತ್ತಿತ್ತು ಎಂದು ಅವರು ತಿಳಿಸಿದರು.

ಪ್ರಮೋಷನ್‌ಗಿಂತ ಇದೇ ದೊಡ್ಡದು: ಅಮೆಜಾನ್ ಆಫೀಸ್‌ಗೆ ತಾಯಿಯನ್ನ ಕರೆ ತಂದ ಟೆಕ್ಕಿಯ ಭಾವುಕ ಪೋಸ್ಟ್‌ ವೈರಲ್‌
ಪ್ರಮೋಷನ್‌ಗಿಂತ ಇದೇ ದೊಡ್ಡದು: ಅಮೆಜಾನ್ ಆಫೀಸ್‌ಗೆ ತಾಯಿಯನ್ನ ಕರೆ ತಂದ ಟೆಕ್ಕಿಯ ಭಾವುಕ ಪೋಸ್ಟ್‌ ವೈರಲ್‌

ಆದಾಯವೇ ಕೆಲಸ ಬದಲಿಸುವ ಪ್ರಮುಖ ಉದ್ದೇಶ ಅಲ್ಲ

ಆದರೆ ನಮಗೆ ಹೆಚ್ಚು ಆದಾಯವೇ ಕೆಲಸ ಬದಲಿಸುವ ಪ್ರಮುಖ ಉದ್ದೇಶ ಆಗಿರಲಿಲ್ಲ ಎಂದು ಕ್ಯಾಬ್ ಚಾಲಕ ಸ್ಪಷ್ಟಪಡಿಸಿದರು. "ಸ್ವಾತಂತ್ರ್ಯ ಇರಲಿಲ್ಲ" ಎಂಬ ಒಂದೇ ವಾಕ್ಯದಲ್ಲಿ ಅವರು ತಮ್ಮ ನಿರ್ಧಾರದ ಕಾರಣ ತಿಳಿಸಿದರು. ನಿಗದಿತ ಸಮಯ, ಕೆಲಸದ ಒತ್ತಡ ಮತ್ತು ವೈಯಕ್ತಿಕ ಸಮಯದ ಅಬಾವ ಈ ರೀತಿಯ ಅನೇಕ ತೊಂದರೆಗಳಿಂದ ಬೇಸತ್ತು ಈ ನಿರ್ಧಾರ ತೆಗೆದುಕೊಂಡಿದ್ದಾಗಿ ಅವರು ಹೇಳಿದ್ದಾರೆ.

ಪತ್ನಿಯೂ ಸ್ವಂತ ಉದ್ಯಮ

ತಮ್ಮ ಪತ್ನಿಯೂ ಈಗ ತಮ್ಮದೆ ಆದ ಬ್ಯೂಟಿ ಪಾರ್ಲರ್ ನಡೆಸುತ್ತಿದ್ದಾರೆ ಎಂದು ಚಾಲಕ ತಿಳಿಸಿದ್ದಾರೆ. ನಾವು ಬೇರೆಯವರ ಹತ್ತಿರ ಸಂಬಳ ತೆಗೆದುಕೊಳ್ಳವ ಬದಲು ನಾವೆ ಸ್ವಂತ ಉದ್ಯೋಗವನ್ನೂ ಆಯ್ಕೆ ಮಾಡಿಕೊಂಡಿದೆ ಎಂದು ಹೇಳಿದ್ದಾರೆ.

ಈ ವಿಡಿಯೊವನ್ನು ಆಕಾಶ್ ಗುಪ್ತಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಬಳಿಕ ಲಕ್ಷಾಂತರ ಮಂದಿ ವೀಕ್ಷಿಸಿದ್ದಾರೆ. ಹಲವರು ಕಾರ್ಪೊರೇಟ್ ಉದ್ಯೋಗದಲ್ಲಿನ ಒತ್ತಡ, ಮಿಟಿಂಗ್್ಗಳು, ನಿಗದಿತ ಕೆಲಸದ ಸಮಯ ಮತ್ತು ರಜೆಯನ್ನು ಪಡೆಯುವ ಕಷ್ಡದ ಬಗ್ಗೆ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಇನ್ನು ಅನೇಕರು ಹೆಚ್ಚಿನ ಸಂಬಳಕ್ಕಿಂತ ಸಮಯಕ್ಕೆ ಪ್ರಾಮುಖ್ಯತೆ ನೀಡಬೇಕು, ಸ್ವಾತಂತ್ಯ ಮತ್ತು ಮನಸ್ಸಿನ ನೆಮ್ಮದಿ ಮುಖ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ.

ತಿಂಗಳಿಗೆ 7 ಲಕ್ಷ ಸಂಬಳ, 82 ಲಕ್ಷ ಉಳಿತಾಯ ಇದ್ದರೂ ನೆಮ್ಮದಿ ಇಲ್ಲ! 29ರ ಟೆಕ್ಕಿಯ ಮಾತು ವೈರಲ್
ತಿಂಗಳಿಗೆ 7 ಲಕ್ಷ ಸಂಬಳ, 82 ಲಕ್ಷ ಉಳಿತಾಯ ಇದ್ದರೂ ನೆಮ್ಮದಿ ಇಲ್ಲ! 29ರ ಟೆಕ್ಕಿಯ ಮಾತು ವೈರಲ್

ಚಾಲಕರ ಕೆಲಸವು ಅಷ್ಟು ಸುಲಭದ ಮಾತಲ್ಲ

ಇನ್ನೊಂದಡೆ, ಕೆಲವರು ಕ್ಯಾಬ್ ಚಾಲಕರ ಕೆಲಸವು ಅಷ್ಟು ಸುಲಭದ ಮಾತಲ್ಲ ಇದಕ್ಕು ಕಷ್ಟ ಪಡಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ಇದರಲ್ಲಿ ವಾಹನದ ನಿರ್ವಹಣೆ, ವಿಮೆ, ತೆರಿಗೆ ಮತ್ತು ದಿನವಿಡೀ ದೈಹಿಕ ಸಮಸ್ಯೆ ಹಾಗೂ ಮಾನಸಿಕ ಒತ್ತಡವನ್ನು ಎದುರಿಸಬೇಕಾಗುತ್ತದೆ ಎಂದು ಹೇಳಿದ್ದಾರೆ. ಚಾಲಕರು ಈ ಮೊದಲು ಹೇಳಿದಂತೆ ಈತರಹದ ಆದಾಯ ಎಲ್ಲರಿಗೂ ಸಾಧ್ಯವಿಲ್ಲ. ಅದು ವ್ಯಯಕ್ತಿಕ ಪರಿಸ್ಥಿತಿಯನ್ನು ಅವಲಂಬಿಸಿರುತ್ತದೆ ಎಂಬ ಅಭಿಪ್ರಾಯ ಕೂಡ ಇಲ್ಲಿ ವ್ಯಕ್ತವಾಗಿವೆ.

ಉದ್ಯೋಗ ಆಯ್ಕೆ ಕುರಿತು

ಈ ಘಟನೆ ಕೇವಲ ಒಬ್ಬ ಐಟಿ ಉದ್ಯೋಗಿಯು ಕ್ಯಾಬ್ ಚಾಲಕನಾದ ಕಥೆಯಷ್ಟೆ ಅಲ್ಲ. ಉದ್ಯೋಗದಲ್ಲಿ ಹೆಚ್ಚಿನ ಸಂಬಳ, ಜೀವನ ಮತ್ತು ವೈಯಕ್ತಿಕ ಸ್ವಾತಂತ್ಯ ಇವುಗಳಲ್ಲಿ ನಾವು ಯಾವುದಕ್ಕೆ ಹೆಚ್ಚು ಮಹತ್ವ ನೀಡಬೇಕು ಯಾವುದಕ್ಕೆ ನೀಡಬಾರದು ಎಂಬ ಪ್ರಶ್ನೇ ಮತ್ತೊಮ್ಮೆ ಮುಂದಿಟ್ಟಿದೆ.

ಈ ವೈರಲ್ ಘಟನೆ, ಇಂದಿನ ಉದ್ಯೋಗ ಜಗತ್ತಿನಲ್ಲಿ ಯಶಸ್ಸಿನ ಅರ್ಥ ಪ್ರತಿಯೊಬ್ಬರಿಗೂ ವಿಭಿನ್ನ ರೀತಿಯಲ್ಲಿ ಆಗಿರಬಹುದು ಎಂಬುದನ್ನು ಮತ್ತೊಮೆ ನೆನಪಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+