Diwali 2023: ಗೋಪೂಜೆಯ ಮಹತ್ವ ಹಾಗೂ ಮಾಡುವ ಕ್ರಮವೇನು..?

ದೀಪಾವಳಿಯನ್ನು ಕೆಲವು ಭಾಗಗಳಲ್ಲಿ ಐದು ದಿನ, ಇನ್ನೂ ಕೆಲವು ಭಾಗಗಳಲ್ಲಿ ಮೂರು ದಿನ ಆಚರಿಸಲಾಗುತ್ತದೆ. ಐದು ದಿನ ಆಚರಿಸುವವರು ಮೂರನೇ ದಿನ ಹಾಗೂ ಮೂರು ದಿನ ಆಚರಿಸುವವರು ಕೊನೆಯ ದಿನ ದೀಪಾವಳಿಯ ಅಂಗವಾಗಿ ಗೋಪೂಜೆಯನ್ನು ಮಾಡುತ್ತಾರೆ. ಈ ದಿನ ಕಾಮಧೇನು ಸ್ವರೂಪವಾದ ಗೋವುಗಳನ್ನು ಭಕ್ತಯಿಂದ ಪೂಜಿಸಲಾಗುತ್ತದೆ.

ಎಲ್ಲಾ ಹಬ್ಬಗಳ ಮೂಲ ಆಚರಣೆ ನಮಗೆ ಅನ್ನ ನೀರು ಗಾಳಿ ನೀಡುವ ಪರಿಸರದ ಆರಾಧನೆ ಹಾಗೂ ಪ್ರಾಣಿ ಪಕ್ಷಿಗಳಿಗೆ ಆಹಾರ ನೀಡುವುದು ಆಗಿರುತ್ತದೆ. ದೀಪಾವಳಿಯ ದಿನದಂದು ಭೂಮಿ ಪೂಜೆ ಮಾಡುವವರು ಸಹ ಇದ್ದಾರೆ. ಕರಾವಳಿಯ ಭಾಗದಲ್ಲಿ ನರಕ ಚತುರ್ಧಶಿಯ ರಾತ್ರಿ ಈಗಷ್ಟೇ ಭತ್ತದ ಫಸಲು ನೀಡಿ ಸ್ವಚ್ಛವಾದ ಭೂಮಿಗೆ ಪೂಜೆ ಸಲ್ಲಿಸುತ್ತಾರೆ. ಇದರ ಜೊತೆಗೆ ರಾತ್ರಿ ವೇಳೆ ಸಹ ಗೋವುಗಳಿಗೆ ದೀಪಾರತಿ ಮಾಡಿ ಅವುಗಳಿಗೆ ತಿನಿಸುಗಳನ್ನು ನೀಡುತ್ತಾರೆ.

Diwali 2023: Govardhan Puja Or Go-Pooja Significance

ಆದರೆ ದೀಪಾವಳಿಯ ಮೂರನೇ ದಿನ ಮುಂಜಾನೆಯ ಪೂಜೆ ಮಾತ್ರ ಗೋವುಗಳಿಗೆ ಮೀಸಲಾಗಿರುತ್ತದೆ. ಗೋಪೂಜೆ ಅಥವಾ ಗೋವರ್ಧನ ಪೂಜೆಗೆ ಜ್ಯೋತಿಷ್ಯದಲ್ಲಿ ವಿಶೇಷ ಮಹತ್ವವಿದೆ. ಗೋವರ್ಧನ ಪೂಜೆಯ ದಿನದಂದು ಹಸುಗಳನ್ನು ಹಾಗೂ ಗೋವರ್ಧನ ಪರ್ವತವನ್ನು ಪೂಜಿಸಿದರೆ, ಅದೃಷ್ಟ ದೊರೆತು ಇಷ್ಟಾರ್ಥಗಳು ನೆರವೇರುತ್ತದೆ ಎನ್ನುವುದು ಹಲವರ ನಂಬಿಕೆಯಾಗಿದೆ.

ಕೆಲವು ಭಾಗಗಳಲ್ಲಿ ಈ ದಿನ ಶ್ರೀಕೃಷ್ಣನಿಗೆ 56 ಅಥವಾ 108 ಬಗೆಯ ಖಾದ್ಯಗಳನ್ನು ತಯಾರಿಸಿ ನೈವೇದ್ಯ ಮಾಡಲಾಗುತ್ತದೆ. ಅಲ್ಲದೇ ಜನರು ಈ ದಿನ ಭಕ್ತರು ತಮ್ಮ ಮನೆಗಳಲ್ಲಿ ಗೋವಿನ ಸಗಣಿಯಿಂದ ಗೋವರ್ಧನನ್ನು ಮಾಡಿ ಪೂಜಿಸುತ್ತಾರೆ. ಇದರಿಂದ ಆರೋಗ್ಯ ವೃದ್ಧಿಯ ಜೊತೆಗೆ ಮನೆಯಲ್ಲಿ ಶಾಂತಿ ನೆಲಸುತ್ತದೆ. ಹೀಗಾಗಿ ಕೆಲವು ಭಾಗಗಳಲ್ಲಿ ಗೋವರ್ಧನ ಪರ್ವತ ಪೂಜೆ ಮಾಡುತ್ತಾರೆ.

ಗೋಪೂಜೆಯ ವಿಧಿವಿಧಾನಗಳೇನು..?

ಇನ್ನು ಕರಾವಳಿ ಸೇರಿದಂತೆ ಅನೇಕ ಭಾಗಗಳಲ್ಲಿ ಗೋವುಗಳ ಪೂಜೆ ಮಾಡಲಾಗುತ್ತದೆ. ಬೆಳ್ಳಂಬೆಳಗ್ಗೆಯೇ ಮನೆಯಲ್ಲಿರುವ ಗೋವುಗಳಿಗೆ ಸ್ನಾನ ಮಾಡಿಸಿ, ಕೊಟ್ಟಿಗೆಯನ್ನು ಶುಭ್ರಗೊಳಿಸಲಾಗುತ್ತದೆ. ನಂತರ ಗೋವುಗಳ ಹಣೆಗೆ ಹಾಗೂ ಕಾಲುಗಳಿಗೆ ಅರಶಿನ ಕುಂಕುಮವನ್ನು ಹಚ್ಚಬೇಕು. ಬಳಿಕ ವಿಭೂತಿ ಉಂಡೆಯನ್ನು ನೀರಿನಲ್ಲಿ ಮಿಶ್ರಣ ಮಾಡಿ, ಜಾಜಿ ಕಲ್ಲನ್ನು ಪುಡಿಯ ಮಿಶ್ರಮಾಡಬೇಕು. ಈ ಮಿಶ್ರಣಗಳಿಂದ ಗೋವುಗಳ ದೇಹಕ್ಕೆ ಅಲಂಕರಿಸ ಬೇಕು.

ಗೋವುಗಳಿಗೆ ಹೂವಿನ ಹಾರಗಳನ್ನು ಹಾಕಿ, ಆರತಿ ಬೆಳಗಿ, ಬಾಳೆಹಣ್ಣು, ಸಿಹಿ ತಿನಿಸಬೇಕು. ಬಳಿಕ ದೋಸೆ ಅಥವಾ ಇಡ್ಲಿ ರೀತಿಯ ತಿನಿಸುಗಳನ್ನು ನೀಡಿ. ಅವುಗಳ ಆಶೀರ್ವಾದ ಪಡೆಯಬೇಕು. ಗೋವುಗಳು ಮನೆ ಸಮೃದ್ಧಿಯ ಸಂಕೇತ. ಹೀಗಾಗಿ ಗೋಪೂಜೆಯನ್ನು ಮನಸ್ಸಿಟ್ಟು ಸಾಂಪ್ರದಾಯಿಕವಾಗಿ ನೆರವೇರಿಸಿದರೆ ಮನೆಯಲ್ಲಿ ಧನ-ಕನಕಗಳ ಸಮೃದ್ಧಿ ಇರುತ್ತದೆ ಎನ್ನುವುದು ನಂಬಿಕೆ. ಹೈನುಗಾರಿಕೆ ರೈತರ ಜೀವನಾಧಾರ. ಹಾಲಿನ ವಹಿವಾಟಿನಿಂದಲೇ ಜೀವನ ನಡೆಸೋ ಅದೆಷ್ಟೋ ರೈತ ಕುಟುಂಬಗಳಿರುತ್ತದೆ. ಹೀಗಾಗಿ ತಮ್ಮ ಜೀವನಕ್ಕೆ ನೆರವಾದ ಗೋವುಗಳಿಗೆ ಭಕ್ತಿಯಿಂದ ಆರಾಧಿಸುವುದು ಗೋಪೂಜೆಯ ವಿಶೇಷ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+