Good news for Tourists: ಬನ್ನೇರುಘಟ್ಟ ಉದ್ಯಾನವನ ಆಡಳಿತ ಮಂಡಳಿಯಿಂದ ಒಂದೊಳ್ಳೆ ಸುದ್ದಿ, ಇಲ್ಲಿದೆ ಮಾಹಿತಿ

ಬೆಂಗಳೂರು, ನವೆಂಬರ್‌, 13: ಇದೀಗ ಬರದ ನಡುವೆಯೂ ರಾಜ್ಯಾದ್ಯಂತ ದೀಪಾವಳಿ ಸಂಭ್ರಮ ಕಳೆಗಟ್ಟಿದೆ. ಇನ್ನು ಈ ವೇಳೆ ಸಾಲು ರಜೆಯಿರುವ ಹಿನ್ನೆಲೆ ಪ್ರವಾಸಿ ತಾಣಗಳತ್ತ ಮುಖ ಮಾಡುವವರ ಸಂಖ್ಯೆ ಹೆಚ್ಚಾಗಿರುತ್ತದೆ. ಅದರಲ್ಲೂ ಸಿಲಿಕಾನ್‌ ಸಿಟಿ ಬೆಂಗಳೂರಿನ ಸಮೀಪವಿರುವ ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಪ್ರವಾಸಿಗರ ದಂಡೇ ಹರಿದುಬರುತ್ತದೆ. ಆದ್ದರಿಂದ ರಜಾ ದಿನವಾದ ಈ ಮಂಗಳವಾರವೂ ಕೂಡ ಉದ್ಯಾನವನ ತೆರೆಯಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಬೆಳಕಿನ ಹಬ್ಬ ದೀಪಾವಳಿ ಹಿನ್ನೆಲೆ ಸಾಲು ಸಾಲು ರಜೆಗಳಿದ್ದು, ನೀವು ಈ ತಾಣಕ್ಕೆ ಪ್ರವಾಸ ತೆರಳಲು ಪ್ಲಾನ್‌ ಮಾಡುಕೊಂಡಿದ್ದರೆ, ಇಲ್ಲಿದೆ ನೋಡಿ ಶುಭಸುದ್ದಿ. ದೀಪಾವಳಿ ಹಿನ್ನೆಲೆ ಮಂಗಳವಾರ ರಜೆ ದಿನವೂ ಕೂಡ ಬನ್ನೇರುಘಟ್ಟ ಜೈವಿಕ ಉದ್ಯಾನವನ ಓಪನ್‌ ಇರಲಿದೆ. ಬನ್ನೇರುಘಟ್ಟ ಜೈವಿಕ ಉದ್ಯಾನವನ ಪ್ರತಿ ಮಂಗಳವಾರ ರಜೆ ಇರಲಿದೆ. ಆದರೆ ಈ ಬಾರಿ ದೀಪಾವಳಿ ರಜೆ ಇರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಉದ್ಯಾನವನಕ್ಕೆ ಬರುವ ಸಾಧ್ಯತೆಯಿದೆ. ಆದ್ದರಿಂದ ಈ ಮಂಗಳವಾರ ಬನ್ನೇರುಘಟ್ಟ ಉದ್ಯಾನವನ ಓಪನ್‌ ಇರಲಿದೆ.

Tourists allowed to enter Bannerghatta National Park on Tuesday

ಅಪಾರ ಪ್ರಮಾಣದ ಪ್ರವಾಸಿಗರು ಬರುವ ಹಿನ್ನೆಲೆ ಮಂಗಳವಾರ ಪಾರ್ಕ್​​ ಗೇಟನ್ನು ತೆರೆದು ಬುಧವಾರ ರಜೆ ಮಾಡಲು ಬನ್ನೇರುಘಟ್ಟ ಜೈವಿಕ ಉದ್ಯಾನವನ ಆಡಳಿತ ಮುಂದಾಗಿದೆ. ಇನ್ನು ಬುಧವಾರ (ನವೆಂಬರ್‌ 15) ರಜೆ ಹಿನ್ನೆಲೆ ಬನ್ನೇರುಘಟ್ಟ ಜೈವಿಕ ಉದ್ಯಾನವನ ವೀಕ್ಷಣೆಗೆ ಪ್ರವಾಸಿಗರಿಗೆ ಅವಕಾಶ ಇರುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೊಂಗಳ್ಳಿ ಮಲ್ಲಪ್ಪನ ಬೆಟ್ಟದ ವಿಶೇಷತೆ

ದೀಪಾವಳಿ ಬರುತ್ತಿದ್ದಂತೆಯೇ ಭಕ್ತರು ಚಾಮರಾಜನಗರ ಜಿಲ್ಲೆಯತ್ತ ಮುಖ ಮಾಡುವುದು ಹೆಚ್ಚಾಗಿ ಕಂಡುಬರುತ್ತದೆ. ಹೆಚ್ಚಿನವರು ಮಲೆಮಹದೇಶ್ವರ ಬೆಟ್ಟಕ್ಕೆ ಹರಕೆ ಕಟ್ಟಿಕೊಂಡು ಕಾಲ್ನಡಿಗೆಯಲ್ಲಿ ತೆರಳಿ ಮಾದಪ್ಪನ ಸೇವೆ ಮಾಡಿ ಬಂದರೆ ಮತ್ತೆ ಕೆಲವರು ಗುಂಡ್ಲುಪೇಟೆ ತಾಲೂಕಿನ ಗಡಿಭಾಗದ ತಾಳವಾಡಿ ಸಮೀಪದ ಇತಿಹಾಸ ಪ್ರಸಿದ್ಧ ಶ್ರೀ ಕೊಂಗಳ್ಳಿ ಮಲ್ಲಪ್ಪನ ಬೆಟ್ಟದತ್ತ ಮುಖ ಮಾಡುತ್ತಾರೆ.

ಮಲೆಮಹದೇಶ್ವರ ಬೆಟ್ಟದಲ್ಲಿ ಮಾದಪ್ಪ ನೆಲೆನಿಂತಿದ್ದರೆ, ಕೊಂಗಳ್ಳಿ ಬೆಟ್ಟದಲ್ಲಿ ಮಲ್ಲಪ್ಪ ಅರ್ಥಾತ್ ಮಲ್ಲಿಕಾರ್ಜುನ ಆದಿದೈವನಾಗಿ ಭಕ್ತರನ್ನು ಹರಸುತ್ತಿದ್ದಾನೆ. ಹೀಗಾಗಿ ಪ್ರತಿವರ್ಷವೂ ದೀಪಾವಳಿ ಅಮವಾಸ್ಯೆಯಂದು ಭಕ್ತರು ಕೊಂಗಳ್ಳಿ ಮಲ್ಲಪ್ಪನ ಬೆಟ್ಟಕ್ಕೆ ತೆರಳಿ ಪೂಜಾ ಕೈಂಕರ್ಯಗಳನ್ನು ನೆರವೇರಿಸುವಂತೆ ಬೇಡಿಕೊಳ್ಳುತ್ತಾರೆ. ಇಷ್ಟಕ್ಕೂ ಕೊಂಗಳ್ಳಿ ಬೆಟ್ಟದ ವಿಶೇಷತೆಯೇ ವಿಭಿನ್ನ ಮತ್ತು ವಿಶಿಷ್ಟವಾಗಿದ್ದು, ಇಲ್ಲಿಗೆ ತೆರಳುವುದೇ ಒಂದು ಸಾಹಸ.

ಇಷ್ಟಕ್ಕೂ ಕೊಂಗಳ್ಳಿ ಬೆಟ್ಟ ತಮಿಳುನಾಡು ಅರಣ್ಯ ಸಂರಕ್ಷಣಾವಲಯಕ್ಕೆ ಸೇರಿರುವುದರಿಂದ ಅಲ್ಲಿಗೆ ಎಲ್ಲ ಸಮಯದಲ್ಲಿ ತೆರಳಲು ಅವಕಾಶವಿಲ್ಲ. ನಿಗದಿತ ಸಮಯದಲ್ಲಿ ತೆರಳಿ ಪೂಜಾ ಕೈಂಕರ್ಯಗಳನ್ನು ಮುಗಿಸಿಕೊಂಡು ಬರಬೇಕಾಗುತ್ತದೆ. ದೀಪಾವಳಿ ಸಮಯದಲ್ಲಿ ಕೆಲವೊಂದು ನಿಬಂಧನೆಗಳನ್ನು ವಿಧಿಸಲಾಗುತ್ತಿದ್ದು, ಅದರಂತೆ ಭಕ್ತರು ತೆರಳಿ ಪೂಜಾ ಕೈಂಕರ್ಯ ನೆರವೇರಿಸಬೇಕಾಗುತ್ತದೆ. ದೀಪಾವಳಿ ಸಂದರ್ಭ ಇಲ್ಲಿನ ಮಲ್ಲಪ್ಪನಿಗೆ ಹುಲಿವಾಹನ ಸೇವೆ ನಡೆಯುವುದು ವಿಶೇಷವಾಗಿದೆ.
ಗಡಿಭಾಗದಲ್ಲಿರುವ ಸುಂದರ ಕ್ಷೇತ್ರ

ಹಾಗೆನೋಡಿದರೆ ದೈವಕ್ಷೇತ್ರವಾಗಿರುವ ಕೊಂಗಳ್ಳಿ ಬೆಟ್ಟ ನಿಸರ್ಗ ಚೆಲುವನ್ನು ಹೊದ್ದು ಕುಳಿತ ಭವ್ಯ ತಾಣವೂ ಹೌದು. ಇದು ಕೇವಲ ಭಕ್ತರನ್ನು ಮಾತ್ರವಲ್ಲದೆ, ಪ್ರವಾಸಿಗರನ್ನು ಕೂಡ ತನ್ನತ್ತ ಸೆಳೆಯುತ್ತದೆ. ಚಾರಣಪ್ರಿಯರಿಗೆ ಹೇಳಿ ಮಾಡಿಸಿದ ತಾಣವಾಗಿದೆ. ಹೀಗಾಗಿ ಇಲ್ಲಿನ ಸುಂದರ ನಿಸರ್ಗವನ್ನು ಸವಿದು ಒಂದಷ್ಟು ಸಮಯವನ್ನು ಪ್ರಕೃತಿಯ ನಡುವೆ ಕಳೆಯಲೆಂದೇ ಬಹಳಷ್ಟು ಜನರು ಬರುತ್ತಾರೆ.

ಕೊಂಗಳ್ಳಿ ಬೆಟ್ಟವು ಮೈಸೂರಿನಿಂದ ಸುಮಾರು ನೂರು ಕಿಲೋ ಮೀಟರ್‌ ಚಾಮರಾಜನಗರದಿಂದ 40 ಕಿ.ಮೀ. ಹಾಗೂ ಗುಂಡ್ಲುಪೇಟೆಯಿಂದ ಸುಮಾರು ಮೂವತ್ತೆರಡು ಕಿಲೋ ಮೀಟರ್ ದೂರದಲ್ಲಿದೆ. ಇಲ್ಲಿಗೆ ತೆರಳಲು ಚಾಮರಾಜನಗರದಿಂದ ಬಸ್ ಸೌಕರ್ಯವಿದ್ದು, ತಾಳವಾಡಿ ಹಾಗೂ ಎತ್ತಗಟ್ಟಿ ಬೆಟ್ಟದ ಮಾರ್ಗದಲ್ಲಿ ತೆರಳಬಹುದಾಗಿದೆ. ಆದರೆ ಇಲ್ಲಿನ ಮಲ್ಲಿಕಾರ್ಜು‍ನ ದೇಗುಲ ಬೆಟ್ಟದ ಮೇಲಿದ್ದು, ಕಾಡಿನಿಂದ ಸುತ್ತುವರೆದಿರುವುದರಿಂದ, ಅರಣ್ಯ ಸಂರಕ್ಷಣಾವಲಯಕ್ಕೆ ಸೇರಿರುವುದರಿಂದ ನಡೆದೇ ಹೋಗಬೇಕಾಗುತ್ತದೆ.
ನಿಗದಿತ ಸಮಯದಲ್ಲಷ್ಟೆ ಪ್ರವೇಶ

ಈ ತಾಣವು ಚಾಮರಾಜನಗರ ಜಿಲ್ಲೆಗೆ ಹೊಂದಿಕೊಂಡಂತಿದ್ದರೂ ತಮಿಳುನಾಡಿಗೆ ಸೇರಿದ್ದು, ತಾಳವಾಡಿ ಪಿರ್ಕಾಕ್ಕೆ ಒಳಪಟ್ಟಿದೆ. ಆದರೆ ಇಲ್ಲಿಗೆ ಕರ್ನಾಟಕದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ತೆರಳುವುದು ವಿಶೇಷವಾಗಿದೆ. ಮೊದಲೆಲ್ಲ ದೇಗುಲಕ್ಕೆ ತೆರಳಿದರೆ ಅಲ್ಲಿ ತಂಗಿದ್ದು, ಮಾರನೆಯ ದಿನ ಹಿಂತಿರುಗುವ ಅವಕಾಶವಿತ್ತು. ಆದರೆ ಇತ್ತೀಚೆಗಿನ ವರ್ಷಗಳಲ್ಲಿ ಇಲ್ಲಿ ಹುಲಿ, ಕರಡಿ, ಕಾಡಾನೆ ಸೇರಿದಂತೆ ಹಲವು ಪ್ರಾಣಿಗಳು ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ರಾತ್ರಿ ತಂಗುವುದಕ್ಕೆ ಹಾಗೂ ರಾತ್ರಿ 6 ಗಂಟೆಯ ನಂತರದ ಪ್ರವೇಶವನ್ನು ನಿರ್ಬಂಧಿಸಲಾಗಿದೆ.

ಸಾಮಾನ್ಯ ದಿನಗಳಲ್ಲಿ ಇಲ್ಲಿಗೆ ಭಕ್ತರು ಆಗಮಿಸಿ ಪೂಜಾ ಕೈಂಕರ್ಯ, ಸೇವೆಗಳನ್ನು ಮಾಡಿ ಹೋಗುತ್ತಾರೆಯಾದರೂ ದೀಪಾವಳಿ ಸಮಯದಲ್ಲಿ ಹೊರ ಊರುಗಳಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಹರಕೆ ಸಲ್ಲಿಸಿ, ಹುಲಿವಾಹನ ಸೇವೆ ಮಾಡಿ, ಸಾಮೂಹಿಕ ಬೋಜನ ಮಾಡಿ ಹಿಂತಿರುಗುತ್ತಾರೆ. ಈ ಬಾರಿ ದೀಪಾವಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ಸಾಧ್ಯತೆಯಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+