Deepavali 2023: ದೆಹಲಿಯಲ್ಲಿ 3 ಕೋಟಿ ಮದ್ಯದ ಬಾಟಲಿ ಮಾರಾಟ, 525 ಕೋಟಿ ರೂಪಾಯಿ ಲಾಭ- ಹಬ್ಬಕ್ಕೆ ಮಿತಿಮೀರಿದ ಕುಡಿತ

ನವದೆಹಲಿ, ನವೆಂಬರ್‌ 14: ದೀಪಾವಳಿ ಹಬ್ಬದ ಋತುವಿನಲ್ಲಿ ದೆಹಲಿ ಸರ್ಕಾರಕ್ಕೆ 525 ಕೋಟಿ ರೂಪಾಯಿ ಲಾಭವಾಗಿದೆ. ಎರಡು ವಾರಗಳಲ್ಲಿ 3 ಕೋಟಿ ಮದ್ಯದ ಬಾಟಲಿಗಳು ಮಾರಾಟವಾಗಿವೆ. ದೀಪಾವಳಿಯ ಮೂರು ದಿನಗಳಲ್ಲಿ ಸುಮಾರು 121 ಕೋಟಿ ರೂಪಾಯಿ ಮೌಲ್ಯದ ಅರವತ್ನಾಲ್ಕು ಲಕ್ಷ ಮದ್ಯದ ಬಾಟಲಿಗಳನ್ನು ಜನರು ಖರೀದಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಧಿಕೃತ ಅಂಕಿಅಂಶಗಳ ಪ್ರಕಾರ, ದೀಪಾವಳಿಯ ಹಿಂದಿನ ವಾರ ಒಂದು ಕೋಟಿಗೂ ಹೆಚ್ಚು ಮದ್ಯದ ಬಾಟಲಿಗಳನ್ನು ಮಾರಾಟ ಮಾಡಲಾಗಿದ್ದು, ಸರ್ಕಾರಕ್ಕೆ 234.15 ಕೋಟಿ ರೂಪಾಯಿ ಲಾಭವಾಗಿದೆ.

Deepavali 2023: Diwali festive season earns over Rs 525 crore; 3 crore liquor bottles sold

'ದೆಹಲಿಯಲ್ಲಿ ಹೋಳಿ ಮತ್ತು ದೀಪಾವಳಿಯಂತಹ ಹಬ್ಬಗಳ ಸಮಯದಲ್ಲಿ ಮದ್ಯದ ಮಾರಾಟವು ಹೆಚ್ಚಾಗುತ್ತದೆ. ಏಕೆಂದರೆ ಅದನ್ನು ವೈಯಕ್ತಿಕ ಬಳಕೆ ಮತ್ತು ಸಂಗ್ರಹಣೆಗಾಗಿ ಮಾತ್ರವಲ್ಲದೆ ಉಡುಗೊರೆಯಾಗಿ ನೀಡಲು ಸಹ ಖರೀದಿಸಲಾಗುತ್ತದೆ' ಎಂದು ಅಬಕಾರಿ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಧಿಕೃತ ಅಂಕಿಅಂಶಗಳ ಪ್ರಕಾರ, ದೀಪಾವಳಿಯ ಹಿಂದಿನ 17 ದಿನಗಳಲ್ಲಿ ಮೂರು ಕೋಟಿ ಬಾಟಲಿಗಳ ಒಟ್ಟು ಮಾರಾಟವು 525.84 ಕೋಟಿ ರೂಪಾಯಿಗಳ ಆದಾಯವನ್ನು ತಂದಿದೆ.

Deepavali 2023: Diwali festive season earns over Rs 525 crore; 3 crore liquor bottles sold

ಗುರುವಾರ, ಶುಕ್ರವಾರ ಮತ್ತು ಶನಿವಾರದಂದು ಕ್ರಮವಾಗಿ 17.33 ಲಕ್ಷ, 18.89 ಲಕ್ಷ ಮತ್ತು 27.89 ಲಕ್ಷ ಬಾಟಲಿಗಳನ್ನು ಮಾರಾಟ ಮಾಡುವುದರೊಂದಿಗೆ ದೀಪಾವಳಿಯ ಮುಂಚೆಯೇ ಮದ್ಯದ ಮಾರಾಟವನ್ನು ಹೆಚ್ಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದೀಪಾವಳಿಯಂದು ( ಸೋಮವಾರ ) ಅಂಗಡಿಗಳನ್ನು ಮುಚ್ಚಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೂರು ದಿನಗಳಲ್ಲಿ ಒಟ್ಟು 64 ಲಕ್ಷ ಬಾಟಲಿಗಳ ಮಾರಾಟದಿಂದ ಒಟ್ಟು 120.92 ಕೋಟಿ ರೂಪಾಯಿ ಲಾಭವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಕಳೆದ ವರ್ಷ ದೀಪಾವಳಿಯ ಹಿಂದಿನ ಮೂರು ದಿನಗಳಲ್ಲಿ 13.46 ಲಕ್ಷ, 15 ಲಕ್ಷ ಮತ್ತು 19.39 ಲಕ್ಷ ಬಾಟಲಿಗಳ ಮದ್ಯ ಮಾರಾಟವಾಗಿತ್ತು. ಶನಿವಾರ ದೀಪಾವಳಿ ಮುನ್ನಾದಿನದಂದು 53.89 ಲಕ್ಷ ಮೌಲ್ಯದ ಮದ್ಯದ ಬಂಪರ್ ಮಾರಾಟ ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Deepavali 2023: Diwali festive season earns over Rs 525 crore; 3 crore liquor bottles sold

2022 ಕ್ಕೆ ಹೋಲಿಸಿದರೆ ದೀಪಾವಳಿಗೆ 17 ದಿನಗಳ ಮೊದಲು ದೆಹಲಿಯಲ್ಲಿ 2.11 ಕೋಟಿ ಮದ್ಯದ ಬಾಟಲಿಗಳು ಮಾರಾಟವಾಗಿತ್ತು. ಈ ವರ್ಷ ಈ ಸಂಖ್ಯೆ ಮೂರು ಕೋಟಿಗೆ ಏರಿದೆ. ಇದು 42 ಶೇಕಡಾ ಬೆಳವಣಿಗೆಯನ್ನು ದಾಖಲಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಹಬ್ಬದ ಅವಧಿಯಲ್ಲಿ ಮಾರಾಟವಾದ ಬಾಟಲಿಗಳ ಸರಾಸರಿ ಸಂಖ್ಯೆಯು 2022 ರಲ್ಲಿ 12.44 ಲಕ್ಷವಾಗಿತ್ತು. ಇದಕ್ಕೆ ಹೋಲಿಸಿದರೆ, ದಿನಕ್ಕೆ 17.93 ಲಕ್ಷ ಮದ್ಯದ ಬಾಟಲಿಗಳು ಮಾರಾಟವಾಗಿದೆ. ಈ ಅವಧಿಯಲ್ಲಿ ಸರಾಸರಿ ದೈನಂದಿನ ಮಾರಾಟದ ಬೆಳವಣಿಗೆಯು 5.49 ಲಕ್ಷ ಬಾಟಲಿಗಳು ಅಥವಾ ಶೇಕಡಾ 44 ರಷ್ಟಿದೆ ಎಂದು ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದಾರೆ.

ರಾಷ್ಟ್ರ ರಾಜಧಾನಿಯಲ್ಲಿ 650 ಕ್ಕೂ ಹೆಚ್ಚು ಮದ್ಯದಂಗಡಿಗಳಿವೆ, ಅವುಗಳು ನಾಲ್ಕು ದೆಹಲಿ ಸರ್ಕಾರಿ ನಿಗಮಗಳಿಂದ ನಡೆಸಲ್ಪಡುತ್ತವೆ. ಹಬ್ಬದ ಸೀಸನ್‌ಗೆ ಮುಂಚಿತವಾಗಿ, ಕಾರ್ಪೊರೇಷನ್‌ಗಳಿಗೆ ಆರ್ಡರ್‌ಗಳನ್ನು ನೀಡಲು ಮತ್ತು ದೀಪಾವಳಿ ಮಾರಾಟಕ್ಕಾಗಿ ಉತ್ತಮವಾಗಿ ಸಂಗ್ರಹಿಸಲು ಸೂಚನೆ ನೀಡಲಾಗಿತ್ತು ಎಂದು ಅಬಕಾರಿ ಇಲಾಖೆ ಅಧಿಕಾರಿ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+