ಬರದ ನಡುವೆಯೂ ಬೆಳಕಿನ ಹಬ್ಬ: ಮಾರುಕಟ್ಟೆಯಲ್ಲಿ ಮಿಂಚಿದ ವಿವಿಧ ಶೈಲಿಯ ದೀಪಗಳು
ಹುಬ್ಬಳ್ಳಿ, ನವೆಂಬರ್ 12: ಬೆಳಕಿನ ಹಬ್ಬ ದೀಪಾವಳಿ ಸಮೀಪಿಸುತ್ತಿದ್ದು, ನಗರದ ದುರ್ಗದಬೈಲ್, ಜನತಾ ಬಜಾರ ಹಾಗೂ ಹಳೇ ಹುಬ್ಬಳ್ಳಿಯ ಮಾರುಕಟ್ಟೆಗಳಲ್ಲಿ ಸಂಭ್ರಮ ಕಳೆಗಟ್ಟಿದೆ.
ಎತ್ತ ನೋಡಿದರೂ ಆಕರ್ಷಿಸುವ ತರಹೇವಾರಿ ಆಕಾಶ ಬುಟ್ಟಿಗಳು, ಗಮನ ಸೆಳೆಯುವ ವಿದ್ಯುತ್ ದೀಪಗಳು, ವಾಸನೆ ಬೀರದಿದ್ದರೂ ಖರೀದಿಗೆ ಪ್ರೇರೆಪಿಸುವ ಪ್ಲ್ಯಾಸ್ಟಿಕ್ ಹೂಗಳು, ಅಂಗಳ ಅಂದಗೊಳಿಸುವ ಬಣ್ಣ ಬಣ್ಣದ ರಂಗೋಲಿ, ಹೀಗೆ ಹತ್ತು ಹಲವು ಆಲಂಕಾರಿಕ ವಸ್ತುಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು ಜನ ಖರೀದಿಯಲ್ಲಿ ತೊಡಗಿದ್ದಾರೆ.

ಪ್ರತಿ ವರ್ಷದಂತೆ ದೀಪಾವಳಿ ಹಬ್ಬಕ್ಕೆ ಹತ್ತು ದಿನಕ್ಕೂ ಮೊದಲೇ ದುರ್ಗದ ಬೈಲ್‍ನ ಕೇಂದ್ರ ವೃತ್ತದಲ್ಲಿ ಹತ್ತಾರು ಮಳಿಗೆಗಳನ್ನು ಹಾಕಲಾಗಿದೆ. ಅದರ ಎದುರು ಮಣ್ಣಿನ ಹಣತೆ, ಗಾಜಿನ ಹಣತೆ ಸೇರಿ ವಿಭಿನ್ನ ವಿನ್ಯಾಸದ ದೀಪ ಬೆಳಗಿಸುವ ಅಲಂಕಾರಿಕ ವಸ್ತುಗಳನ್ನು ಮಾರಾಟಕ್ಕೆ ಇಡಲಾಗುತ್ತದೆ. ಜೊತೆಗೆ ಸುಗಂಧ ಬೀರುವ ಮಲ್ಲಿಗೆ, ಸೇವಂತಿಗೆ, ಕನಕಾಂಬರ, ಗುಲಾಬಿ, ಸೂರ್ಯಕಾಂತಿ ಹೀಗೆ ತರಹೇವಾರಿ ಹೂಗಳು ಗ್ರಾಹಕರನ್ನು ಸೆಳೆಯುತ್ತಿವೆ.
ಬಟ್ಟೆ, ಕಟ್ಟಿಗೆ, ಮಿಂಚಿನ ಹಾಳೆ, ದಾರದಿಂದ ತಯಾರಿಸಿದ ನೂರಾರು ವಿಭಿನ್ನ ಶೈಲಿಯ ಆಕಾಶಬುಟ್ಟಿಗಳನ್ನು ಹುಬ್ಬಳ್ಳಿಯ ಸ್ಥಳೀಯ ಮಾರುಕಟ್ಟೆ ಹಾಗೂ ಮುಂಬೈ, ದೆಹಲಿ, ಕಲ್ಕತ್ತಾ ಮತ್ತು ರಾಜಸ್ಥಾನದಿಂದ ತರಿಸಲಾಗಿದೆ. ಗಾತ್ರಕ್ಕೆ ತಕ್ಕಂತೆ ₹ 150 ರಿಂದ ₹ 3 ಸಾವಿರದವರೆಗೆ ಮಾರುತ್ತೇವೆ. ಈ ಬಾರಿ 3ಡಿ ಹಾಗೂ ಎಲ್‍ಇಡಿ ಆಕಾಶಬುಟ್ಟಿಗಳು ಹೊಸದಾಗಿದ್ದು ಜನರು ಉತ್ಸುಕತೆಯಿಂದ ಖರೀದಿಸುತ್ತಿದ್ದಾರೆ ಎಂದು ವ್ಯಾಪರಸ್ಥರು ಖುಷಿ ಹಂಚಿಕೊಂಡಿದ್ದಾರೆ.
ಲೈಟಿನ ಸರಗಳು ₹100 ರಿಂದ ₹ 800ದವರೆಗೆ ಹಾಗೂ ಮಳಿಗೆ ಮತ್ತು ಮನೆ ಅಲಂಕಾರಕ್ಕೆ ಮಿನಿ ಆಕಾಶ ದೀಪಗಳು, ಮಿಂಚಿನ ಚೆಂಡು, ಥರ್ಮಕೋಲ್‍ನಿಂದ ತಯಾರಿಸಿದ ದೀಪಾವಳಿ ಶುಭಾಶಯ ಹೀಗೆ ಹಲವು ವಸ್ತುಗಳನ್ನು ಮಾರಾಟ ಮಾಡಲಾಗುತ್ತಿದೆ. ಎರಡು ದಿನ ಮಳೆಯಾಗಿದ್ದರಿಂದ ವ್ಯಾಪಾರ ಸಾಧಾರಣವಾಗಿತ್ತು.

ಹಬ್ಬದ ಮುಖ್ಯ ಆಕರ್ಷಣೆ ಬಾಗಿಲ ತೋರಣಗಳು ಸಹ ಹೆಚ್ಚು ಮಾರಾಟವಾಗುತ್ತಿವೆ. ಗುಣಮಟ್ಟ ಹಾಗೂ ವಿನ್ಯಾಸಕ್ಕೆ ತಕ್ಕಂತೆ ₹ 30 ರಿಂದ ₹900 ದವರೆಗೆ ದರ ನಿಗದಿಪಡಿಸಲಾಗಿದೆ. ಮುತ್ತಿನ ತೋರಣಗಳು ಕೊಂಚ ದುಬಾರಿ ಆಗಿದ್ದರಿಂದ ಖರೀದಿಸುವವರ ಸಂಖ್ಯೆ ಕಡಿಮೆಯಿರುತ್ತದೆ. ಪ್ಲ್ಯಾಸ್ಟಿಕ್ ಹೂವಿನ ಮಾಲೆಗಳು ಜೋಡಿಗೆ ₹ 100 ರಿಂದ ₹ 450 ದವರೆಗೆ ಮಾರಲಾಗುತ್ತಿದೆ.
ಎಣ್ಣೆಯ ಬದಲು ನೀರು ಹಾಕಿದರೆ ಬೆಳಗುವ ದೀಪ ಮಾರುಕಟ್ಟೆಗೆ ಬಂದಿದ್ದು ಬೇಡಿಕೆ ಹೆಚ್ಚಾಗಿದೆ. ಗಾತ್ರ ಹಾಗೂ ವಿನ್ಯಾಸಕ್ಕೆ ತಕ್ಕಂತೆ ದರ ನಿಗದಿಪಡಿಸಲಾಗಿದ್ದು ಚಿಕ್ಕದು ₹100ಕ್ಕೆ ನಾಲ್ಕರಂತೆ ಹಾಗೂ ತುಸು ದೊಡ್ಡದು ಮತ್ತು ಆಲಂಕಾರಿಕ ದೀಪ ₹ 100ಕ್ಕೆ ಎರಡರಂತೆ ಮಾರಾಟವಾಗುತ್ತಿವೆ.
ಜೊತೆಗೆ ಶೆಲ್ ದೀಪಗಳು ₹30ರಿಂದ ₹100 ದವರೆಗೆ ಹಾಗೂ ಬೆಳಕಿನೊಂದಿಗೆ ಸುವಾಸನೆಯನ್ನು ಬೀರುವ ಸ್ಮೆಲ್ ಕ್ಯಾಂಡಲ್ಸ್ ₹80ಕ್ಕೆ ಒಂದರಂತೆ ಮಾರಲಾಗುತ್ತಿದೆ. ಮನೆಯ ತಾರಸಿ ಕಿಟಕಿ ಚೌಕಟ್ಟುಗಳನ್ನು ಚಂದಗೊಳಿಸುವ ಹ್ಯಾಂಗಿಂಗ್ ದೀಪಗಳು ಗ್ರಾಹಕರನ್ನು ಹೆಚ್ಚು ಸೆಳೆಯುತ್ತಿವೆ.

ಕಳೆದ ವರ್ಷಕ್ಕಿಂತ ಈ ವರ್ಷ ವಸ್ತುಗಳ ಬೆಲೆ ಹೆಚ್ಚಳವಾಗಿದೆ. ಜೊತೆಗೆ ಹೊಸ ವಿನ್ಯಾಸದ ನೂರಾರು ಆಕಾಶ ಬುಟ್ಟಿಗಳು ಮಾರಾಟಕ್ಕೆ ಲಭ್ಯ ಇದ್ದು, ಮಾರುಕಟ್ಟೆಯಲ್ಲಿ ಹೂ ಹಣ್ಣು ದುಬಾರಿ ಆಗಿದೆ. ಆದರೆ ಪಂಚ ಗ್ಯಾರಂಟಿ ಕೊಡುವ ಬದಲು ಕೊಂಚ ಬೆಲೆ ನಿಯಂತ್ರಣಕ್ಕೆ ಮುಂದಾಗಲಿ ಎಂದು ಜನರು ಸರ್ಕಾರವನ್ನು ಆಗ್ರಹಿಸಿದ್ದಾರೆ.
-
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Bengaluru Startup: ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿ ಅಲ್ಲ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ -
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್ -
Rain: ಕರ್ನಾಟಕದ ಕಾಶ್ಮೀರವಾದ ಮಾಚಾಪುರ: ಜೆಸಿಬಿ ಮೂಲಕ ಆಲಿಕಲ್ಲು ತೆರವು, ಕಂಗಾಲಾದ ಅನ್ನದಾತ -
Tamarind Price: ಹುಣಸೆ ಬೆಲೆಯಲ್ಲಿ ಭರ್ಜರಿ ಹೆಚ್ಚಳ: ಇಂದಿನ ಬೆಲೆ ಎಷ್ಟಿದೆ, ಹುಣಸೆ ಹಣ್ಣು ಬೆಲೆ ಏರಿಕೆಗೆ ಕಾರಣವೇನು -
ಲಕ್ಷಾಂತರ ರೂಪಾಯಿ ಸಂಬಳದ ಕೆಲಸಕ್ಕೆ ಗುಡ್ಬೈ: ಸಿಂಗಾಪುರದಿಂದ ಮುಂಬೈಗೆ ಬಂದು ಕವಿಯಾದ ಭಾರತೀಯ ಮೂಲದ ಯುವತಿ -
Bengaluru School: ರಾಜಾಜಿನಗರದಲ್ಲಿ ಶಾಲೆ ವಿರುದ್ಧ ನಿವಾಸಿಗಳ ಬೇಸರ: ಹೈಕೋರ್ಟ್ ನೋಟಿಸ್ ಜಾರಿ -
Vande Bharat Express: ತಂಬಾಕು ಉಗಿಯಲು ಹೋಗಿ ಹೈಸ್ಪೀಡ್ ರೈಲಿಗೆ ಡಿಕ್ಕಿ, ವ್ಯಕ್ತಿ ಸಾವು Video












Click it and Unblock the Notifications