ಒಂದೇ ರೀಲ್‌ಗೆ 76 ಲಕ್ಷ ಗಳಿಕೆ! ಹಣಕೊಟ್ರೆ ಮದ್ವೆಗೂ ಬರ್ತಾರಂತೆ ಈ ಇನ್‌ಫ್ಲುಯೆನ್ಸರ್‌

ರೀಲ್ಸ್‌ ಮಾಡೋದ್ರಿಂದ ಎಷ್ಟು ದುಡ್ಡು ಮಾಡಬಹುದು ಅಂದರೆ ಇಲ್ಲೊಬ್ಬ ಸೋಷಿಯಲ್‌ ಮೀಡಿಯಾ ಇನ್‌ಫ್ಲುಯೆನ್ಸರ್‌ ಬರೋಬ್ಬರಿ 76 ಲಕ್ಷ ರೂಪಾಯಿ ಅಂದಿದ್ದಾರೆ. ಅದು ಹೇಗೆ ಸಾಧ್ಯ ಅಂದ್ರೆ ಅದಕ್ಕೂ ಅವರ ಬಳಿ ಉತ್ತರ ಇದೆ.

ಈ ವಾರ ಸಖತ್ ಹೈಪ್ ಕ್ರಿಯೇಟ್‌ ಮಾಡಿರೋದು ಸೋಷಿಯಲ್‌ ಮೀಡಿಯಾ ಇನ್‌ಫ್ಲುಯೆನ್ಸರ್‌ ಓರಿ. ಈ ವ್ಯಕ್ತಿ ಒಂದೇ ಒಂದು ರೀಲ್‌ನಿಂದ ಬರೋಬ್ಬರಿ 76 ಲಕ್ಷ ರೂಪಾಯಿ ಗಳಿಸಿಕೊಂಡಿದ್ದಾರಂತೆ. ಮದುವೆ, ಪಾರ್ಟಿಗಳಿಗೆ ಕರೆದರೂ ಬರ್ತಾರಂತೆ. ಆದರೆ ಅವರು ಬೇಡಿಕೆ ಇಡುವ ದುಬಾರಿ ಮೊತ್ತ ಅಂದರೆ 15 ರಿಂದ 20 ಲಕ್ಷ ರೂಪಾಯಿ ಕೊಡೋದಕ್ಕೆ ರೆಡಿ ಇರ್ಬೇಕು.

Influencer ORRY

ಲಕ್ಷಗಟ್ಟಲೆ ಫಾಲೋವಿಂಗ್‌

2.5 ಮಿಲಿಯನ್ ಫಾಲೋವರ್ಸ್ ಹೊಂದಿರುವ ಸಾಮಾಜಿಕ ಜಾಲತಾಣದ ಪ್ರಭಾವಿ ಓರಿ, ತಾನು ಬ್ರ್ಯಾಂಡ್ ಸಹಯೋಗ ಮತ್ತು ಸಾರ್ವಜನಿಕ ಕಾರ್ಯಕ್ರಮಗಳಿಂದ ಭಾರಿ ಪ್ರಮಾಣದಲ್ಲಿ ಹಣ ಗಳಿಸುವುದಾಗಿ ಹೇಳಿಕೊಂಡಿದ್ದಾರೆ.

'ಮೊದಲ ಸಂಬಳ 32,000, ಅಪ್ಪ ಕೇಳಿದ್ದು 5,000': ಬೆಂಗಳೂರು ಟೆಕ್ಕಿಯ ಬದುಕನ್ನೇ ಬದಲಿಸಿದ ಆ ಒಂದು ಬೇಡಿಕೆ, ಕಾರಣವೇನು?
'ಮೊದಲ ಸಂಬಳ 32,000, ಅಪ್ಪ ಕೇಳಿದ್ದು 5,000': ಬೆಂಗಳೂರು ಟೆಕ್ಕಿಯ ಬದುಕನ್ನೇ ಬದಲಿಸಿದ ಆ ಒಂದು ಬೇಡಿಕೆ, ಕಾರಣವೇನು?

ಇಲ್ಲಿವರೆಗೆ ಗುಟ್ಟಾಗಿದ್ದ ವಿಷಯ ಈಗ ಬಹಿರಂಗ

ಓರಿ ಜೀವನೋಪಾಯಕ್ಕಾಗಿ ಅಸಲಿಗೆ ಏನು ಕೆಲಸ ಮಾಡುತ್ತಾರೆ ಎಂಬ ಪ್ರಶ್ನೆ ಹಲವು ಬಾರಿ ಎದ್ದಿದೆ. ಈ ಸಾಮಾಜಿಕ ಜಾಲತಾಣದ ಪ್ರಭಾವಿಯನ್ನು ಟಾಕ್ ಶೋಗಳಲ್ಲಿ ಅವರ ವೃತ್ತಿಯ ಬಗ್ಗೆ ಅದೆಷ್ಟೋ ಬಾರಿ ಕೇಳಲಾಗಿದೆ, ಆದರೆ ಅವರ ಉತ್ತರಗಳು ಯಾವಾಗಲೂ ಅಸ್ಪಷ್ಟ ಮತ್ತು ಗೊಂದಲಮಯವಾಗಿರುತ್ತಿದ್ದವು. ಇತ್ತೀಚಿನ ಇಂಟರ್‌ವ್ಯೂ ಒಂದರಲ್ಲಿ ಓರಿ ತಾನು ಹೇಗೆ ಹಣ ಮಾಡುತ್ತೇನೆ ಎಂಬುದನ್ನು ಮುಕ್ತವಾಗಿ ಹೇಳಿಕೊಂಡಿದ್ದಾರೆ ಮತ್ತು ತನ್ನ ವೈಯಕ್ತಿಕ ಬ್ರ್ಯಾಂಡ್ ಹಾಗೂ ಆನ್‌ಲೈನ್ ಜನಪ್ರಿಯತೆಯನ್ನು ಹೇಗೆ ಒಂದು ಭಾರಿ ಲಾಭದಾಯಕ ವ್ಯವಹಾರವಾಗಿ ಬದಲಾಯಿಸಿದ್ದೇನೆ ಎಂಬ ಐಡಿಯಾಗಳನ್ನು ಹಂಚಿಕೊಂಡಿದ್ದಾರೆ.

ಒಂದೇ ರೀಲ್‌ನಿಂದ 76 ಲಕ್ಷ ರೂಪಾಯಿ ಆದಾಯ

ಓರಿ ಇತ್ತೀಚೆಗೆ ಕಾವ್ಯಾ ಕರ್ನಾಟಕ್ ನಡೆಸಿಕೊಡುವ ಲರ್ನ್ ಬೈ ಕೆಕೆ ಕ್ರಿಯೇಟ್ ಪಾಡ್‌ಕಾಸ್ಟ್‌ನಲ್ಲಿ ಕಾಣಿಸಿಕೊಂಡಿದ್ದರು. ಆ ಸಮಯದಲ್ಲಿ ತನ್ನ ಗಳಿಕೆಯ ಗುಟ್ಟು ಬಿಟ್ಟುಕೊಟ್ಟಿದ್ದಾರೆ. ಬ್ರ್ಯಾಂಡ್ ಪಾಲುದಾರಿಕೆ ಮತ್ತು ಪ್ರಾಯೋಜಿತ ಕಂಟೆಂಟ್ ಬಗ್ಗೆ ಮಾತನಾಡುತ್ತಾ, ಹೋದ ತಿಂಗಳು ತಾನು ಕೇವಲ ಒಂದೇ ಒಂದು ಡೀಲ್, ಅಂದರೆ ಒಂದೇ ಒಂದು ರೀಲ್‌ನಿಂದ 76 ಲಕ್ಷ ರೂಪಾಯಿ ಗಳಿಸಿದೆ ಎಂದೂ ಅವರು ಹೇಳಿದ್ದಾರೆ.

ಮಗನ ಲ್ಯಾಂಬೋರ್ಗಿನಿ ಕಾರಿಗೆ ಅಪ್ಪನ ಆಟೋದ್ದೇ ನಂಬರ್ ಪ್ಲೇಟ್: ವೈರಲ್‌ ಪೋಸ್ಟ್‌ ನೋಡಿ ನೆಟ್ಟಿಗರು ಫಿದಾ
ಮಗನ ಲ್ಯಾಂಬೋರ್ಗಿನಿ ಕಾರಿಗೆ ಅಪ್ಪನ ಆಟೋದ್ದೇ ನಂಬರ್ ಪ್ಲೇಟ್: ವೈರಲ್‌ ಪೋಸ್ಟ್‌ ನೋಡಿ ನೆಟ್ಟಿಗರು ಫಿದಾ

ಖಾಸಗಿ ಕಾರ್ಯಕ್ರಮಗಳಲ್ಲಿ ಭಾಗವಹಿಸಲು 15 ರಿಂದ 25 ಲಕ್ಷ ರೂಪಾಯಿ

ಓರಿ ತನ್ನ ಆನ್‌ಲೈನ್ ಜನಪ್ರಿಯತೆಯನ್ನು ಚೆನ್ನಾಗಿಯೇ ಬಳಸಿಕೊಳ್ತಿದ್ದಾರೆ. ಕೆಲವರಿಗೆ ಫೇಮಸ್‌ ವ್ಯಕ್ತಿಗಳನ್ನ ತನ್ನ ಫ್ರೆಂಡ್‌ ಅಂತ ನಾಲ್ಕು ಜನರೆದುರು ಹೇಳಿಕೊಳ್ಳುವ ಖಯಾಲಿ. ಅದನ್ನಿವರು ಚೆನ್ನಾಗಿ ಎನ್‌ಕ್ಯಾಶ್‌ ಮಾಡಿಕೊಂಡಿದ್ದಾರೆ. ಒಬ್ಬ ಫ್ರೆಂಡ್‌ನ ಹಾಗೆ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಬರುವುದನ್ನು ವ್ಯವಹಾರದ ಭಾಗವಾಗಿ ನೋಡಿದ್ದಾರೆ. ಖಾಸಗಿ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಮತ್ತು ಮಧ್ಯಾಹ್ನದ ಊಟ, ರಾತ್ರಿಯ ಊಟ, ಹುಟ್ಟುಹಬ್ಬದ ಪಾರ್ಟಿಗಳು, ಮದುವೆಗಳು ಮತ್ತು ಇತರ ಸಾಮಾಜಿಕ ಕೂಟಗಳಲ್ಲಿ ಕಾಣಿಸಿಕೊಳ್ಳಲು 15 ಲಕ್ಷದಿಂದ 25 ಲಕ್ಷ ರೂಪಾಯಿವರೆಗೆ ಚಾರ್ಜ್ ಮಾಡುವುದಾಗಿ ಹೇಳಿದ್ದಾರೆ.

'15 ರಿಂದ 25 ಲಕ್ಷ ರೂಪಾಯಿಗೆ ನೀವು ನನ್ನನ್ನು ಮಧ್ಯಾಹ್ನದ ಊಟಕ್ಕೆ ಕರೆಯಬಹುದು, ರಾತ್ರಿಯ ಊಟಕ್ಕೆ ಕರೆಯಬಹುದು, ನಾನು ನಿಮ್ಮ ಮದುವೆಗೆ ಬರುತ್ತೇನೆ, ನಿಮ್ಮ ಹುಟ್ಟುಹಬ್ಬಕ್ಕೆ ಬರುತ್ತೇನೆ, ನಾವು ಬಾಲ್ಯದ ಸ್ನೇಹಿತರಾಗಿದ್ದೇವೇನೋ ಎನ್ನುವಂತೆ ವ್ಯವಹರಿಸುತ್ತೇನೆ, ನಿಮ್ಮೊಂದಿಗೆ ಸಮಯ ಕಳೆಯುತ್ತೇನೆ ,ನಿಮ್ಮ ಪೋಷಕರೊಂದಿಗೆ ಕುಡಿಯುತ್ತೇನೆ, ನೀವು ಯಾರನ್ನು ಭೇಟಿ ಮಾಡಿಸಲು ಬಯಸುವಿರೋ ಅವರನ್ನೆಲ್ಲ ಭೇಟಿಯಾಗುತ್ತೇನೆ. ಇದು ನೀವು ಹಣ ಕೊಟ್ಟು ಪಡೆಯಬಹುದಾದ ಒಂದು ಅನುಭವ' ಅನ್ನುತ್ತಾರೆ.

ಶಾರೂಕ್‌ನಂತೆ ಸಿಗ್ನೇಚರ್‌ ಫೋಸ್‌

ಮತ್ತು ಭಾರತದಲ್ಲಿ ಕೇವಲ ಇಬ್ಬರು ವ್ಯಕ್ತಿಗಳು ಮಾತ್ರ ತಮ್ಮ ಪೋಸ್‌ಗಳಿಗೆ ಹೆಸರುವಾಸಿಯಾಗಿದ್ದಾರೆ ಅದರಲ್ಲಿ ಒಬ್ಬರು ಶಾರೂಕ್‌, ಇನ್ನೊಬ್ಬ ವ್ಯಕ್ತಿ ತಾನೇ ಅಂತ ಹೇಳಿದ್ದಾರೆ. ಇವರಿಗೆ ಬರುವ ದುಡ್ಡಿನ ವ್ಯವಹಾರ ನೋಡಿಕೊಳ್ಳೋದು ಇವರ ಪೋಷಕರೇ ಅಂತಲೂ ಹೇಳಿದ್ದಾರೆ.

ಓರಿ ಯಾರು?

ಓರ್ಹಾನ್ ಅವಟ್ರಾಮಣಿ ಅನ್ನೋದು ಒರಿಜಿನಲ್‌ ಹೆಸರು. ಜನ ಇವರನ್ನು ಗುರುತಿಸೋದು ಓರಿ ಅನ್ನೋ ಹೆಸರಲ್ಲಿ. ಇನ್‌ಸ್ಟಾಗ್ರಾಮ್‌ನಲ್ಲಿ 2.5 ಮಿಲಿಯನ್‌ಗಿಂತಲೂ ಹೆಚ್ಚು ಫಾಲೋವರ್ಸ್ ಹೊಂದಿದ್ದಾರೆ. ಹೆಚ್ಚಾಗಿ ಸೆಲೆಬ್ರಿಟಿಗಳೊಂದಿಗೆ ಪಾರ್ಟಿ ಮಾಡುವುದು ಮತ್ತು ಬಾಲಿವುಡ್‌ನ ಹೈ ಪ್ರೊಫೈಲ್ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ಮಾಡ್ತಿರುತ್ತಾರೆ. ಅಂಬಾನಿ ಕುಟುಂಬದ ಆಪ್ತ ಬಳಗದ ಭಾಗವಾಗಿದ್ದಾರೆ ಎಂಬ ಮಾತೂ ಇದೆ. ವರದಿಗಳ ಪ್ರಕಾರ, ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಚೇರ್‌ಪರ್ಸನ್ ಕಚೇರಿಯಲ್ಲಿ ವಿಶೇಷ ಪ್ರಾಜೆಕ್ಟ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಾರಂತೆ. ಓರಿ ತನ್ನ ಸಿಗ್ನೇಚರ್ ಪೋಸ್‌ಗೂ ಫೇಮಸ್‌. ಇದರಲ್ಲಿ ಅವರು ಫೋಟೋಗಳಿಗೆ ಪೋಸ್ ನೀಡುವಾಗ ಸೆಲೆಬ್ರಿಟಿಯ ಎದೆಯ ಮೇಲೆ ತಮ್ಮ ಕೈಯನ್ನು ಇಡುತ್ತಾರೆ. ಇಲ್ಲವೇ ಅವರ ಕೈಯನ್ನು ತನ್ನ ಎದೆಮೇಲೆ ಇಡುತ್ತಾರೆ.

ಬರಹ : ಭವಾನಿ ಭಟ್‌

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+