ಇಂದಿನಿಂದ ಈ ರಾಶಿಯವರಿಗೆ ಎಡರಡೆರಡು ರಾಜಯೋಗ:ಲಕ್ಷ್ಮೀ ಕೃಪೆಯಿಂದ ಹೆಚ್ಚುವುದು ಹಣ, ಆಸ್ತಿ ಖರೀದಿ ಭಾಗ್ಯ

ಗುರುವಾರ ಅಂದರೆ ಇಂದು ನಕ್ಷತ್ರಗಳ ರಾಜ ಪುಷ್ಯ ನಕ್ಷತ್ರಕ್ಕೆ ಗುರು ಸಂಕ್ರಮಿಸಲಿದ್ದಾನೆ. ಹಾಗಾಗಿ ಇಂದು ಗುರು ಪುಷ್ಯ ಯೋಗವು ಉಂಟಾಗುತ್ತದೆ.ಇದನ್ನು ಜ್ಯೋತಿಷ್ಯದಲ್ಲಿ ಬಹಳ ಶುಭವೆಂದು ಪರಿಗಣಿಸಲಾಗುತ್ತದೆ. ಈ ಯೋಗದ ಸಮಯದಲ್ಲಿ ಚಿನ್ನ ಮತ್ತು ಬೆಳ್ಳಿಯನ್ನು ಖರೀದಿಸುವುದು ಅಥವಾ ಹೊಸ ಉದ್ಯಮವನ್ನು ಪ್ರಾರಂಭಿಸುವುದರಿಂದ ಸಂಪತ್ತು, ಸಮೃದ್ಧಿ ಹೆಚ್ಚಾಗುತ್ತದೆ. ಮಾಡುವ ಕಾರ್ಯದಲ್ಲಿ ಯಶಸ್ಸು ಸಿಗುತ್ತದೆ. ಇಂದು ರೂಪುಗೊಂಡ ಈ ಯೋಗವು ಹಲವು ವಿಧಗಳಲ್ಲಿ ವಿಶೇಷವಾಗಿದೆ.

ವಾಸ್ತವವಾಗಿ, ಗುರು ಪುಷ್ಯ ನಕ್ಷತ್ರದ ಜೊತೆಗೆ, ಇಂದು ಹಲವಾರು ರಾಜಯೋಗಗಳು ರೂಪುಗೊಳ್ಳುತ್ತಿವೆ. ಜೂನ್ 18 ರಂದು ರಾತ್ರಿ 9:32 ಕ್ಕೆ, ಗುರು ಪುಷ್ಯ ನಕ್ಷತ್ರವನ್ನು ಪ್ರವೇಶಿಸುತ್ತಾನೆ. ಮತ್ತು ಎರಡು ತಿಂಗಳು ಈ ನಕ್ಷತ್ರದಲ್ಲಿ ಉಳಿದು ಶುಭ ಫಲಿತಾಂಶಗಳನ್ನು ನೀಡುತ್ತಾನೆ. ಇದಲ್ಲದೆ, ಕರ್ಕಾಟಕದ ಉತ್ತುಂಗದಲ್ಲಿರುವ ಗುರು, ಹಂಸ ರಾಜ ಯೋಗವನ್ನೂ ಸೃಷ್ಟಿಸುತ್ತಿದ್ದಾನೆ. ಇಂದು, ಚಂದ್ರನೊಂದಿಗೆ ಸಂಯೋಗದಿಂದ ಗಜಕೇಸರಿ ರಾಜ ಯೋಗವನ್ನು ಸಹ ರೂಪಿಸುತ್ತಿದ್ದಾನೆ. ಶುಕ್ರನು ಕರ್ಕಾಟಕದಲ್ಲಿದ್ದು, ಗುರುವಿನ ಸಂಯೋಗದಿಂದ ಧನ ಯೋಗವನ್ನು ರೂಪಿಸುತ್ತಾನೆ. ಹೀಗಾಗಿ, ಇಂದು ಅನೇಕ ಜನರ ಅದೃಷ್ಟವನ್ನು ಬದಲಾಯಿಸಬಹುದು.

Guru Pushya Yoga 2026

ಮೂರು ರಾಜಯೋಗದಿಂದ ಹೆಚ್ಚುವುದು ಈ ರಾಶಿಯವರ ಅದೃಷ್ಟ:

1. ಮೇಷ ರಾಶಿ (Aries): ನಿಮ್ಮ ಆದಾಯ ಹೆಚ್ಚಾಗುವ ಸಾಧ್ಯತೆಗಳು ಬಲವಾಗಿವೆ. ಉದ್ಯೋಗದಲ್ಲಿರುವವರಿಗೆ ಬಡ್ತಿ ಸಿಗುವುದು. ವೇತನದಲ್ಲಿಯೂ ಗಮನಾರ್ಹ ಹೆಚ್ಚ್ಳವಾಗುವುದು. ಇಂದು ಹೊಸ ಉದ್ಯಮ ಆರಂಭ ಮಾಡಬಹುದು. ಇದು ಹೆಚ್ಚಿನ ಲಾಭ ಗಳಿಸುವುದಕ್ಕೆ ಸಹಾಯ ಮಾಡುತ್ತದೆ. ಕೈ ಸೇರದೆ ಉಳಿದುಕೊಂಡಿದ್ದ ಹಣ ಮತ್ತೆ ಮರಳಿ ನಿಮ್ಮದಾಗುವುದು. ಸಂಪತ್ತು, ಆಸ್ತಿ, ವಾಹನಗಳು ಮತ್ತು ಇತರ ಸಮೃದ್ಧಿ ಹೆಚ್ಚಿಸುವ ವಸ್ತುಗಳನ್ನು ಖರೀದಿಸಲು ಇದು ಶುಭ ದಿನ.

ಸೂರ್ಯನಂತೆ ಬೆಳಗುವುದು ಈ ರಾಶಿಯವರ ಅದೃಷ್ಟ : ನನಸಾಗುವುದು ಸ್ವಂತ ಮನೆ ಕನಸು, ಕಾರು ಖರೀದಿ ಯೋಗ
ಸೂರ್ಯನಂತೆ ಬೆಳಗುವುದು ಈ ರಾಶಿಯವರ ಅದೃಷ್ಟ : ನನಸಾಗುವುದು ಸ್ವಂತ ಮನೆ ಕನಸು, ಕಾರು ಖರೀದಿ ಯೋಗ

2. ಮಿಥುನ ರಾಶಿ (Gemini): ಹೊಸ ಆದಾಯದ ಮೂಲಗಳು ಹೊರಹೊಮ್ಮಬಹುದು. ಹಳೆಯ ಹೂಡಿಕೆಗಳು ಉತ್ತಮ ಲಾಭವನ್ನು ನೀಡಬಹುದು. ಉದ್ಯೋಗ ಬದಲಿಸುವ ಯೋಚನೆಯಿದ್ದರೆ ಇದು ಸಕಾಲ. ಉತ್ತಮ ಕೆಲಸದ ಆಫರ್ ಬರುವುದು.‌ ಹೊಸ ಉದ್ಯಮವನ್ನು ಪ್ರಾರಂಭಿಸಲು ಬಯಸುವವರಿಗೆ ಇದು ಶುಭ ಸಮಯ. ಪಾಲುದಾರಿಕೆಯಲ್ಲಿ ಕೆಲಸ ಮಾಡುವವರಿಗೆ ದೊಡ್ಡ ಮಟ್ಟದ ಪ್ರಯೋಜನಗಳಾಗುವುದು. ನಿಮ್ಮ ಸಂಗಾತಿಯೊಂದಿಗಿನ ಬಾಂಧವ್ಯ ಗಟ್ಟಿಯಾಗುವುದು.

3. ಕರ್ಕಾಟಕ ರಾಶಿ (Cancer): ಕರ್ಕಾಟಕ ರಾಶಿಯವರಿಗೆ ಇದು ತುಂಬಾ ಒಳ್ಳೆಯ ಸಮಯ. ಗುರು, ಶುಕ್ರ ಮತ್ತು ಚಂದ್ರರು ಈ ರಾಶಿಯಲ್ಲಿ ರಾಜಯೋಗವನ್ನು ರೂಪಿಸುತ್ತಿದ್ದಾರೆ. ನಿಮ್ಮ ಸ್ಥಾನಮಾನ ಮತ್ತು ಗೌರವ ಹೆಚ್ಚಾಗುತ್ತದೆ. ಸಂಪತ್ತು ಹೆಚ್ಚಾಗಬಹುದು. ಷೇರು ಮಾರುಕಟ್ಟೆಯಿಂದ ಲಾಭ ಪಡೆಯಬಹುದು. ಹಳೆಯ ಹೂಡಿಕೆಗಳು ಸಹ ಬಲವಾದ ಲಾಭವನ್ನು ನೀಡಬಹುದು. ಆಸ್ತಿ ಖರೀದಿ ಬಗ್ಗೆ ಯೋಚಿಸಬಹುದು. ಅರಿವಿಲ್ಲದ ಮೂಲಗಳಿಂದ ಹಣ ಬರುವುದು.

4. ತುಲಾ ರಾಶಿ (Libra): ಅಂದು ಕೊಂಡ ಕೆಲಸವನ್ನು ಸಾಧಿಸಿ ತೋರಿಸಲು ಸಾಧ್ಯವಾಗುವುದು. ಅದೃಷ್ಟ ನಿಮ್ಮ ಜೊತೆಗಿದ್ದು ಯಶಸ್ಸು ನೀಡುವುದು. ವೃತ್ತಿಜೀವನದಲ್ಲಿ ಪ್ರಗತಿಯನ್ನು ಕಾಣಬಹುದು. ಸ್ಥಾನಮಾನ ಹೆಚ್ಚುವುದು. ವೇತನ ಹೆಚ್ಚಳದ ಬಗ್ಗೆ ಶುಭ ಸುದ್ದಿ ಕೇಳುವಿರಿ. ಬಲವಾದ ಭವಿಷ್ಯಕ್ಕೆ ಅಡಿಪಾಯ ಹಾಕುವ ಘಟನೆ ಸಂಭವಿಸಬಹುದು. ನಿರುದ್ಯೋಗಿಗಳಿಗೆ ಉದ್ಯೋಗ ಸಿಗುವುದು. ಪೂರ್ವಜರ ಆಸ್ತಿಯಿಂದ ಲಾಭವಾಗುವುದು.

ಸೂರ್ಯ-ಬುಧ-ಶುಕ್ರರ ತ್ರಿಗ್ರಹ ಯೋಗ: ಈ ರಾಶಿಗಳಿಗೆ ಹಣದ ಹೊಳೆ
ಸೂರ್ಯ-ಬುಧ-ಶುಕ್ರರ ತ್ರಿಗ್ರಹ ಯೋಗ: ಈ ರಾಶಿಗಳಿಗೆ ಹಣದ ಹೊಳೆ

5. ಮೀನ ರಾಶಿ (Pisces): ಶನಿಯ ಸಾಡೇ ಸಾತಿಯನ್ನು ಅನುಭವಿಸುತ್ತಿರುವ ಮೀನ ರಾಶಿಯವರಿಗೆ ಈ ಸಮಯ ಪರಿಹಾರ ಸಿಗಬಹುದು. ಆದಾಯ ಹೆಚ್ಚಾಗಬಹುದು. ಸಿಲುಕಿಕೊಂಡಿರುವ ಹಣ ಮರಳಿ ಬರಬಹುದು. ಪೂರ್ವಜರ ಆಸ್ತಿಯಿಂದ ಲಾಭವಾಗಬಹುದು. ಮಾಡುವ ಕೆಲಸ ಕಾರ್ಯಗಳಿಗೆ ಕುಟುಂಬದ ಬೆಂಬಲ ಸಿಗುತ್ತದೆ. ಸಂತೋಷ ಹೆಚ್ಚಾಗುವುದು.

(ಬರಹ: ರಂಜಿತಾ ಆರ್.ಕೆ.)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+