ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಪ ಚುನಾವಣೆಗೆ ಕೊರೊನಾ ಕರಿನೆರಳು: ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ ಬಿಡುಗಡೆ

|
Google Oneindia Kannada News

ಬೆಂಗಳೂರು, ಮಾರ್ಚ್ 26: ಏಪ್ರಿಲ್ 17ರಂದು ನಡೆಯುವ ಉಪ ಚುನಾವಣೆಗೆ ಅಭ್ಯರ್ಥಿಗಳು ಭಾರೀ ಪ್ರಮಾಣದಲ್ಲಿ ಪ್ರಚಾರ ಮಾಡಲು ತಯಾರಿ ನಡೆಸಿದ್ದಾರೆ. ಇದೇ ಸಮಯಕ್ಕೆ ಕೊರೊನಾ ಎರಡನೇ ಅಲೆ ಅಬ್ಬರವೂ ಜೋರಾಗಿರುವುದು ಎಲ್ಲರ ನಿದ್ದೆಗೆಡಿಸಿದೆ.

ಬೆಳಗಾವಿ ಲೋಕಸಭಾ ಕ್ಷೇತ್ರ, ಮಸ್ಕಿ ವಿಧಾನಸಭಾ ಕ್ಷೇತ್ರ ಹಾಗೂ ಬಸವಕಲ್ಯಾಣ ವಿಧಾನಸಭಾ ಕ್ಷೇತ್ರಗಳಿಗೆ ಏ.17ರಂದು ಉಪ ಚುನಾವಣೆ ಮತದಾನ ನಡೆಯಲಿದೆ. ನಂತರ ಮೇ 2ರಂದು ಫಲಿತಾಂಶ ಪ್ರಕಟವಾಗಲಿದೆ.

ಸಾರ್ವಜನಿಕ ಸ್ಥಳದಲ್ಲಿ ಮಾಸ್ಕ್ ಧರಿಸದಿದ್ದರೆ 500 ರೂ. ದಂಡಸಾರ್ವಜನಿಕ ಸ್ಥಳದಲ್ಲಿ ಮಾಸ್ಕ್ ಧರಿಸದಿದ್ದರೆ 500 ರೂ. ದಂಡ

ಇನ್ನು ಚುನಾವಣಾ ಪ್ರಚಾರದ ವೇಳೆ ಗುಂಪು ಗುಂಪುಗಳಲ್ಲಿ ಸೇರಿ ತಮ್ಮ ಅಭ್ಯರ್ಥಿಯ ಪರ ಪ್ರಚಾರ ಮಾಡಲು ಕಾರ್ಯಕರ್ತರು ಓಡಾಡುತ್ತಾರೆ. ಹೀಗಾಗಿ ಉಪ ಚುನಾವಣೆಗಾಗಿ ರಾಜ್ಯ ಆರೋಗ್ಯ ಇಲಾಖೆ ಪ್ರತ್ಯೇಕ ಮಾರ್ಗಸೂಚಿ ಬಿಡುಗಡೆ ಮಾಡಿದೆ.

ಉಲ್ಲಂಘಿಸಿದರೆ ಕಠಿಣ ಕ್ರಮ

ಉಲ್ಲಂಘಿಸಿದರೆ ಕಠಿಣ ಕ್ರಮ

ಈ ಮಾರ್ಗಸೂಚಿಯಲ್ಲಿ ಜನರಲ್ ಗೈಡ್ ಲೈನ್ಸ್, ನಾಮಿನೇಷನ್ ಸಲ್ಲಿಸಬೇಕಾದ ಅಭ್ಯರ್ಥಿ ಪಾಲಿಸಬೇಕಾದ ನಿಯಮ‌ ಮತ್ತು ಚುನಾವಣಾ ಪ್ರಚಾರ ಮಾಡುವಾಗ ಪಾಲಿಸಬೇಕಾದ ನಿಯಮಗಳನ್ನು ಆರೋಗ್ಯ ಇಲಾಖೆ ಸೂಚಿಸಿದೆ. ಸಭೆ, ಸಮಾವೇಶದ ವೇಳೆ ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡದೇ ಇದ್ದರೆ DM ಆ್ಯಕ್ಟ್, ಸೆಕ್ಷನ್ 51ರ ಹಾಗೂ 60ರ ಅಡಿ ಕಠಿಣ ಕ್ರಮ ಕೈಗೊಳ್ಳಲಾಗತ್ತದೆ ಎಂದು ಎಚ್ಚರಿಸಲಾಗಿದೆ.

ಸಾಮಾನ್ಯ ಮಾರ್ಗಸೂಚಿಗಳು

ಸಾಮಾನ್ಯ ಮಾರ್ಗಸೂಚಿಗಳು

* ಚುನಾವಣಾ ಪ್ರಕ್ರಿಯೆಗಳಲ್ಲಿ ಮಾಸ್ಕ್ ಕಡ್ಡಾಯ ಧರಿಸುವುದು

* ಥರ್ಮಲ್ ಸ್ಕ್ರೀನಿಂಗ್ ಕಡ್ಡಾಯ

* ಕನಿಷ್ಠ ಸಾಮಾಜಿಕ ಅಂತರ ಪಾಲನೆ

* ದೊಡ್ಡ ಕೊಠಡಿಗಳಲ್ಲಿ ಚುನಾವಣಾ‌ ಸಿಬ್ಬಂದಿಗೆ ಟ್ರೈನಿಂಗ್ ಕೊಡಬೇಕು

* ಸಾಧ್ಯವಾದಷ್ಟು ಆನ್​ಲೈನ್ ತರಬೇತಿ ನೀಡಬೇಕು

* ಚುನಾವಣಾ ಕರ್ತವ್ಯಕ್ಕೆ ಹೆಚ್ಚುವರಿ ಸಿಬ್ಬಂದಿಗೆ ನಿಯೋಜಿಸಬೇಕು

ನಾಮಿನೇಷನ್ ಮಾರ್ಗಸೂಚಿಗಳು

ನಾಮಿನೇಷನ್ ಮಾರ್ಗಸೂಚಿಗಳು

* ಆನ್​ಲೈನ್ ಮೂಲಕ ನಾಮಪತ್ರ ಸಲ್ಲಿಸಲು ಆದ್ಯತೆ ನೀಡಬೇಕು

* ಬಳಿಕ ಪ್ರಿಂಟ್ ಔಟ್ ಚುನಾವಣಾಧಿಕಾರಿಗೆ ಸಲ್ಲಿಸಬಹುದು

* ನಾಮಿನೇಷನ್ ಸಲ್ಲಿಸಲು ಇಬ್ಬರಿಗೆ ಮಾತ್ರ ಅವಕಾಶ

* ನಾಮಪತ್ರ ಪರಿಶೀಲನೆ, ಚಿಹ್ನೆ ನೀಡುವ ಪ್ರಕ್ರಿಯೆ ವೇಳೆ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು

* ಚುನಾವಣಾ ಮತಗಟ್ಟೆಗಳನ್ನು ಹೆಚ್ಚಿಸುವುದು

* ಚುನಾವಣಾ ಮತಗಟ್ಟೆಗಳನ್ನು ಹೆಚ್ಚಿಸುವುದು

* ಚುನಾವಣಾಧಿಕಾರಿ ಮತ್ತು ಸಿಬ್ಬಂದಿಗೆ ಗ್ಲೌಸ್, ಮಾಸ್ಕ್, ಫೇಸ್ ಶೀಲ್ಡ್ ಕೊಡಬೇಕು

ಚುನಾವಣಾ ಪ್ರಚಾರಕ್ಕೆ ಮಾರ್ಗಸೂಚಿಗಳು

ಚುನಾವಣಾ ಪ್ರಚಾರಕ್ಕೆ ಮಾರ್ಗಸೂಚಿಗಳು

* ಮನೆ ಮನೆ ಪ್ರಚಾರಕ್ಕೆ ಅಭ್ಯರ್ಥಿ ಸೇರಿ 5 ಕ್ಕಿಂತ ಹೆಚ್ಚು ಮಂದಿ ಪ್ರಚಾರ ಮಾಡುವಂತಿಲ್ಲ

* ಚುನಾವಣಾ ರ‍್ಯಾಲಿಗಳಲ್ಲಿ ಕೇವಲ 5 ವಾಹನಕ್ಕೆ ಅವಕಾಶ

* ಬಹಿರಂಗ ಪ್ರಚಾರದ ವೇಳೆ ಕೊರೊನಾ ನಿಯಮ ಪಾಲಿಸಬೇಕು

* ಮುಚ್ಚಿದ ಪ್ರದೇಶದಲ್ಲಿನ ಪ್ರಚಾರ ಸಭೆಗೆ 200 ಜನರಿಗೆ ಮಾತ್ರ ಅವಕಾಶ

Recommended Video

DK ಶಿವಕುಮಾರ್ ಹೆಸರು ಹೇಳಿದ ಸಿಡಿ ಲೇಡಿ | Oneindia Kannada

English summary
The Karnataka State Health Department has issued a separate Guidelines for by-elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X