Covid Rise: ರಾಜ್ಯದಲ್ಲಿ ಸೋಂಕು ಹೆಚ್ಚಾದರೂ 'ಜಿನೋಮ್ ಸಿಕ್ವೆನ್ಸಿಂಗ್' ಆರಂಭಿಸಿಲ್ಲ

ಬೆಂಗಳೂರು, ಡಿಸೆಂಬರ್ 24: ಕರ್ನಾಟಕದಲ್ಲಿ ಕಳೆದ ಒಂದೇ ವಾರದಲ್ಲಿ ಕೊರೊನಾ ತೀವ್ರಗತಿಯಲ್ಲಿ ಏರಿಕೆ ಆಗುತ್ತಿದೆ. ಕೇರಳದಲ್ಲಿ ಕೋವಿಡ್ 19 ಉಪತಳಿ ಪತ್ತೆ ಆದ ಮೇಲಂತೂ ಈ ಎರಡು ರಾಜ್ಯಗಳಲ್ಲಿ ಪಾಸಿಟಿವಿಟಿ ನಿಧಾನಕ್ಕೆ ಏರಿಕೆ ಆಗುತ್ತಲೇ ಇದೆ. ದೇಶದಲ್ಲೇ ಕೊರೊನಾ ಏರಿಕೆ ಪ್ರಕರಣಗಳಲ್ಲಿ ಎರಡನೇ ಸ್ಥಾನ ದಾಖಲಿಸಿರುವ ಕರ್ನಾಟಕ ಈವರೆಗೆ 'ಸೋಂಕು ಉಪತಳಿ ಪತ್ತೆ ಲ್ಯಾಬ್' ಅನ್ನು ಪುನಾರಂಭಕ್ಕೆ ಮುಂದಾಗಿಲ್ಲ. ಕಾರಣವೇನು? ಇಲ್ಲಿ ತಿಳಿಯೋಣ.

ಕೊರೊನಾ ಮೊದಲ ಅಲೆಯ ಆರ್ಭಟ ನಂತರ ಈ ಜಿನೋಮ್ ಸಿಕ್ವೆನ್ಸಿಂಗ್ ತೆರೆಯಲಾಗಿತ್ತು. ಇದಕ್ಕೆ ಹೊರ ಗುತ್ತಿಗೆ ಆಧಾರದಲ್ಲಿ ಆರೋಗ್ಯ ಸಿಬ್ಬಂದಿ ಮತ್ತು ತಂತ್ರಜ್ಞರನ್ನು ನೇಮಕ ಮಾಡಿಕೊಂಡಿತ್ತು. ಕೋವಿಡ್ ಕಡಿಮೆ ಆದ ಬಳಿಕ ಕೆಲಸ ನಿಲ್ಲಿಸಿದ್ದ ಪ್ರಯೋಗಾಲಯ ಇದೀಗ ಕೋವಿಡ್ ಏರಿಕೆ ಆದರೂ ಪುನಾರಂಭಗೊಂಡಿಲ್ಲ.

 In karnataka Not Open So Far Jenom Sequencing Lab After Raise Covid 19 in State, Know The Reason

ಕೇರಳದಲ್ಲಿ ಕೊರೊನಾ ಉಪತಳಿ ಜೆಎನ್ 1 ಅಬ್ಬರ ಹೆಚ್ಚಾಗಿದೆ. ಇತ್ತ ಬೆಂಗಳೂರು ಸೇರಿ ಕರ್ನಾಟಕದಲ್ಲಿ ಕೊರೊನಾ ಅಲೆ ಸೃಷ್ಟಿಯಾಗುತ್ತಿದೆ. ಬೆಂಗಳೂರಿನಲ್ಲಿ ಅಧಿಕ ಕೇಸುಗಳು ದಾಖಲಾಗುತ್ತಿವೆ. ಈವರೆಗೆ ರಾಜ್ಯದಲ್ಲಿ ಹರುಡುತ್ತಿರುವ ಸೋಂಕು ಯಾವುದು ಎಂಬುದರ ಬಗ್ಗೆ ಖಚಿತತೆ ಇಲ್ಲ ಎನ್ನಲಾಗುತ್ತಿದೆ.

ಜಿನೋಮ್ ಸಿಕ್ವೆನ್ಸಿಂಗ್ ಪುನಾರಂಭವಾಗಬೇಕು

ಬೆಂಗಳೂರಿನ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ (BMCRI) ನಲ್ಲಿ ರಾಜ್ಯ ಸರ್ಕಾರ ಎರಡನೇ ಅಲೆ ವೇಳೆ ತೆರೆದಿದ್ದ ಸೋಂಕು ಉಪತಳಿ ಪತ್ತೆ ಕೇಂದ್ರ ಮತ್ತೆ ಆರಂಭಿಸಬೇಕಿದೆ. ಈ ಹಿಂದೆ ಸರ್ಕಾರ ಕೋವಿಡ್ ಕಡಿಮೆ ಆದ ಹಿನ್ನೆಲೆಯಲ್ಲಿ ಹೊರ ಗುತ್ತಿಗೆ ಆಧಾರದಲ್ಲಿ ನೇಮಕವಾಗಿದ್ದ ಸಿಬ್ಬಂದಿಯನ್ನು ಕೈ ಬಿಟ್ಟಿತ್ತು. ಇದೀಗ ಅವರನ್ನು ಮತ್ತೆ ನೇಮಿಸುವ ಕೆಲಸವಾಗಬೇಕಿದೆ.

ವೈದ್ಯಾಧಿಕಾರಿಗಳು ಹೇಳುವ ಪ್ರಕಾರ, ಈ ಲ್ಯಾಬ್ ಗೆ ಸೋಂಕಿಗೆ ಸಂಬಂಧಿಸಿದ ಸುಮಾರು ಕನಿಷ್ಠ 50 ಮಾದರಿಗಳು ಬರಬೇಕು. ಎದೆಯ ಸಿಟಿ ಸ್ಕ್ಯಾನ್ ಮಾಡಿದಾಗ ಸಿಟಿ ವ್ಯಾಲ್ಯೂ 30ಕ್ಕಿಂತ ಕಡಿಮೆ ಬಂದರೆ ಮಾತ್ರ ಜಿನೋಮ್ ನಲ್ಲಿ ಪತ್ತೆ ಕಾರ್ಯ ನಡೆಸಬೇಕು. ಅಲ್ಲದೇ ಒಂದೇ ಪ್ರದೇಶದಲ್ಲಿ ಹೆಚ್ಚು ಪ್ರಕರಣಗಳು ಕಂಡು ಬರುತ್ತಿದೆ. ಆಗ ಅಗತ್ಯವಾಗಿ ಜಿನೋಮ್ ಸಿಕ್ವೆನ್ಸಿಂಗ್ ಮಾಡಲಾಗುತ್ತದೆ.

 In karnataka Not Open So Far Jenom Sequencing Lab After Raise Covid 19 in State, Know The Reason

ಕನಿಷ್ಠ ಮಾದರಿಗಳು ಬಂದಿಲ್ಲ

ಸದ್ಯದ ಪರಿಸ್ಥಿತಿಯಲ್ಲಿ ಇದ್ಯಾವುದು ಆಗುತ್ತಿಲ್ಲ. ಕನಿಷ್ಠ ಮಾದರಿಗಳು ಬಂದಿಲ್ಲ. ಕೊರೊನಾ ಏರಿಕೆ ಇದ್ದರೂ ಸಹ ಈ ಮೇಲಿನ ಮಾನದಂಡಗಳು ಇರುವ ಹಿನ್ನೆಲೆಯಲ್ಲಿ ಅವುಗಳ ಆದಾರದಲ್ಲಿ ಪರೀಕ್ಷೆ ಮಾಡಬೇಕಿರುತ್ತದೆ. ಅದು ಆಗದ ಹಿನ್ನೆಲೆ ಲ್ಯಾಬ್ ತೆರೆಯಲಾಗಿಲ್ಲ ಎಂದು ತಿಳಿಸಿದ್ದಾರೆ.

ಸದ್ಯ ಕೊರೊನಾ ಹೆಚ್ಚಾಗಿದ್ದರಿಂದ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುತ್ತಿರುವ ರಾಜ್ಯ ಸರ್ಕಾರ ಒಟ್ಟು 20ಕ್ಕೂ ಅಧಿಕ ಮಂದಿಯ ಮಾದರಿಗಳನ್ನು ಪುಣೆಯಲ್ಲಿನ ಸೋಂಕು (ವೈರಾಣು) ಪರೀಕ್ಷಾ ಕೇಂದ್ರಕ್ಕೆ ಕಳುಹಿಸಲಾಗಿದೆ. ಇದೀಗ ಸೋಂಕು ಹೆಚ್ಚಾಗುತ್ತಿರುವ ಸಂಬಂಧ ಕರ್ನಾಟಕದಲ್ಲಿ ಈ ಪರೀಕ್ಷೆ ಮಾಡಬಹುದಾಗಿದೆ ಎಂದು ವೈದ್ಯಾಧಿಕಾರಿಗಳು ಅಭಿಪ್ರಾಯಪಟ್ಟರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+