COVID JN-1 Death in Karnataka: ಕೊರೊನಾ ರೂಪಾಂತರಿಗೆ ರಾಜ್ಯದಲ್ಲಿ ಮೊದಲ ಬಲಿ-ಎಲ್ಲಿ?

ಹಾಸನ, ಡಿಸೆಂಬರ್, 25: ಈ ಹಿಂದೆ ಕೊರೊನಾ ಇಡೀ ದೇಶ ಅಲ್ಲದೆ, ಇಡೀ ಪ್ರಪಂಚವನ್ನೇ ಬೆಚ್ಚಿಬೀಳುವಂತೆ ಮಾಡಿತ್ತು. ಬಳಿಕ ಒಮಿಕ್ರಾನ್‌ ಕಾಟ. ಇದೀಗ ರೂಪಾಂತರಿ ಜೆ‌ಎನ್-1 ತಾಂಡವವಾಡುತ್ತಿದ್ದು, ಈ ವೈರಸ್‌ಗೆ ರಾಜ್ಯದಲ್ಲಿ ಮೊಟ್ಟ ಮೊದಲ ಬಲಿಯಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಯಾವ ಜಿಲ್ಲೆಯಲ್ಲಿ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

COVID JN-1: old age man death in Hassan district

ಕೊರೊನಾ ಉಪ ತಳಿ ಜೆಎನ್‌ 1ಗೆ ರಾಜ್ಯದಲ್ಲಿ ಮೊದಲ ಬಲಿಯಾಗಿದೆ. ಹಾಸನ ಜಿಲ್ಲೆಯ ಐವರಲ್ಲಿ ಓಮ್ರಿಕಾನ್ ಜೆ‌ಎನ್-1 ರೂಪಾಂತರಿ ತಳಿ ಪತ್ತೆಯಾಗಿದ್ದು, ಈ ಪೈಕಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾರೆ. ಮೃತಪಟ್ಟ ವ್ಯಕ್ತಿ ಚನ್ನರಾಯಪಟ್ಟಣ ಮೂಲದವರಾಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ವ್ಯಕ್ತಿಗೆ ಜೆ‌ಎನ್-1 ಸೋಂಕು ತಗುಲಿತ್ತು. ಆದರೆ ಆ ವ್ಯಕ್ತಿ ಸಾವನ್ನಪ್ಪಿದ ಬಳಿಕ ಆತನಿಗೆ ಜೆ‌ಎನ್-1 ಸೋಂಕು ತಗುಲಿರುವುದು ವರದಿಯಲ್ಲಿ ತಿಳಿದುಬಂದಿದೆ ಅಂತಾ ಟಿವಿ 9 ಕನ್ನಡ ವರದಿ ಮಾಡಿದೆ.

ಆರೋಗ್ಯ ಇಲಾಖೆ ಅಧಿಕಾರಿಗಳು ಸ್ಯಾಂಪಲ್‌ಗಳನ್ನು ಜೆನಾಮಿಕ್‌ಗೆ ಕಳುಹಿಸಿತ್ತು. ಸೋಮವಾರ (ಡಿಸೆಂಬರ್ 25) ಐವರಲ್ಲಿ ಜೆ‌ಎನ್-1 ಸೋಂಕು ದೃಢಪಟ್ಟಿದ್ದು, ಈ ಪೈಕಿ ಚನ್ನರಾಯಪಟ್ಟಣದ ವ್ಯಕ್ತಿ ಈಗಾಗಲೇ ಸಾವನ್ನಪ್ಪಿದ್ದು, ಇನ್ನುಳಿದ ನಾಲ್ವರು ಹೋಂ ಐಸೋಲೇಷನ್‌ನಲ್ಲಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಜನರು ಭಯಪಡಬಾರದು ಎಂದು ಅಧಿಕಾರಿಗಳು ಅಭಯ ನೀಡಿದ್ದಾರೆ ಅಂತಾ ವರದಿ ಮಾಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+