ಈ ರಾಶಿಯವರಿಗೆ ಮಹಾಲಕ್ಷ್ಮೀ ಯೋಗ: ಒಲಿದು ಬರುವುದು ಸಿರಿ ಸಂಪತ್ತು, ಎಲ್ಲಾ ಸಮಸ್ಯೆಗಳಿಗೂ ಸಿಗುವುದು ಪರಿಹಾರ

ಜ್ಯೋತಿಷ್ಯದಲ್ಲಿ ಗ್ರಹಗಳ ಸಂಯೋಜನೆಯು ಬಹಳ ಮಹತ್ವದ್ದಾಗಿದೆ. ಗ್ರಹಗಳ ಚಲನೆಯು ವ್ಯಕ್ತಿಯ ಭವಿಷ್ಯದ ಮೇಲೆ ನೇರ ಪರಿಣಾಮ ಬೀರುತ್ತವೆ. ಅದರಂತೆ, ಆಗಸ್ಟ್ ತಿಂಗಳು ಕೆಲವು ರಾಶಿಯವರಿಗೆ ವಿಶೇಷವಾಗಿರುತ್ತದೆ. ಆಗಸ್ಟ್ 8 ರಂದು, ಮಂಗಳ ಮತ್ತು ಚಂದ್ರನ ಸಂಯೋಜನೆಯೊಂದಿಗೆ ವಿಶೇಷ 'ಮಹಾಲಕ್ಷ್ಮಿ ರಾಜ ಯೋಗ' ರೂಪುಗೊಳ್ಳುತ್ತದೆ. ಈ ಅಪರೂಪದ ಸಂಯೋಜನೆಯಿಂದಾಗಿ, ಕೆಲವು ರಾಶಿಯವರ ಆರ್ಥಿಕ ಸಮಸ್ಯೆಗಳು ನಿವಾರಣೆಯಾಗುತ್ತವೆ.ಇವರು ಜೀವನದಲ್ಲಿ ಶಾಂತಿ ಮತ್ತು ಸಮೃದ್ಧಿಯನ್ನು ಪಡೆಯುತ್ತಾರೆ.

ಮಹಾಲಕ್ಷ್ಮಿ ಯೋಗದ ಹಿನ್ನೆಲೆ: ಪ್ರಸ್ತುತ ವೃಷಭ ರಾಶಿಯಲ್ಲಿ ಸಾಗುತ್ತಿರುವ ಮಂಗಳ ಗ್ರಹವು ಆಗಸ್ಟ್ 3 ರಂದು ಮಿಥುನ ರಾಶಿಗೆ ಪ್ರವೇಶಿಸುತ್ತದೆ. ಅದರ ನಂತರ, ಆಗಸ್ಟ್ 8 ರಂದು ಬೆಳಗಿನ ಜಾವ 3:48 ರ ಸುಮಾರಿಗೆ ಚಂದ್ರನು ಮಿಥುನ ರಾಶಿಗೆ ಪ್ರವೇಶಿಸುತ್ತಾನೆ. ಈ ಎರಡು ಗ್ರಹಗಳ ಸಂಯೋಜನೆಯು ಮಿಥುನ ರಾಶಿಯಲ್ಲಿ 'ಮಹಾಲಕ್ಷ್ಮಿ ರಾಜ ಯೋಗ'ವನ್ನು ರೂಪಿಸುತ್ತದೆ.

Mahalakshmi Raj Yoga 2026

ಚಂದ್ರನು ಒಂದು ರಾಶಿಯಲ್ಲಿ ಸುಮಾರು ಎರಡೂವರೆ ದಿನಗಳ ಕಾಲ ಇರುವುದರಿಂದ, ಈ ಶುಭ ಯೋಗದ ಪರಿಣಾಮವು ಅದೇ ಅವಧಿಯವರೆಗೆ ಇರುತ್ತದೆ. ಇದರ ಪರಿಣಾಮವಾಗಿ, ಕೆಲವು ರಾಶಿಯವರು ತಮ್ಮ ವೃತ್ತಿ, ವ್ಯವಹಾರ ಮತ್ತು ಕುಟುಂಬ ಜೀವನದಲ್ಲಿ ಬದಲಾವಣೆಗಳನ್ನು ಕಾಣುತ್ತಾರೆ.

ಈ ರಾಶಿಯವರಿಗೆ ಮಹಾಪುರುಷ ಯೋಗ: ಕೈ ಹಾಕಿದ ಕೆಲಸಗಳಲ್ಲಿ ಯಶಸ್ಸು, ಒಲಿದು ಬರುವಳು ಲಕ್ಷ್ಮೀ
ಈ ರಾಶಿಯವರಿಗೆ ಮಹಾಪುರುಷ ಯೋಗ: ಕೈ ಹಾಕಿದ ಕೆಲಸಗಳಲ್ಲಿ ಯಶಸ್ಸು, ಒಲಿದು ಬರುವಳು ಲಕ್ಷ್ಮೀ

ಮಹಾಲಕ್ಷ್ಮೀ ಯೋಗದಿಂದ ಅದೃಷ್ಟ ಪಡೆಯುವ ರಾಶಿಗಳು:

ಮೇಷ ರಾಶಿ (Aries): ಈ ಅವಧಿಯಲ್ಲಿ, ಮೇಷ ರಾಶಿಯವರಿಗೆ ವ್ಯಾಪಾರ, ಉದ್ಯೋಗ ಮತ್ತು ಕೃಷಿಯಂತಹ ಕ್ಷೇತ್ರಗಳಲ್ಲಿ ಕಡಿಮೆ ಶ್ರಮದಿಂದ ಹೆಚ್ಚಿನ ಫಲಿತಾಂಶಗಳು ದೊರೆಯುತ್ತವೆ. ಕೌಟುಂಬಿಕ ವಿವಾದಗಳು ಬಗೆಹರಿಯುತ್ತವೆ. ದಾಂಪತ್ಯ ಜೀವನದಲ್ಲಿ ಸಂತೋಷವಿರುತ್ತದೆ. ವಿದ್ಯಾರ್ಥಿಗಳು ಮತ್ತು ಉದ್ಯೋಗಾಕಾಂಕ್ಷಿಗಳು ಹೊಸ ಅವಕಾಶಗಳನ್ನು ಪಡೆಯುತ್ತಾರೆ.

ಮಿಥುನ ರಾಶಿ (Gemini): ಈ ರಾಶಿಯವರ ಲಗ್ನದ ಮನೆಯಲ್ಲಿ ಮಹಾಲಕ್ಷ್ಮೀ ಯೋಗವು ರೂಪುಗೊಳ್ಳುವುದರಿಂದ ಅವರು ಮಾಡುವ ಎಲ್ಲಾ ಕಾರ್ಯದಲ್ಲಿ ಯಶಸ್ವಿಯಾಗುತ್ತಾರೆ. ಆರ್ಥಿಕ ಪ್ರಗತಿಯ ಜೊತೆಗೆ, ವಾಹನ ಅಥವಾ ಮನೆ ಖರೀದಿಸುವ ಅವರ ಕನಸುಗಳು ನನಸಾಗುವ ಬಲವಾದ ಸಾಧ್ಯತೆಗಳಿವೆ. ವೃತ್ತಿಪರವಾಗಿ, ವಿಶೇಷವಾಗಿ ಮಾಧ್ಯಮ ಮತ್ತು ರಾಜಕೀಯ ಕ್ಷೇತ್ರಗಳಲ್ಲಿರುವವರು ಗಮನಾರ್ಹವಾಗಿ ಲಾಭ ಪಡೆಯುತ್ತಾರೆ.

ಜುಲೈ 4 ರಿಂದ ಈ ರಾಶಿವರ ಮೇಲೆ ಶುಕ್ರನ ಕೃಪೆ : ಒಲಿದು ಬರುವುದು ರಾಜವೈಭೋಗ, ಹಣದ ಕೊರತೆ ಇರುವುದೇ ಇಲ್ಲ
ಜುಲೈ 4 ರಿಂದ ಈ ರಾಶಿವರ ಮೇಲೆ ಶುಕ್ರನ ಕೃಪೆ : ಒಲಿದು ಬರುವುದು ರಾಜವೈಭೋಗ, ಹಣದ ಕೊರತೆ ಇರುವುದೇ ಇಲ್ಲ

ಕನ್ಯಾ ರಾಶಿ (Virgo): ಈ ರಾಶಿಯು ಅತ್ಯಂತ ಅದೃಷ್ಟಶಾಲಿಯಾಗಿರುತ್ತದೆ. ಅನಿರೀಕ್ಷಿತ ಆರ್ಥಿಕ ಲಾಭವಾಗುವ ಸಾಧ್ಯತೆಯಿದೆ. ವೃತ್ತಿಪರ ಜೀವನದಲ್ಲಿ ಹೊಸ ಜವಾಬ್ದಾರಿಗಳು, ಬಡ್ತಿ, ವರ್ಗಾವಣೆಗಳಂತಹ ಸಕಾರಾತ್ಮಕ ಬದಲಾವಣೆಗಳು ಸಂಭವಿಸಬಹುದು. ಹೊಸ ವಾಹನ ಅಥವಾ ಬೆಲೆಬಾಳುವ ವಸ್ತುಗಳನ್ನು ಖರೀದಿಸಲು ಇದು ಅತ್ಯಂತ ಅನುಕೂಲಕರ ಸಮಯ.

ಮಕರ ರಾಶಿ (Capricorn): ಈ ರಾಶಿಯ ಆರನೇ ಮನೆಯಲ್ಲಿ ಮಂಗಳ ಮತ್ತು ಚಂದ್ರನ ಸಂಯೋಗವು ಗಮನಾರ್ಹ ಫಲಿತಾಂಶಗಳನ್ನು ನೀಡುತ್ತದೆ. ಕೆಲಸದ ಸ್ಥಳದಲ್ಲಿ ಉದ್ಭವಿಸುವ ವಿವಾದಗಳು ಬಗೆಹರಿಯುತ್ತವೆ. ವೃತ್ತಿಪರ ಪ್ರಗತಿಗೆ ಅವಕಾಶಗಳು ಸಿಗುತ್ತವೆ. ವಿದೇಶದಿಂದ ಆದಾಯದ ಮೂಲಗಳು ಸೃಷ್ಟಿಯಾಗುತ್ತವೆ. ಆರೋಗ್ಯದಲ್ಲಿ ಗಮನಾರ್ಹ ಸುಧಾರಣೆ ಕಂಡುಬರುತ್ತದೆ.

ಧನು ರಾಶಿ (Sagitarius): ಈ 'ಯೋಗ'ದ ಪ್ರಭಾವದಿಂದ, ಧನು ರಾಶಿಯವರ ದೀರ್ಘಕಾಲದ ಆರ್ಥಿಕ ಸಮಸ್ಯೆಗಳು ಪರಿಹಾರವಾಗುತ್ತವೆ. ಹೊಸ ವ್ಯಾಪಾರ ಉದ್ಯಮಗಳು ಅಥವಾ ಹೂಡಿಕೆಗಳಿಗೆ ಇದು ಅನುಕೂಲಕರ ಸಮಯ. ಸ್ಥಗಿತಗೊಂಡ ಸರ್ಕಾರಿ ಮತ್ತು ಖಾಸಗಿ ಕೆಲಸಗಳು ಪೂರ್ಣಗೊಳ್ಳುತ್ತವೆ. ಅಲ್ಲದೆ, ಕುಟುಂಬದ ಆಸ್ತಿಯಿಂದ ಗಮನಾರ್ಹ ಲಾಭವನ್ನು ನಿರೀಕ್ಷಿಸಬಹುದು.

ಈ ಅಪರೂಪದ ಗ್ರಹ ಜೋಡಣೆಯಿಂದ ರೂಪುಗೊಂಡ 'ಮಹಾಲಕ್ಷ್ಮಿ ರಾಜಯೋಗ'ವು ಮೇಲೆ ತಿಳಿಸಲಾದ ರಾಶಿಯವರ ಆರ್ಥಿಕ ತೊಂದರೆಗಳನ್ನು ನಿವಾರಿಸುತ್ತದೆ. ಕುಟುಂಬದಲ್ಲಿ ಸಾಮರಸ್ಯವನ್ನು ತರುತ್ತದೆ ಮತ್ತು ಅವರ ಜೀವನದಲ್ಲಿ ಹೊಸ ಉತ್ಸಾಹವನ್ನು ತುಂಬುತ್ತದೆ.

(ಬರಹ: ರಂಜಿತಾ ಆರ್.ಕೆ.)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+