ಕೊರೊನಾ ಹೆಚ್ಚಳ: ಖಾಸಗಿ ಶಾಲೆಗಳಿಗೆ 'ಕಾಮ್ಸ್' ನೀಡಿದ ಸೂಚನೆ ಏನು?
ಬೆಂಗಳೂರು, ಡಿಸೆಂಬರ್ 22: ಕರ್ನಾಟಕ ರಾಜ್ಯದಲ್ಲಿ ಕೋವಿಡ್ ಹೆಚ್ಚಾಗುತ್ತಿದೆ. ಈ ನಡುವೆ ಶಾಲಾ ಕಾಲೇಜುಗಳ ಸ್ಥಿತಿ ಗತಿ ಕತೆ ಏನು ಎಂಬಂತಾಗಿತ್ತು. ಈ ಮಧ್ಯೆ ಖಾಸಗಿ ಶಾಲೆಗಳು ಜಾಗರೂಕರಾಗಿರಬೇಕು ಮತ್ತು ವೈರಸ್ ಹರಡುವುದನ್ನು ಕಡಿಮೆ ಮಾಡಲು ಮಾರ್ಗಸೂಚಿಗಳ ಅಡಿಯಲ್ಲಿ ಎಸ್‌ಒಪಿ ಅನುಸರಿಸಲು ಸೂಚಿಸಲಾಗಿದೆ. ಕರ್ನಾಟಕದಲ್ಲಿನ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಅಸೋಸಿಯೇಟೆಡ್ ಮ್ಯಾನೇಜ್‌ಮೆಂಟ್‌ಗಳು (KAMS) ರಾಜ್ಯದ ಎಲ್ಲಾ ಖಾಸಗಿ ಶಾಲೆಗಳಿಗೆ ಸಲಹಾ ಟಿಪ್ಪಣಿಯನ್ನು ಬಿಡುಗಡೆ ಮಾಡಿದೆ.
ಪ್ರಾಂಶುಪಾಲರು, ಶಿಕ್ಷಕರು ಮತ್ತು ಶಾಲಾ ಆಡಳಿತಗಳಿಗೆ ಬರೆದ ಟಿಪ್ಪಣಿಯಲ್ಲಿ ಕೆಲವು ಸೂಚನೆ ನೀಡಲಾಗಿದೆ. ವಿದ್ಯಾರ್ಥಿಗಳು ಮಾಸ್ಕ್ ಧರಿಸಬೇಕು, ಶಾಲೆಗಳು ತಾಪಮಾನ ತಪಾಸಣೆ ಪುನಃ ಪರಿಚಯಿಸಬೇಕು. ಶಾಲಾ ಆವರಣವನ್ನು ನಿಯಮಿತವಾಗಿ ನೈರ್ಮಲ್ಯಗೊಳಿಸಬೇಕು ಎಂದು ಸಂಘವು ಒತ್ತಾಯಿಸಿದೆ.

ಅನಾರೋಗ್ಯದಿಂದ ಶಾಲೆಗೆ ಬರುವ ಮಕ್ಕಳನ್ನು ಪ್ರತ್ಯೇಕ ಮಾಡಬೇಕು. ಒಂದು ವೇಳೆ ಹುಷಾರಿಲ್ಲ ಮಗು ಇದ್ದರೆ ಪೋಷಕರ ತಕ್ಷಣದ ವೈದ್ಯಕೀಯ ಆರೈಕೆಯೊಂದಿಗೆ ಅವರಿಗೆ ಪ್ರಥಮ ಚಿಕಿತ್ಸೆ ಕೊಡಿಸಬೇಕು. ಖಾಸಗಿ ಶಾಲೆಗಳು ಅನಾರೋಗ್ಯದ ಸಮಯದಲ್ಲಿ ಔಷಧಿ, ಪರೀಕ್ಷೆಗಳು ಅಥವಾ ಹಾಜರಾತಿ ಕೊರತೆಯ ಹೆಸರಿನಲ್ಲಿ ವಿದ್ಯಾರ್ಥಿಗಳನ್ನು ಶಾಲೆಗೆ ಕಳುಹಿಸುವ ಪೋಷಕರಿಗೆ ಒತ್ತಾಸೆಯಾಗಿರಬಾರದು ಎಂದು ತಿಳಿಸಲಾಗಿದೆ.
ರಜಾದಿನಗಳಲ್ಲಿ ಮಕ್ಕಳ ಬಗ್ಗೆ ಎಚ್ಚರವಿರಲಿ
ರಜಾ ದಿನಗಳು ಸಮೀಪಿಸುತ್ತಿವೆ. ಇನ್ನೂ ರಜಾ ದಿನಗಳಲ್ಲಿ ಜನಸಂದಣಿ ಇರುವ ಪ್ರವಾಸಿ ಸ್ಥಳಗಳು ಮತ್ತು ತೀರ್ಥಯಾತ್ರೆಗೆ ಮಕ್ಕಳನ್ನು ಕರೆದೊಯ್ಯುವ ಪೋಷಕರು ಎಚ್ಚರ ವಹಿಸಬೇಕು. ರಜೆಯ ನಂತರ ವಿವಿಧ ರಾಜ್ಯಗಳು ಅಥವಾ ದೇಶಗಳಿಗೆ ಪ್ರಯಾಣದ ಇತಿಹಾಸವನ್ನು ಹೊಂದಿರುವ ವಿದ್ಯಾರ್ಥಿಗಳತ್ತ ಹೆಚ್ಚು ಜಾಗೃತ ವಹಸಬೇಕು.

ಕೊರೊನಾ ವಿಚಾರವಾಗಿ ಮಕ್ಕಳು, ಪೋಷಕರು ಭಯ ಬೀತರಾಗುವುದು ಬೇಡ. ಕೊರೊನಾ ಉಪ ತಳಿ ಹರಡುವಿಕೆ ಕುರಿತು ನಕಲಿ ಸಂದೇಶಗಳ ಬಗ್ಗೆ ಎಚ್ಚರಿಕೆ ವಹಿಸಬೇಕು. ಪೋಷಕರು, ಸಂಘದ ಇಂತಹ ಹೇಳಿಕೆಯು ಶಾಲಾ ಗುಂಪುಗಳಲ್ಲಿ ಹೆಚ್ಚಿನ ಭೀತಿ ಉಂಟುಮಾಡುತ್ತದೆ ಎಂದು ಸಂಘವು ಹೇಳಿದೆ.
ಸರ್ಕಾರವೇ ಶಾಲೆಗಳ ಕುರಿತು ಏನು ಹೇಳದಿರುವಾಗ ಬೇರೆ ಯಾವುದೇ ಸಂಸ್ಥೆ ಮಾರ್ಗಸೂಚಿಗಳನ್ನು ಏಕೆ ನೀಡಬೇಕು ಎಂದು ಕಾಮ್ಸ್ ನ ಪ್ರಧಾನ ಕಾರ್ಯದರ್ಶಿ ಶಶಿಕುಮಾರ್ ಡಿ ಪ್ರಶ್ನಿಸಿದರು. ಸದ್ಯ ಶಿಕ್ಷಣ ಇಲಾಖೆಯು ಕೋವಿಡ್ ಪರಿಸ್ಥಿತಿಯ ಮೇಲೆ ನಿಗಾ ಇಡುವಂತೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ.












Click it and Unblock the Notifications