Karnataka Covid Report: ಒಂದೇ ದಿನದಲ್ಲಿ ಶೇ.75ರಷ್ಟು ಪಾಸಿಟಿವ್ ಕೇಸ್ ಏರಿಕೆ, ಪತ್ತೆಯಾದ ಕೇಸ್, ತಪಾಸಣೆ, ಸಾವಿನ ವಿವರ
ಬೆಂಗಳೂರು, ಜನವರಿ 04: ಕರ್ನಾಟಕ ರಾಜ್ಯದಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣಗಳು ಏರುಗತಿಯಲ್ಲಿವೆ. ಕಳೆದ 24 ಗಂಟೆಗಳಲ್ಲಿ ಬುಧವಾರ 260 ಪಾಸಿಟಿವ್ ಕೇಸ್ ವರದಿ ಆಗಿವೆ. ಮಂಗಳವಾರ ಒಂದು ದಿನದಲ್ಲಿ 148 ಕೇಸ್ ಪತ್ತೆಯಾಗಿದ್ದವು. ಇದನ್ನು ನೋಡಿದರೆ ರಾಜ್ಯದಲ್ಲಿ ಶೇಕಡಾ 75ರಷ್ಟು ಕೊರೊನಾ ಕೇಸ್‌ಗಳು ಒಂದೇ ದಿನದಲ್ಲಿ ಹೆಚ್ಚಾಗಿದೆ.
ರಾಜ್ಯದಲ್ಲಿ ಒಟ್ಟು ಪ್ರಕರಣಗಳ ಪೈಕಿ ಒಬ್ಬರು ಮೃತಪಟ್ಟ ಬಗ್ಗೆ ವರದಿ ಆಗಿದೆ. ಈವರೆಗೆ ಇದ್ದ ಪಾಸಿಟಿವಿಟಿ ದರ ಶೇಕಡಾ 2.02 ರಿಂದ ಇದೀಗ ಶೇಕಡಾ 3.46 ಕ್ಕೆ ಏರಿಕೆ ಆಗಿದೆ. ವಿಶೇಷವೆಂದರೆ ಹೊಸ 260 ಪ್ರಕರಣಗಳಲ್ಲಿ 134 ಪ್ರಕರಣಗಳು ಬೆಂಗಳೂರು ಒಂದರಲ್ಲಿಯೇ ಕಂಡು ಬಂದಿವೆ. ಸದ್ಯ 624 ಸಕ್ರಿಯ ಪ್ರಕರಣಗಳು ಇವೆ ಎಂದು ರಾಜ್ಯ ಆರೋಗ್ಯ ಇಲಾಖೆ ಬುಲಿಟಿನ್ ಮಾಹಿತಿ ನೀಡಿದೆ.

ಪಾಸಿಟಿವ್ ಪ್ರರಕಣಗಳ ವೇಗದಷ್ಟೇ ಗುಣಮುಖ ಸಂಖ್ಯೆ ಏರುಗತಿಯಲ್ಲಿರುವುದು ಸಂತಸದ ವಿಚಾರವಾಗಿದೆ. ಹೌದು ರಾಜ್ಯದಲ್ಲಿ ಒಂದೇ ದಿನದಲ್ಲಿ 228 ಕೋವಿಡ್ ಮುಕ್ತರಾಗಿದ್ದಾರೆ. ರಾಜ್ಯದ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 1,175 ಕ್ಕೆ ತಲುಪಿದೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಕೋವಿಡ್ ಸಂಖ್ಯೆ 40.91 ಲಕ್ಷಕ್ಕೆ ಏರಿಕೆ ಆಗಿದೆ.
ಜಿಲ್ಲಾವಾರು ಕೊರೊನಾ ಪಾಸಿಟಿವ್ ಮಾಹಿತಿ
ಬೆಂಗಳೂರು ಹೊರತುಪಡಿಸಿದರೆ ಮೈಸೂರಿನಲ್ಲಿ 24, ಬೆಂಗಳೂರು ಗ್ರಾಮಾಂತರದಲ್ಲಿ 20 ಮತ್ತು ಶಿವಮೊಗ್ಗದಲ್ಲಿ 11 ಕೋವಿಡ್ ಕೇಸ್ ಪತ್ತೆ ಆಗಿವೆ. ದಕ್ಷಿಣ ಕನ್ನಡ ಮತ್ತು ಧಾರವಾಡ ಜಿಲ್ಲೆಗಳಲ್ಲಿ ತಲಾ 9 ಮಂದಿಗೆ ಕೋವಿಡ್ ಸೋಂಕು ತಗುಲಿದೆ. ರಾಮನಗರದಲ್ಲಿ 8, ಮಂಡ್ಯದಲ್ಲಿ 7 ಕೇಸ್ ಪತ್ತೆ ಆಗಿವೆ. ತುಮಕೂರಲ್ಲಿ 6 ಪ್ರಕರಣಗಳು ಪತ್ತೆ ಆಗಿವೆ.
ಕರ್ನಾಟಕದ ಒಂಬತ್ತು ಜಿಲ್ಲೆಗಳಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿಲ್ಲ ಎಂದು ಇಲಾಖೆ ತಿಳಿಸಿದೆ. ಬುಧವಾರ ಒಂದು ಕೊಪ್ಪಳ ಜಿಲ್ಲೆಯಲ್ಲಿ ಒಬ್ಬ ವ್ಯಕ್ತಿ ಕೋವಿಡ್ ನಿಂದ ಮೃತಪಟ್ಟಿದ್ದಾರೆ ಎಂದು ಹೆಲ್ತ್ ಬುಲಿಟಿನ್ ತಿಳಿಸಿದೆ.

ಒಂದೇ ದಿನದಲ್ಲಿ ಪರೀಕ್ಷೆ ಆಗಿದ್ದೆಷ್ಟು?
ಕರ್ನಾಟಕ ರಾಜ್ಯ ಆರೋಗ್ಯ ಇಲಾಖೆಯು ನಿತ್ಯ 5,000 ಪರೀಕ್ಷೆಗಳನ್ನು ನಡೆಸುವ ಗುರಿ ಹೊಂದಿತ್ತು. ಆದರೆ ಕೊರೊನಾ ಏರುಗತಿ ಹಿನ್ನೆಲೆಯಲ್ಲಿ ಎರಡು ದಿನಗಳಲ್ಲಿ ಪರೀಕ್ಷೆ ಹೆಚ್ಚಿಸಿದೆ. ನೆನ್ನೆ ಒಂದೇ ದಿನದಲ್ಲಿ 7,497 ಮಂದಿ ಮಾದರಿ ಸಂಗ್ರಹಿಸಿ ಪರೀಕ್ಷಿಸಿದೆ. ಇದರಲ್ಲಿ 6,621 ಆರ್‌ಟಿ-ಪಿಸಿಆರ್ ಹಾಗೂ 876 ರಾಪಿಡ್ ಆಂಟಿಜೆನ್ ಪರೀಕ್ಷೆಗಳನ್ನು ಮಾಡಲಾಗಿದೆ.
ಕರ್ನಾಟಕದಲ್ಲಿ ಹಾಲಿ 1,175 ಸಕ್ರಿಯ ಪ್ರಕರಣಗಳಳಿವೆ. ಈ ಪೈಕಿ 1,107 ಸೋಂಕಿತರಿಗೆ ಮನೆಗಳಲ್ಲಿ ಪ್ರತ್ಯೇಕವಾಗಿರಲು ತಿಳಿಸಿದ್ದು, ಸೂಕ್ತ ಚಿಕಿತ್ಸೆಗೆ ಸೂಚಿಸಲಾಗಿಗೆ. ನಿಗಾ ಇಡಲಾಗಿದೆ. ಉಳಿದಂತೆ 68 ಮಂದಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. 45 ರೋಗಿಗಳು ಸಾಮಾನ್ಯ ವಾರ್ಡ್ ಗಳಲ್ಲಿದ್ದರು. 21 ಮಂದಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.












Click it and Unblock the Notifications