ಸಾರ್ವಜನಿಕ ಸ್ಥಳದಲ್ಲಿ ಮಾಸ್ಕ್ ಧರಿಸದಿದ್ದರೆ 500 ರೂ. ದಂಡ
ರಾಯಪುರ, ಮಾರ್ಚ್ 26: ಕೊರೊನಾ ಸೋಂಕಿನ ಪ್ರಮಾಣ ಹೆಚ್ಚುತ್ತಿರುವ ಹಿನ್ನೆಲೆ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸದವರಿಗೆ 500 ರೂ.ಗಳ ದಂಡ ವಿಧಿಸಲು ಛತ್ತೀಸಗಢ ಸರ್ಕಾರ ನಿರ್ಧರಿಸಿದೆ.
ಈ ಕುರಿತು ಛತ್ತೀಸಗಢ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸಾಂಕ್ರಾಮಿಕ ರೋಗಗಳ ಕಾಯ್ದೆ 1897ರ ಅಡಿಯಲ್ಲಿ ಈ ನಿರ್ಧಾರ ಕೈಗೊಂಡಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಯಾರಾದರೂ ಮಾಸ್ಕ್ ಧರಿಸದಿರುವುದು ಕಂಡುಬಂದರೆ 500 ರೂ. ದಂಡ ವಿಧಿಸಲಾಗುವುದು.

ಈ ಮೊದಲು ಮಾಸ್ಕ್ ನಿಯಮ ಉಲ್ಲಂಘನೆಗಾಗಿ 100 ರೂ. ದಂಡ ವಿಧಿಸಲಾಗುತ್ತಿತ್ತು. ಮಾಸ್ಕ್ ಹೊರತಾಗಿ ಸಾಮಾಜಿಕ ಅಂತರ ಮತ್ತು ಕೈ ತೊಳೆಯುವುದು ಸೇರಿದಂತೆ ವೈರಸ್ ತಡೆಗಟ್ಟುವ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಛತ್ತೀಸಗಢ ರಾಜ್ಯ ಸರ್ಕಾರವು ಜನರಿಗೆ ಮನವಿ ಮಾಡಿದೆ.












Click it and Unblock the Notifications