‘ಕೊರೊನಾ’ ಬಗ್ಗೆ ಭಯ ಬೇಡ, ಎಚ್ಚರಿಕೆ ಇರಲಿ: ಹೀಗೆ ಹೇಳಿದ್ದು ಯಾರು?
ಎಲ್ಲೆಲ್ಲೂ ಕೊರೊನಾ ಭಯ ಆವರಿಸಿದೆ, ಕೋವಿಡ್-19 ವೈರಸ್ ಉಪತಳಿ ಹರಡುತ್ತಿರುವ ರೀತಿ ನೋಡಿದರೆ ಎಂತಹವರಿಗೂ ಭಯ ಆಗುತ್ತದೆ. ಆದರೆ ಈ ಸಮಯದಲ್ಲಿ ಭಯ ಬೇಡ ಆದರೆ ಮುನ್ನೆಚ್ಚರಿಕೆ ಅಗತ್ಯ ಅನ್ನೋ ಸಲಹೆಯನ್ನ ತಜ್ಞರು ನೀಡುತ್ತಿದ್ದಾರೆ. ಇದೇ ರೀತಿ, ಕೊರೊನಾ ಬಗ್ಗೆ ಭಯ ಬೇಡ ಅಂತಿದ್ದಾರೆ ಇವರು.
ಬೆಂಗಳೂರು ಜಿಲ್ಲೆಯಲ್ಲಿ ಜನರು ಕೋವಿಡ್ ಕುರಿತು ಭಯ ಪಡದೆ ಸರ್ಕಾರದಿಂದ ನೀಡಲಾಗುವ ಮಾರ್ಗಸೂಚಿ ಪಾಲಿಸಿ ಮುನ್ನೆಚ್ಚರಿಕೆ ಕ್ರಮ ಅನುಸರಿಸಿ, ಎಂದು ಅಪರ ಜಿಲ್ಲಾಧಿಕಾರಿಗಳಾದ ಟಿ.ಎನ್. ಕೃಷ್ಣಮೂರ್ತಿ ತಿಳಿಸಿದ್ದಾರೆ. ಅವರು ರಾಜಧಾನಿ ಬೆಂಗಳೂರಿನ, ಡಿಸಿ ಕಚೇರಿಯ ಸಭಾಂಗಣದಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳ ಜೊತೆಯಲ್ಲಿ ಸಭೆ ನಡೆಸಿ ಮಾತನಾಡಿದರು. ಈ ಸಂದರ್ಭದಲ್ಲಿ ಬೆಂಗಳೂರಿನಲ್ಲಿ, ಕೊರೊನಾ ತಡೆಗೆ ಕೈಗೊಂಡಿರುವ ಕ್ರಮಗಳ ಕುರಿತು ಮಾಹಿತಿ ನೀಡಿದ್ದಾರೆ.

60 ವರ್ಷ ಮೇಲ್ಪಟ್ಟವರಿಗೆ ಮಾಸ್ಕ್ ಕಡ್ಡಾಯ
ಅಂದಹಾಗೆ ಈಗ ಕೊರೊನಾ ಕಂಟ್ರೋಲ್‌ಗೆ ಟಫ್ ರೂಲ್ಸ್ ಅತ್ಯಗತ್ಯ. ಹೀಗಾಗಿ ಸರ್ಕಾರದ ಮಾರ್ಗಸೂಚಿ ಅನ್ವಯ, 60 ವರ್ಷ ಮೇಲ್ಪಟ್ಟವರು ಸಾರ್ವಜನಿಕ ಸ್ಥಳಗಳಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದರು. ಗರ್ಭಿಣಿಯರು ಹಾಗೂ ಮಕ್ಕಳಿಗೆ ಹಾಲುಣಿಸುವ ತಯಾಂದಿರು ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸಿ & ಹೆಚ್ಚು ಜನ ಸೇರುವ ಪ್ರದೇಶದಲ್ಲಿ ಅನಗತ್ಯ ಓಡಾಟ ಮಾಡಬೇಡಿ ಎಂದು ಸಲಹೆ ನೀಡಿದರು.
ಉಪಕರಣಗಳನ್ನು ಸಿದ್ಧಮಾಡಿ ಇಟ್ಟುಕೊಳ್ಳಿ
ಹಾಗೇ ಕೋವಿಡ್ ಪರೀಕ್ಷೆ ಬಗ್ಗೆಯೂ ತಿಳಿಸಿದ ಅವರು ಆರೋಗ್ಯ ಇಲಾಖೆಯಿಂದ ಜಿಲ್ಲೆಯಲ್ಲಿ ಪ್ರತಿದಿನ, ಕೋವಿಡ್ ಪರೀಕ್ಷೆ ನಡೆಸಲು ಗುರಿಯನ್ನ ನಿಗದಿ ಮಾಡಲಾಗಿದೆ. SARI (severe acute respiratory infection) ತೀವ್ರ ಉಸಿರಾಟ ಸೋಂಕು ಪ್ರಕರಣಗಳನ್ನು ಪರೀಕ್ಷೆಗೆ ಒಳಪಡಿಸಿ ಎಂದು ತಿಳಿಸಿದರು. ಅಗತ್ಯ ಸಿದ್ಧತೆ ಮಾಡಿಕೊಳ್ಳಿ, ಕೊರೊನಾ ಪರೀಕ್ಷೆಗೆ ಬೇಕಿರುವ ಸಲಕರಣೆ, ಸೋಂಕು ಪತ್ತೆಯಾದ ನಂತರ ಚಿಕಿತ್ಸೆಗೆ ಬೇಕಿರುವ ಬೆಡ್ ವ್ಯವಸ್ಥೆ, ಔಷಧ ಮತ್ತು ಕಾನ್ಟೆಕ್ಟ್ ಟ್ರೆಸಿಂಗ್‌ಗೆ ಸಿದ್ಧತೆ ಮಾಡಿಕೊಳ್ಳಲು ಅಧಿಕಾರಿಗಳಿಗೆ ಇದೇ ವೇಳೆ ಸೂಚನೆ ನೀಡಿದ್ರು.

ತಾಲೂಕು ಮಟ್ಟದ ವೈದ್ಯಾಧಿಕಾರಿಗಳು ತಾಲೂಕು ಮಟ್ಟದಲ್ಲಿ ಸಭೆಯ ನಡೆಸಿ ಹೆಚ್ಚಿನ ಜಾಗೃತಿ ಕಾರ್ಯಕ್ರಮ ಆಯೋಜಿಸಿ. ಹೊರ ರಾಜ್ಯ & ಹೊರ ದೇಶಗಳಿಗೆ ಪ್ರಯಾಣ ನಡೆಸಿ ಹಿಂದುರಿಗಿದ ನಂತರ ಅವರಿಗೂ ಕೋವಿಡ್ ಲಕ್ಷಣ ಇದ್ದಲ್ಲಿ ಪರೀಕ್ಷೆಗೆ ಒಳಪಡಿಸಿ ಎಂದರು. ಸಾರ್ವಜನಿಕರು ಶೀತ, ಜ್ವರ, ಕೆಮ್ಮು ಲಕ್ಷಣ ಇದ್ರೆ ಮಾಸ್ಕ್ ಧರಿಸಿ, ಸಾರ್ವಜನಿಕ ಸ್ಥಳದಿಂದ ದೂರವಿರಿ ಎಂದು ಸಲಹೆ ನೀಡಿದರು. ಈ ಸಭೆಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ. ರವೀಂದ್ರ ಮೀಟಿ, ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ. ಶರತ್ ಬಾಬು, ತಾಲೂಕು ಆರೋಗ್ಯ ಅಧಿಕಾರಿಗಳು ಸೇರಿದಂತೆ ಇನ್ನಿತರ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.












Click it and Unblock the Notifications