ಹೊಸ ವರ್ಷಾಚರಣೆ ಸಂಭ್ರಮದಲ್ಲಿ ಮೈ ಮರೆಯದಿರಿ: ಈ ಎಚ್ಚರಿಕೆಗಳನ್ನು ನೆನಪಿನಲ್ಲಿಡಿ
ಇತಿಹಾಸದ ಕಾಲಗರ್ಭದೊಳಗೆ ವರ್ಷವೊಂದನ್ನು ಸರಿಸಿ ಹೊಸವರ್ಷವನ್ನು ಸ್ವಾಗತಿಸಲು ನಾವು ಕಾತರರಾಗಿದ್ದೇವೆ. ಪ್ರತಿ ವರ್ಷವೂ ಕಳೆದ ದಿನಗಳಲ್ಲಿನ ನೋವುಗಳನ್ನು ಮರೆತು ಸಂತಸದ ಕ್ಷಣಗಳನ್ನು ಮೆಲುಕು ಹಾಕುತ್ತಾ ಹೊಸ ನಿರ್ಧಾರ, ತೀರ್ಮಾನಗಳನ್ನು ಮಾಡಿಕೊಂಡು ಹೊಸವರ್ಷಕ್ಕೆ ಕಾಲಿಡಲು ತಯಾರಾಗುತ್ತಿದ್ದೇವೆ. ಕಳೆದ ವರ್ಷಕ್ಕೆ ಹೋಲಿಸಿದರೆ ಹೊಸವರ್ಷದ ಆರಂಭದಲ್ಲಿಯೇ ಕೊರೊನಾ ಸೋಂಕು ಹೆಚ್ಚಾಗುತ್ತಿರುವುದ ಆತಂಕಕಾರಿಯಾಗಿದೆ. ಆದರೂ ಒಂದಷ್ಟು ಎಚ್ಚರಿಕೆಯೊಂದಿಗೆ ಹೊಸವರ್ಷವನ್ನು ಸ್ವಾಗತಿಸೋಣ.
ಈ ಬಾರಿ ಕೊರೊನಾ ಆರ್ಭಟವೂ ಇರುವುದರಿಂದ ನಾವೆಲ್ಲರೂ ಎಚ್ಚರಿಕೆಯ ಹೆಜ್ಜೆಯಿಡುವುದು ಅನಿವಾರ್ಯವಾಗಿದೆ. ಹಿಂದಿನ ವರ್ಷಗಳಲ್ಲಿ ಅನುಭವಿಸಿದ ನೋವುಗಳನ್ನು ಮೆಲುಕು ಹಾಕುತ್ತಾ ಮುಂಜಾಗ್ರತಾ ಕ್ರಮಗಳೊಂದಿಗೆ ಕಾಲಿಡುವುದು ಬಹುಮುಖ್ಯವಾಗಿದೆ. 2023ರ ವರ್ಷವು ಹಲವು ಒಳಿತು ಕೆಡಕುಗಳಿಗೆ ಸಾಕ್ಷಿಯಾಗಿದೆ. ಕೆಡಕುಗಳನ್ನು ಮರೆತು, ಒಳಿತನ್ನು ನೆನಪಿಸುತ್ತಾ ಮುನ್ನಡೆಯೋಣ. ಬರಗಾಲದ ಪರಿಣಾಮಗಳು ಹೊಸವರ್ಷದ ಮೇಲೆ ಪರಿಣಾಮ ಬೀರಲಿದೆ. ಜೊತೆಗೆ ಕೊರೊನಾ ಸೋಂಕು ಎಚ್ಚರಿಕೆ ಗಂಟೆಯಾಗಲಿದೆ. ಅದನ್ನು ನಿಭಾಯಿಸುವ ಆಶಾಭಾವನೆ ನಮ್ಮಲ್ಲಿರಬೇಕಾಗಿದೆ.

ಮೇಲ್ನೋಟಕ್ಕೆ ಹೊಸವರ್ಷ ಪ್ರಾಕೃತಿಕವಾಗಿ ಒಂದಷ್ಟು ಸವಾಲುಗಳನ್ನು ನೀಡಿರುವುದು ಗೋಚರಿಸುತ್ತಿದೆ. ಎಲ್ಲ ವರ್ಷಗಳಲ್ಲಿಯೂ ನೋವು, ನಲಿವು, ಸಂಕಷ್ಟಗಳು, ಪ್ರಾಕೃತಿಕ ವಿಕೋಪಗಳು, ಯುದ್ಧದ ಭಯ ಹೀಗೆ ಹತ್ತು ಹಲವು ಸಮಸ್ಯೆಗಳು ಇದ್ದದ್ದೇ ಎಲ್ಲವನ್ನು ನಿಭಾಯಿಸಿಕೊಂಡು ಮುನ್ನಡೆದುಕೊಂಡು ಬಂದಿದ್ದೇವೆ. ಹೀಗೆ ಬರುವಾಗ ಹತ್ತು ಹಲವನ್ನು ಕಳೆದುಕೊಂಡಿದ್ದೇವೆ. ಹಾಗೆಯೇ ಇನ್ನೇನನ್ನೋ ಪಡೆದುಕೊಂಡಿದ್ದೇವೆ.
ಹೊಸವರ್ಷದ ಆಚರಣೆ ಹೇಗಿರಬೇಕು?
ಕೊರೊನಾದಿಂದಾಗಿ ಏನೆಲ್ಲ ಆಗಿದೆ ಎಂಬುದು ನಮ್ಮ ಮುಂದಿದೆ. ಅದನ್ನೊಮ್ಮೆ ಮೆಲುಕು ಹಾಕಿದರೆ ಕೊರೊನಾದಿಂದಾಗಿ ಹಲವರು ಅನಾಥ ಶವಗಳಾದರು. ತಬ್ಬಲಿಯಾದರು, ಹೊಟ್ಟೆಗೆ ಹಿಟ್ಟಿಲ್ಲದೆ ಬಳಲಿದರು, ಇದ್ದ ಕೆಲಸ ಕಳೆದುಕೊಂಡರು. ಕೈತುಂಬಾ ಬರುತ್ತಿದ್ದ ವೇತನಕ್ಕೆ ಕತ್ತರಿ ಬಿತ್ತು. ಹೀಗೆ ಒಂದೇ ಎರಡೇ ನೂರಾರು ಸಮಸ್ಯೆಗಳನ್ನು ಜನ ಎದುರಿಸಿದರು. ಕಾಯಿಲೆಗಳಿಂದ ಬಳಲಿದರು. ನಮ್ಮವರು ಎಂದು ಕೊಂಡವರಿಂದಲೇ ದೂರವಾಗಿ ಬದುಕಿದರು. ಈ ಸೋಂಕಿನಿಂದ ನಾವು ನೀವು ಎಲ್ಲರೂ ನೋವು ಅನುಭವಿಸಿದರವೇ ಹೀಗಾಗಿ ಇದನ್ನು ಮನದಲ್ಲಿಟ್ಟುಕೊಂಡು ನಮ್ಮ ಹೊಸ ವರ್ಷಾಚರಣೆ ಹೇಗಿರಬೇಕು? ಹೇಗಿದ್ದರೆ ಒಳಿತು ಎಂಬ ತೀರ್ಮಾನಕ್ಕೆ ಬರಬೇಕಿದೆ.

ಈಗ ನೋಡಿ ಹೊಸವರ್ಷಕ್ಕೆ ಓಮಿಕ್ರಾನ್ ರೂಪಾಂತರಿ (ಜೆಎನ್.1) ಇನ್ನೇನು ಗಂಡಾಂತರಗಳನ್ನು ತಂದೊಡ್ಡಲಿದೆಯೋ ಎಂಬ ಭಯವಂತು ಇದ್ದೇ ಇದೆ. ಹೀಗಿರುವಾಗ ನಾವೀಗ ಸ್ವಲ್ಪ ಎಚ್ಚರ ತಪ್ಪಿದರೂ ಅದಕ್ಕೆ ಕಂದಾಯ ಕಟ್ಟಲೇ ಬೇಕಾಗಿದೆ. ಹಾಗಾಗಿ ಪ್ರತಿವರ್ಷದಂತೆ ಹೊಸ ವರ್ಷದ ಆಗಮನದ ಈ ಕಾಲದಲ್ಲಿ ನಮ್ಮಲ್ಲಿ ಹೊಸ ಹೊಸ ಕನಸುಗಳು ಚಿಗುರಿದರೂ ಅದನ್ನು ನನಸು ಮಾಡಿಕೊಳ್ಳುವುದಕ್ಕಿಂತ ಆರೋಗ್ಯವನ್ನು ಕಾಪಾಡಿಕೊಳ್ಳುವುದಕ್ಕೆ ನಾವು ಆದ್ಯತೆ ನೀಡುವುದು ಅನಿವಾರ್ಯವಾಗಿದೆ.
ಆದಷ್ಟು ಜನಜಂಗುಳಿಯಿಂದ ದೂರವಿರೋಣ
ನಾವು ಹೊಸ ವರ್ಷದಿಂದ ಹೊಸ ಮನುಷ್ಯರಾಗುವ ದೃಢ ನಿರ್ಧಾರಕ್ಕೆ ಬರಬೇಕಿದೆ. ಕೊರೊನಾದ ಬಗ್ಗೆ ಜಾಗ್ರತೆ ವಹಿಸುತ್ತೇನೆ ಎಂಬ ಶಪಥ ಮಾಡಬೇಕಿದೆ. ಮಾಸ್ಕ್, ಸ್ಯಾನಿಟೈಸರ್ ಕಡ್ಡಾಯವಾಗಿ ಬಳಸುತ್ತೇನೆ. ಸಾಮಾಜಿಕ ಅಂತರ ಕಾಪಾಡಿಕೊಳ್ಳುತ್ತೇನೆ. ಆ ಮೂಲಕ ತನ್ನನ್ನು ಮತ್ತು ತನ್ನ ಅವಲಂಭಿತ ಕುಟುಂಬವನ್ನು ಕೊರೋನಾದಿಂದ ಕಾಪಾಡುತ್ತೇನೆ ಎಂಬ ವಾಗ್ದಾನವನ್ನು ತಪ್ಪದೆ ಮಾಡಬೇಕಿದೆ. ಕೊರೊನಾ ಇನ್ನೂ ಜೀವಂತವಾಗಿರುವ ಈ ಸಮಯದಲ್ಲಿ ಎಚ್ಚರಿಕೆಯ ಹೆಜ್ಜೆಯನ್ನಿಡುವುದು ಬಹಳ ಮುಖ್ಯವಾಗಿದೆ. ಹಣ ಖರ್ಚು ಮಾಡಿ ಪಾರ್ಟಿ ಮಾಡಿ ಕುಣಿದು ಕುಪ್ಪಳಿಸುವುದು ಹೊಸವರ್ಷವಲ್ಲ. ಹೊಸವರ್ಷ ಬದುಕಿನಲ್ಲಿ ಹೊಸತನ ನೀಡುವಂತೆ ನೋಡಿಕೊಳ್ಳುವುದಾಗಿದೆ .

ಮೋಜು ಮಸ್ತಿಯೇ ವರ್ಷಾಚರಣೆ ಎಂಬುದನ್ನು ತಲೆಯಿಂದ ತೆಗೆದುಹಾಕಿ ಮನೆಯಲ್ಲಿಯೇ ಕುಟುಂಬದೊಂದಿಗೆ ವರ್ಷಾಚರಣೆ ಮಾಡೋಣ, ನಮ್ಮ ಕುಟುಂಬಕ್ಕೆ ಮತ್ತು ಇಡೀ ಜಗತ್ತಿಗೆ ಒಳ್ಳೆಯದಾಗಲಿ ಎಂದು ಬಯಸೋಣ. ನಾವು ಸಮಾಜದ ನಡುವೆ ಬದುಕುತ್ತಿದ್ದೇವೆ. ಸಮಾಜ ಉತ್ತಮವಾಗಿದ್ದರೆ ಮಾತ್ರ ನಾವೆಲ್ಲರೂ ನೆಮ್ಮದಿಯಾಗಿ ಬದುಕಲು ಸಾಧ್ಯ. ಹೀಗಾಗಿ ನೆಮ್ಮದಿಯ ಜೀವನಕ್ಕೆ ಅಗತ್ಯವಾಗಿರುವುದು ಏನು ಎಂಬುದನ್ನು ಅರಿತು ಕೊಳ್ಳುವುದು ಕೂಡ ಅಗತ್ಯವಾಗಿದೆ. 2022, 2023 ವರ್ಷದಲ್ಲಿ ನಾವು ಕೊರೋನಾ ಮರೆತು ಖುಷಿಯಾಗಿದ್ದೆವು. ಆದರೆ ವರ್ಷದ ಕೊನೆಯಲ್ಲಿ ಕೊರೊನಾ ರೂಪಾಂತರಿ ನಮ್ಮೆಲ್ಲರನ್ನು ಆತಂಕಕ್ಕೀಡು ಮಾಡಿದೆ.

ಹೊಸವರ್ಷಕ್ಕೆ ಎಚ್ಚರಿಕೆಯ ಹೆಜ್ಜೆಯಿಡೋಣ
ಇಷ್ಟಕ್ಕೂ ಈಗ ಅಬ್ಬರಿಸುತ್ತಿರುವ ಒಮಿಕ್ರಾನ್ ರೂಪಾಂತರಿ ಜೆಎನ್.1 ಬಗ್ಗೆ ಭಯ ಪಡಬೇಕಾಗಿಲ್ಲವಾದರೂ ಎಚ್ಚರಿಕೆ ವಹಿಸುವುದು ಬಹುಮುಖ್ಯವಾಗಿದೆ. ಆದ್ದರಿಂದ ಕೆಲವೊಂದು ಎಚ್ಚರಿಕೆ ಮತ್ತು ಜಾಗ್ರತೆಯನ್ನು ನಾವು ವಹಿಸಲೇ ಬೇಕಾಗಿದೆ. ಹೀಗಾಗಿ ಹೊಸವರ್ಷದಲ್ಲಿ ಒಳ್ಳೆಯ ಆಲೋಚನೆಗಳೊಂದಿಗೆ ಮುಂದೆ ಸಾಗಲು ಸಜ್ಜಾಗೋಣ. ನಾವು ಮತ್ತು ನಮ್ಮ ಸುತ್ತಮುತ್ತಲ ಜಗತ್ತು ಆರೋಗ್ಯವಾಗಿದ್ದರೆ ಇಡೀ ದೇಶ ಆರೋಗ್ಯವಾಗಿರಲು ಸಾಧ್ಯವಾಗಲಿದೆ.
-
ಏರ್ ಕೂಲರ್ vs ಏರ್ ಕಂಡಿಷನರ್: ಬೇಸಿಗೆಯಲ್ಲಿ ನಿಮ್ಮ ಸರಿಯಾದ ಆಯ್ಕೆ ಯಾವುದು? -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
Jobs: ಹೈಕೋರ್ಟ್ನಲ್ಲಿ ಕೆಲಸ ಬೇಕೆ? 70 ಅಸಿಸ್ಟೆಂಟ್ ಕೋರ್ಟ್ ಸೆಕ್ರೆಟರಿ ಹುದ್ದೆಗಳಿಗೆ ಅರ್ಜಿ ಆಹ್ವಾನ, ಇಂದೇ ಅರ್ಜಿ ಸಲ್ಲಿಸಿ -
ಇಂಧನ ಪೂರೈಕೆ ಕೊರತೆ ಭೀತಿ: 2026ರಲ್ಲಿ ನೀವು ಖರೀದಿಸಬಹುದಾದ ಟಾಪ್ ಎಲೆಕ್ಟ್ರಿಕ್ ಸ್ಕೂಟರ್ ಗಳು ಇಲ್ಲಿವೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO -
AI ಎಫೆಕ್ಟ್: 2026ರಲ್ಲೂ ಮುಂದುವರಿದ ಉದ್ಯೋಗ ಕಡಿತ; ಯಾವ್ಯಾವ ಕಂಪನಿಗಳಿಂದ ಎಷ್ಟು ವಜಾ? ಪಟ್ಟಿ ಇಲ್ಲಿದೆ -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
Bengaluru Rent: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಬಾಡಿಗೆ ಮನೆಗಳು ಸಿಗುವ 6 ಪ್ರಮುಖ ಪ್ರದೇಶಗಳು -
ನೌಕರಿ ಬಿಟ್ಟು ಸ್ವಂತ ಉದ್ಯಮ: ಹುಣಸೆ ಸಿಹಿತಿಂಡಿಗೆ ಪೇಟೆಂಟ್ ಪಡೆದ ಬೈಲಹೊಂಗಲದ ಟೆಕ್ಕಿ; 17 ದೇಶಗಳಿಗೆ ರಫ್ತು -
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್












Click it and Unblock the Notifications